ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ …
ಪೂರ್ತಿ ಓದಿ...ಮರಿಯಪ್ಪ ನಾಟೇಕರ್
‘ಮರಿಯಪ್ಪ ನಾಟೇಕರ್’ ಗುಲ್ಬರ್ಗ ನಗರದ ಮದರ್ ಇಂಡಿಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಯುವ ಪ್ರತಿಭೆ. ಒಬ್ಬ ಒಳ್ಳೆಯ ಕವಿ, ಕಥೆಗಾರ ಹಾಗು ಲೇಖಕರಾಗಿ ಪ್ರಸಿದ್ಧರಾಗಿದ್ದಾರೆ. ಹಲವು ಕಾವ್ಯ ಸ್ಪರ್ಧೆಗಳ ನಿರ್ಣಾಯಕರಾಗಿ ಕನ್ನಡ ಸಾಹಿತ್ಯ ಪರಿಷತ್ತು (ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ) ರಾಗಿ ೬ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಬಾಲ್ಯ, ಪರಿವಾರ: ನಾಟೇಕರ್, ಮೂಲತಃ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲುಕಿನ ‘ವಡಗೇರಾ’ ಗ್ರಾಮದ ವಾಸಿ ತಂದೆ, ವೀರಪ್ಪ ನಾಟೇಕರ್, ತಾಯಿ ,ನಿಂಗಮ್ಮ ನಾಟೇಕರ್. ‘ಮುಂಬೈ ನಗರದ ದಿ. ಎನ್. ನಗರದ ಮ. …
ಪೂರ್ತಿ ಓದಿ...ಮಂಡ್ಯ ರಮೇಶ್
ಮಂಡ್ಯ ರಮೇಶ್ (ಜುಲೈ ೧೪, ೧೯೬೪) ರಂಗಭೂಮಿ ತಜ್ಞರಾಗಿ, ನಟರಾಗಿ, ನಿರ್ದೇಶಕರಾಗಿ, ಪ್ರಖ್ಯಾತ ‘ನಟನ’ ತಂಡದ ಸಂಸ್ಥಾಪಕರಾಗಿ, ಚಲನಚಿತ್ರ ರಂಗದಲ್ಲಿ ನೂರಾರು ಚಿತ್ರಗಳ ಯಶಸ್ವೀ ಕಲಾವಿದರಾಗಿ ಹೀಗೆ ಮಹತ್ವದ ಸಾಧನೆಗಳ ಕ್ರಿಯಾಶೀಲ ಕಲಾವಿದರು. ಜೀವನ: ಪ್ರಸಿದ್ಧ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಜುಲೈ ೧೪, ೧೯೬೪ರಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಜನಿಸಿದರು. ತಂದೆ ಎನ್. ಸುಬ್ರಹ್ಮಣ್ಯ, ತಾಯಿ ನಾಗಲಕ್ಷ್ಮೀ. ಓದಿದ್ದು ಬಿ.ಎಸ್ಸಿ ಪದವಿ. ರಂಗಭೂಮಿಯಲ್ಲಿ ರಮೇಶ್ ಬೆಳೆದದ್ದು ರಂಗಭೂಮಿಯ ಒಡನಾಟದಲ್ಲಿ. ನಿನಾಸಂ ನಾಟಕಶಾಲೆಯಲ್ಲಿ ಪದವಿ ಪಡೆದರು, ರಂಗಾಯಣದ ಕಲಾವಿದರಾಗಿ ಪಡೆದ ಶ್ರೀಮಂತ ಅನುಭವ …
ಪೂರ್ತಿ ಓದಿ...ಬಿ.ಜಯಮ್ಮ
