ಡಾ. ವಿಜಯಾ ಸುಬ್ಬರಾಜ್ (೨೦-೪-೧೯೪೭): ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸೀತಾರಾಂ, ತಾಯಿ ಲಕ್ಷ್ಮಿ. ವಿದ್ಯಾಭ್ಯಾಸವೆಲ್ಲವೂ ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ., ಎಲ್.ಎಲ್.ಬಿ. ಮತ್ತು ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿ. ಜೊತೆಗೆ ಹಿಂದಿ ಸಾಹಿತ್ಯರತ್ನ ಪದವೀಧರೆ. ಉದ್ಯೋಗಕ್ಕೆ ಸೇರಿದ್ದು ಎಂ.ಇ.ಎಸ್. ಕಾಲೇಜು, ಪ್ರಾಧ್ಯಾಪಕರ ಹುದ್ದೆ. ನಿವೃತ್ತಿಯ ತನಕವೂ ಅಲ್ಲೇ ಸೇವೆ. ‘ಕನ್ನಡದಲ್ಲಿ ಗೀತ ನಾಟಕಗಳು : ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಸುಮಾರು ಐವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ, ಯಶಸ್ವಿ ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ. ಹಲವಾರು …
ಪೂರ್ತಿ ಓದಿ...ಎ. ಪಂಕಜ
ಎ. ಪಂಕಜ (೨೦.೦೪.೧೯೩೨): ಸಮಾಜಸೇವಕಿ, ಲೇಖಕಿ, ಉತ್ತಮ ಗೃಹಿಣಿ ಎನಿಸಿದ ಪಂಕಜರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಪಾವಗಡದಲ್ಲಿ ೧೯೩೨ ರ ಏಪ್ರಿಲ್ ೨೦ ರಂದು. ತಂದೆ ಶ್ರೀನಿವಾಸಾಚಾರ್, ತಾಯಿ ವಕುಳಮ್ಮ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ಇವರ ಮೇಲೂ ಬೀರಿದ ಪ್ರಭಾವ. ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದವರು. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್ ಪದವಿ. ಇವರು ಹುಟ್ಟಿದ ಸಂದರ್ಭದಲ್ಲಿ ದೇಶದ ತುಂಬೆಲ್ಲ ದೇಶ ಪ್ರೇಮ, ಸ್ವಾತಂತ್ಯ್ರ, …
ಪೂರ್ತಿ ಓದಿ...ಡಾ. ಶ್ರೀಕೃಷ್ಣಭಟ್ ಅರ್ತಿಕಜೆ
ಡಾ. ಶ್ರೀಕೃಷ್ಣಭಟ್ ಅರ್ತಿಕಜೆ (೧೯-೪-೧೯೪೫): ಸಾಹಿತ್ಯ, ಸಂಗೀತ, ಯಕ್ಷಗಾನ, ಸಂಶೋಧನೆ ಇವೆಲ್ಲದರಲ್ಲೂ ಪ್ರಾವೀಣ್ಯತೆ ಪಡೆದಿರುವ ಶ್ರೀಕೃಷ್ಣಭಟ್‌ರವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಡುವನ್ನೂರು ಅರ್ತಿಕಜೆ ಮನೆಯಲ್ಲಿ. ತಂದೆ ಶ್ಯಾಮಭಟ್, ತಾಯಿ ಸಾವಿತ್ರಿ ಅಮ್ಮ. ಪುತ್ತೂರು, ಎಡನೀರು, ಕಾಸರ ಗೋಡಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಓದು. ಪಿ.ಯು.