ಡಾ. ಸಿ ಪಿ ಕೃಷ್ಣಕುಮಾರ್ (ಸಿ.ಪಿ.ಕೆ.) (೦೮.೦೪.೧೯೩೯): ಹುಮುಖ ಪ್ರತಿಭೆಯ ಕವಿ, ವಿಮರ್ಶಕ, ಗ್ರಂಥಸಂಪಾದಕ, ಸಂಶೋಧಕರಾದ ಕೃಷ್ಣಕುಮಾರ್‌ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ೧೯೩೯ರ ಏಪ್ರಿಲ್ ೮ರಂದು. ತಂದೆ ಪುಟ್ಟೇಗೌಡ, ತಾಯಿ ಚಿಕ್ಕಮ್ಮ. ಹುಟ್ಟಿದ ಒಂಬತ್ತು ತಿಂಗಳಿಗೇ ತಾಯಿಯ ಪ್ರೀತಿಯಿಂದ ವಂಚಿತರಾಗಿ ಬೆಳೆದದ್ದು ಅಜ್ಜಿ ಹಾಗೂ ಸೋದರತ್ತೆಯರ ಮಡಿಲಲ್ಲಿ. ಪ್ರಾಥಮಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಪ್ರೌಢಶಾಲೆಯ ವಿದ್ಯಾಭ್ಯಾಸ ಸಾಲಿಗ್ರಾಮ. ಶಿವಮೊಗ್ಗೆಯಲ್ಲಿ ಇಂಟರ್‌ಮೀಡಿಯೇಟ್ ಓದಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಆನರ್ಸ್ ಪದವಿ ಹಾಗೂ ಮಾನಸಗಂಗೋತ್ರಿಯಿಂದ ಎಂ.ಎ. ಪದವಿಗಳು. ಈ ಎರಡು …
ಪೂರ್ತಿ ಓದಿ...ವಿದ್ವಾನ್ ಎನ್. ರಂಗನಾಥಶರ್ಮ
ವಿದ್ವಾನ್ ಎನ್. ರಂಗನಾಥಶರ್ಮ (೭-೪-೧೯೧೬ – ೨೫-೧-೨೦೧೪) ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಹಿರಿಯ ವಿದ್ವಾಂಸರು. ಜೀವನ: ಸಂಸ್ಕೃತ, ಕನ್ನಡ ಎರಡು ಭಾಷೆಗಳಲ್ಲೂ ಮಹಾನ್ ವಿದ್ವಾಂಸರೆನಿಸಿರುವ ರಂಗನಾಥ ಶರ್ಮರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಎಪ್ರಿಲ್ ೭, ೧೯೧೬ರಂದು ಜನಿಸಿದರು. ಇವರ ತಂದೆ ವಿದ್ವಾನ್ ತಿಮ್ಮಪ್ಪನವರು. ತಾಯಿ ಜಾನಕಮ್ಮನವರು. ರಂಗನಾಥಶರ್ಮರ ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿಯೂ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿಯೂ ನೆರವೇರಿತು. ತಂದೆ ಹಾಗೂ ಚಿಕ್ಕಪ್ಪನವರು ಸಂಸ್ಕೃತದಲ್ಲಿ ಮಹಾನ್ ಪಂಡಿತರೆನಿಸಿದ್ದು ರಂಗನಾಥಶರ್ಮರ ಮೇಲೆ ಅಗಾಧ ಪ್ರಭಾವ ಬೀರಿತ್ತು. ಕಿತ್ತು ತಿನ್ನುವ ಬಡತನದ ಮಧ್ಯೆಯೂ …
ಪೂರ್ತಿ ಓದಿ...ಫರ್ಡಿನೆಂಡ್ ಕಿಟೆಲ್
ಫರ್ಡಿನೆಂಡ್ ಕಿಟೆಲ್ (ರೆವರೆಂಡ್ ಎಫ್ ಕಿಟ್ಟೆಲ್) (೦೭.೦೪.೧೮೩೨ – ೧೯.೧೨.