ಭಾರತವು ಅನೇಕ ಭಾಷೆಗಳನ್ನು ಹೊಂದಿರುವ ರಾಷ್ಟ್ರ. 1961ರ ಜನಗಣತಿಯ ಮಾಹಿತಿಯ ಮೇರೆಗೆ ಮಾತೃಭಾಷೆಗಳಾಗಿ ನಮೂದಿಸಿರುವ ಭಾಷೆಗಳ ಸಂಖ್ಯೆ 1652. ಕರ್ನಾಟಕವನ್ನು ತೆಗೆದುಕೊಂಡರೆ ಇಲ್ಲಿ 177 ಭಾಷೆಗಳನ್ನು ಮಾತೃಭಾಷೆಗಳನ್ನಾಗಿ ಹೊಂದಿರುವ ಜನರು ವಾಸಿಸುತ್ತಿದ್ದಾರೆ. ಕರ್ನಾಟಕದ ಪ್ರತಿಯೊಂದು ಊರೂ, ಪ್ರದೇಶವೂ ಅನೇಕ ಭಾಷೆಗಳನ್ನು ಆಡುವ ಜನರಿಂದಕೂಡಿದ್ದಾಗಿದೆ ಎಂದು ಹೇಳಬಹುದು. ಕರ್ನಾಟಕದಲ್ಲಿ ಕನ್ನಡ, ಉರ್ದು, ತೆಲುಗು, ಮರಾಠಿ, ತಮಿಳು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಲಮಾಣಿ ಭಾಷೆಗಳನ್ನು ಮಾತೃಭಾಷೆಗಳನ್ನಾಗಿ ಹೊಂದಿರುವ ಜನರಿದ್ದಾರೆ. ಕನ್ನಡವನ್ನು ಮಾತೃಭಾಷೆ ಯನ್ನಾಗಿ ಬಳಸುವ ಜನರ ಸಂಖ್ಯೆ ಶೇ.65.94. ಉರ್ದು ತೆಲುಗು ನಂತರದ ಸ್ಥಾನಗಳನ್ನು ಪಡೆದಿವೆ. …
ಪೂರ್ತಿ ಓದಿ...ತುಳಸಿ ರಾಮಚಂದ್ರ
ಪ್ರಖ್ಯಾತ ನೃತ್ಯ ಕಲಾವಿದರಾದ ಡಾ. ತುಳಸಿ ರಾಮಚಂದ್ರ ಅವರು ಡಿಸೆಂಬರ್ 21, 1952ರ ವರ್ಷದಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಜನಿಸಿದರು. ತಂದೆ ಮಾಧವರಾಯರು ರಂಗಭೂಮಿಯ ಪ್ರಸಿದ್ಧ ಕಲಾವಿದರು. ಅವರು ತಮಾಷಾ ಮಾಧವರಾವ್ ಎಂದೇ ರಂಗಲೋಕದಲ್ಲಿ ಪ್ರಸಿದ್ಧರಾದವರು. ತಾಯಿ ರುಕ್ಮಿಣಿಯಮ್ಮನವರು ಸಂಗೀತ ವಿದುಷಿ. ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ನೃತ್ಯ ಕಲಾವಿದೆ ಮತ್ತು ಶಿಲ್ಪಶಾಸ್ತ್ರ ಪರಿಣಿತೆ. ಪತಿ ಕೃಷ್ಣಗಿರಿ ರಾಮಚಂದ್ರ ಗಮಕಿಗಳು. ಹೀಗಾಗಿ ಡಾ. ತುಳಸಿ ರಾಮಚಂದ್ರ ಅವರು ಬೆಳೆದದ್ದು ಮತ್ತು ಬದುಕು ಕಟ್ಟಿಕೊಂಡದ್ದು ಎರಡೂ ಕಲಾವಿದರ ಕುಟುಂಬದಲ್ಲೇ. ತುಳಸಿ ಅವರಿಗೆ ಪ್ರಾರಂಭಿಕ ನೃತ್ಯ ಶಿಕ್ಷಣ …
ಪೂರ್ತಿ ಓದಿ...ಅಲಂಕಾರ
ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಒಡವೆ, ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾರೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು. ಉದಾ : ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು ಎಂದು ಹೇಳುವ ಬದಲಿಗೆ, ಪೂರ್ವ ದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತೈದೆಯ ಹಣೆಯ ಕುಂಕುಮದಂತೆ ಶೋಭಿಸುತ್ತಿದ್ದನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುವುದು. ಅಲಂಕಾರಗಳು …
