Tag Archives: ಮಾರ್ಚ್

ಎಂ.ಎಸ್. ಅನಂತರಾವ್

MS Ananta Rao

ಎಂ.ಎಸ್. ಅನಂತರಾವ್ (೩೧-೩-೧೯೨೫): ಮಾದಾಪುರ ಸುಬ್ಬರಾವ್ ಅನಂತರಾವ್‌ರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸುಬ್ಬರಾವ್, ತಾಯಿ ಮಹಾಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಪಡೆದುದು ಮೈಸೂರಿನಲ್ಲಿ. ತಂದೆಗೆ ಬೆಂಗಳೂರಿಗೆ ವರ್ಗ. ಇಂಟರ್ ಮೀಡಿಯೇಟ್‌ಗೆ ಸೇರಿದ್ದು ಬೆಂಗಳೂರಿಗೆ ಸೇಂಟ್ ಜೋಸೆಫ್ ಕಾಲೇಜು. ಪದವಿ ತರಗತಿಗೆ ಸೇರಲಾಗದೆ ಓದಿಗೆ ವಿಘ್ನ. ಉದ್ಯೋಗದ ಬೇಟೆ ಪ್ರಾರಂಭ. ಕೆಲವು ಕಡೆ ಸಣ್ಣ ಪುಟ್ಟ ಸ್ಥಳೀಯ ಕಛೇರಿಯಲ್ಲಿ ವೃತ್ತಿ. ಅಂಚೆ ಕಛೇರಿಯ ಸಂದರ್ಶನದಲ್ಲಿ ತೇರ್ಗಡೆ. ಖುಲಾಯಿಸಿದ ಅದೃಷ್ಟ. ಮದರಾಸು ಸರ್ಕಲ್ ಮೌಂಟ್ ರೋಡು ಪೋಸ್ಟಾಫೀಸಿನಲ್ಲಿ ೧೯೬೦ರಲ್ಲಿ ಉದ್ಯೋಗ ಪ್ರಾರಂಭ. ಮದರಾಸು ಅಂದು ದಕ್ಷಿಣ ಭಾರತದ ಚಿತ್ರೋದ್ಯಮದಕೇಂದ್ರ …

ಪೂರ್ತಿ ಓದಿ...

ಡಾ. ಸರ್ವಮಂಗಳಾ ಶಂಕರ್

Sarvamangala Shankar

ಡಾ. ಸರ್ವಮಂಗಳಾ ಶಂಕರ್ (೩೧.೦೩.೧೯೫೪): ಕದಳಿ ಶ್ರೀ ಪ್ರಶಸ್ತಿ ಪುರಸ್ಕೃರಾದ ಸರ್ವಮಂಗಳಾ ಶಂಕರ್ ರವರು ಹುಟ್ಟಿದ್ದು ಶ್ರೀರಂಗಪಟ್ಟಣ. ತಂದೆ ಎಸ್.ಸಿ. ರಾಜಶೇಖರ್, ತಾಯಿ ಪಾರ್ವತಮ್ಮ. ಬಾಲ್ಯದಿಂದಲೂ ಸಂಗೀತದತ್ತ ಒಲವು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. (ಮ್ಯೂಸಿಕ್). ‘ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ’- ಎಂ.ಫಿಲ್ ಮಹಾ ಪ್ರಬಂಧ ಮತ್ತು ‘ಸ್ವರ ವಚನಗಳು : ಒಂದು ಸಂಗೀತಾತ್ಮಕ ಅಧ್ಯಯನ’ ಮಹಾ ಪ್ರಬಂಧಕ್ಕೆ ದೊರೆತ ಪಿಎಚ್.ಡಿ. ಪದವಿ. ಸಂಗೀತದ ಉನ್ನತ ಶಿಕ್ಷಣ ಪಡೆದದ್ದು ಎಂ. ಶೇಖಗಿರಿ ಆಚಾರ್, ಆನೂರು ಎಸ್. ರಾಮಕೃಷ್ಣ, ಬಿ. ಕೃಷ್ಣಪ್ಪ, ಆರ್.ಕೆ. ಶ್ರೀಕಂಠನ್ ರವರಿಂದ. ಪ್ರಸ್ತುತ …

ಪೂರ್ತಿ ಓದಿ...

