Tag Archives: ಮಾರ್ಚ್

ಜ್ಯೋತಿ ಜಿ. ಹೆಗಡೆ

Jyoti G Hegde

ಜ್ಯೋತಿ ಜಿ. ಹೆಗಡೆ (೧೭.೦೩.೧೯೬೩): ಪ್ರಪಂಚದ ಪ್ರಪ್ರಥಮ ರುದ್ರವೀಣಾ ವಾದಕಿ ಜ್ಯೋತಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಸತ್ಯನಾರಾಯಣ ದೇವಗುಡಿ, ತಾಯಿ ಶಾಂತಾ ದೇವಗುಡಿ. ಸಂಗೀತದಲ್ಲಿ ಎಂ.ಎ. ಪದವಿ. ಸಂಗೀತಾಭ್ಯಾಸ ಪ್ರಾರಂಭಿಸಿದ್ದು ಪಂ. ಬಿಂದುಮಾಧವ ಪಾಠಕ್ ರವರಲ್ಲಿ. ೧೫ ವರ್ಷಗಳ ನಿರಂತರ ಸಿತಾರ್ ಹಾಗೂ ರುದ್ರವೀಣಾ ಕಲಿಕೆ. ನಂತರ ಇಂದೂಧರ ನಿರೋಡಿಯವರಲ್ಲಿ ಧ್ರುಪದ್ ಶೈಲಿಯ ಅಭ್ಯಾಸ. ಜಗತ್ ಪ್ರಸಿದ್ಧ ರುದ್ರವೀಣಾ ವಾದಕರಾದ ದೆಹಲಿಯ ಉಸ್ತಾದ್ ಅಸದ್‌ಖಾನ್ ಮತ್ತು ಧ್ರುಪದ್ ಶೈಲಿಯ ಗಾಯಕರಾದ ಉಸ್ತಾದ್ ಫರೀದುದ್ದೀನ್ ಡಾಗರ್ ರವರಲ್ಲಿ ಮುಂದುವರಿಕೆ. ಹಿಂದೂಸ್ತಾನಿ ಸಂಗೀತವನ್ನು ರುದ್ರವೀಣೆಯಲ್ಲಿ ನುಡಿಸುವುದು ಕಷ್ಟದಾಯಕವಾದರೂ …

ಪೂರ್ತಿ ಓದಿ...

ಎಂ.ಎನ್. ಕಾಮತ್

MN Kamath

ಎಂ.ಎನ್. ಕಾಮತ್ (೧೭.೩.೧೮೮೩ – ೨೪.೪.೧೯೪೦): ಶಿಶು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮುಂಡ್ಕೂರು ನರಸಿಂಗ ಕಾಮತ್‌ರವರು ಹುಟ್ಟಿದ್ದು ಕಾರ್ಕಳದ ಬಳಿಯ ಮುಂಡ್ಕೂರು ಗ್ರಾಮದಲ್ಲಿ. ತಂದೆ ಶ್ರೀನಿವಾಸ ಕಾಮತ್, ತಾಯಿ ತುಂಗಭದ್ರ. ಪ್ರಾಥಮಿಕ ವಿದ್ಯಾಭ್ಯಾಸ ಪಡೆದದ್ದು ಕಾರ್ಕಳದಲ್ಲಿ. ಪ್ರೌಢ ಶಾಲಾ ವಿದ್ಯಾಭ್ಯಾಸಕ್ಕೆ ಸೇರಿದ್ದು ಮಂಗಳೂರಿನ ಕೆನರಾ ಹೈಸ್ಕೂಲು. ಅಲ್ಲಿ ಶ್ರೀ ಗೋವಿಂದ ಪೈಗಳ ಪರಿಚಯ. ಇಬ್ಬರಿಗೂ ಮೂಡಿದ ಸಾಹಿತ್ಯ ಒಲವಿನಿಂದ ಉಂಟಾದ ಸ್ನೇಹ. ಕೈಬರಹದ ಪತ್ರಿಕೆ ‘ಏಂಜಲ್’ ಪ್ರಾರಂಭ. ಪ್ರಾರಂಭದಲ್ಲಿ ಇಬ್ಬರೂ ರಚಿಸಿದ್ದು ಇಂಗ್ಲಿಷ್ ಸಾಹಿತ್ಯ. ಕಾಮತರ ಅಂದಿನ ಕಾವ್ಯನಾಮ “ರಾಬಿನ್ ರೆಡ್ ಬ್ರೆಸ್ಟ್”. …

