veerendra-hegade

ಅಸಹಾಯಕರಿಗೆ ನೆರವು ಭಗವಂತನಿಗೆ ಪ್ರಿಯ

ಈ ವಿಶಾಲ-ಪ್ರಪಂಚದಲ್ಲಿನ ಎಲ್ಲ ಜೀವಿಗಳೂ ಭಗವಂತನ ಸೃಷ್ಟಿಯಲ್ಲಿ ಎಲ್ಲ ವಿಧದ ಸುಖ-ಸೌಕರ್ಯಗಳಿಗೆ ಹಕ್ಕುದಾರರಿದ್ದರೂ ಕೆಲವೊಮ್ಮೆ ಅದೃಷ್ಟವಶಾತ್‌ ದುಃಖ-ದಾರಿದ್ರ್ಯಗಳಲ್ಲಿ ಸಿಲುಕಿ ನರಳಾಡುತ್ತಿರುತ್ತಾರೆ. ಅಂತಹ ದೀನ-ದುಃಖಿಗಳನ್ನು ಕಂಡಾಗ ಉದಾರ ಹೃದಯಿಗಳ ಮನದಲ್ಲಿ ದಯಾರಸವು ಉಕ್ಕೇರುವುದಿದೆ. ಏಕೆಂದರೆ ಅವರೂ, ಇವರೂ ಎಲ್ಲರೂ ಭಗವಂತನ ಸೃಷ್ಟಿಯೇ. ಆದ್ದರಿಂದ ನೊಂದವರಿಗೆ ನೆರವಾಗುವ ಮನೋಭಾವ ನಮ್ಮನ್ನು ಭಗವತ್‌ ಕೃಪೆಗೆ ಪಾತ್ರರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.

ಪಾಶ್ಚಾತ್ಯ ದೇಶದಲ್ಲಿ ಜಾರ್ಜ್‌ ಎಂಬ ಒಬ್ಬರು ಆದರ್ಶ ನಾಗರಿಕರಿದ್ದರು. ಅವರೊಂದು ದಿನ ನಗರದ ಉದ್ಯಾನದಲ್ಲಿ ವಿಕಲಾಂಗ ವೃದ್ಧೆಯನ್ನು ಕಂಡರು. ವೀಲ್‌ ಚೇರ್‌ನಲ್ಲಿ ಕುಳಿತಿದ್ದ ಆಕೆಯ ಬಳಿ ಯಾವ ಸಹಾಯಕನೂ ಇರಲಿಲ್ಲ. ‘ಛೆ ಪಾಪ!’ ಎಂದು ಸಹಾನುಭೂತಿಯಿಂದ ಯಾರಾದರೂ ಸಜ್ಜನರು ಆ ವೀಲ್‌ ಚೇರನ್ನು ಅತ್ತಿತ್ತ ತಿರುಗಾಡಿಸಿ ತುಸು ನೆರವಾಗುತ್ತಿದ್ದರು. ಒಂದು ದಿನ ಆಕೆಯು ಉದ್ಯಾನದ ಹೂಗಳನ್ನು ವೀಕ್ಷಿಸುತ್ತಿದ್ದುದನ್ನು ಕಂಡ ಜಾರ್ಜ್‌ ಪ್ರಶ್ನಿಸಿದರು- ”ಮಾತೆಯೇ, ನೀವು ಈ ಉದ್ಯಾನದ ಹೂಗಳನ್ನೇಕೆ ಇಷ್ಟೊಂದು ಗಮನವಿಟ್ಟು ನೋಡುತ್ತಿದ್ದೀರಿ?,” ಆಗ ಆ ವೃದ್ಧೆ ಉತ್ತರಿಸಿದರು- ”ಮಗನೆ, ಈ ನಿಸರ್ಗ ಎಷ್ಟೊಂದು ಸುಂದರವಿದೆ! ಎಂದು ವೀಕ್ಷಿಸುತ್ತಿದ್ದೇನೆ. ಎಷ್ಟೊಂದು ಬಣ್ಣಬಣ್ಣದ ಹೂಗಳು!. ಆ ಭಗವಂತ ಎಷ್ಟೊಂದು ಸೌಂದರ್ಯ ತುಂಬಿದ್ದಾನೆ!. ಈ ಜಗತ್ತಿನಲ್ಲಿ ಅನೇಕ ಕೊರತೆಗಳಿದ್ದರೂ, ಈ ಸೌಂದರ್ಯ ಕಂಡಾಗ ನಾವೆಂಥ ಭಾಗ್ಯವಂತ-ಶ್ರೀಮಂತರು! ಅನ್ನಿಸುತ್ತದೆ,”