ಎ.ಎಸ್. ಶಿವರುದ್ರಪ್ಪ

ಎ.ಎಸ್. ಶಿವರುದ್ರಪ್ಪ (೩೦-೩-೧೮೯೨): ಪಿಟೀಲು ವಿದ್ವಾಂಸರಾಗಿದ್ದ ಶಿವರುದ್ರಪ್ಪನವರು ಹುಟ್ಟಿದ್ದು ಆನೇಕಲ್‌ನಲ್ಲಿ. ಹುಟ್ಟು ಕುರುಡರಾಗಿದ್ದ ಇವರಿಗೆ ಬಡತನದ ಬದುಕಿನಿಂದ ಭಿಕ್ಷಾಟನೆ ಮಾಡಿ ಬದುಕಬೇಕಾದ ಪರಿಸ್ಥಿತಿ. ಸಂಗೀತದಲ್ಲಿ ಆಸಕ್ತಿಯಿದ್ದು ಪಿಟೀಲು ವಿದ್ವಾನ್ ಮುನಿಶಂಕರಪ್ಪನವರಲ್ಲಿ ಅಭ್ಯಾಸ ಪ್ರಾರಂಭ. ನಂತರ ಸೇರಿದ್ದು ಮೈಸೂರಿನ ಕುರುಡ-ಮೂಗರ ಶಾಲೆ. ಅಲ್ಲೂ ತೃಪ್ತಿ ಸಿಗದೆ ಹೆಚ್ಚು ಕಲಿಯುವ ದಾಹ, ನಾಲ್ವಡಿ ಕೃಷ್ಣರಾಜ ಒಡೆಯರು ಚಾಮುಂಡೇಶ್ವರಿ ದರ್ಶನಕ್ಕೆ ಹೊರಟ ಸಂದರ್ಭದಲ್ಲಿ ದೇವಸ್ಥಾನದ ಬಳಿ ಹಾಡುತ್ತಾ ಕುಳಿತು ಸೆಳೆದ ಮಹಾರಾಜರ ಗಮನ. ಅರಮನೆಯ ಬಿಡದಿಯಲ್ಲಿ ಊಟ, ವಸತಿ ಕಲಿಕೆಗೆ ವ್ಯವಸ್ಥೆ. ವಿದ್ವಾಂಸರಾಗಿದ್ದ ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತಾಭ್ಯಾಸ. …

ಪೂರ್ತಿ ಓದಿ...

ದು.ನಿಂ. ಬೆಳಗಲಿ

Belagali

ದು.ನಿಂ. ಬೆಳಗಲಿ (೩೦.೩.೧೯೩೧ – ೮.೧.೨೦೦೦): ಪ್ರಾದೇಶಿಕ ಸೊಗಡಿನ ಬರಹದ ಕಾದಂಬರಿಕಾರರಾದ ದು.ನಿಂ. ಬೆಳಗಲಿಯವರು ಹುಟ್ಟಿದ್ದು ಬನಹಟ್ಟಿಯಲ್ಲಿ. ತಾಯಿ ಚೆನ್ನಮ್ಮ, ತಂದೆ ನಿಂಗಪ್ಪ. ಇವರ ವಂಶಸ್ಥರು ಅಥಣಿ ತಾಲ್ಲೂಕಿನ ಐನಾಪುರದಿಂದ ಬನಹಟ್ಟಿಗೆ ವಲಸೆ ಬಂದು ನಿಂತವರು. ಬೆಳಗಲಿ ಅಡ್ಡ ಹೆಸರು ಬಂದ ಕತೆ-ಒಣಬಾಳೇ ದಿಂಡುಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂದಾಯಿತು. ಅರಭಾವಿಮಠದ ದುರದುಂಡೇಶ್ವರ ಸ್ವಾಮಿಗಳ ಆಶೀರ‍್ವಾದದಿಂದ ಹುಟ್ಟಿದವರೇ ದುರದುಂಡೇಶ್ವರ ನಿಂಗಪ್ಪ ಬೆಳಗಲಿ. ನಾಲ್ಕು ಹೆಣ್ಣಿನ ನಂತರ ಹುಟ್ಟಿದ ಗಂಡು, ತಾಯಿಗೆ ವಿಶೇಷ ಮಮತೆ. ಅವ್ವ ಜಾನಪದ ಕಥೆಗಳ ಹಾಡುಗಳ …

ಪೂರ್ತಿ ಓದಿ...