ಪೂರ್ತಿ ಓದಿ...ಸಮಾಸ
ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು ‘ಸಮಾಸ’ ವೆನ್ನಲಾಗುತ್ತದೆ. ಉದಾ: ‘ಕೆಂಪಾದ ತಾವರೆ’ ಎಂಬಲ್ಲಿ, ಕೆಂಪು – ತಾವರೆ ಪದಗಳು ಕೂಡಿ, ‘ಕೆಂದಾವರೆ’ ಎಂಬ ಸಮಸ್ತ ಪದವಾಗುತ್ತದೆ. ವಿಗ್ರಹವಾಕ್ಯ ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ …
ಪೂರ್ತಿ ಓದಿ...ಅಂಶಿ ಸಮಾಸ
ಇಲ್ಲಿ ಸಮಾಸವು ಪೂರ್ವೋತ್ತರ ಪದಗಳ ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವುದು. ಪೂರ್ವಪದದ ಅರ್ಥವು ಇಲ್ಲಿ ಪ್ರಧಾನವಾಗಿರುತ್ತದೆ. ಕೆಲವರು ಇದನ್ನು ಅವ್ಯಯೀ ಭಾವವೆಂದೂ ಕರೆಯುತ್ತಾರೆ. ಇಲ್ಲಿ ಅಂಶ ಮುಖ್ಯವೇ ಹೊರೆತು ಅಂಶಿಯಲ್ಲ.
ಪೂರ್ತಿ ಓದಿ...ಮಹಾಸ್ರಗ್ಧರಾ ವೃತ್ತ
ಮಹಾಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ ೨೨ ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು “ಸತತನಸರರಗು” (ಗು-ಗುರು) ಇದರ ಸೂತ್ರಪದ್ಯ ಹೀಗಿದೆ “ಸತತಂನಂಸಂರರಂಗಂ ನೆರೆದೆಸೆಯೆ ಮಹಾ ಸ್ರಗ್ಧರಾ ವೃತ್ತಮಕ್ಕುಂ” ಇದರ ಪ್ರಸ್ತಾರ ವಿನ್ಯಾಸ ಹೀಗಿದೆ UU_| __U| _ _ U|U UU| U U _| _U_| _U_| _ ಸತತಂ|ನಂಸಂರ|ರಂಗಂ ನೆ|ರೆದೆಸೆ|ಯೆ ಮಹಾ| ಸ್ರಗ್ಧರಾ |ವೃತ್ತಮ|ಕ್ಕುಂ ಸಂಸ್ಕೃತಕನ್ನಡಗಳೆರಡರಲ್ಲಿಯೂ ಈ ಛಂದಸ್ಸಿನ ಪದ್ಯಗಳು ವಿಫುಲವಾಗಿ ಸಿಗುತ್ತವೆ. ಇದು ಸ್ರಗ್ಧರೆಯ ಮೊದಲ ಗುರುವನ್ನು ಲಘುಗಳೆರಡರಿಂದ ಬದಲಾಯಿಸಿದಾಗ ಸಿಗುತ್ತದೆ ಉದಾಹರಣೆ:- ಇದು ಲಾಕ್ಷಾಗೇಹದಾಹಕ್ಕಿದುವಿಷಮವಿಷಾನ್ನಕ್ಕಿದಾನಾಡಜೂದಿಂ- ಗಿದು ಪಾಂಚಾಲೀ ಪ್ರಪಂಚಕ್ಕಿದು ಕೃತಕ …
ಪೂರ್ತಿ ಓದಿ...ಶಬ್ದಮಣಿದರ್ಪಣ
ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ “ಶಬ್ದಸ್ಮೃತಿ” ಮತ್ತು “ಕಾವ್ಯಾವಲೋಕನ” ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವೈಯಾಕರಣರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನವಾಗಿ ಇದು ವಿಧಾತ್ಮಕ ಅಥವಾ ಆದರ್ಶ ರೀತಿಯ ವ್ಯಾಕರಣ. ಆದರೆ ವಿವರಣಾತ್ಮಕ ಮತ್ತು ವರ್ಣನಾತ್ಮಕ ರೀತಿಯ ನಿರೂಪಣಾ ದೃಷ್ಟಿಯನ್ನೂ ಒಳಗೊಂಡಿದೆ. ಡಾ.