Tag Archives: ಮಾರ್ಚ್

ದೇವಲಕುಂದ ವಾದಿರಾಜ್

Devalakunda Vaadiraj

ದೇವಲಕುಂದ ವಾದಿರಾಜ್ (೨೦-೩-೧೯೨೦ – ೨೨-೨-೧೯೯೩): ನಾಡುಕಂಡ ಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರೆನಿಸಿದ್ದಾರೆ. ಜೀವನ: ಸಾಂಪ್ರದಾಯಕ ಶಿಲ್ಪಕಲೆಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಗೌರವ ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ ಮಾರ್ಚ್ ೨೦, ೧೯೨೦ರಂದು ಜನಿಸಿದರು. ತಂದೆ ಸುಬ್ಬರಾಯಭಟ್ಟರದು ಅರ್ಚಕ ವೃತ್ತಿ, ತಾಯಿ ಲಕ್ಷ್ಮಮ್ಮನವರು. ತಂದೆಯ ಅಕಾಲ ಮರಣದಿಂದಾಗಿ. ಹರಿದು ತಿನ್ನುವ ಬಡತನ ಅವರ ಕುಟುಂಬಕ್ಕೆ ಪ್ರಾಪ್ತವಾಯಿತು. ತಾಯಿ ಲಕ್ಷಮ್ಮನವರು ಮಗ ವಾದಿರಾಜನೊಡನೆ ಮೈಸೂರು ಸೇರಿದರು. ಶಾಲೆಗೆ ಚಕ್ಕರ್ ಚಿತ್ರಕೆ ಹಾಜರ್: ಹುಡುಗನಿಗೋ ಶಾಲೆಗೆ ಚಕ್ಕರ್ ಹಾಕಿ ಚಿತ್ರ ಬಿಡಿಸುವಲ್ಲಿ ಆಸಕ್ತಿ. ಮುಂದೆ ತಾಯಿ ಮಗ …

ಪೂರ್ತಿ ಓದಿ...

ಸೋಸಲೆ ಅಯ್ಯಾಶಾಸ್ತ್ರಿಗಳು

Sosale Ayyashastrigalu

ಸೋಸಲೆ ಅಯ್ಯಾಶಾಸ್ತ್ರಿಗಳು (೨೦.೩.೧೮೫೪ – ೧೭.೫.೧೯೩೪): ಕನ್ನಡ ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಪ್ರಸಿದ್ಧಹೆಸರಾಗಿದ್ದಾರೆ. ಅವರ ‘ಸ್ವಾಮಿ ದೇವನೆ ಲೋಕಪಾಲನೆ ಗೀತೆ’ ನಾಡಿನ ಅತ್ಯಂತ ಪ್ರಸಿದ್ಧಿ ಪಡೆದ ಪ್ರಾರ್ಥನಾ ಗೀತೆಯಾಗಿದೆ. ಜೀವನ: “ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತು ನಮೋಸ್ತುತೆ” ಎಂಬ ಗೀತೆ ಶಾಲೆಯಿಂದ ಮೊದಲ್ಗೊಂಡು ಪ್ರಸಿದ್ಧ ಚಲನಚಿತ್ರಗಳವರೆಗೆ ಕನ್ನಡ ನಾಡಿನಲ್ಲಿ ವ್ಯಾಪಿಸಿರುವ ಪ್ರಸಿದ್ಧ ಹಾಡು. ಈ ಗೀತೆಯ ರಚನೆಕಾರರು ಸೋಸಲೆ ಅಯ್ಯಾ ಶಾಸ್ತ್ರಿಗಳು. ಅಯ್ಯಾ ಶಾಸ್ತ್ರಿಗಳು ಸುಸಂಸ್ಕೃತ ಮನೆತನದ ತಿರುಮಕೂಡಲು ನರಸೀಪುರದ ಸೋಸಲೆ ಎಂಬ ಹಳ್ಳಿಯಲ್ಲಿ ಮಾರ್ಚ್ ೨೦, ೧೮೫೪ರ ವರ್ಷದಲ್ಲಿ ಜನಿಸಿದರು. …

ಪೂರ್ತಿ ಓದಿ...

ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)

Ra Ha Deshpande

ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ) (೨೦.೩.೧೮೬೧ – ೨೬.೪.೧೯೩೧): “ಸಿರಿಗನ್ನಡಂ ಗೆಲ್ಗೆ” ಮಂತ್ರದೃಷ್ಟಾರರಾದ ಹಾಗು ರಾ.ಹ.ದೇಶಪಾಂಡೆ ಎಂದೇ ಎಲ್ಲೆಡೆ ಪ್ರಸಿದ್ಧರಾದ ರಾಮಚಂದ್ರ ಹಣಮಂತರಾವ ದೇಶಪಾಂಡೆ ಇವರು ೧೮೬೧ ಮಾರ್ಚ ೨೦ರಂದು ಧಾರವಾಡ ಪಟ್ಟಣದಿಂದ ಸುಮಾರು ೧೫ ಕಿ.ಮೀ.ದೂರವಿರುವ ನರೇಂದ್ರ ಗ್ರಾಮದಲ್ಲಿ ಜನಿಸಿದರು. ಶಿಕ್ಷಣ: ರಾಮಚಂದ್ರ ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ನರೇಂದ್ರದಲ್ಲಿಯೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ೪ನೆಯ ತರಗತಿಯವರೆಗೆ ಓದಿದನು. ನಂತರ ಧಾರವಾಡದಲ್ಲಿ, ಮೊದಲು ಬಾಸೆಲ್ ಮಿಶನ್ ಹಾಯ್‌ಸ್ಕೂಲಿನಲ್ಲಿ, ಆ ಬಳಿಕ ಸರಕಾರಿ ಹಾಯ್‌ಸ್ಕೂಲಿನಲ್ಲಿ ಓದಿ ೧೮೭೮ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯಲ್ಲಿ , ಧಾರವಾಡ ಕೇಂದ್ರಕ್ಕೆ …

ಪೂರ್ತಿ ಓದಿ...

ವಾಸುದೇವ ಗಿರಿಮಾಜಿ

Vaasudeva Girimaji

ವಾಸುದೇವ ಗಿರಿಮಾಜಿ (೧೯-೩-೧೯೧೨ – ೨೪-೮-೧೯೯೩): ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿದವರು. ಜೀವನ: ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧರಾದ ವಾಸುದೇವ ಗಿರಿಮಾಜಿ ಅವರು ಮಾರ್ಚ್ ೧೯, ೧೯೧೨ರ ವರ್ಷದಲ್ಲಿ ಜನಿಸಿದರು. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಗೌರಿನರಸಿಂಹಯ್ಯ, ಬಿ. ರಾಚಪ್ಪ, ಸಮುಖದ ಲಕ್ಷ್ಮೀಪತಿ ಶಾಸ್ತ್ರಿ, ಸೋಮಾಜಿರಾವ್ ಜೊತೆಗೆ ವಾಸುದೇವ ಗಿರಿಮಾಜಿ ಅವರೂ ಪ್ರಸಿದ್ಧರಾಗಿದ್ದರು. ತಂದೆ ಗೋವಿಂದರಾವ್ ಗಿರಿಮಾಜಿ ತಾಯಿ ತುಂಗಮ್ಮನವರು. ಸ್ವಯಂ ಕಲಾವಿದರು, ಕಲಾಪ್ರೇಮಿಗಳಾದ ತಂದೆಯೊಡನೆ ರಂಗ ತಾಲೀಮಿನ ಸ್ಥಳಕ್ಕೆ ಹೋಗುತ್ತಿದ್ದ ವಾಸುದೇವರಿಗೂ ರಂಗಭೂಮಿಯ ನಂಟು ಕೂಡಿಬಂತು. ಬಾಲನಟನಾಗಿ: …

ಪೂರ್ತಿ ಓದಿ...