ಪೂರ್ತಿ ಓದಿ...

ಪು.ತಿ. ನರಸಿಂಹಾಚಾರ್

Purohita Thirunarayana Narasimhachar

ಪು.ತಿ. ನರಸಿಂಹಾಚಾರ್ (೧೭.೩.೧೯೦೫ – ೧೩.೧೦.೧೯೯೮): ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತನಾಟಕಕಾರರು. ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು. ಜೀವನ: ಪು.ತಿ.ನ. ಎಂಬುದು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಹೆಸರಿನ ಸಂಕ್ಷಿಪ್ತ …

ಪೂರ್ತಿ ಓದಿ...

ಡಾ. ಡಿ.ವಿ.ಗುಂಡಪ್ಪ

DV Gundappa

ಡಾ. ಡಿ.ವಿ.ಗುಂಡಪ್ಪ (೧೭.೦೩.೧೮೮೭ – ೦೭.೧೦.೧೯೭೫): ಡಿ.ವಿ.ಜಿ ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಶಿಕ್ಷಣ: ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ …

ಪೂರ್ತಿ ಓದಿ...

ಸುಶೀಲಾ ಕೊಪ್ಪರ

Sushila Koppara

ಸುಶೀಲಾ ಕೊಪ್ಪರ (೧೬.೦೩.೧೯೨೪ – ೨೫.೦೨.೨೦೦೬): ಕನಿಷ್ಠ ಮೆಟ್ರಿಕ್ಯುಲೇಷನ್ ಆದರೂ ಪಾಸುಮಾಡಬೇಕೆಂಬ ಹಂಬಲದಿಂದ ಹೈಸ್ಕೂಲಿಗೆ ಸೇರಿದ ಮೊದಲ ವರ್ಷವೇ ತಾಯಿಯ ಒತ್ತಾಯಕ್ಕೆ ಮಣಿದು ೧೪ರ ವಯಸ್ಸಿಗೆ ಗಂಡನ ಮನೆ ಸೇರಿ, ಸ್ತ್ರೀ ಸಮಾನತೆ, ಹಕ್ಕು ಬಾಧ್ಯತೆಗಳ ಬಗ್ಗೆ ಸದಾ ಚಿಂತಿಸುತ್ತಿದ್ದು, ಆಕಸ್ಮಿಕವಾಗಿ ಪತ್ರಿಕದ್ಯೋಮವನ್ನು ಆಯ್ಕೆ ಮಾಡಿಕೊಂಡು ಪತ್ರಿಕೋದ್ಯಮದ ಬಗ್ಗೆ ‘ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ’ ಎಂಬ ಪುಸ್ತಕ ಬರೆದ ಮೊದಲ ಮಹಿಳೆ ಎನಿಸಿದ ಸುಶೀಲಾ ಕೊಪ್ಪರ ರವರು ಹುಟ್ಟಿದ್ದು ಬೆಳಗಾಂ ಜಿಲ್ಲೆಯ ಬೆಳಗಾಂ ತಾಲ್ಲೂಕಿನ ಹುದಲಿ ಎಂಬ ಗ್ರಾಮದಲ್ಲಿ ೧೯೨೪ರ ಮಾಚ್ ೧೬ ರಂದು. ತಂದೆ …

ಪೂರ್ತಿ ಓದಿ...