ಡಿ.ಎಲ್.ನರಸಿಂಹಾಚಾರ್ ಅವರು ಸಂಪಾದಿಸಿರುವ ಶಬ್ದಮಣಿದರ್ಪಣವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಮೈಸೂರು ವಿಶ್ವವಿದ್ಯಾನಿಲಯದ ಪದವಿಗೆ ಬೋಧಿಸಲ್ಪಡುತ್ತಿದೆ. ಇದರಲ್ಲಿ ೩೪೩ ಕಂದಪದ್ಯಗಳಿವೆ. ಕೇಶಿರಾಜನ ಶಬ್ದಮಣಿದರ್ಪಣ ದ ಇತಿವೃತ್ತ ಕೇಶಿರಾಜನು …
ಪೂರ್ತಿ ಓದಿ...ಕೇಶಿರಾಜ
ಕೇಶಿರಾಜನ ಕಾಲ ಸುಮಾರು ಕ್ರಿ.ಶ.೧೨೬೦. ಈತನು ಜನ್ನನ ಸೋದರಳಿಯ. ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಈತನ ಪ್ರಖ್ಯಾತ ಕೃತಿ. ಕೇಶಿರಾಜನ ತಂದೆ ಯೋಗಿಪ್ರವರನಾದ ‘ಮಲ್ಲಿಕಾರ್ಜುನ’,ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ “ಸುಮನೋಬಾಣ” ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ. ಕವಿ ಸುಮನೋಬಾಣನ ಯಾ -ದವಕಟಕಾಚಾರ್ಯನೆಸೆವ ದೌಹಿತ್ರನೆ ನಾಂ| ಕವಿ ಕೇಶವನೆಂ ಯೋಗಿ ಪ್ರವರಚಿದಾನಂದ ಮಲ್ಲಿಕಾರ್ಜುನ ಸುತನೆಂ|| (ಶಬ್ದಮಣಿದರ್ಪಣ-ಪೀಠಿಕೆ-೨) ಸುಮನೋಬಾಣಾನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದ.(೧೨೩೦) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆಯಿದೆ.ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಗೂ ಅವನ ಮಗ ಸೋಮೇಶ್ವರನ ಆಳಿಕೆಯಲ್ಲಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ …
ಪೂರ್ತಿ ಓದಿ...ದ್ರಾವಿಡ ಭಾಷೆಗಳು
ದ್ರಾವಿಡ ಭಾಷೆಗಳು ಭಾರತೀಯ ಉಪಖಂಡದ ಒಂದು ಭಾಷಾ ಕುಟುಂಬವಾಗಿದೆ. ದ್ರಾವಿಡ ಭಾಷೆಗಳು ದಕ್ಷಿಣ ಭಾರತ, ಮಧ್ಯ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಯಾವುದೇ ಬೇರೆಯ ಭಾಷಾಕುಟುಂಬಕ್ಕೆ ಸೇರಿದೆಯೇ ಎಂದು ತಿಳಿದುಕೊಳ್ಳಲು ಬಹಳ ಸಂಶೋಧನೆಗಳು ನಡೆದಿವೆಯಾದರೂ, ಖಚಿತವಾದ ಸಂಬಂಧವು ಈವರೆಗೂ ದೊರೆತಿಲ್ಲ. ಹೀಗಾಗಿ ಇದನ್ನು ಒಂದು ಸ್ವತಂತ್ರ ಭಾಷಾ ಕುಟುಂಬವೆಂದೇ ಪರಿಗಣಿಸಲಾಗಿದೆ. ದ್ರಾವಿಡ ಭಾಷೆಗಳ ಮೂಲ ಭಾಷೆಯಾದ ಪೂರ್ವ ದ್ರಾವಿಡಭಾಷೆಯು ಇತಿಹಾಸ ಪೂರ್ವಕಾಲದಲ್ಲಿ, ಅನೇಕ ಸಹಸ್ರ ವರ್ಷಗಳ ಹಿಂದೆ ಹೊರಗಿನಿಂದ ಭಾರತಕ್ಕೆ ಬಂತೆಂದು ಭಾವಿಸಲಾಗಿದೆ.ದ್ರಾವಿಡಭಾಷೆಗಳಿಗೆ ಕೆಲವು ಸಾಮಾನ್ಯ ಲಕ್ಷಣಗಳಿದ್ದು ಜಗತ್ತಿನ …
ಪೂರ್ತಿ ಓದಿ...