“ಬೇಸಿಗೆ ರಜೆಯಿಂದ ಶಾಲೆಯ ಮಡಿಲಿಗೆ” ಕಟ್ಟಪ್ಪನ ರಹಸ್ಯವೂ ಬಗೆ ಹರಿಯಿತು? ಐಪಿಎಲ್ ಪಂದ್ಯಾವಳಿಯೂ ಮುಗಿಯಿತು? ಇವುಗಳ ನಡುವೆ ಬೇಸಿಗೆ ರಜೆಯೂ ಕಳೆಯಿತು ? ಆ ಪ್ರವಾಸಗಳೂ , ಬೇಸಿಗೆ ಶಿಬಿರದ ಆ ಸಾಹಸಗಳು ? ಅಜ್ಜಿಯ ಮನೆಗೆ ಹೋದ ಮೋಜಿನ ದಿನಗಳು ? ನೆನಪುಗಳೇ ಇನ್ನು ಎಲ್ಲಾ ಬರೀ ನೆನಪುಗಳು ? ಕಾಡಲಿದೆ ಮರೆತೇ ಹೋದಂತಿದ್ದ ಕ್ರೂರ ಅಲಾರಾಂ ಸದ್ದು⏰ ತಯಾರಾಗಬೇಕಿದೆ ಮುಂಜಾವು ಸೂರ್ಯನ ಜೊತೆಗೆದ್ದು ? ತಲುಪಬೇಕಿದೆ ಶಾಲೆಯನ್ನು ಮತ್ತೊಮ್ಮೆ ಎದ್ದು ಬಿದ್ದು ??♀️ ಅಮ್ಮಂದಿರ ದಿನ ಇನ್ನು ಮತ್ತಷ್ಟು ಉದ್ದಾ ? …
ಪೂರ್ತಿ ಓದಿ...ಮೂವರು ಒಟ್ಟಿಗೆ ಪ್ರಯಾಣವೇಕೆ ಮಾಡಬಾರದು ?
ಮೂವರು ಒಟ್ಟಿಗೆ ಪ್ರಯಾಣಿಸುವುದು ಅಶುಭವೆಂದು ತಿಳಿಯಲಾಗಿದೆ. ನಂಬಿಕೆಯ ಪ್ರಕಾರ ಕೆಲವು ಸಂಖ್ಯೆಗಳು ಅಶುಭವಾಗಿ ಪ್ರಪಂಚ ಪೂರ್ತಿ ಪರಿಗಣಿಸಲಾಗಿದೆ. 3, 13, 33 ಮೊದಲಾದವು ಅಂತಹ ಸಂಖ್ಯೆಗಳು. ಯಾವಾಗಲಾದರೂ ಇಬ್ಬರು ಮಾತನಾಡಿಕೊಳ್ಳುತ್ತಿದ್ದಾಗ ಅಭಿಪ್ರಾಯ ಬೇಧಗಳು ಉಂಟಾದರೆ ಸುಲಭವಾಗಿ ಒಂದು ನಿರ್ಣಯಕ್ಕೆ ಬರುವರು. ಒಂದು ವೇಳೆ ಮೂರನೆಯವನಿದ್ದರೆ ಒಂದು ವಿಷಯದ ಅಭಿಪ್ರಾಯದ ಬಗ್ಗೆ ಘರ್ಷಣೆಯಲ್ಲಿ ಇರುವ ಇಬ್ಬರನ್ನೂ ಸರಿಮಾಡುವುದಕ್ಕೆ ಎರಡೂ ಕಡೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಬೇಕು. ಹೀಗೆ ಮಾತಿಗೆ ಮಾತು ಬೆಳೆದು, ಜಗಳಕ್ಕೆ ದಾರಿಯಾಗಿ ಒಬ್ಬರಿಗೊಬ್ಬರು ಮಾತಿನಲ್ಲಿ ಗಾಯಪಡಿಸಿಕೊಳ್ಳಬೇಕಾಗಿ ಬರುತ್ತದೆ. ಇಬ್ಬರ ವಾದಗಳ ಮಧ್ಯೆ ಮೂರನೆಯವನ ಪರಿಸ್ಥಿತಿ …
ಪೂರ್ತಿ ಓದಿ...ಪಂಚಾಮೃತ
ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ಎಳನೀರು, ನೀರು ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡುತ್ತೇವೆ, ತದನಂತರ ತೀರ್ಥವೆಂದು ಸೇವಿಸುತ್ತೇವೆ. ಇದಕ್ಕೆ ಪಂಚಾಮೃತವೆಂದೂ ಕರೆಯುತ್ತಾರೆ. ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ ಪೊಟ್ಯಾಶಿಯಂ ಹೃದಯ ಸಂಬಂಧಿ ಖಾಯಿಲೆಗಳು ಬರದಂತೇ ತಡೆಯುತ್ತದೆ. ಅಭಿಷೇಕವನ್ನು ಸಾಮಾನ್ಯವಾಗಿ ಸಾಲಿಗ್ರಾಮ ಶಿವಲಿಂಗ ಅಥವಾ ಕಂಚು, ತಾಮ್ರ, ಕಬ್ಬಿಣ, ಚಿನ್ನ ಮುಂತಾದ ಪಂಚಲೋಹಗಳಿಂದ ಮಾಡಿದ ವಿಗ್ರಹಗಳ ಮೇಲೆ ಮಾಡುತ್ತಾರೆ. ಇವುಗಳಲ್ಲಿರುವ ಔಷಧೀಯ ಗುಣಗಳು ನೀರಿನೊಂದಿಗೆ ಸೇರುತ್ತವೆ. ಶುದ್ಧ ಸಾಲಿಗ್ರಾಮ ಹಾಗೂ ಶಿವಲಿಂಗಗಳು ಸಿಗುವುದು ಗಂಡಕಿ ಹಾಗೂ ನರ್ಮದಾ ನದಿಗಳಲ್ಲಿ. …
ಪೂರ್ತಿ ಓದಿ...ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿವು!
ಎಂದಿಗೂ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗವನ್ನು ಉಂಟುಮಾಡುವ ಅಂಶಗಳಿಗೆ ಬಲಿಪಶುವಾಗಬೇಡಿ. ಏಕೆಂದರೆ ಇವುಗಳು ನಿಮ್ಮನ್ನು ನೀವು ಮಾಡುವ ಕೆಲಸದಿಂದ ವಿಮುಖರನ್ನಾಗಿಸುತ್ತದೆ. ಅದಕ್ಕಾಗಿ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿಂದ ಪಾರಾಗಲು ಮತ್ತು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ಮತ್ತು ಮಾರ್ಗೋಪಾಯಗಳನ್ನು ಹುಡುಕಿ. ಕಚೇರಿಯಲ್ಲಿ ನೀವು ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕೆಂದರೆ ನಿಮಗೆ ಸಂಪೂರ್ಣ ಗಮನವಹಿಸುವ ಅವಶ್ಯಕತೆಯಿರುತ್ತದೆ. ಆಗಲೇ ಆ ಸ್ಥಳವನ್ನು ನೀವು ಅತ್ಯುತ್ತಮವಾಗಿ ಕೆಲಸ ಮಾಡುವ ಸ್ಥಳವನ್ನಾಗಿ ಪರಿವರ್ತಿಸಲು ಸಾಧ್ಯ. ಒಳ್ಳೆಯ ಕೆಲಸ ಮಾಡುವ ವಾತಾವರಣವು, ಒಳ್ಳೆಯ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೊರತರಲು ಅನುಕೂಲ …