ಪುಟ್ಟರಾಜ ಗವಾಯಿ

Puttaraj Gawai

ಪುಟ್ಟರಾಜ ಗವಾಯಿ (೦೩.೦೩.೧೯೧೪): ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯ ಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ …

ಪೂರ್ತಿ ಓದಿ...

ಸತ್ಯಕಾಮ

Satyakama

ಸತ್ಯಕಾಮ (೦೨.೦೩.೧೯೨೦ – ೨೦.೧೦.೧೯೯೮): ಸತ್ಯಕಾಮರ ನಿಜನಾಮ ಅನಂತಕೃಷ್ಣ ಶಹಪೂರ. ಇವರು ಹುಟ್ಟಿದ್ದು ಗಲಗಲಿಯಲ್ಲಿ. ತಂದೆ ಕೃಷ್ಣಾ ಹಾಗೂ ತಾಯಿ ರುಕ್ಮಿಣಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ಗಲಗಲಿಯಲ್ಲೇ ಶಿಕ್ಷಣ ಪಡೆದದ್ದು. ಹೈಸ್ಕೂಲಿಗೆ ಸೇರಿದ್ದು ಬಾಗಲಕೋಟೆ. ಆದರೆ ವಿದ್ಯೆಗೆ ಶರಣುಹೊಡೆದು ಊರಿಗೆ ವಾಪಸ್ಸು ಬಂದರು. ಎಳೆವೆಯಿಂದಲೇ ಬೆಳೆದು ಬಂದದ್ದು ನಾಟಕದ ಕಡೆ ಒಲವು. ಕಟ್ಟಿದ್ದು “ಜೀವನ ನಾಟ್ಯ ವಿಲಾಸಿ ಮಂಡಲ.” ಹಲವಾರು ನಾಟಕಗಳ ಪ್ರಯೋಗ. ದೇಶದಲ್ಲೆಲ್ಲಾ ವ್ಯಾಪಿಸಿದ್ದ ಸ್ವಾತಂತ್ರ್ಯದ ಕಾವಿಗೆ ಬಲಿಯಾಗಿ, ಚಳವಳಿಗೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇವರ ನೇತಾರರು ಕಾಖಂಡಕಿ …

ಪೂರ್ತಿ ಓದಿ...

ರಾಘವೇಂದ್ರ ಖಾಸನೀಸ

Raghavendra Khasanisa

ರಾಘವೇಂದ್ರ ಖಾಸನೀಸ (೦೨.೦೩.೧೯೩೩ – ೧೯.೦೩.೨೦೦೭): ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿದಲ್ಲಿ ೧೯೩೩ರ ಮಾರ್ಚ್ ೨ರಂದು. ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಓವರ್‌ಸೀಯರ್ ಆಗಿದ್ದ ತಂದೆಯು ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ಹೋಮ್ಸ್‌ನ ಪತ್ತೇದಾರಿ ಕಾದಂಬರಿಗಳು ಮತ್ತು ದೆವ್ವದ ಕಥೆಗಳನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಗನಿಗೆ ಹೇಳುತ್ತಿದ್ದುದರಿಂದಲೇ ಒಳಗೊಬ್ಬ ಕಥೆಗಾರ ಇವರಲ್ಲಿ ರೂಪಗೊಳ್ಳತೊಡಗಿದ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ, ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತಿ.ತಾ.ಶರ್ಮರ ವಿಶ್ವಕರ್ನಾಟಕ ಪತ್ರಿಕೆಗೆ ಕಥೆ ಬರೆದುಕಳುಹಿಸಿದಾಗ ಮಕ್ಕಳ ಕಥಾ ವಿಭಾಗದಲ್ಲಿ ಆ …

ಪೂರ್ತಿ ಓದಿ...

