Tag Archives: ಸಾಹಿತಿಗಳು

ಸುಜನಾ (ಎಸ್. ನಾರಾಯಣ ಶೆಟ್ಟಿ)

Sujana

ಸುಜನಾ (ಎಸ್. ನಾರಾಯಣ ಶೆಟ್ಟಿ) (೧೩-೪-೧೯೩೦): ಕಾವ್ಯ, ವಿಮರ್ಶೆ, ಅಧ್ಯಯನ ಮುಂತಾದ ಸೃಜನಾತ್ಮಕ ಸಾಹಿತ್ಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸುಜನಾ ನಾಮದ ಎಸ್. ನಾರಾಯಣಶೆಟ್ಟಿಯವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕೃಷ್ಣರಾಜ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ. ತಂದೆ ಸುಬ್ಬಯ್ಯಶೆಟ್ಟಿ, ತಾಯಿ ಗೌರಮ್ಮ. ಹೊಳೆ ನರಸೀಪುರ, ಬೆಂಗಳೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ. ಕುವೆಂಪು, ಡಿ.ಎಲ್.ಎನ್.ರವರ ಶಿಷ್ಯತ್ವದಿಂದ ಪ್ರಭಾವಿತರಾಗಿ ತಾವೂ ಅಧ್ಯಾಪಕರಾಗಬೇಕೆಂದು ಪಡೆದದ್ದು ಎಂ.ಎ. ಪದವಿ. ಉದ್ಯೋಗ ಪ್ರಾರಂಭಿಸಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಅಧ್ಯಾಪನದ ಜೊತೆಗೆ ರೂಢಿಸಿಕೊಂಡಿದ್ದು ಕಾವ್ಯರಚನೆ ಮತ್ತು ವಿಮರ್ಶೆ. ಗ್ರೀಕ್ ನಾಟಕಗಳ ಬಗ್ಗೆ ವಿಶೇಷ ಒಲವು. …

ಪೂರ್ತಿ ಓದಿ...

ಸೂರ್ಯನಾರಾಯಣ ಚಡಗ

Suryanarayana Chadaga

ಸೂರ್ಯನಾರಾಯಣ ಚಡಗ (೧೩.೦೪.೧೯೩೨ – ೧೪.೧೧.೨೦೦೬) : ತಾವು ಬರೆದಿದ್ದರ ಜೊತೆಗೆ ಉದಯೋನ್ಮುಖ ಬರಹಗಾರರ ಕೃತಿಗಳನ್ನೂ ಪ್ರಕಟಿಸಿ ಉತ್ತೇಜಿಸುತ್ತಾ, ಹಿರಿಯ ಸಾಹಿತಿಗಳನ್ನು ಸನ್ಮಾನಿಸಿ ಸಂಭ್ರಮಿಸುತ್ತಿದ್ದ ಸೂರ್ಯನಾರಾಯಣ ಚಡಗರು ಹುಟ್ಟಿದ್ದು ೧೯೩೨ ರ ಏಪ್ರಿಲ್‌ ೧೩ ರಂದು ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ. ತಂದೆ ನಾರಾಯಣ ಚಡಗ, ತಾಯಿ ಶೇಷಮ್ಮ. ಹುಟ್ಟಿದೂರಿನಲ್ಲಿಯೇ ಪ್ರಾರಂಭಿಕ ಶಿಕ್ಷಣ. ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ಮನೆಯಲ್ಲಿ ಇದ್ದ ಭಾವನವರು ಕವಿ ಮುದ್ದಣನ ರಾಮೇಶ್ವಮೇಧವನ್ನೂ ಓದಿ ಹೇಳುತ್ತಿದ್ದರು. ಹುಡುಗನಾಗಿದ್ದ ಇವರ ಮನಸ್ಸಿನ ಮೇಲೂ ಪರಿಣಾಮಬೀರಿ ತಾನೂ ಅದೇರೀತಿ ಏಕೆ ಬರೆಯಬಾರದು ಎಂಬ …

ಪೂರ್ತಿ ಓದಿ...

ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ

Mallikarjuna S Latte

ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ (೧೨-೪-೧೯೩೨ – ೧೯-೧೧-೨೦೦೭): ಜಾನಪದ ತಜ್ಞ, ಸಂಶೋಧಕ, ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ. ತಂದೆ ಶಿವಪ್ಪ, ತಾಯಿ ಬಸವಮ್ಮ. ಪ್ರೈಮರಿ ವಿದ್ಯಾಭ್ಯಾಸ ನಡೆದುದು ಹಿರೇಬಾಗೇವಾಡಿಯಲ್ಲಿ. ಕಾಲೇಜಿಗೆ ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು, ಬಿ.ಎ. ಆನರ್ಸ್‌ ಪದವಿ. ಪೂನ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ಒಂದು ತೌಲನಿಕ ಅಧ್ಯಯನ’ಕ್ಕೆ ಪಿಎಚ್.ಡಿ. ಪದವಿ. ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಮತ್ತದೇ ಸಂಸ್ಥೆಯ …

ಪೂರ್ತಿ ಓದಿ...