ಹುಲ್ಲೂರು ಶ್ರೀನಿವಾಸ ಜೋಯಿಸರು

Hulluru Srinivasa Joisaru

ಹುಲ್ಲೂರು ಶ್ರೀನಿವಾಸ ಜೋಯಿಸರು (೨೯-೩-೧೮೯೨ – ೮-೧೧-೧೯೫೬): ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಪುರೋಹಿತ ಮನೆತನಕ್ಕೆ ಸೇರಿದ ಹುಲ್ಲೂರು ಶ್ರೀನಿವಾಸ ಜೋಯಿಸರ ಕುಟುಂಬದ ಹಿರಿಯರು ಸುಮಾರು ಮೂರು ನೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿಯ ಅಂಬಳೆ ಗ್ರಾಮದಿಂದ ಚಿತ್ರದುರ್ಗ ಜಿಲ್ಲೆಯ ಹುಲ್ಲೂರಿಗೆ ವಲಸೆ ಬಂದವರು. ತಂದೆ ಪಾಂಡುರಂಗ ಜೋಯಿಸ್, ತಾಯಿ ಪಾರ್ವತಮ್ಮ. ಪ್ರಾಥಮಿಕ ಶಿಕ್ಷಣ ಪಡೆದುದು ಚಿತ್ರದುರ್ಗದಲ್ಲಿ, ಮೆಟ್ರಿಕ್ ಪಾಸು ಮಾಡಿದ ನಂತರ ಕೆಲಕಾಲ ನೌಕರಿಯಲ್ಲಿದ್ದರು. ನಂತರ ಲಾ ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದರು. ವಕೀಲರಾಗಿದ್ದರೂ ಅಧ್ಯಯನ ಶೀಲರಾಗಿದ್ದು …

ಪೂರ್ತಿ ಓದಿ...

ಆನೂರು ಅನಂತಕೃಷ್ಣಶರ್ಮ

Anur Ananthakrishna Sharma

ಆನೂರು ಅನಂತಕೃಷ್ಣಶರ್ಮ (೨೯.೦೩.೧೯೬೫): ಹಲವಾರು ತಲೆಮಾರುಗಳಿಂದ ಸಂಗೀತಕ್ಕೆ ಪ್ರಸಿದ್ಧವಾಗಿದ್ದ ಮನೆತನದಲ್ಲಿ ಅನಂತಕೃಷ್ಣಶರ್ಮರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಾದಕರಾಗಿದ್ದ ಆನೂರು ರಾಮಕೃಷ್ಣ, ತಾಯಿ ಶ್ರೀಲಕ್ಷ್ಮಿ. ತಂದೆಯಿಂದಲೇ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣ. ಮೃದಂಗದ ಕಡೆಗೆ ಬೆಳೆದ ಒಲವು. ವಿದ್ವಾನ್ ಆರ್.ಎ. ರಾಜಗೋಪಾಲ್ ರವರ ಬಳಿ ಲಯ-ವಾದ್ಯದಲ್ಲಿ ಪಡೆದ ಶಿಕ್ಷಣ. ಹದಿನೈದಿನೇ ವಯಸ್ಸಿನಿಂದಲೇ ದೇಶದ ಹಲವಾರು ಪ್ರತಿಷ್ಠಿತ ಸಂಗೀತ ಕಚೇರಿಗಳಲ್ಲಿ ಪ್ರಖ್ಯಾತ ಸಂಗೀತ ಗಾರರಿಗೆ ನೀಡಿದ ಮೃದಂಗದ ಸಾಥಿ. ಡಾ. ಬಾಲಮುರಳಿಕೃಷ್ಣ, ಎಂ.ಎಲ್. ವಸಂತಕುಮಾರಿ, ಟಿ.ವಿ. ಗೋಪಾಲಕೃಷ್ಣನ್, ಆರ್.ಕೆ. ಶ್ರೀಕಂಠನ್, ಎಸ್. ರಾಮನಾಥನ್, ಆರ್.ಕೆ. ಪದ್ಮನಾಭ, …

