ಡಾ. ಡಿ.ವಿ.ಗುಂಡಪ್ಪ (೧೭.೦೩.೧೮೮೭ – ೦೭.೧೦.೧೯೭೫): ಡಿ.ವಿ.ಜಿ ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಶಿಕ್ಷಣ: ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ …
ಪೂರ್ತಿ ಓದಿ...ಸುಶೀಲಾ ಕೊಪ್ಪರ
ಸುಶೀಲಾ ಕೊಪ್ಪರ (೧೬.೦೩.೧೯೨೪ – ೨೫.೦೨.೨೦೦೬): ಕನಿಷ್ಠ ಮೆಟ್ರಿಕ್ಯುಲೇಷನ್ ಆದರೂ ಪಾಸುಮಾಡಬೇಕೆಂಬ ಹಂಬಲದಿಂದ ಹೈಸ್ಕೂಲಿಗೆ ಸೇರಿದ ಮೊದಲ ವರ್ಷವೇ ತಾಯಿಯ ಒತ್ತಾಯಕ್ಕೆ ಮಣಿದು ೧೪ರ ವಯಸ್ಸಿಗೆ ಗಂಡನ ಮನೆ ಸೇರಿ, ಸ್ತ್ರೀ ಸಮಾನತೆ, ಹಕ್ಕು ಬಾಧ್ಯತೆಗಳ ಬಗ್ಗೆ ಸದಾ ಚಿಂತಿಸುತ್ತಿದ್ದು, ಆಕಸ್ಮಿಕವಾಗಿ ಪತ್ರಿಕದ್ಯೋಮವನ್ನು ಆಯ್ಕೆ ಮಾಡಿಕೊಂಡು ಪತ್ರಿಕೋದ್ಯಮದ ಬಗ್ಗೆ ‘ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ’ ಎಂಬ ಪುಸ್ತಕ ಬರೆದ ಮೊದಲ ಮಹಿಳೆ ಎನಿಸಿದ ಸುಶೀಲಾ ಕೊಪ್ಪರ ರವರು ಹುಟ್ಟಿದ್ದು ಬೆಳಗಾಂ ಜಿಲ್ಲೆಯ ಬೆಳಗಾಂ ತಾಲ್ಲೂಕಿನ ಹುದಲಿ ಎಂಬ ಗ್ರಾಮದಲ್ಲಿ ೧೯೨೪ರ ಮಾಚ್ ೧೬ ರಂದು. ತಂದೆ …
ಪೂರ್ತಿ ಓದಿ...ಸತ್ಯಕಾಮ
ಸತ್ಯಕಾಮ (೦೨.೦೩.೧೯೨೦ – ೨೦.೧೦.೧೯೯೮): ಸತ್ಯಕಾಮರ ನಿಜನಾಮ ಅನಂತಕೃಷ್ಣ ಶಹಪೂರ. ಇವರು ಹುಟ್ಟಿದ್ದು ಗಲಗಲಿಯಲ್ಲಿ. ತಂದೆ ಕೃಷ್ಣಾ ಹಾಗೂ ತಾಯಿ ರುಕ್ಮಿಣಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ಗಲಗಲಿಯಲ್ಲೇ ಶಿಕ್ಷಣ ಪಡೆದದ್ದು. ಹೈಸ್ಕೂಲಿಗೆ ಸೇರಿದ್ದು ಬಾಗಲಕೋಟೆ. ಆದರೆ ವಿದ್ಯೆಗೆ ಶರಣುಹೊಡೆದು ಊರಿಗೆ ವಾಪಸ್ಸು ಬಂದರು. ಎಳೆವೆಯಿಂದಲೇ ಬೆಳೆದು ಬಂದದ್ದು ನಾಟಕದ ಕಡೆ ಒಲವು. ಕಟ್ಟಿದ್ದು “ಜೀವನ ನಾಟ್ಯ ವಿಲಾಸಿ ಮಂಡಲ.” ಹಲವಾರು ನಾಟಕಗಳ ಪ್ರಯೋಗ. ದೇಶದಲ್ಲೆಲ್ಲಾ ವ್ಯಾಪಿಸಿದ್ದ ಸ್ವಾತಂತ್ರ್ಯದ ಕಾವಿಗೆ ಬಲಿಯಾಗಿ, ಚಳವಳಿಗೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇವರ ನೇತಾರರು ಕಾಖಂಡಕಿ …
ಪೂರ್ತಿ ಓದಿ...ರಾಘವೇಂದ್ರ ಖಾಸನೀಸ