೧೯೦೩): ವರೆಂಡ್ ಫರ್ಡಿನ್ಯಾಂಡ್ ಕಿಟೆಲ್ ರವರ ಆದ್ಯಕರ್ತವ್ಯ ಮತಪ್ರಚಾರವಾದಾಗ್ಯೂ, ತಮ್ಮ ಮಾನವೀಯ ಮೌಲ್ಯಗಳ ಗಣಿಯಾಗಿದ್ದರು. ಕಿಟೆಲ್ ರವರು, ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಯೂರೋಪಿಯನ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರಿಗೆ, ದೂರದ ಭಾರತದ, ಧಾರವಾಡದ ಪರಿಸರ, ನಿಸರ್ಗಸೌಂದರ್ಯ, ಅಲ್ಲಿನ ಮುಗ್ಧಜನರ ಭಾಷೆ, ಸರಳ ಆಚಾರ ವ್ಯವಹಾರ, ಉಡುಗೆ-ತೊಡುಗೆಗಳು ಬಹು ಮೆಚ್ಚುಗೆಯಾಗಿರಬೇಕು. ಕನ್ನಡ ಭಾಷೆಯನ್ನಂತೂ ಅವರು ತುಂಬಾ ಹಚ್ಚಿಕೊಂಡಿದ್ದರು. ಭಾರತದ ಜನತೆಗೆ ಮೊದಲು ವಿದೇಶೀಯರಂತೆ ತೋರಿದರೂ, ಅವರು ತಮ್ಮ ತಾಯ್ನಾಡಿಗೆ ವಾಪಸ್ ಹೋಗುವ ಹೊತ್ತಿಗೆ, …
ಪೂರ್ತಿ ಓದಿ...ಶಾಂತರಸ
ಶಾಂತರಸ (೦೭.೦೪.೧೯೨೪ – ೧೩.೦೪.೨೦೦೮): ಸಾಹಿತ್ಯದ ಬೆಳವಣಿಗೆ, ಭಾಷೆಯ ಉಳಿವಿಗೆ, ಸಂಸ್ಕೃತಿಯ ಪ್ರಸಾರಕ್ಕೆ ನಿಜಾಮಶಾಹಿ ವಿರುದ್ಧದ ಹೋರಾಟದಲ್ಲಿ, ಗೋಕಾಕ ಚಳವಳಿಯಲ್ಲಿ – ಹೀಗೆ ನಾಡಿನ ಉಳಿವಿಗಾಗಿ ಆರು ದಶಕಗಳಿಗೂ ಮಿಕ್ಕು ಹೋರಾಟದಲ್ಲಿ ತೊಡಿಗಿಸಿಕೊಂಡಿದ್ದ ಶಾಂತರಸ (ಶಾಂತಯ್ಯ)ರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಹೆಂಬೆರಾಳ ಗ್ರಾಮದಲ್ಲಿ ೧೯೨೪ರ ಏಪ್ರಿಲ್ ೭ರಂದು. ತಂದೆ ಚನ್ನಬಸವಯ್ಯ ಹಿರೇಮಠ, ಕನ್ನಡ-ಸಂಸ್ಕೃತ ಪಂಡಿತರು, ಜ್ಯೋತಿಷಿಗಳು. ಹನುಮದೇವರ ಗುಡಿಯಲ್ಲಿ ಶಾಲೆ ನಡೆಸುತ್ತಿದ್ದರು. ತಾಯಿ ಸಿದ್ಧಸಿಂಗಮ್ಮ. ಪ್ರಾರಂಭಿಕ ಶಿಕ್ಷಣ ತಿಮ್ಮಾಪುರ, ಹೆಂಬೆರಾಳ, ಶಿರಿವಾರ, ಮುಷ್ಕರಗಳಲ್ಲಿ, ಮಹಾರಾಷ್ಟ್ರದ ಲಾತೂರಿನಲ್ಲಿ ಮಾಧ್ಯಮಿಕ ಶಿಕ್ಷಣ. ೧೯೪೪ರಲ್ಲಿ ಮೆಟ್ರಿಕ್ ತೇರ್ಗಡೆಯಾದ ನಂತರ …
ಪೂರ್ತಿ ಓದಿ...ಡಾ. ಚೆನ್ನಣ್ಣ ವಾಲೀಕಾರ
ಡಾ. ಚೆನ್ನಣ್ಣ ವಾಲೀಕಾರ (೬-೪-೧೯೪೩): ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಕುಸ್ತಿ, ಹಾಡುಗಾರಿಕೆ, ಬಯಲಾಟದ ಒಕ್ಕಲು ಮನೆತನದಲ್ಲಿ ಹುಟ್ಟಿದವರು ಚೆನ್ನಣ್ಣ ವಾಲೀಕಾರರು. ತಂದೆ ಧೂಳಪ್ಪ ವಾಲೀಕಾರ, ತಾಯಿ ಸಾಬಮ್ಮ. ಪ್ರೌಢಶಿಕ್ಷಣದವರೆಗೆ ಶಹಬಾದ, ಗುಲಬರ್ಗಾ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸ್ನಾತಕೋತ್ತರ ಶಿಕ್ಷಣ ಮತ್ತು ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’ ಪ್ರಬಂಧ ಮಂಡಿಸಿ ಗಳಿಸಿದ್ದು ಪಿಎಚ್.ಡಿ ಪದವಿ. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಪ್ರೌಢಶಾಲಾ ಶಿಕ್ಷಕರಾಗಿ ೧೯೬೫-೬೯ರವರೆಗೆ ; ರಾಯಚೂರಿನ ಕಾಲೇಜು ಉಪನ್ಯಾಸಕರಾಗಿ ೧೯೭೧-೭೮ರವರೆಗೆ, …