ನೀರ್ಪಾಜೆ ಭೀಮಭಟ್ಟ

Neepaje Bhimabhatta

ನೀರ್ಪಾಜೆ ಭೀಮಭಟ್ಟ (೧೨.೦೪.೧೯೩೪ – ೧೨.೧೨.೨೦೦೨): ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ‘ರಾಜತರಂಗಿಣಿ’ ಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಗದ್ಯರೂಪದಲ್ಲಿ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರಕ್ಕೆ ಪಾತ್ರರಾದ ನೀರ್ಪಾಜೆ ಭೀಮಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ನೀರ್ಪಾಜೆಯಲ್ಲಿ ೧೯೩೪ರ ಏಪ್ರಿಲ್ ೧೨ರಂದು. ತಂದೆ ಶಂಕರಭಟ್ಟರು, ತಾಯಿ ಲಕ್ಷ್ಮೀ ಅಮ್ಮ. ಸಂಸ್ಕೃತ ಶಿಕ್ಷಣ ಪಡೆದದ್ದು ಕಾಸರಗೋಡು ತಾಲ್ಲೂಕು ಪೆರಡಾಲದ ನೀರ್ಚಾಲಿನ ಮಹಾಜನ ಸಂಸ್ಕೃತ ಪಾಠಶಾಲೆಯಲ್ಲಿ ಓದಿ ಸಾಹಿತ್ಯ ಶಿರೋಮಣಿ ಪದವಿಯ ಜೊತೆಗೆ ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ವಿಶಾರದರು. ವಿದ್ಯಾರ್ಥಿದೆಸೆಯಲ್ಲಿಯೇ ರಚಿಸಿದ್ದು ಕಾಶ್ಮೀರ …

ಪೂರ್ತಿ ಓದಿ...

ಮುಜಾವರ ಅಸಿಫ ಅಲಿ

Mujavar Asifh Ali

ಮುಜಾವರ ಅಸಿಫ ಅಲಿ (೧೧-೪-೧೯೫೩ – ೧೯೯೬): ಸಾಹಿತ್ಯ, ಛಾಯಾಗ್ರಹಣ ಕಲೆಯಲ್ಲಿ ಪರಿಣತರಾಗಿದ್ದ ಮುಜಾವರರು ಹುಟ್ಟಿದ್ದು ಬೈಲಹೊಂಗಲ ತಾಲ್ಲೂಕು ತುರಮುರಿಗ್ರಾಮ. ತಂದೆ ಹುಸೇನಸಾಬ, ತಾಯಿ ಇಮಾಮಬಿ. ಓದಿದ್ದು ಎಸ್.ಎಸ್.ಎಲ್.ಸಿ. ಪಾಸಾದ ನಂತರ ಆರ್ಥಿಕ ತೊಂದರೆಯಿಂದ ಮುಂದೆ ಓದಲಾರದೆ ಸೇರಿದ್ದು ಪೊಲೀಸ್ ಇಲಾಖೆಗೆ. ಬೆಳಗಾವಿ ಉಪನಗರದ ವಡಗಾವಿಯ ಪೊಲೀಸ್ ಠಾಣೆಯಲ್ಲಿ ಉದ್ಯೋಗ. ಅಪರಾಗಳಿಗೆ ಸಂಬಂಸಿದ ಕಡತಗಳನ್ನು ನ್ಯಾಯಾಲಯಕ್ಕೆ ಹೊತ್ತೊಯ್ಯುವ ಕೆಲಸ. ಪೊಲೀಸ್ ಠಾಣೆಯ ಎದುರಿಗಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಪುಂಡಲೀಕ ಪಾಟೀಲರ ಸ್ನೇಹದಿಂದ ಸಾಹಿತ್ಯ ರಚನೆಯ ಕಡೆ ಬೆಳೆದ ಒಲವು. ಕಥೆ, ಕವನ, ಕಾದಂಬರಿಗಳ ಬಗ್ಗೆ ಬಿಡುವಿನ …

ಪೂರ್ತಿ ಓದಿ...