ಪೂರ್ತಿ ಓದಿ...

ಟಿ.ಜಿ. ರಾಘವ

TG Raghava

ಟಿ.ಜಿ. ರಾಘವ (೨೮-೩-೧೯೩೫): ವಿಶಿಷ್ಟ ಕತೆಗಾರ, ಕಾದಂಬರಿಕಾರ, ನಾಟಕಕಾರರಾದ ಟಿ.ಜಿ. ರಾಘವರವರು ಹುಟ್ಟಿದ್ದು ಬೆಂಗಳೂರು. ತಂದೆ ಗೋವಿಂದಾಚಾರ್ ಆಂಧ್ರದ ಮೂಲದವರಾದರೆ ತಾಯಿ ತಂಗಮ್ಮ ತಮಿಳಿನವರು. ಎರಡು ಭಾಷೆಗಳ ಸಂಗಮ. ರಾಘವರ ಮಾತೃಭಾಷೆ ತಮಿಳು. ಕಲಿತದ್ದು ಕನ್ನಡ, ಬರೆದದ್ದು ಕನ್ನಡ. ಕನ್ನಡದ ಪ್ರಮುಖ ಕಥೆಗಾರರಲ್ಲೊಬ್ಬರು ಎನಿಸಿಕೊಂಡರು. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದುದು ಗುಬ್ಬಿ, ಶ್ರೀನಿವಾಸಪುರ, ಕೋಲಾರಗಳಲ್ಲಿ. ಅಜ್ಜಿ ಹೇಳುತ್ತಿದ್ದ ಕತೆಗಳಿಂದ, ತಾಯಿ ಗುನುಗುತ್ತಿದ್ದ ಹಾಡುಗಳಿಂದ ಆಕರ್ಷಿತರಾಗಿ ರಾಘವರ ಮನಸ್ಸಿನಲ್ಲಿ ಸಾಹಿತ್ಯದ ಬೇರು ಇಳಿಯತೊಡಗಿತು. ಇವರ ಮೊದಲ ಕಥೆ ಟಿಕ್, ಟಿಕ್…ಪ್ರಕಟವಾದುದು ಅಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ …

ಪೂರ್ತಿ ಓದಿ...

ಕಾಳಪ್ಪ ಪತ್ತಾರ

Kaalappa Pattara

ಕಾಳಪ್ಪ ಪತ್ತಾರ (೨೮-೦೩-೧೯೧೬ – ೦೫-೦೮-೧೯೭೧): ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬದಲ್ಲಿ. ಶಾಲಾ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತದ್ದಕ್ಕಿಂತ ವಿಶಾಲ ಪ್ರಪಂಚದಲ್ಲಿ ತಿರುಗಾಟದ ಅನುಭವದಿಂದ ಕಲಿತದ್ದೇ ಅಪಾರ. ೧೯೩೪ರಲ್ಲಿ ಗಾಂಧೀಜಿಯವರು ಕರ್ನಾಟಕ ಪ್ರವಾಸ ಕೈಗೊಂಡು ಬಳ್ಳಾರಿಯಿಂದ ರೈಲಿನಲ್ಲಿ ಗದಗಿಗೆ ಪ್ರಯಾಣಿಸುವಾಗ ಭಾನಾಪುರ ರೈಲು ನಿಲ್ದಾಣದಲ್ಲಿ ತಂಗಿದ್ದಾಗ ಗಾಂಧೀಜಿಯವರ ಚಿತ್ರವನ್ನು ಅಲ್ಲೇ ಬರೆದು ಅರ್ಪಿಸಿದರಂತೆ. ಕಲಾಭಿಜ್ಞತೆಗೆ ಮಾರುಹೋಗಿ ತಮ್ಮ ಭಾವಚಿತ್ರವನ್ನು ಹರಾಜು ಹಾಕಿ …

ಪೂರ್ತಿ ಓದಿ...