ಪೂರ್ತಿ ಓದಿ...ರಾಘವೇಂದ್ರ ಇಟಗಿ
ರಾಘವೇಂದ್ರ ಇಟಗಿ (೦೬.೦೪.೧೯೨೬ – ೦೮.೧೨.೧೯೯೭) ಕನ್ನಡದ ಪ್ರಖ್ಯಾತ ಕವಿಗಳಲ್ಲೊಬ್ಬರು. ಜೀವನ: ಕವಿ ರಾಘವೇಂದ್ರ ಇಟಗಿಯವರು ೧೯೨೬ರ ಏಪ್ರಿಲ್ ೬ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿಯಲ್ಲಿ ಜನಿಸಿದರು. ತಂದೆ ಪ್ರಹ್ಲಾದಾಚಾರ್ಯರು, ತಾಯಿ ಸೀತಮ್ಮನವರು. ರಾಘವೇಂದ್ರ ಇಟಗಿಯವರ ಹೆಚ್ಚಿನ ಶಾಲಾ ವಿದ್ಯಾರ್ಜನೆ ನಡೆದದ್ದು ಕೊಪ್ಪಳದಲ್ಲಿ. ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ ಇಟಗಿಯವರು ಹೈದರಾಬಾದ್ ಆಕಾಶವಾಣಿಯಲ್ಲಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದ ರಾಘವೇಂದ್ರ ಇಟಗಿಯವರು, ಖಾಸಗಿಯಾಗಿ ಕುಳಿತು ಮಾನ್ವಿ ನರಸಿಂಗರಾಯರ ಸಹಾಯದಿಂದ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ …
ಪೂರ್ತಿ ಓದಿ...ಪ್ರೊ. ಟಿ. ಎಸ್. ನಾಗರಾಜಶೆಟ್ಟಿ
ಪ್ರೊ. ಟಿ. ಎಸ್. ನಾಗರಾಜಶೆಟ್ಟಿ (೧೬.೦೪.೧೯೫೩): ಮಕ್ಕಳ ಮನಸ್ಸನ್ನು ಮುಟ್ಟುವಂತೆ ಮನರಂಜನೆ, ನೀತಿಯನ್ನು ಕತೆ ಕವನಗಳ ಮೂಲಕ ಹೇಳುತ್ತಾ, ಲಯಬದ್ಧವಾಗಿ ಹಾಡಿ ಕುಣಿದು, ಹೂವಿನಂತೆ ಅರಳಿ ಸಂತೋಷಿಸುವಂತಹ ಮಕ್ಕಳ ಸಾಹಿತ್ಯ ರಚನೆಯಲ್ಲಿ ಅಗ್ರಗಣ್ಯರೆನಿಸಿದ್ದು ಪಂಜೆ, ರಾಜರತ್ನಂ, ದೇವುಡು, ಹೊಯ್ಸಳ, ಸಿಸು ಸಂಗಮೇಶ, ಈಶ್ವರ ಚಂದ್ರ ಚಿಂತಾಮಣಿ ಮುಂತಾದವರುಗಳ ಹಾದಿಯಲ್ಲಿ ಸಾಗಿರುವ ನಾಗರಾಜಶೆಟ್ಟರು ಹುಟ್ಟಿದ್ದು ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ. ತಂದೆ ಶ್ರೀರಾಮಯ್ಯ, ತಾಯಿ ವನಲಕ್ಷಮ್ಮ. ಚಾಕವೇಲುವಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಪ್ರೌಢಶಾಲೆಗೆ ಸೇರಿದ್ದು ಬೆಂಗಳೂರಿನ ರಾಷ್ಟ್ರೀಯ ಪ್ರೌಢಶಾಲೆ. ಸೆಂಟ್ರಲ್ ಕಾಲೇಜಿನಿಂದ ಬಿ.ಎ. …
ಪೂರ್ತಿ ಓದಿ...ಗೋವಿಂದಮೂರ್ತಿ ದೇಸಾಯಿ
ಗೋವಿಂದಮೂರ್ತಿ ದೇಸಾಯಿ (೦೫.೦೪.೧೯೨೭ – ೧೫.೧೨.