ಕರ್ನಾಟಕ ರತ್ನ ಡಾ|| ಶ್ರೀ. ಶಿವಕುಮಾರ ಸ್ವಾಮಿಗಳು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು. ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ವೀರಶೈವ ಧರ್ಮ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. [sociallocker]ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿರುವರು. ಇವರು …
ಪೂರ್ತಿ ಓದಿ...ಶಿವಮೂರ್ತಿ ಸ್ವಾಮಿಜಿ, ಸಿರಿಗೆರೆ
ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಿರಿಗೆರೆ ಮಠದ ಈಗಿನ ಮಠಾಧಿಪತಿಗಳು. ಸಿರಿಗೆರೆ ಚಿತ್ರದುರ್ಗ ದಿಂದ ದಾವಣಗೆರೆಗೆ ಹೋಗುವ ದಾರಿಯಲ್ಲಿ ಸುಮಾರು ೩೫ ಕಿಮಿ ದೂರದಲ್ಲಿ ಇದೆ. ಸಿರಿಗೆರೆ ಮಠ ರಾಜ್ಯದಲ್ಲೆ ಶಿಕ್ಷಣ ರಂಗದಲ್ಲಿ ತುಂಬಾ ಪ್ರಸಿದ್ದಿ ಪಡೆದಿದೆ. ಹಿಂದಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಮಠವನ್ನು ಉತುಂಗಕ್ಕೆ ತಂದರು.ಇವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಉತ್ತರಾಧಿಕಾರಿಗಳು. ಸ್ವಾಮಿಗಳಾಗುವ ಮೊದಲೇ ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ವಿಶ್ವಪರ್ಯಟನೆಯ ಮೂಲಕ ವಿಶ್ವಜ್ಞಾನ ಪಡೆದವರು. [sociallocker]ಶಿಕ್ಷಣ: ’ಸೂತಸಂಹಿತೆ’ಯ ಮೇಲೆ ಪೌಢ ಪ್ರಬಂಧ ಬರೆದು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ …
ಪೂರ್ತಿ ಓದಿ...