ಗೆ ಸೇರಿದ್ದು ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರು, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಬಿ.ಎ. (೧೯೬೯) ಪದವಿ. ಪ್ರಥಮರ‍್ಯಾಂಕ್, ೧೯೭೧ರಲ್ಲಿ ಎಂ.ಎ. ಪ್ರಥಮ ರ‍್ಯಾಂಕ್ ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ, ಮದರಾಸು ವಿಶ್ವವಿದ್ಯಾಲಯದಲ್ಲಿ “ಕನ್ನಡದಲ್ಲಿ ಶಾಸನ ಸಾಹಿತ್ಯ” ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. …
ಪೂರ್ತಿ ಓದಿ...ವಸುಮತಿ ಉಡುಪ
ವಸುಮತಿ ಉಡುಪ (೧೮-೪-೧೯೪೮): ಪ್ರಖ್ಯಾತ ಕಥೆಗಾರ್ತಿ ವಸುಮತಿ ಉಡುಪರು ಹುಟ್ಟಿದ್ದು ಹೊಸನಗರ ತಾಲ್ಲೂಕಿನ ‘ನಗರ’ದಲ್ಲಿ. ತಂದೆ ಕಿರಣಗೆರೆ ರಂಗಾಭಟ್ಟರು, ತಾಯಿ ತ್ರಿಪುರಾಂಬ. ಪಿ.ಯು.ವರೆಗೆ ಓದಿದ್ದು ತೀರ್ಥಹಳ್ಳಿಯಲ್ಲಿ. ಪಿ.ಯು. ಮುಗಿಯುತ್ತಿದ್ದಂತೆ ಮದುವೆಯಾಗಿ ಓದು ಅನಿವಾರ‍್ಯವಾಗಿ ಕಂಡ ಮುಕ್ತಾಯ. ಪತಿಗೆ ಸರಿಗಟ್ಟುವ ಆಶಯದಿಂದ ತೊಡಗಿಸಿಕೊಂಡದ್ದು ಬರವಣಿಗೆಯಲ್ಲಿ. ಬರಹಗಾರರೆಲ್ಲರಂತೆ ಬರೆಯಲು ಪ್ರಾರಂಭಿಸಿದ್ದು ಕವಿತೆಯಿಂದಲಾದರೂ ಆಯ್ದುಕೊಂಡದ್ದು ಕಥಾಕ್ಷೇತ್ರ. ಜನಪ್ರಿಯ ಸಾಹಿತ್ಯ ಅಥವಾ ಮತ್ತಾವುದೇ ಸಾಹಿತ್ಯವೆನ್ನದೆ, ಯಾವ ‘ಇಸಂ’ಗೂ ಒಳಪಡದೆ, ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ. ಅಕ್ಕಪಕ್ಕದಲ್ಲಿ ಕಂಡ ವ್ಯಕ್ತಿಗಳೇ ನಾಯಕ, …
ಪೂರ್ತಿ ಓದಿ...ಅಜ್ಜಂಪುರ ಜಿ. ಸೂರಿ
ಅಜ್ಜಂಪುರ ಜಿ. ಸೂರಿ (೧೭.೦೪.೧೯೩೯ – ೨೫.೦೫.೨೦೦೮): ಕವಿ, ವಚನಕಾರ, ಕಾದಂಬರಿಕಾರ, ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆ ಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ ೧೯೩೯ ರ ಏಪ್ರಿಲ್ ೧೭ ರಂದು. ಗೋವಿಂದಪ್ಪ, ತಾಯಿ ಪಾರ್ವತಮ್ಮ. ತಂದೆಯವರದು ಬಳೆಮಾರುವ ಕಾಯಕ ಪ್ರವೃತ್ತಿ ಆಯುರ್ವೇದ ಮತ್ತು ಅಧ್ಯಾತ್ಮ. ಲೌಕಿಕ ಚಿಕಿತ್ಸೆಗೆ ಆಯುರ್ವೇದ ಚಿಕಿತ್ಸೆ ನೀಡಿದರೆ ಪಾರಮಾರ್ಥಿಕಕ್ಕೆ ಅಧ್ಯಾತ್ಮ ಚಿಕಿತ್ಸೆ ನೀಡುತ್ತ ಗೋವಿಂದಾರ್ಯರೆನಿಸಿದ್ದರು. ಈ ಪರಿಸರದಲ್ಲಿ ಬೆಳೆದ ಸೂರಿಯವರ ಮೇಲೂ ಆದ ಪರಿಣಾಮದಿಂದ ರೂಢಿಸಿಕೊಂಡ ಸುಸಂಸ್ಕೃತ ಬದುಕು. ಅಜ್ಜಂಪುರದಲ್ಲಿ …
ಪೂರ್ತಿ ಓದಿ...ಡಾ. ಮಲ್ಲಿಕಾಘಂಟಿ
ಡಾ. ಮಲ್ಲಿಕಾಘಂಟಿ (೧೭-೪-೧೯೫೯): ಸ್ತ್ರೀವಾದಿ, ಮಹಿಳಾ ಹೋರಾಟಗಾರ್ತಿ, ಸ್ತ್ರೀಯರ ಸಾಮಾಜಿಕ ಸುಧಾರಣೆಗೋಸ್ಕರ ದುಡಿಯುತ್ತಿರುವ ಮಲ್ಲಿಕಾ ಘಂಟಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಅಗಸಬಾಳ ಗ್ರಾಮದಲ್ಲಿ. ತಂದೆ ಶಂಕರಪ್ಪ ಮತ್ತು ತಾಯಿ ಪಾರ್ವತಿಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ. ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ ಪಿ.ಯು.ವರೆಗೆ ವಿದ್ಯಾಭ್ಯಾಸ, ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ. ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ “ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ” ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಓದಿನ ಜೊತೆಗೆ ಸಾಹಿತ್ಯ ರಚನೆಯ ಹವ್ಯಾಸ. ವಿದ್ಯಾರ್ಥಿನಿಯಾಗಿದ್ದಾಗಲೇ …
ಪೂರ್ತಿ ಓದಿ...ಆನಂದಕಂದ
ಆನಂದಕಂದ (೧೬-೪-೧೯೦೦ – ೩೦-೧೦-೧೯೮೨): ಸಂಪಾದನೆ, ಸಂಶೋಧನೆಯಲ್ಲಿ ಶ್ರೇಷ್ಠರೆನಿಸಿದ ಆನಂದಕಂದರ ನಿಜನಾಮ ಬೆಟಗೇರಿ ಕೃಷ್ಣಶರ್ಮ. ಇವರು ಹುಟ್ಟಿದ್ದು ಗೋಕಾಕ ತಾಲ್ಲೂಕಿನ ಬೆಟಗೇರಿ. ತಂದೆ ಶ್ರೀನಿವಾಸರಾವ್, ತಾಯಿ ರಾಧಾಬಾಯಿ. ಪ್ರಾರಂಭಿಕ ಶಿಕ್ಷಣ ಬೆಟಗೇರಿಯಲ್ಲೇ. ಮುಲ್ಕಿ ಪರೀಕ ಪಾಸು ಮಾಡಿದ ನಂತರ ಪುಣೇಕರ ನರಸಿಂಹಾಚಾರ‍್ಯರಲ್ಲಿ ಶಿಷ್ಯತ್ವ. ೧೯೨೬ರಲ್ಲಿ ಬೆಂಗಳೂರಿನ ಆರ್ಯ ವಿದ್ಯಾಶಾಲೆಯ ಶಿಕ್ಷಕ ವೃತ್ತಿಯ ಹೊಣೆ. ಪುನಃ ಧಾರವಾಡಕ್ಕೆ ಹೋಗಿ ಗೆಳೆಯರ ಗುಂಪಿನ ಸಂಘಟನೆ. ಮನೋಹರ ಗ್ರಂಥಮಾಲೆಯ ಪ್ರಾರಂಭಕ್ಕೆ ಕಾರಣೀಭೂತರು. ೧೯೩೮ರಲ್ಲಿ ‘ಜಯಂತಿ’ ಪತ್ರಿಕೆ ಪ್ರಾರಂಭ. ಹಲವಾರು ಲೇಖಕರನ್ನು ಹುರಿದುಂಬಿಸಿ ಪತ್ರಿಕೆಗೆ ಬರೆಸಿದರು. ನೂರಾರು ಲೇಖಕರನ್ನು ಪತ್ರಿಕೆಯ …
ಪೂರ್ತಿ ಓದಿ...ಡಾ. ಅಬ್ದುಲ್ ಹಮೀದ್
ಡಾ. ಅಬ್ದುಲ್ ಹಮೀದ್ಕ (೧೫-೪-೧೯೩೭): ನ್ನಡ, ಹಿಂದಿ ಎರಡು ಭಾಷೆಯಲ್ಲೂ ಪ್ರಾವೀಣ್ಯತೆ ಗಳಿಸಿರುವ ಅಬ್ದುಲ್ ಹಮೀದ್‌ರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿ. ತಂದೆ ಮಹಮದ್ ಬುಡೇನ್ ಸಾಬ್, ತಾಯಿ ಮೆಹಬೂಬ್ ಬೀ. ಪ್ರಾರಂಭಿಕ ಶಿಕ್ಷಣ ಹಂದನಕೆರೆಯಲ್ಲಿ. ಹೈಸ್ಕೂಲು ಓದಿದ್ದು ತಿಪಟೂರಿನಲ್ಲಿ. ಇಂಟರ್ ಮೀಡಿಯೆಟ್ ಪಾಸು ಮಾಡಿದ್ದು ಭೂಪಾಲ್‌ನಲ್ಲಿ. ನಂತರ ಪದವಿ ಗಳಿಸಿದ್ದೆಲ್ಲ ಅಪಾರ. ಸ್ವ-ಅಧ್ಯಯನದಿಂದ ಬಾಹ್ಯ ವಿದ್ಯಾರ್ಥಿಯಾಗಿ ಸಾಸಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಮತ್ತು ಎಂ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್. ಪದವಿ. “ಸೂಫಿ ಪಥ …
ಪೂರ್ತಿ ಓದಿ...ಡಾ. ದೇವೇಂದ್ರಕುಮಾರ ಹಕಾರಿ
ಡಾ. ದೇವೇಂದ್ರಕುಮಾರ ಹಕಾರಿ (೧೪-೪-೧೯೩೧ – ೭-೪-೨೦೦೭): ಜೀವನಚರಿತ್ರೆ, ವಿಮರ್ಶೆ, ಕಾವ್ಯ, ಕಾದಂಬರಿ ಹೀಗೆ ಎಲ್ಲ ಪ್ರಕಾರದಲ್ಲಿಯೂ ಹೆಸರು ಗಳಿಸಿರುವ ಹಕಾರಿಯವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ತಂದೆ ಸಿದ್ದಪ್ಪ, ತಾಯಿ ಮಲ್ಲವ್ವ. ಪ್ರಾಥಮಿಕ ಶಿಕ್ಷಣ ಪಡೆದುದು ಹುಟ್ಟಿದೂರಿನಲ್ಲಿ. ಕಲೆ, ಸಂಸ್ಕೃತಿ, ನಾಟಕ, ವಿಜ್ಞಾನ ಎಲ್ಲದರಲ್ಲಿಯೂ ಕಲಿತು ಏಳನೆಯ ವರ್ಗಕ್ಕೆ ಸೇರಿದ್ದು ಗುಲಬರ್ಗಾದ ಉಸ್ಮಾನಿಯಾ ಹೈಸ್ಕೂಲು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಜಾನಪದ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ’ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ …
ಪೂರ್ತಿ ಓದಿ...ವಿಜಯ ಸಾಸನೂರ
ವಿಜಯ ಸಾಸನೂರ (೧೪.೪.೧೯೪೮ – ೦೧.೦೩.೨೦೦೧): ರೋಚಕ ಕಾದಂಬರಿಗಳನ್ನೂ ಧಾರಾವಾಹಿಯಾಗಿ ಪತ್ರಿಕೆಗಳಲ್ಲಿ ಪ್ರಕಟಿಸಿ ಕನ್ನಡ ಓದುಗರನ್ನು ಬೆಳೆಸುವುದರಲ್ಲಿ ಪ್ರಮುಖರಾಗಿದ್ದ ವಿಜಯಸಾಸನೂರರು ಹುಟ್ಟಿದ್ದು ವಿಜಾಪುರದಲ್ಲಿ ೧೯೪೮ ರ ಏಪ್ರಿಲ್ ೧೪ ರಂದು. ತಂದೆ ಬಿ.ಟಿ. ಸಾಸನೂರ, ಕನ್ನಡ ಖ್ಯಾತ ಪ್ರಾಧ್ಯಾಪಕರು, ಪ್ರಿನ್ಸಿಪಾಲರು, ಹಾಗೂ ಲೋಕಸೇವಾ ಆಯೋಗದ ಸದಸ್ಯರು ಆಗಿದ್ದರು. ತಾಯಿ ಸುಮಿತ್ರಾಬಾಯಿಯವರು ವಿದ್ಯಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರು. ಪ್ರಾರಂಭಿಕ ಶಿಕ್ಷಣ ವಿಜಾಪುರದಲ್ಲಿ. ಎಸ್.ಎಸ್.ಎಲ್.ಸಿ. ಯಲ್ಲಿ ೪ ನೆಯ ರ್ಯಾಂಕ್ ಪಡೆದ ವಿದ್ಯಾರ್ಥಿ. ಬೀದರ್‌ನ ಭೂಮರೆಡ್ಡಿ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ (೪ ನೇ ರ್ಯಾಂಕ್). ಮುಂಬಯಿ …
ಪೂರ್ತಿ ಓದಿ...