೨೦೧೧): ಐತಿಹಾಸಿಕ ವಸ್ತುವುಳ್ಳ ಕಥೆ, ಕಾದಂಬರಿಗಳ ರಚನೆಯಲ್ಲಿ ಪ್ರಖ್ಯಾತರಾಗಿದ್ದ ಗೋವಿಂದಮೂರ್ತಿ ದೇಸಾಯಿಯವರು ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ. ತಂದೆ ದಾಸಪ್ಪ ನಾಯಕ ದೇಸಾಯಿ. ತಾಯಿ ಯಮುನಾ ಬಾಯಿ. ಸೋದರಮಾವನ ಮನೆಯಲ್ಲಿದ್ದುಕೊಂಡು ಓದಿದ್ದು ಮೆಟ್ರಿಕ್ಯುಲೇಷನ್‌ವರೆಗೆ. ತಂದೆಯ ಅಕಾಲಿಕ ಮರಣದಿಂದಾಗಿ ಪ್ರೀತಿಯಿಂದ ವಂಚಿತರಾದ ಗೋವಿಂದಮೂರ್ತಿ ದೇಸಾಯಿಯವರಿಗೆ ಓದಿಗಿಂತ ತಂಗಿ ತಮ್ಮಂದಿರ ಜವಾಬ್ದಾರಿಯು ಪ್ರಮುಖವಾಗಿದ್ದು ಮೆಟ್ರಿಕ್ಯುಲೇಷನ್‌ನಂತರ ಸೇರಿದ್ದು ಇಂಪೀರಿಯಲ್ ಬ್ಯಾಂಕಿನಲ್ಲಿ ಗುಮಾಸ್ತರಾಗಿ. ಧಾರವಾಡಕ್ಕೆ ವರ್ಗವಾದ ನಂತರ ಬಿ.ಎ. ಪದವಿ ಪಡೆದ ಸಂದರ್ಭದಲ್ಲಿ ಇಂಪೀರಿಯಲ್ ಬ್ಯಾಂಕ್ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವಾಗಿ ಪರಿವರ್ತನೆ …
ಪೂರ್ತಿ ಓದಿ...ಶ್ರೀನಿವಾಸ ವೈದ್ಯ
ಶ್ರೀನಿವಾಸ ವೈದ್ಯ (೦೪.೦೪.೧೯೩೬): ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧಗಳು ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡದ ಜಿಲ್ಲೆಯ ನವಲಗುಂದದಲ್ಲಿ ೧೯೩೬ರ ಏಪ್ರಿಲ್ ೪ ರಂದು. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೆ. ೧೯೫೯ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿಯ ಜೊತೆಗೆ ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ (೧೯೮೦) ಪಡೆದ ಪತ್ರಿಕೋದ್ಯಮ ಡಿಪ್ಲೊಮ. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ …
ಪೂರ್ತಿ ಓದಿ...ಬಿ.ಟಿ. ಲಲಿತಾನಾಯಕ್
ಬಿ.ಟಿ. ಲಲಿತಾನಾಯಕ್ (೪-೪-೧೯೪೫): ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳೆರಡರಲ್ಲೂ ಅಸಾಧಾರಣ ಸಾಧನೆ ಮಾಡಿದ ಶ್ರೀಮತಿ ಲಲಿತಾನಾಯಕ್ ರವರ ಹುಟ್ಟಿದೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿತಾಂಡ. ತಂದೆ ಬಾಲಾಜಿನಾಯಕ್, ತಾಯಿ ಗಂಗಾಬಾಯಿ. ಏಕೋಪಾಧ್ಯಾಯ ಶಾಲೆ ತಾಂಡ್ಯದಲ್ಲಿ ೪ನೇ ತರಗತಿಯವರೆಗೆ ಓದು. ನಂತರ ಚಿತ್ರದುರ್ಗದಲ್ಲಿ ಎಂಟನೆಯ ತರಗತಿವರೆಗೆ. ವಿದ್ಯಾಭ್ಯಾಸ ಅವಕಾಶಗಳು ಇಲ್ಲದ ಕಾಲ. ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಪ್ರೌಢಶಾಲೆಯ ನಂತರ ಮನೆಯಲ್ಲಿಯೇ ವಿದ್ಯಾಭ್ಯಾಸ. ಕಲಿತದ್ದು ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ. ಬಿ.ಎ. ಓದುತ್ತಿದ್ದ ಅಣ್ಣ ಪ್ರತಿವಾರ ೩೦. ಕಿ.ಮೀ. ದೂರದ ಚಿಕ್ಕಮಗಳೂರಿನಿಂದ ಹಳ್ಳಿಗೆ …
ಪೂರ್ತಿ ಓದಿ...