ಎಂ.ಆರ್. ಕಮಲ

MR Kamala

ಎಂ.ಆರ್. ಕಮಲ (೨೭-೩-೧೯೫೯): ಭರತನಾಟ್ಯ ಪ್ರವೀಣೆ, ವೀಣಾವಾದಕಿ, ಕವಯಿತ್ರಿ ಶ್ರೀಮತಿ ಎಂ.ಆರ್. ಕಮಲರವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ, ಮೇಟಿ ಕುರ್ಕೆಗ್ರಾಮದಲ್ಲಿ. ಶ್ಯಾನುಭೋಗರು ಕೃಷಿಕರಾದ ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಪ್ರಾಥಮಿಕದಿಂದ ಪ್ರೌಢಶಾಲೆಯವರೆವಿಗೂ ಮೇಟಿ ಕುರ್ಕೆಯಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಿಂದ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ. ನಂತರ ರಾಜಾಜಿನಗರದ ಶಿವನ ಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಉದ್ಯೋಗ ಆರಂಭ. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇವರು ಆಯ್ದುಕೊಂಡಿರುವ ಕ್ಷೇತ್ರವು ಬಹು ವಿಶಿಷ್ಟವಾದುದು. ಐತಿಹಾಸಿಕ …

ಪೂರ್ತಿ ಓದಿ...

ಎಸ್. ನಂಜುಂಡಸ್ವಾಮಿ

S Nanjunda Swamy

ಎಸ್. ನಂಜುಂಡಸ್ವಾಮಿ (೨೬-೩-೧೯೦೬ – ೨೭-೧೨-೧೯೬೯): ವರ್ಣಚಿತ್ರ, ಶಿಲ್ಪಕಲೆಯಲ್ಲಿ ಅಗ್ರಗಣ್ಯರೆನಿಸಿದ್ದ ಎಸ್.ಎನ್. ಸ್ವಾಮಿಯವರು ಹುಟ್ಟಿದ್ದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ. ತಂದೆ ಶಿಲ್ಪ ಸಿದ್ಧಾಂತಿ ವೀರತ್ತಸ್ವಾಮಿಗಳು, ಶಿಲ್ಪಕಲೆ ಮತ್ತು ಚಿತ್ರಕಲೆ ವಂಶಪಾರಂಪರ್ಯವಾಗಿ ಬಂದ ವಿದ್ಯೆ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಚಿತ್ರಾಭ್ಯಾಸ, ಮುಂಬಯಿ ಜೆ.ಜೆ. ಕಲಾಶಾಲೆಯಿಂದ ಹೆಚ್ಚಿನ ವಿದ್ಯಾಭ್ಯಾಸ. ಜಯಚಾಮರಾಜೇಂದ್ರ ಕಲಾಶಾಲೆಯಲ್ಲಿ ಅಧ್ಯಾಪಕ ವೃತ್ತಿ. ರೇಖಾಚಿತ್ರ, ತೈಲಚಿತ್ರ, ವರ್ಣಚಿತ್ರಗಳಲ್ಲಿ ಸಾಧಿಸಿದ ಅದ್ವಿತೀಯ ಸಾಧನೆ. ಪ್ರಕೃತಿ ಚಿತ್ರಗಳು, ಭೂ ದೃಶ್ಯಗಳಲ್ಲಿ ನೆರಳು-ಬೆಳಕಿನಾಟಗಳ ಸೌಂದರ್ಯವನ್ನು ಯಥಾವತ್ ಚಿತ್ರಿಸುವ ಕಲೆ ಕರಗತ, ಸಂಯೋಜನೆಯಲ್ಲಿ …

ಪೂರ್ತಿ ಓದಿ...