Tag Archives: ಮಾರ್ಚ್

ಶ್ರೀಮತಿ ಸುಕನ್ಯಾಮಾರುತಿ

Sukanyamaruthi

ಶ್ರೀಮತಿ ಸುಕನ್ಯಾಮಾರುತಿ (೧-೩-೧೯೫೬): ಕವಯಿತ್ರಿ, ಅನುವಾದಕಿ, ಮಹಿಳಾ ಹೋರಾಟಗಾರ್ತಿ ಸುಕನ್ಯಾಮಾರುತಿಯವರು ಹುಟ್ಟಿದ್ದು ಕೊಟ್ಟೂರಿನಲ್ಲಿ. ಪ್ರಾಥಮಿಕ ಶಾಲೆ ಓದಿದ್ದು ಕೊಟ್ಟೂರಿನ ಆಂಜನೇಯಶಾಲೆ, ಮಾಧ್ಯಮಿಕ ಶಾಲೆಗೆ ಸೇರಿದ್ದು ಗಚ್ಚಿನ ಮಠದ ಶಾಲೆ. ಹೈಸ್ಕೂಲು ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಹೈಸ್ಕೂಲಿನಲ್ಲಿ. ಪಿ.ಯು.ದಿಂದ ಪದವಿಯವರೆಗೆ ಓದಿದ್ದು ಕೊಟ್ಟೂರೇಶ್ವರ ಕಾಲೇಜು, ಕೊಟ್ಟೂರು. ಎಂ.ಎ. ಪದವಿಗಳಿಸಿದ್ದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ. ಉದ್ಯೋಗಕ್ಕೆ ಸೇರಿದ್ದು ಜೆ.ಎಸ್.ಎಸ್. ಕಾಲೇಜು, ಧಾರವಾಡದಲ್ಲಿ ಕನ್ನಡ ಅಧ್ಯಾಪಕಿಯಾಗಿ. ಚಿಕ್ಕಂದಿನಿಂದಲೂ ಓದುವ, ಬರೆಯುವ ಚಟದಿಂದ ಕನ್ನಡ ಸಾಹಿತ್ಯದಲ್ಲಿ ಪಡೆದ ವಿಸ್ತಾರವಾದ ಅನುಭವ. ವಿದ್ಯಾರ್ಥಿನಿಯಾಗಿದ್ದಾಗಲೇ ಬರವಣಿಗೆ ಪ್ರಾರಂಭ. ನಾಡಿನ ಪ್ರಖ್ಯಾತ ಪತ್ರಿಕೆಗಳಾದ ಸುಧಾ, …

ಪೂರ್ತಿ ಓದಿ...