ಏರ್ಯ ಲಕ್ಷ್ಮೀನಾರಾಯಣ ಆಳ್ವ

Lakshminarayana Alva

ಏರ್ಯ ಲಕ್ಷ್ಮೀನಾರಾಯಣ ಆಳ್ವ (೧೯-೩-೧೯೨೬): ಸಾಹಿತಿ, ಸಂಘಟಕ, ಸಾಮಾಜಿಕ ಕಾರ್ಯಕರ್ತರಾದ ಏರ‍್ಯ ಲಕ್ಷ್ಮೀನಾರಾಯಣ ಆಳ್ವರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೊಡಂ ಕಾಪು ಬಳಿಯ ಏರ್ಯ ಬೀಡು ಮನೆಯಲ್ಲಿ. ತಂದೆ ಮಾವಂತೂರ ಸುಬ್ಬಯ್ಯ ಆಳ್ವ, ತಾಯಿ ಸೋಮಕ್ಕೆ ಆಳ್ವ. ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಬಂಟ್ವಾಳದಲ್ಲಿ. ಹೈಸ್ಕೂಲು ಓದಿದ್ದು ಕೆನರಾ ಹೈಸ್ಕೂಲು ಮಂಗಳೂರು. ಇವರು ಬರೆದ ರಾಮಾಶ್ವಮೇದ ತರಂಗಗಳು ೧೯೫೯ರಲ್ಲಿ ಪ್ರಕಟವಾಯಿತು. ಈ ಕೃತಿಯ ಅಂದಿನ ಮೈಸೂರು ಮತ್ತು ಮದರಾಸು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿ ಪರಿಗಣಿತವಾಗಿತ್ತು. ಇದಲ್ಲದೆ ಇವರು ರಚಿಸಿದ್ದು ಹಲವಾರು ಕೃತಿಗಳು. ಸ್ನೇಹಸೇತು-ಪತ್ರರೂಪದ …

ಪೂರ್ತಿ ಓದಿ...

ರಾಘವೇಂದ್ರ ಗುರೂಜಿ

Raghavendra Guruji

ರಾಘವೇಂದ್ರ ಗುರೂಜಿ (೧೮.೦೩.೧೮೯೧ – ೦೪.೦೮.೧೯೯೬): ಮಠದ ಪೀಠಾಧಿಪತಿಗಳಾಗಿ, ಆತ್ಮ ಸಂಯಮಿಗಳಾಗಿ ಸಮಾಜ ಸೇವೆಯಂತೆ ಸಾಹಿತ್ಯ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವವರು ವಿರಳವೆ. ಕೇರಳದಲ್ಲಿ ಹುಟ್ಟಿದರೂ ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯನ್ನು ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತೀಯ ಸೌಹಾರ್ದಕ್ಕಾಗಿ ದುಡಿದ ರಾಘವೇಂದ್ರ ಗುರೂಜಿಯವರು ಹುಟ್ಟಿದ್ದು ಕೇರಳದಲ್ಲಿ. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಹುಟ್ಟಿದ ಮಗುವಿಗೆ ದೇಹ, ಮೆದುಳಿನ ಬೆಳವಣಿಗೆಯಲ್ಲಿ ಏರುಪೇರಾಗಿ ಸದಾಕಾಲ ಇಹದ ಪರಿವೆಯೇಯಿಲ್ಲದೆ ಮಲಗಿರುತ್ತಿದ್ದ ಮಗುವನ್ನೆತ್ತಿಕೊಂಡು ಒಮ್ಮೆ ಮೂಕಾಂಬಿಕ ದರ್ಶನ ಪಡೆಯಲು ಹೊರಟ ದಂಪತಿಗಳು ತಂಗಿದ್ದು ಬಾರಕೂರಿನಲ್ಲಿ. …

ಪೂರ್ತಿ ಓದಿ...