ಅ.ನ. ರಾಮಣ್ಣ

AN Ramanna

ಅ.ನ. ರಾಮಣ್ಣ (೦೨.೦೩.೧೯೪೦): ವೃತ್ತಿ ರಂಗಭೂಮಿಯಿಂದ ಹಿಡಿದು ಆಧುನಿಕ ನಾಟಕಗಳವರೆಗೆ ಹಲವಾರು ವಿಭಿನ್ನ ಪಾತ್ರಗಳ ಮೂಲಕ ರಂಗಭೂಮಿಗೆ ಕೊಡುಗೆ ನೀಡಿರುವ ರಾಮಣ್ಣ ಹುಟ್ಟಿದ್ದು ಮಂಡ್ಯ ಜಿಲ್ಲೆಗೆ ಸೇರಿದ ಹದಮಗೆರೆ ಗ್ರಾಮ. ತಂದೆ ನರಸಯ್ಯ, ತಾಯಿ ನರಸಮ್ಮ. ಓದಿದ್ದು ಎಸ್.ಎಸ್.ಎಲ್.ಸಿ., ಎಚ್.ಎ.ಎಲ್.ನಲ್ಲಿ ದೊರೆತ ಉದ್ಯೋಗ, ಹಳ್ಳಿಯಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳಿಂದ ಪಡೆದ ಪ್ರೇರಣೆ. ಸ್ಕೂಲಿನಲ್ಲಿದ್ದಾಗಲೇ ಸಣ್ಣ ಪುಟ್ಟ ಪಾತ್ರದಿಂದ ನಾಟಕದತ್ತ ವಾಲಿದ ಮನಸ್ಸು. ಕೆ.ಆರ್. ನಗರದ ಸಂತೆ ಸರಗೂರು ಅನಂತರಾಯರ ಕಲಾ ಪ್ರೋತ್ಸಾಹದಿಂದ ‘ರಾಯರ ಸೊಸೆ’ ಸಾಮಾಜಿಕ ನಾಟಕದಲ್ಲಿ ವಹಿಸಿದ ಪ್ರಮುಖ ಪಾತ್ರ. ಹೆಸರಾಂತ ಹರಿಕಥಾ …

ಪೂರ್ತಿ ಓದಿ...

ಆರ್.ಎಂ. ಹಡಪದ

RM Hadapada

ಆರ್.ಎಂ. ಹಡಪದ (೧-೩-೧೯೩೬ – ೨೦೦೩): ಸದಾ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯ ಅಭಿವ್ಯಕ್ತಿಯಾದ ಹಡಪದ ರವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾದಾಮಿ. ತಂದೆ ಮಲ್ಲಪ್ಪ, ತಾಯಿ ಬಸಮ್ಮ. ಕಲೆಯ ಬೀಡಾದ ಬಾದಾಮಿಯೇ ಬಾಲಕನ ಮೇಲೆ ಬೀರಿದ ಪ್ರಭಾವ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಚಿತ್ರ ಬರೆಯುವ ಗೀಳು. ಸ್ನೇಹಿತರ ಪಾಟಿಯ ಮೇಲೆ ಬಿಡಿಸುತ್ತಿದ್ದ ಚಿತ್ರಗಳು ಇವರ ಕಲೆಗೆ ನೀರೆರೆದ ಉಪಾಧ್ಯಾಯರು ಬಿರಾದಾರ. ಎಸ್.ಎಸ್.ಎಲ್.ಸಿ. ಮುಗಿಸಿ ಹುಬ್ಬಳ್ಳಿಯ ಕಲಾಶಾಲೆಯಿಂದ ಪಡೆದ ಶಿಕ್ಷಣ. ೧೯೬೧ರಲ್ಲಿ ಮಿಣಜಿಗಿಯವರು ಡ್ರಾಯಿಂಗ್ ಟೀಚರ್ಸ್ ಇನ್‌ಸ್ಟಿಟ್ಯೂಟನ್ನು ಬೆಂಗಳೂರಲ್ಲಿ ತೆರೆದಾಗ ಹಡಪದ ರವರು …

ಪೂರ್ತಿ ಓದಿ...