ಚಿ.ನ. ಮಂಗಳಾ

Chi Na Mangala

ಚಿ.ನ. ಮಂಗಳಾ (೧೦.೪.೧೯೩೮ – ೩೦.೫.೧೯೯೭): ಶಿಕ್ಷಣ ತಜ್ಞೆ ಚಿ.ನ. ಮಂಗಳಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಿ. ನರಸಿಂಹಮೂರ್ತಿ, ತಾಯಿ ರಾಜೇಶ್ವರಿ. ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರು. ಎಸ್.ಎಸ್.ಎಲ್.ಸಿ. ಓದಿದ್ದು ಮಂಡ್ಯ. ತಂದೆ ಮುಖ್ಯ ಕಾರ‍್ಯದರ್ಶಿಯಾಗಿದ್ದರಿಂದ ಮಡಿಕೇರಿಗೆ ವರ್ಗ. ಕಾಲೇಜಿಗೆ ಸೇರಿದ್ದು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್. ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್‌ (ಇಂಗ್ಲಿಷ್) ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. ಪದವಿ. ಪದವಿ ಗಳಿಸಿದ ನಂತರ ಅಧ್ಯಾಪಕಿಯಾಗಿ ೧೯೫೯ರಲ್ಲಿ ಸೇರಿದ್ದು ಬೆಂಗಳೂರಿನ ಎ.ಪಿ.ಎಸ್. ಕಾಲೇಜು. ದೆಹಲಿಯ ಅಮೆರಿಕ ಶಿಕ್ಷಣ ಪ್ರತಿಷ್ಠಾನ, ವಾಷಿಂಗ್‌ಟನ್ ವಿದ್ವಾಂಸರ …

ಪೂರ್ತಿ ಓದಿ...

ಜಿ. ವೆಂಕಟಯ್ಯ

G Venkataiah

ಜಿ. ವೆಂಕಟಯ್ಯ (೧೦.೦೪.೧೯೧೬ – ೨೨.೦೯.೧೯೭೯): ಅಕ್ಷರ ಜ್ಞಾನವೇ ಇಲ್ಲದ ದಲಿತಜನಾಂಗದಿಂದ ಸಾಹಿತ್ಯ ನಿರ್ಮಾಣವನ್ನು ನಿರೀಕ್ಷಿಸಲಾಗದ ಸಂದರ್ಭದಲ್ಲಿ ಅಕ್ಷರ ಕಲಿತು ಸಾಹಿತ್ಯರಚನೆಯಲ್ಲಿ ತೊಡಗಿದ ಜಿ. ವೆಂಕಟಯ್ಯನವರು ಹುಟ್ಟಿದ್ದು ೧೯೧೬ರ ಏಪ್ರಿಲ್ ೧೦ರಂದು ಮಂಡ್ಯ ಜಿಲ್ಲೆಯ ಮದ್ದೂರ್ ತಾಲ್ಲೂಕಿನ ಹೆಮ್ಮನ ಹಳ್ಳಿಯಲ್ಲಿ. ತಂದೆ ಗಿರಿಯಯ್ಯ, ತಾಯಿ ಸಿದ್ಧಮ್ಮ. ಮೊದಲಮಗನಾಗಿ ಹುಟ್ಟಿದ ವೆಂಕಟಯ್ಯನವರು ಅಕ್ಷರ ಜ್ಞಾನ ಸಂಪಾದಿಸಿದ್ದರಿಂದ ನಂತರ ಹುಟ್ಟಿದವರಿಗೂ ಅಕ್ಷರದ ಅದೃಷ್ಟದಿಂದ ಒಬ್ಬ ತಮ್ಮ ಜಿ. ಗೋಪಾಲ್ ವೈದ್ಯರಾಗಿದಷ್ಟೇ ಅಲ್ಲದೆ ವಿದೇಶ ಪ್ರವಾಸ ಕುರಿತು ‘ವಿದೇಶ ಪ್ರವಾಸ’ ಹಾಗೂ ‘ಮೈಸೂರಿನಿಂದ ಮೆಕ್ಸಿಕೊ’ ಎಂಬ ಎರಡು ಪ್ರವಾಸ …

ಪೂರ್ತಿ ಓದಿ...