ಡಾ. ಯು. ಮಹೇಶ್ವರಿ

Maheshwari

ಡಾ. ಯು. ಮಹೇಶ್ವರಿ (೧೮-೩-೧೯೫೮): ಕರ್ನಾಟಕ, ಕೇರಳ ಗಡಿ ಪ್ರದೇಶದ ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ಸದಾ ಪರಿತಪಿಸುತ್ತಿರುವ ಡಾ. ಮಹೇಶ್ವರಿಯವರು ಹುಟ್ಟಿದ್ದು ಕಾಸರಗೋಡು ತಾಲ್ಲೂಕಿನ ಬೇಳಗ್ರಾಮಕ್ಕೆ ಸೇರಿದ ಉಳ್ಳೋಡಿ ಎಂಬ ಹಳ್ಳಿಯಲ್ಲಿ. ತಂದೆ ಗಂಗಾಧರಭಟ್ಟ, ತಾಯಿ ಸರಸ್ವತಿ ಅಮ್ಮ. ಎಂಟನೆಯ ಮಗುವಾಗಿ (ಅವಳಿ-ಜವಳಿ) ಹುಟ್ಟಿದ ಹೆಣ್ಣು ಮಗುವೇ ಮಹೇಶ್ವರಿಯವರು. ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ನವಜೀವನ ಪ್ರೌಢಶಾಲೆ ಪೆರಡಾಲದಲ್ಲಿ. ಓದಿನಲ್ಲಿ ಯಾವಾಗಲೂ ಮುಂದು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ ಪ್ರಥಮ ಸ್ಥಾನ. ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ), …

ಪೂರ್ತಿ ಓದಿ...

ಮುದೇನೂರು ಸಂಗಣ್ಣ

Mudenur Sanganna

ಮುದೇನೂರು ಸಂಗಣ್ಣ (೧೭.೦೩.೧೯೨೭ – ೨೬.೧೦.೨೦೦೮): ‘ಜಾನಪದ ಜಂಗಮ’ರೆಂದು ಪ್ರಖ್ಯಾತಿ ಪಡೆದಿದ್ದು ಜಾನಪದ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರಾಗಿದ್ದಾರೆ. ಜೀವನ: ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ದೊಡ್ಡ ವ್ಯಾಪಾರಿ ಹಾಗೂ ಜಮೀನುದಾರಿ ಕುಟುಂಬದಲ್ಲಿ ಸಂಗಣ್ಣನವರು ಮಾರ್ಚ್ 17, 1927ರಲ್ಲಿ ಜನಿಸಿದರು. ಅವರಿಗೆ ಬಾಲ್ಯದಿಂದಲೂ ಸಂಗೀತ ನಾಟಕ ಹುಚ್ಚು. ಬಳ್ಳಾರಿ ಸೀಮೆಯ ಈ ಸಿರಿವಂತ ಕುಟುಂಬಗಳ ಒಂದು ಲಕ್ಷಣವಿದು ಎಂದು ಕಾಣುತ್ತದೆ. ಜೋಳದರಾಶಿ ದೊಡ್ಡನಗೌಡರಿಗೂ ಇದಿತ್ತು. ಇದೇ ಕಾರಣಕ್ಕೆ ಸಂಗಣ್ಣನವರಿಗೆ ರಂಗಭೂಮಿಯ ವ್ಯಕ್ತಿತ್ವಗಳಾದ ಶಿವರಾಮ ಕಾರಂತ, ಕೆ …

ಪೂರ್ತಿ ಓದಿ...