ರಾಘವೇಂದ್ರ ಖಾಸನೀಸ (೦೨.೦೩.೧೯೩೩ – ೧೯.೦೩.೨೦೦೭): ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿದಲ್ಲಿ ೧೯೩೩ರ ಮಾರ್ಚ್ ೨ರಂದು. ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಓವರ್‌ಸೀಯರ್ ಆಗಿದ್ದ ತಂದೆಯು ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ಹೋಮ್ಸ್‌ನ ಪತ್ತೇದಾರಿ ಕಾದಂಬರಿಗಳು ಮತ್ತು ದೆವ್ವದ ಕಥೆಗಳನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಗನಿಗೆ ಹೇಳುತ್ತಿದ್ದುದರಿಂದಲೇ ಒಳಗೊಬ್ಬ ಕಥೆಗಾರ ಇವರಲ್ಲಿ ರೂಪಗೊಳ್ಳತೊಡಗಿದ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ, ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತಿ.ತಾ.ಶರ್ಮರ ವಿಶ್ವಕರ್ನಾಟಕ ಪತ್ರಿಕೆಗೆ ಕಥೆ ಬರೆದುಕಳುಹಿಸಿದಾಗ ಮಕ್ಕಳ ಕಥಾ ವಿಭಾಗದಲ್ಲಿ ಆ …
ಪೂರ್ತಿ ಓದಿ...ಶ್ರೀಮತಿ ಸುಕನ್ಯಾಮಾರುತಿ
ಶ್ರೀಮತಿ ಸುಕನ್ಯಾಮಾರುತಿ (೧-೩-೧೯೫೬): ಕವಯಿತ್ರಿ, ಅನುವಾದಕಿ, ಮಹಿಳಾ ಹೋರಾಟಗಾರ್ತಿ ಸುಕನ್ಯಾಮಾರುತಿಯವರು ಹುಟ್ಟಿದ್ದು ಕೊಟ್ಟೂರಿನಲ್ಲಿ. ಪ್ರಾಥಮಿಕ ಶಾಲೆ ಓದಿದ್ದು ಕೊಟ್ಟೂರಿನ ಆಂಜನೇಯಶಾಲೆ, ಮಾಧ್ಯಮಿಕ ಶಾಲೆಗೆ ಸೇರಿದ್ದು ಗಚ್ಚಿನ ಮಠದ ಶಾಲೆ. ಹೈಸ್ಕೂಲು ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಹೈಸ್ಕೂಲಿನಲ್ಲಿ. ಪಿ.ಯು.ದಿಂದ ಪದವಿಯವರೆಗೆ ಓದಿದ್ದು ಕೊಟ್ಟೂರೇಶ್ವರ ಕಾಲೇಜು, ಕೊಟ್ಟೂರು. ಎಂ.ಎ. ಪದವಿಗಳಿಸಿದ್ದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ. ಉದ್ಯೋಗಕ್ಕೆ ಸೇರಿದ್ದು ಜೆ.ಎಸ್.ಎಸ್. ಕಾಲೇಜು, ಧಾರವಾಡದಲ್ಲಿ ಕನ್ನಡ ಅಧ್ಯಾಪಕಿಯಾಗಿ. ಚಿಕ್ಕಂದಿನಿಂದಲೂ ಓದುವ, ಬರೆಯುವ ಚಟದಿಂದ ಕನ್ನಡ ಸಾಹಿತ್ಯದಲ್ಲಿ ಪಡೆದ ವಿಸ್ತಾರವಾದ ಅನುಭವ. ವಿದ್ಯಾರ್ಥಿನಿಯಾಗಿದ್ದಾಗಲೇ ಬರವಣಿಗೆ ಪ್ರಾರಂಭ. ನಾಡಿನ ಪ್ರಖ್ಯಾತ ಪತ್ರಿಕೆಗಳಾದ ಸುಧಾ, …
ಪೂರ್ತಿ ಓದಿ...