ಪೂರ್ತಿ ಓದಿ...ಕ್ಷಮೆಯಾಚಿಸಲು ಅತಿ ಸುಲಭವಾದ 10 ವಿಧಾನಗಳು
ಜಗತ್ತಿನಲ್ಲಿ ಯಾರು ಸಹ ಪರಿಪೂರ್ಣರಲ್ಲ, ಅದಕ್ಕೆ ಹೇಳುವುದು “ತಪ್ಪು ಮಾಡದವ್ರು ಯಾರಾವ್ರೇ, ತಪ್ಪೇ ಮಾಡದವ್ರು ಎಲ್ಲವ್ರೇ” ಎಂದು. ಆಯಿತು ಬಿಡಿ, ತಪ್ಪಾಗಿ ಹೋಯಿತು, ಸರಿಪಡಿಸಿಕೊಳ್ಳುವ ಮಾರ್ಗಗಳನ್ನು ನೋಡೋಣ. ಎಷ್ಟಾದರು ನಮ್ಮ ನೀತಿ “ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋದು ಮನುಜ ಕಣೋ” ಅಲ್ಲವೇನು! ಸಹಜವಾಗಿ ನಾವು ನಮ್ಮ ಸ್ನೇಹಿತರ, ಪೋಷಕರ, ಪ್ರೇಮಿಯ! ಮತ್ತು ಸಂಗಾತಿಯ ಜೊತೆಗೆ ತಪ್ಪಾಗಿ ನಡೆದುಕೊಳ್ಳುತ್ತಿರುತ್ತೇವೆ. ಕ್ಷಮಿಸಿ ಎಂದು ಕೇಳಿ ಕೊಳ್ಳುವ ದೊಡ್ಡ ಗುಣ ನಿಮ್ಮಲ್ಲಿ ಇದ್ದಲ್ಲಿ, ಓದಿ, ಕ್ಷಮಿಸಿ ಎಂದು ಹೇಗೆಲ್ಲ ಕೇಳಬಹುದು ಎಂಬುದನ್ನು ನಾವು ಇಲ್ಲಿ ಕೆಲವೊಂದು …
ಪೂರ್ತಿ ಓದಿ...ಸೋಜಿಗವೆನಿಸುವ ಮೆದುಳಿನ ಕುರಿತ ಇಂಟರೆಸ್ಟಿಂಗ್ ಸಂಗತಿ
ಮೆದುಳು: ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಎರಡೂ ಒಂದಕ್ಕೊಂದು ಪೂರಕವಾಗಿವೆ. ಆದರೆ ವೈದ್ಯವಿಜ್ಞಾನ ಮೆದುಳಿನ ಬಗ್ಗೆ ತಿಳಿದಿರುವ ಮಾಹಿತಿ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅತ್ಯಲ್ಪ. ಏಕೆಂದರೆ ಮೆದುಳಿನ ಕಾರ್ಯವೈಖರಿ ಮತ್ತು ಜೀವಕೋಶಗಳ ಅಂಶಗಳು ತೀರಾ ಸಂಕೀರ್ಣ ಮತ್ತು ಜಟಿಲವಾಗಿವೆ. ಹಾಗಾಗಿ ಮನುಷ್ಯರು ಯೋಚಿಸುವ ಶಕ್ತಿ ಏರುಪೇರಾದರೆ ಆಗುವ ಮನೋರೋಗ ಇಂದಿಗೂ ವೈದ್ಯವಿಜ್ಞಾನಕ್ಕೆ ಒಂದು ಸವಾಲಾಗಿದೆ. ಇದುವರೆಗೂ ಮನೋರೋಗಕ್ಕೆ ಮದ್ದಿಲ್ಲ ಎಂದೇ ನಂಬಿಕೊಂಡು ಬಂದಿದ್ದೆವು. ಆದರೆ ಇತ್ತೀಚೆಗೆ ಮೆದುಳಿನ ಸಂಶೋಧನೆ ಮತ್ತು ಚಿಕಿತ್ಸಾ ಕ್ರಮಗಳಿಗೆ ಹೆಚ್ಚಿನ ಒತ್ತು ಮತ್ತು ಧನಸಹಾಯ ನೀಡಿರುವುದರಿಂದ ಮೆದುಳಿನ …
ಪೂರ್ತಿ ಓದಿ...