ಬಳ್ಕೂರು ಸುಬ್ರಾಯ ಅಡಿಗ

Balkur Subbaraya Adiga

ಬಳ್ಕೂರು ಸುಬ್ರಾಯ ಅಡಿಗ (೧೭.೦೩.೧೯೨೬): ಯಾವುದೇ ಪತ್ರಿಕೆಯನ್ನು ತೆರೆದರೂ ಹಿಂದಿಯ ಅನುವಾದ ಎಂಬುದನ್ನು ಕಂಡ ಕೂಡಲೇ ಲೇಖನದ ತಲೆಬರಹದ ಕೆಳಗೆ ಕಾಣುವ ಲೇಖಕರ ಹೆಸರು ‘ಬಳ್ಕೂರು ಸುಬ್ರಾಯ ಅಡಿಗ’ ಎಂಬುದು. ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಹಿಂದಿ ಭಾಷೆಯ ಸೊಗಡನ್ನು ಕನ್ನಡಿಗರಿಗೆ ಪರಿಚಯಿಸಿದ ಪ್ರಮುಖರಲ್ಲಿ ಒಬ್ಬರಾದ ಇವರು ಅನುವಾದಿಸಿದ ಲೇಖನಗಳ ಸಂಖ್ಯೆಯೂ ಅಪಾರ. ಮೂಲ ಲೇಖಕರ ಅನುಮತಿ ಪತ್ರೆಗಳೇ ಒಂದು ಪುಸ್ತಕ ಪ್ರಕಟಿಸುವಷ್ಟಿದೆ. ಇವರು ಅನುವಾದಿಸಿದ ಹಾಗೂ ಸ್ವತಂತ್ರ ಲೇಖನಗಳನ್ನು ಸವ್ಯಸಾಚಿ, ಲಲಿತಾಗ್ರಜ, ಕಮಲಾಸುತ, ಸನಾತನ, ಅನಾಮಿಕ, ಅನಂತ, ಅಜ್ಞಾತ ಮುಂತಾದ ಕಾವ್ಯಾನಾಮಗಳಿಂದ ನೂರಕ್ಕೂ …

ಪೂರ್ತಿ ಓದಿ...

ಪ್ರೊ. ಕು.ಶಿ. ಹರಿದಾಸಭಟ್ಟ

Kushi Haridas Bhatta

ಪ್ರೊ. ಕು.ಶಿ. ಹರಿದಾಸಭಟ್ಟ (೧೭.೦೩.೧೯೨೪ – ೨೦.೦೮.೨೦೦೦): ಶಿಕ್ಷಣ ತಜ್ಞ, ಅರ್ಥಶಾಸ್ತ್ರಜ್ಞ, ಆಡಳಿತಗಾರ, ಜಾನಪದ ತಜ್ಞ, ಸಾಹಿತಿ ಕು.ಶಿ. ಹರಿದಾಸಭಟ್ಟರು ಹುಟ್ಟಿದ್ದು ಉಡುಪಿಯಲ್ಲಿ ೧೯೨೪ರ ಮಾರ್ಚ್‌೧೭ ರಂದು. ತಂದೆ ಕುಂಚಿ ಬೆಟ್ಟು ಶಿವಗೋಪಾಲಭಟ್ಟ, ತಾಯಿ ಕಮಲಮ್ಮ. ಪ್ರಾರಂಭಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ. ಪ್ರೌಢಶಾಲೆ-ಉಡುಪಿಯ ಬೋರ್ಡ್‌ಹೈಸ್ಕೂಲು. ಮೆಟ್ರಿಕ್ಯೂಲೇಷನ್ ಪಾಸಾದ ನಂತರ ಮಂಗಳೂರಿನಲ್ಲಿ ಎರಡು ವರ್ಷಗಳ ಸೆಕೆಂಡರಿ ಶಿಕ್ಷಕರ ತರಬೇತಿ ಪಡೆದು ಉದ್ಯೋಗಕ್ಕೆ ಸೇರಿದ್ದು ಕಡಿಯಾಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ನಂತರ ನೇಮಕಗೊಂಡದ್ದು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನ ಅಧ್ಯಾಪಕರಾಗಿ (ಕವಿ ಮುದ್ದಣ ಉಪಾಧ್ಯಾಯರಾಗಿದ್ದ ಶಾಲೆ) ಈ …

ಪೂರ್ತಿ ಓದಿ...