ಮಂಗಳಾ ಸತ್ಯನ್‌

S Mangala Satyan

ಮಂಗಳಾ ಸತ್ಯನ್‌ (೧೦.೪.೧೯೪೦): ಸಾಹಿತ್ಯ, ಸಂಗೀತ, ಸಮಾಜಸೇವೆ – ಹೀಗೆ ಒಂದಲ್ಲೊಂದು ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಮಂಗಳಾ ಸತ್ಯನ್‌ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ೧೯೪೦ ರ ಏಪ್ರಿಲ್‌ ೧೦ ರಂದು. ತಂದೆ ಪ್ರಖ್ಯಾತ ವಕೀಲರಾಗಿದ್ದ ಸಾಲಗಾಮ ಸುಬ್ಬರಾಯರು, ತಾಯಿ ಗುಂಡಮ್ಮ. ಹುಟ್ಟಿದೂರಿನಲ್ಲಿ ಪಡೆದ ಶಿಕ್ಷಣ. ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಕಥೆ ಹೇಳುವ, ಕಥೆ ಕೇಳುವ ಹವ್ಯಾಸ. ಪ್ರತಿದಿನದ ನೀತಿಕಥೆಗಳು ಪೀರಿಯಡ್‌ನಲ್ಲಿ ಚಂದಮಾಮ, ಬಾಲಮಿತ್ರದ ಕಥೆಗಳನ್ನೂ ಓದಿಕೊಂಡು, ಮನೆಯಲ್ಲಿ ಹಿರಿಯರಿಂದ ಕಥೆ ಕೇಳಿಕೊಂಡು ಹೋಗಿ ಹೇಳಬೇಕಿತ್ತು. ಹೀಗೆ ಇವರ ಸರದಿ ಬಂದಾಗ ಪ್ರತಿಸಾರಿಯೂ ಕೇಳಿದ, …

ಪೂರ್ತಿ ಓದಿ...

ಆರ್.ನರಸಿಂಹಾಚಾರ್

R Narasimhachar

ಆರ್.ನರಸಿಂಹಾಚಾರ್: ಕನ್ನಡ ಸಾಹಿತ್ಯ ಲೋಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಅಪ್ರತಿಮ ಕೊಡುಗೆದಾರರೆನಿಸಿದ್ದಾರೆ. ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು ರಾವ್ ಬಹದ್ದೂರ್ ಆರ್. ನರಸಿಂಹಾಚಾರ್. ಅವರು ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ ವಿಮರ್ಶಕರಾಗಿ ಒಳ್ಳೆಯ ಹೆಸರು ಮಾಡಿದವರು. ತಮಿಳು ಮಾತೃಭಾಷೆಯಾಗಿದ್ದರೂ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು. ಕರ್ನಾಟಕ ಕವಿ ಚರಿತ್ರೆ: ಕನ್ನಡ ಭಾಷೆ ಮತ್ತು ಕವಿ-ಕಾವ್ಯದ ಬಗ್ಗೆ ಯಾವುದೇ ಮಾಹಿತಿ ಬೇಕಾದರೆ ಇಂದಿಗೂ ನಮಗೆ ಆಸರೆ …

ಪೂರ್ತಿ ಓದಿ...

ಡಿ.ಕೆ. ಭೀಮಸೇನರಾವ್

DK Bhimsenrao

ಡಿ.ಕೆ. ಭೀಮಸೇನರಾವ್ (೮.೪.೧೯೦೪ – ೨೯.೧೧.೧೯೬೯): ಹುಟ್ಟಿದ್ದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ. ತಂದೆ ಕೇಶವರಾವ್, ತಾಯಿ ಲಕ್ಷ್ಮೀಬಾಯಿ. ಪ್ರಾರಂಭಿಕ ಶಿಕ್ಷಣ ಅಯ್ಯನವರ ಮಠದಲ್ಲಿ. ನಿಜಾಮರ ಆಡಳಿತಕ್ಕೊಳಪಟ್ಟಿದ್ದರಿಂದ ನಿರ್ವಾಹವಿಲ್ಲದೆ ಉರ್ದುಭಾಷೆ ಕಲಿಕೆ. ೧೯೨೨ರಲ್ಲಿ ಉರ್ದು ಮಾಧ್ಯಮದಲ್ಲಿ ಮೆಟ್ರಿಕ್ಯುಲೇಷನ್ ಪಾಸು. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಕನ್ನಡದಲ್ಲಿ ಪ್ರಥಮ ಸ್ಥಾನ. ಇದರಿಂದ ಉತ್ತೇಜಿತರಾಗಿ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇರುವ ಬಯಕೆ. ೧೯೨೭ರಲ್ಲಿ ಮೈಸೂರು ವಿ.ವಿ.ದಲ್ಲಿ ಕನ್ನಡ ಎಂ.ಎ. ತರಗತಿ ಪ್ರಾರಂಭ. ೧೯೨೯ರಲ್ಲಿ ಎಂ.ಎ. ಪದವಿ. ಇವರ ಸಹಪಾಠಿಗಳು ಕುವೆಂಪು, ಡಿ.ಎಲ್.ಎನ್. …

ಪೂರ್ತಿ ಓದಿ...