ಬಿ. ಜಯಮ್ಮ (ನವೆಂಬರ್ ೨೬, ೧೯೧೫ – ಡಿಸೆಂಬರ್ ೨೦, ೧೯೮೮) ಕನ್ನಡ ರಂಗಭೂಮಿ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಾರಂಭಿಕ ದಶಕಗಳ ಬಹುದೊಡ್ಡ ಹೆಸರು. ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದರಾದ ಬಿ. ಜಯಮ್ಮನವರು ನವೆಂಬರ್ 26, 1915ರ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ತಂದೆ ಟಿ.ಎನ್. ಮಲ್ಲಪ್ಪನವರು. ತಾಯಿ ರಂಗ ಕಲಾವಿದೆ ಬಿ. ಕಮಲಮ್ಮನವರು. ತಂದೆ ಮಲ್ಲಪ್ಪನವರಿಗೆ ಮಗಳು ಎಂ.ಬಿ.ಬಿ.ಎಸ್ ಓದಿ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ಬಾಲಕಿ ಜಯಮ್ಮನಿಗದರೋ ಸಂಗೀತ, ನೃತ್ಯ, ನಾಟಕಗಳಲ್ಲಿ ಅಭಿರುಚಿ. ರಂಗಭೂಮಿಯಲ್ಲಿ: ರಸಿಕ ಜನಾನಂದ ನಾಟಕ ಸಭಾ …
ಪೂರ್ತಿ ಓದಿ...ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ
ಮುಂಬೈ ಮಹಾನಗರದ ಕನ್ನಡ ರಸಿಕರಿಗೆ, ಚಿರಪರಿಚಿತರಾದ, ಬಾಲಕೃಷ್ಣ ನಿಡ್ವಣ್ಣಾಯರವರು,ಕನ್ನಡ ರಂಗಭೂಮಿಯನ್ನು ಶ್ರೀಮಂತವಾಗಿರಿಸಿದ್ದಾರೆ. ಹಿರಿಯನಟರಾದ ಅವರು, ತಮ್ಮ ನಾಟಕರಚನೆ, ನಿರ್ದೇಶನ, ನಟನೆ,ಗಳಿಂದ ಮುಂಬೈನ ಎಲ್ಲಾ ವರ್ಗದ ಜನರ ಮನಗಳನ್ನು ರಂಜಿಸಿದ್ದಾರೆ. ಯುವ, ಉದಯೋನ್ಮುಖ ಕಲಾಕಾರರನ್ನು ಗುರುತಿಸಿ, ಒಂದು ಹೊಸ ಕಲಾಕಾರರ ಪೀಳಿಗೆ ಯನ್ನು ನಿರ್ಮಾಣಮಾಡುವ ಹಾದಿಯಲ್ಲಿ ಶ್ರಮಿಸುತ್ತಿದ್ದಾರೆ. ಅವರ ಈ ಕಾರ್ಯದಲ್ಲಿ ಹೆಗಲಿಗೆ ಹೆಗಲು-ಕೂಟ್ಟು ಸಮರ್ಥವಾಗಿ ದುಡಿಯುತ್ತಿರುವ ಕಲಾವಿದೆ, ಶ್ರೀಮತಿ ಸತ್ಯಭಾಮಾ ಬಾಲಕೃಷ್ಣ ನಿಡ್ವಣ್ಣಾಯ. ತಮ್ಮ ಕಲೆಗಳಿಗೆ ಸ್ಪಂದಿಸಿ, ಒಬ್ಬರಿಗೊಬ್ಬರು ಪೂರಕವಾಗಿ ಕನ್ನಡ ರಂಗಭೂಮಿಯ ಏಳಿಗೆಗೆ ಸತತವಾಗಿ ೬೦ ವರ್ಷಗಳಿಂದ ದುಡಿಯುತ್ತಿದ್ದಾರೆ. ೭೦ ರ ಹರೆಯದ …
ಪೂರ್ತಿ ಓದಿ...ಪಿ.ಬಿ.ಧುತ್ತರಗಿ
ಪಿ. ಬಿ. ಧುತ್ತರಗಿ (ಪುಂಡಲೀಕಪ್ಪ ಬಸನಗೌಡ ಧುತ್ತರಗಿ) ಕರ್ನಾಟಕದ ಒಬ್ಬ ರಂಗಭೂಮಿ ಕಲಾವಿದರು. ಬಿಜಾಪುರ ಜಿಲ್ಲೆಯವರಾದ ಇವರು, ಈಗ ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ಧರೆ. ರಂಗಭೂಮಿ ಕಲಾವಿದರಾಗಿ, ನಾಟಕಗಳ ರಚನೆ-ನಿರ್ದೇಶಕರಾಗಿ, ನಾಟಕ ಕಂಪನಿಯ ಮಾಲೀಕರಾಗಿ ಇವರು ಕೆಲಸ ಮಾಡಿದ್ದಾರೆ. ಜನಪ್ರಿಯ ಚಲನಚಿತ್ರವಾದ ಸಂಪತ್ತಿಗೆ ಸವಾಲ್, ಮೊದಲು ಜನಪ್ರಿಯ ನಾಟಕವಾಗಿ ಪ್ರದರ್ಶನವಾಗಿದ್ದು ಇವರು ನಾಟಕ ಕಂಪನಿಯಲ್ಲಿ. ಈ ನಾಟಕವನ್ನು ರಚಿಸಿ-ನಿರ್ದೇಶಿಸಿದವರು ಧುತ್ತರಗಿಯವರು. ರಂಗಭೂಮಿಯಲ್ಲಿ ಇವರು ಮಾಡಿರುವ ಕೆಲಸಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಇವರಿಗೆ ನೀಡಿದೆ. ಆದರೆ ಎಂಬತ್ತು ವರ್ಷ ವಯಸ್ಸಿನ ಇವರು, ಇನ್ನೂ …
ಪೂರ್ತಿ ಓದಿ...ಡಾ.ಬಿ.ಆರ್.ಮಂಜುನಾಥ್
‘ಡಾ.ಬಿ.ಆರ್.ಮಂಜುನಾಥ್’ ರವರು, ಸುಮಾರು ೪ ದಶಕಗಳಿಗಿಂತ ಹೆಚ್ಚು ಸಮಯ ಮುಂಬೈನಗರದಲ್ಲಿ ಮಾಡಿದ ವೃತ್ತಿಜೀವನದಲ್ಲಿ ಕನ್ನಡ ನಾಟಕ, ಸಂಗೀತ, ನೃತ್ಯಗಳ ಬಗ್ಗೆ ಬಹಳ ಕಾಳಜಿವಹಿಸಿದ್ದಾರೆ. ಅವರ ಪ್ರಮುಖ ಆಸಕ್ತಿಗಳಲ್ಲೊಂದಾದ, ಕನ್ನಡ ರಂಗಭೂಮಿಯನ್ನು ಉತ್ತು, ಹಸನಾದ-ಗಟ್ಟಿ ಬೀಜಗಳನ್ನು ಬಿತ್ತಿ,’ಬಿತ್ತಿ ಬೆಳೆದವರು’ ಎಂಬ ಅನ್ವರ್ಥನಾಮದ ‘ಕನ್ನಡ ನಾಟಕ’ವನ್ನೂ ಬರೆದು ನಿರ್ದೇಶಿಸಿದ ‘ಅಪ್ರತಿಮ ಕನ್ನಡ ಪ್ರೇಮಿಗಳು. ಬರೆದು ನಿರ್ದೇಶಿಸಿದ ನಾಟಕಗಳು ಬೆಳ್ಳಿಬಯಲು, ಬೆಂದಕಾಳೂರು, ಬಿಸಿಲ್ಗುದುರೆ, ಹೀರಾ, ಹೂಗಿಡದಲ್ಲಿ ಹೂ ಅರಳಿಹುದು, ನಾ ದ್ಯಾವ್ರನ್ನ್ ಕಾಣ್ಬೇಕು, ಸಾಕಾರ ಮೊದಲಾದ ನಾಟಕಗಳನ್ನು ರಚಿಸಿ,ಇವರದೇ ನಿರ್ದೇಶನದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಪ್ರಯೋಗಕಂಡ …
ಪೂರ್ತಿ ಓದಿ...ಡಾ. ಭರತ್ ಕುಮಾರ್ ಪೊಲಿಪು
ಮುಂಬೈ ಕನ್ನಡಿಗ, ಭರತ್ ಕುಮಾರ್ ಪೊಲಿಪು ೧೯೮೨ ರಲ್ಲಿ ಮುಂಬೈನಗರಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಸುಮಾರು ೩ ದಶಕಗಳ ಮುಂಬೈ ಜೀವನದಲ್ಲಿ ಅವರೊಬ್ಬ ಲೇಖಕ, ಸಂಘಟಕ, ರಂಗಕರ್ಮಿ, ನಾಟಕ ನಿರ್ದೇಶಕ, ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯ ಕ್ರಿಯಾಶೀಲರಾಗಿ ದುಡಿಯುತ್ತಿರುವ ಭರತ್ ಕುಮಾರ್ ಪೊಲಿಪು ರವರು, ಕರ್ನಾಟಕ ಸಂಘ ಮುಖಪತ್ರಿಕೆಯಾದ ಸ್ನೇಹಸಂಬಂಧ ಪತ್ರಿಕೆಯ ಲೇಖಕರು ಹಾಗೂ ಪ್ರಕಾಶಕರು. ‘ಭರತ್ ಕುಮಾರ್ ಪೊಲಿಪು,’ ಸದಾ ನಗುಮುಖದಿಂದ ಎಲ್ಲರೊಡನೆ ವ್ಯವಹಹರಿಸುವ ವ್ಯಕ್ತಿ. ಬಾಲ್ಯ, ಶಿಕ್ಷಣ: ಮೂಲತಃ ಅವಿಭಾಜಿತ ದಕ್ಷಿಣ ಕನ್ನಡ …