ಆ ವೃದ್ಧೆಯ ಈ ಮಾತುಗಳು ಜಾರ್ಜ್‌ರ ಪಾಲಿಗೆ ಹೃದಯಸ್ಪರ್ಶಿ ಅನ್ನಿಸಿದವು. ಅವರು ಆಕೆಯ ವೀಲ್‌ ಚೇರನ್ನು ತಳ್ಳುತ್ತಾ ಉದ್ಯಾನದ ಮರಗಿಡಗಳ ಸುತ್ತ ಅಡ್ಡಾಡಿಸಿದರು. ಆದರೆ ಆ ಉದ್ಯಾನದ ಏರು ತಗ್ಗಿನ ನೆಲದ ಮೇಲೆ ವೀಲ್‌ ಚೇರ್‌ನ ಕಬ್ಬಿಣದ ಚಕ್ರಗಳು ಅಲುಗಾಡಿದಾಗ ಆ ವೃದ್ಧೆಗೆ ತುಸು ವೇದನೆಯುಂಟಾಗುತ್ತಿದ್ದುದನ್ನು ಸೂಕ್ಷ ್ಮಮತಿಯಾದ ಜಾರ್ಜ್‌ ಅರ್ಥ ಮಾಡಿಕೊಂಡರು. ತಕ್ಷ ಣ ಇದಕ್ಕೇನಾದರೂ ಪರಿಹಾರ ಹುಡುಕಬೇಕೆಂದು ನಿರ್ಧರಿಸಿದರು.

ಇಷ್ಟರಲ್ಲಿ ಅವರ ದೃಷ್ಟಿ ಒಂದು ಕೋಮಲವಾದ ಬಳುಕುವ ವಸ್ತುವಿನ ಮೇಲೆ ಬಿತ್ತು. ಅದೇ ರಬ್ಬರ್‌. ಅದರ ಒಂದು ಬಂಡಲ್‌ನ್ನು ಖರೀದಿಸಿ, ವೀಲ್‌ ಚೇರ್‌ನ ಚಕ್ರಗಳ ಸುತ್ತ ಗಟ್ಟಿಯಾಗಿ ಬಂಧಿಸಿದಾಗ, ಈ ಚಕ್ರ ಮುಂದಕ್ಕೆ ಸಾಗುವಾಗ ಹೆಚ್ಚಿನ ಅಲುಗಾಟದಿಂದ ಪಾರಾಯಿತಲ್ಲದೆ, ವೃದ್ಧೆಗೆ ಹೆಚ್ಚು ಆರಾಮದಾಯಕ ಸುತ್ತಾಟ ಅನ್ನಿಸಿತು. ಆಕೆ ಹೃದಯ ತುಂಬಿ, ಜಾರ್ಜ್‌ರನ್ನು ಹರಸುತ್ತಾ ನುಡಿದಳು- ”ನೋಡು ಮಗನೇ, ಇಂಥ ಸಮೃದ್ಧಿ, ಸದಾಶಯಗಳ ಭಂಡಾರವಾದ ನೀನು ಪ್ರಪಂಚದಲ್ಲಿ ಪ್ರಸಿದ್ಧ ಪುರುಷನಾಗಿ ಕೀರ್ತಿಶಾಲಿಯಾಗಿ ಮೆರೆಯುವುದು ಖಂಡಿತ,” ಆ ಮಾತೆಯ ಆಶೀರ್ವಾದ ವಚನ ಸತ್ಯವಾಗಿ ಪರಿಣಮಿಸಿತು. ಕಬ್ಬಿಣದ ಚಕ್ರಗಳಿಗೆ ರಬ್ಬರ್‌ನ ಆವರಣ (ಟೈರ್‌)ಗಳನ್ನು ನಿರ್ಮಿಸುವ ತಂತ್ರಜ್ಞಾನದಲ್ಲಿ ಪಳಗಿದ ‘ಡನ್‌ಲಪ್‌ ಟೈರ್‌ ಕಂಪನಿ’ ಅದೇ ಜಾರ್ಜ್‌ರ ದೂರದೃಷ್ಟಿ ಮತ್ತು ಮಾತೆಯ ಆಶೀರ್ವಾದದ ಫಲವಾಗಿದೆ.

ಮಾನವನು ನಿಸ್ವಾರ್ಥ ಭಾವದಿಂದ ಇತರರಿಗೆ ಸೇವೆ ಸಲ್ಲಿಸಿದ್ದೇ ಆದಲ್ಲಿ ಅದರ ಸತ್ಫಲ ದೊರೆಯದೇ ಹೋಗುವುದಿಲ್ಲ. ಅದರಲ್ಲೂ ಅನಾಥರೂ, ಅಸಹಾಯಕರೂ, ದುರ್ಬಲರೂ ಆದ ಜನತೆಗೆ ನಾವು ನೀಡುವ ನೆರವು ಭಗವಂತನಿಗೇ ಅತ್ಯಂತ ಪ್ರಿಯವಾಗುತ್ತದೆ. ನಾವೆಲ್ಲರೂ ಅಸಹಾಯಕರಿಗೆ ನೆರವಾಗಿ ಭಗವಂತನಿಗೆ ಇಷ್ಟವಾದ ಸೇವೆ ಸಲ್ಲಿಸೋಣ.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *