ಕೆರೂರು ವಾಸುದೇವಾಚಾರ‍್ಯ (೧೫-೧೦-೧೮೬೬ – ೧೧-೧-೧೯೨೧): ಹೊಸಗನ್ನಡ ಪ್ರಾರಂಭದ ಗಮನಾರ್ಹ ಕಾದಂಬರಿಗಳಲ್ಲೊಂದಾದ ‘ಇಂದಿರೆ’ಯ (೧೯೦೮) ಕರ್ತೃಕೆರೂರು ವಾಸುದೇವಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ. ತಂದೆ ಶ್ರೀನಿವಾಸಾಚಾರ್ಯರು, ತಾಯಿ ಪದ್ಮಾವತೀಬಾಯಿ. ಪ್ರಾರಂಭಿಕ ಶಿಕ್ಷಣ-ಸಂಸ್ಕೃತಾಭ್ಯಾಸ ಮನೆಯಲ್ಲಿಯೇ. ಮಾಧ್ಯಮಿಕ ವಿದ್ಯಾಭ್ಯಾಸ ಧಾರವಾಡದಲ್ಲಿ. ೧೮೮೪ರಲ್ಲಿ ಮೆಟ್ರಿಕ್ಯುಲೇಷನ್ ಪಾಸು. ಪ್ರೌಢವ್ಯಾಸಂಗಕ್ಕಾಗಿ ಸೇರಿದ್ದು ಪುಣೆಯ ಫರ್ಗುಸನ್ ಕಾಲೇಜು. ಅನನುಕೂಲತೆಯಿಂದ ವಿದ್ಯಾಭ್ಯಾಸಕ್ಕೆ ಅಡಚಣೆ. ಖಾಸಗಿಯಾಗಿ ವ್ಯಾಸಂಗ ಮಾಡಿ ಎಚ್.ಪಿ. ಪರೀಕ್ಷೆಯಲ್ಲಿ ತೇರ್ಗಡೆ. ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡಿ ವಕೀಲಿ ವೃತ್ತಿ ಪ್ರಾರಂಭ. ನಳದಮಯಂತಿ ನಾಟಕವನ್ನು ರಚಿಸಿ ರಂಗದ ಮೇಲೂ ಪ್ರಯೋಗ. ಅದೇ ಕಾಲದಲ್ಲಿ ರಚಿಸಿದ …
ಪೂರ್ತಿ ಓದಿ...ವೀರೇಂದ್ರ ಸಿಂಪಿ
ವೀರೇಂದ್ರ ಸಿಂಪಿ (೧೪-೧೦-೧೯೩೮) ಪ್ರಸಿದ್ಧ ಪ್ರಬಂಧಕಾರರಾದ ವೀರೇಂದ್ರ ಸಿಂಪಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ. ತಂದೆ ಪ್ರಸಿದ್ಧ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣ. ಕಾಲೇಜು ಶಿಕ್ಷಣ ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ೧೯೬೨ರಲ್ಲಿ. ಉದ್ಯೋಗ ಪ್ರಾರಂಭಿಸಿದ್ದು ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೯ರಲ್ಲಿ ನಿವೃತ್ತಿ. ನಿವೃತ್ತಿಯ ನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ‍್ಯರಾಗಿ ನಾಲ್ಕು ವರ್ಷ ಸೇವೆ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಹುಚ್ಚು. …
ಪೂರ್ತಿ ಓದಿ...ಎ.ಪಿ. ಮಾಲತಿ
ಎ.ಪಿ. ಮಾಲತಿ (೬.೫.೧೯೪೪): ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ.ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ ೧೯೪೪ ರ ಮೇ ೬ ರಂದು. ತಂದೆ ಗಣೇಶಭಟ್ಟರು, ತಾಯಿ ಕಾವೇರಿ. ಪ್ರಾರಂಭಿಕ ಶಿಕ್ಷಣ ಕರ್ಕಿ ಹಾಗೂ ಹೊನ್ನಾವರದಲ್ಲಿ. ಧಾರವಾಡದ ಎ.ಕೆ. ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ. ಪಿ.ಯು.ಗೆ ಸೇರಿದ್ದು ಕರ್ನಾಟಕ ಕಾಲೇಜು. ಪ್ರತಿದಿನ ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದ ಬೇಂದ್ರೆಯವರನ್ನು ಕಂಡಾಗ ಕುತೂಹಲ, ಬೆರಗು. ಆಕಾಶವಾಣಿ ‘ಗಿಳಿವಿಂಡು’ ಮಕ್ಕಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೇಂದ್ರೆಯವರ ಕವನ ಹಾಡಿ, ನೃತ್ಯದಲ್ಲಿ ಭಾಗವಹಿಸಿದಾಗ ಮನಸ್ಸಿಗಾಗುತ್ತಿದ್ದ ಅದೆಂತಾದ್ದೋ ಆನಂದ. ಮನೆಯಲ್ಲಿದ್ದ ತಾಯಿ ನಾಲ್ಕನೆಯ ತರಗತಿಯವರೆಗೆ ಓದಿದ್ದರೂ …
ಪೂರ್ತಿ ಓದಿ...ಭುವನೇಶ್ವರಿ ಹೆಗಡೆ
ಭುವನೇಶ್ವರಿ ಹೆಗಡೆ (೦೬.೦೫.೧೯೫೬): ಹಾಸ್ಯಬರಹಗಾರ್ತಿ, ಭಾಷಣಕಾರ್ತಿ, ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕತ್ರಗಾಲದಲ್ಲಿ. ತಂದೆ ಗಣಪತಿ ಹೆಗಡೆ, ತಾಯಿ ಗೌರಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಅರ್ಥಶಾಸ್ತ್ರ) ಪದವಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ವೃತ್ತಿ ಪ್ರಾರಂಭ. ಅರ್ಥಶಾಸ್ತ್ರದ ಉಪನ್ಯಾಸಕಿಯಾದರೂ ತಮ್ಮ ಹುಟ್ಟಿನ – ಪ್ರಕೃತಿಯ ಪರಿಸರದಿಂದ ನಗೆಯನ್ನು ಹಂಚಿಕೊಳ್ಳುವ ಮನೋಧರ್ಮವನ್ನು ರೂಢಿಸಿಕೊಂಡಿದ್ದು, ಇದಕ್ಕಾಗಿ ಕಂಡುಕೊಂಡ ಅಭಿವ್ಯಕ್ತಿ ಮಾರ್ಗವೆಂದರೆ ಹಾಸ್ಯ ಬರಹಗಳು. ಯಾವುದೇ ಸಂದರ್ಭಕ್ಕೆ ತಕ್ಕ ಹಾಗೆ ಭಾಷೆಯನ್ನೂ ಹೊಂದಿಸಿಕೊಳ್ಳುವಲ್ಲಿ ಪದಗಳನ್ನು ತಿರುಚಿಯೋ, ಹೊಸಪದಗಳನ್ನು ಸೃಷ್ಟಿಸಿಯೋ ನಗೆ ಉಕ್ಕಿಸುವುದರಲ್ಲಿ …
ಪೂರ್ತಿ ಓದಿ...ಪ್ರೊ. ಜಿ. ಅಬ್ದುಲ್ ಬಷೀರ್
ಪ್ರೊ. ಜಿ. ಅಬ್ದುಲ್ ಬಷೀರ್ (೬-೫-೧೯೪೭): ವ್ಯಾಕರಣ, ಭಾಷೆ, ಕಾವ್ಯಮೀಮಾಂಸೆ, ವಿಮರ್ಶಾಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಬ್ದುಲ್ ಬಷೀರ್‌ರವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ. ತಂದೆ ಅಬ್ದುಲ್ ಗಫೂರ್‌ಸಾಬ್, ತಾಯಿ ಬಿಯಾಂಬಿ. ಪ್ರಾಥಮಿಕ ವಿದ್ಯಾಭ್ಯಾಸ ಗಬ್ಬಾಡಿ ಶಾಲೆಯಲ್ಲಿ. ಹೈಸ್ಕೂಲಿಗೆ ಸೇರಿದ್ದು ಹಾರೋಹಳ್ಳಿ ರೂರಲ್ ಹೈಸ್ಕೂಲು. ಕಾಲೇಜು ವಿದ್ಯಾಭ್ಯಾಸ ಆಚಾರ‍್ಯ ಪಾಠಶಾಲೆಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. (ಕನ್ನಡ) ಪದವಿ ಬೆಂಗಳೂರು ವಿಶ್ವವಿದ್ಯಾಲಯದಿಂದ. [sociallocker]೧೯೭೨ರಲ್ಲಿ ಉದ್ಯೋಗಕ್ಕೆ ಸೇರಿದ್ದು ಕಲಿತ ಕಾಲೇಜಿನಲ್ಲೇ ಅಧ್ಯಾಪಕರ ವೃತ್ತಿ ಆರಂಭ. ಕನ್ನಡ …
ಪೂರ್ತಿ ಓದಿ...ಬಿ.ಎಲ್. ವೇಣು
ಬಿ.ಎಲ್. ವೇಣು (೦೫.೦೫.೧೯೪೫): ಕಥೆ, ಕಾದಂಬರಿ, ನಾಟಕ, ಚಿತ್ರಕಥೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ವೈಚಾರಿಕತೆ, ಪ್ರಯೋಗಶೀಲತೆಗಳಿಂದ, ಪ್ರಗತಿಪರ ವಿಚಾರಗಳಿಂದ ಯಾವ ಗುಂಪಿಗೂ ಸೀಮಿತವಾಗದೆ ಸಾಹಿತ್ಯರಚನೆಯಲ್ಲಿ ನಿರತರಾಗಿರುವ ವೇಣುರವರು ಹುಟ್ಟಿದ್ದು ಕೋಟಿಕೊತ್ತಲಗಳ ಊರಾದ ಚಿತ್ರದುರ್ಗದಲ್ಲಿ. ೧೯೪೫ರ ಮೇ ೫ ರಂದು. ತಂದೆ ವೃತ್ತಿರಂಗಭೂಮಿಯ ನಟರಾದ ಲಕ್ಷ್ಮಯ್ಯ, ತಾಯಿ ಸುಶೀಲಮ್ಮ ಹಾರ್ಮೋನಿಯಂ ವಾದಕಿ. ರಂಗಭೂಮಿನಟರೆಂದ ಮೇಲೆ ಅನಿಯತ ವರಮಾನದಿಂದ ಬೆನ್ನಿಗೆ ಕಟ್ಟಿಕೊಂಡೇ ಬಂದ ಬಡತನದ ಬದುಕು. ಆದರೂ ವೇಣುವಿಗೆ ಪ್ರೈಮರಿ ಶಾಲೆಯಲ್ಲಿದ್ದಾಗಲೇ ನಾಟಕದ ಬಗ್ಗೆ ಎಲ್ಲಿಲ್ಲದ ಆಸ್ಥೆ ಬೆಳೆಯತೊಡಗಿತು. ದುರ್ಗಕ್ಕೆ ಬಂದು ಮೊಕ್ಕಾಂ ಮಾಡುತ್ತಿದ್ದ ಕಂಪನಿ …
ಪೂರ್ತಿ ಓದಿ...ಪ್ರೊ. ಎನ್.ಎ. ನಿಕ್ಕಂ
ಪ್ರೊ. ಎನ್.ಎ. ನಿಕ್ಕಂ (೫-೫-೧೯೦೩ – ೧೯೭೪): ದಾರ್ಶನಿಕ, ತತ್ತ್ವಶಾಸ್ತ್ರ ಪ್ರಾಧ್ಯಾಪಕ, ಚಿಂತಕ ನಾರಾಯಣರಾವ್ ಅಪ್ಪೂರಾವ್ ನಿಕ್ಕಂರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣ ಕೆಸ್ತೂರು, ಮದ್ದೂರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ೧೯೨೯ರ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿ. ಬಾಬಾ ಸ್ಮಾರಕ ಸುವರ್ಣಪದಕ ವಿಜೇತರು. ದಾಮೋದರದಾಸ್ ವಿದ್ಯಾರ್ಥಿವೇತನದಿಂದ ಇಂಗ್ಲೆಂಡಿನಲ್ಲಿ ತತ್ತ್ವಶಾಸ್ತ್ರದಲ್ಲಿ ಉಚ್ಚಶಿಕ್ಷಣ. [sociallocker]೧೯೪೪ರಲ್ಲಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ. ಫುಲ್‌ಬ್ರೈಟ್ ಮತ್ತು ಫೋರ‍್ಡ್ ಫೌಂಡೇಶನ್ ವಿದ್ಯಾರ್ಥಿವೇತನದಿಂದ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ. ಸೆಲಿಮನ್ …
ಪೂರ್ತಿ ಓದಿ...ಡಾ. ಸುಮತೀಂದ್ರನಾಡಿಗ್
ಡಾ. ಸುಮತೀಂದ್ರನಾಡಿಗ್ (೪-೫-೧೯೩೫): ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ನಾಡಿಗರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ತಂದೆ ರಾಘವೇಂದ್ರರಾವ್, ತಾಯಿ ಸುಬ್ಬಮ್ಮ. ತಂದೆ ಪೊಲೀಸ್ ವೃತ್ತಿಯಲ್ಲಿದ್ದುದರಿಂದ ನಾಡಿಗರ ಬಾಲ್ಯ ಕಳಸ, ಸೊರಬ, ಶಿರಾಳ ಕೊಪ್ಪ ಆನವಟ್ಟಿ, ಸಾಗರ ಹೀಗೆ ಮಲೆನಾಡು, ಬಯಲು ಸೀಮೆಯಲ್ಲಿ ವಿದ್ಯಾಭ್ಯಾಸ. ಇಂಟರ್ ಮೀಡಿಯೆಟ್ ಓದಿದ್ದು ಶಿವಮೊಗ್ಗ ಕಾಲೇಜು. ಕುವೆಂಪುರವರನ್ನು ಮೊದಲ ಬಾರಿಗೆ ಕಂಡು ರಾಮಾಯಣ ದರ್ಶನಂ ಓದಿ ಪುಳಕಿತರಾದರು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಕೈಬರಹದ ಪತ್ರಿಕೆಯಲ್ಲಿ ಕವನ ಪ್ರಕಟ. ಇವರ ಕವನ ಓದಿದ …
ಪೂರ್ತಿ ಓದಿ...ಗಾಯತ್ರಿ ಮೂರ್ತಿ
ಗಾಯತ್ರಿ ಮೂರ್ತಿ (೦೪.೦೫.೧೯೪೮): ಮಕ್ಕಳ ಸಾಹಿತ್ಯ ಕ್ಷೇತ್ರದ ಕಥೆ, ಕವನ, ವಿಜ್ಞಾನ ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಗಾಯತ್ರಿ ಮೂರ್ತಿಯವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ರಾಮಸ್ವಾಮಿ ಮತ್ತು ತಾಯಿ ಇಂದುಮತಿ. ಪ್ರಾರಂಭಿಕ ಶಿಕ್ಷಣ ಕುಣಿಗಲ್, ಪ್ರೌಢಶಾಲಾ ವಿದ್ಯಾಭ್ಯಾಸ ಶಿವಮೊಗ್ಗ ಹಾಗೂ ಮೈಸೂರುಗಳಲ್ಲಿ. ಶಾರದಾ ವಿಲಾಸ್ ಕಾಲೇಜಿನಿಂದ ಬಿ.ಎಸ್ ಸಿ. ಹಾಗೂ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಿಂದ ಪಡೆದ ಎಂ.ಎಸ್ ಸಿ. ಪದವಿ. ಅಧ್ಯಾಪಕರಾಗಿ ಸೇರಿದ್ದು ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ. ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಬೋಧಿಸಿದಷ್ಟೇ ಅಲ್ಲದೆ …
ಪೂರ್ತಿ ಓದಿ...ಡಾ. ಭುಜೇಂದ್ರ ಮಹಿಷವಾಡಿ
ಡಾ. ಭುಜೇಂದ್ರ ಮಹಿಷವಾಡಿ (೦೩.೦೫.೧೯೨೫ – ೧೫.೦೩.೧೯೮೨): ಕನ್ನಡ ಸಾಹಿತ್ಯದಲ್ಲಿ ಎಲೆಮರೆಯ ಕಾಯಿಯಂತೆಯೇ ಬದುಕಿ, ಕಾವ್ಯಕ್ಷೇತ್ರಕ್ಕೆ ಸತ್ವಯುತ ಕೃತಿಗಳನ್ನು ನೀಡಿದ ಕೃಷ್ಣಾತೀರದ ಅಪ್ಪಟ ಪ್ರತಿಭೆಯ ಭುಜೇಂದ್ರ ಮಹಿಷವಾಡಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮಹಿಷಿವಾಡಿಯಲ್ಲಿ ೧೯೨೫ ರ ಮೇ ೩ರಂದು. [sociallocker]ಪ್ರಾರಂಭಿಕ ಶಿಕ್ಷಣ ಮಹಿಷವಾಡಿಯಲ್ಲಿ. ಪ್ರೌಢಶಾಲಾ ವಿದ್ಯಾಭ್ಯಾಸ ಅಥಣಿ ಮತ್ತು ಬನಹಟ್ಟಿಯಲ್ಲಿ. ಬೆಳಗಾವಿಯಲ್ಲಿ ಬಿ.ಎ. ಆನರ್ಸ್ ಮತ್ತು ಬಿ.ಎಡ್. ಪದವಿಯ ನಂತರ ಸಾಂಗ್ಲಿಯಲ್ಲಿ ಪಡೆದ ಎಂ.ಎ. ಪದವಿ. “ಕವಿಚಕ್ರವರ್ತಿ ಜನ್ನನ ಜೀವನ ಹಾಗೂ ಕೃತಿಗಳು: ವಿವೇಚನೆ” ಎಂಬ ಪ್ರೌಢ ಪ್ರಬಂದ ಮಾಡಿಸಿ ಪಡೆದ …
ಪೂರ್ತಿ ಓದಿ...