ಪೂರ್ತಿ ಓದಿ...ಗರುಡ ನಾಟ್ಯ ಸಂಘ (ರಿ)
ಗರುಡ ನಾಟ್ಯ ಸಂಘ (ರಿ) ಇದು ಕಾಂಟೆಂಪರರಿ ಕ್ಲಾಸಿಕಲ್ ಶೈಲಿಯಲ್ಲಿ ನೃತ್ಯವನ್ನು ಕಲಿಸಿಕೊಡುವ ಕಲಾ ಶಾಲೆಯಾಗಿದೆ. ಭರತನಾಟ್ಯದ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಇದ್ದುಕೊಂಡು ನವ್ಯರೂಪದ ನೃತ್ಯ ಪ್ರಕಾರವನ್ನು ರಂಗದ ಮೇಲೆ ಪ್ರದರ್ಶಿಸುವುದು ಗರುಡ ನಾಟ್ಯ ಸಂಘದ ಕಲಾವಿದರ ವೈಶಿಷ್ಟ್ಯ. ಭರತನಾಟ್ಯದ ಹಸ್ತ ಮುದ್ರೆಗಳು ಹಾಗೂ ಅಭಿನಯ ನಿಯಮಗಳನ್ನು ಪಾಲಿಸುತ್ತಲೇ ಅದನ್ನು ಹೊಸದೊಂದು ಆಯಾಮಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಗರುಡ ನಾಟ್ಯ ಸಂಘದ ನೃತ್ಯಗಾರರು ಹಾಗೂ ನೃತ್ಯಗಾರ್ತಿಯರು ಮಾಡಿದ್ದಾರೆ. ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನು ಕೂಡ ಬೆರೆಸಿದ ವಿಶಿಷ್ಟವಾದ ಫ್ಯೂಷನ್ ಮೂಲಕ ನೃತ್ಯದ ಹಿನ್ನೆಲೆ ಸಂಗೀತಕ್ಕೆ …
ಪೂರ್ತಿ ಓದಿ...ಗರುಡ ಸದಾಶಿವರಾವ
ಗರುಡ ಸದಾಶಿವರಾಯರು ಕ್ರಿ.ಶ.೧೮೮೦ರ ಸುಮಾರಿಗೆ ಜನಿಸಿದ್ದರು. ಇವರ ತಂದೆ ಗುರುನಾಥ ಶಾಸ್ತ್ರಿ. ಗರುಡ ಸದಾಶಿವರಾಯರು ‘ಗದಗ ಶ್ರೀ ದತ್ತಾತ್ರೇಯ ನಾಟಕ ಮಂಡಳಿ’ ಯನ್ನು ಕಟ್ಟಿ, ಕರ್ನಾಟಕದ ಉದ್ದಗಲಕ್ಕೂ ಸಹಸ್ರಾರು ಪ್ರದರ್ಶನಗಳನ್ನು ನೀಡಿದರು. ಲೋಕಮಾನ್ಯ ತಿಲಕರ ರಾಷ್ಟ್ರೀಯ ಹೋರಾಟಕ್ಕೆ ಸಂಬಂಧಿಸಿದ ‘ಬಂಧವಿಮೋಚನೆ’ ನಾಟಕದಿಂದ ರಂಗಪ್ರವೇಶ ಮಾಡಿದ ಗರುಡರು ೫೦ಕ್ಕೂ ಹೆಚ್ಚು ವರ್ಷಗಳನ್ನು ರಂಗಭೂಮಿಯ ಮೇಲೆ ಕಳೆದಿದ್ದಾರೆ. ಸುಮಾರು ೫೦ ಪೌರಾಣಿಕ,ಸಾಮಾಜಿಕ,ಐತಿಹಾಸಿಕ ಹಾಗು ರಾಷ್ಟ್ರೀಯ ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಇವರ ‘ಪಾದುಕಾ ಪಟ್ಟಾಭಿಷೇಕ’ ರಂಗಭೂಮಿಯ ಇತಿಹಾಸದಲ್ಲಿಯೆ ಮಹತ್ವದ ನಾಟಕ. “ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ” ಕಟ್ಟಿ …
ಪೂರ್ತಿ ಓದಿ...