Tag Archives: ಬಾದಾಮಿ ಚಾಲುಕ್ಯರು

ಬಾದಾಮಿಯ ಗುಹೆಗಳು

Badami Guhegalu

ಬಾದಾಮಿಯ ಗುಹೆಗಳನ್ನು ಪುನರ್ಪರಿಶೀಲನೆಗೆ ಒಡ್ಡುವಲ್ಲಿ ಈ ವಿವರ ಸಹಿತ ಒಕ್ಕಣೆಯನ್ನು ಸಿದ್ಧಪಡಿಸುತ್ತಿದ್ದೇನೆ. ಏಕೆಂದರೆ ಐತಿಹಾಸಿಕ ನೆಲೆಯಲ್ಲಿ ಈವರೆಗೂ ವಿದ್ವಾಂಸರು ಪರಿಗಣಿಸುತ್ತಿರುವ ರೀತಿ ನೀತಿಯಲ್ಲಿ ಗೊಂದಲವುಂಟಾಗಿರುತ್ತದೆ. ಚಾಲುಕ್ಯ ಮತ್ತು ಪೊಲಕೇಶಿ ೧ ಮತ್ತು ೨ ಇಂಥ ಪಾರಭಾಷಿಕಗಳಿಗೆ ಸ್ಪಷ್ಟವಾದ ಅರ್ಥವಂತಿಕೆಯು ಅವಶ್ಯಕವಾಗಿರುವುದ ರಿಂದ ಈ ಗುಹೆಗಳ ಸ್ವರೂಪ ಮತ್ತು ಇದಕ್ಕೆ ಕಾರಣರಾಗಿರುವಂಥ ವರ್ಗದ ಪರಿಶೀಲನೆಯಿಂದ ಒಂದು ನೆಲೆಯನ್ನು ಮುಟ್ಟಲು ಸಾಧ್ಯವಾದೀತೆಂಬ ನಂಬಿಕೆಯಾಗಿದೆ(ಇದಕ್ಕಾಗಿ ನಾನು ಹಲವು ಬಾರಿ ಈ ಗುಹೆಯನ್ನು ಕಂಡು ಪರಿಶೀಲಿಸಿದ್ದೇನೆ ಮತ್ತು ಒಂದು ನಿರ್ಧಾರದ ನೆಲೆಯನ್ನು ಮುಟ್ಟಿದ್ದೇನೆ. ಈ ನೆಲೆಯನ್ನೇ ನಮ್ಮ ಘನ ವಿದ್ವಾಂಸರು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಪಟ್ಟದಕಲ್ಲಿನ ಚಾಲುಕ್ಯ ಪೂರ್ವಕಾಲದ ಒಂದು ಇಟ್ಟಿಗೆ ಕಟ್ಟಡ

Pattadakallina Chalukya Aouse

ಪಟ್ಟದಕಲ್ಲು, ಬಾದಾಮಿ ಚಾಲುಕ್ಯರ ಕಾಲದ ಶ್ರೇಷ್ಠ ಕಲೆಯ ಭವ್ಯ ದೇವಾಲಯಗಳಿಗೆ (ಕ್ರಿ.ಶ.೭-೯ನೇ ಶತಮಾನ) ಈಗಾಗಲೇ ಜಗತ್ಪ್ರಸಿದ್ದವಾಗಿದೆ. ಟಾಲೆಮಿಯ ಗ್ರಂಥದಲ್ಲಿ (ಕ್ರಿ.ಶ.೨ನೇಯ ಶತಮಾನ) ಪಟ್ಟದಕಲ್ಲು ಉಲ್ಲೇಖಿತವಾಗಿದೆ. ಆಗ ವಾಣಿಜ್ಯ ವ್ಯವಹಾರಗಳಿಗೆ ಮುಖ್ಯವಾಗಿದ್ದ ನಗರಗಳಲ್ಲಿ ಪಟ್ಟದಕಲ್ಲು ಒಂದು. ಈ ಕಾಲದ ಜನವಸತಿಯಿದ್ದ ಒಂದು ನೆಲೆಯು[1] (ಕ್ರಿ.ಪೂ.೩-ಕ್ರಿ.ಶ.೩ನೆಯ ಶತಮಾನ) ಈ ಊರಿಗೆ ಸುಮಾರು ೧ ಕಿ.ಮೀ. ದೂರದಲ್ಲಿದ್ದ ಬಾಚನಗುಡ್ಡದ ಬದಿಯಲ್ಲಿ ಹಿಂದೆ ಶೋಧವಾಗಿದೆ. ಇತ್ತೀಚೆಗೆ ಈ ಊರಿಗೆ ಹೊಸ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾಗ ಊರಿನ ಅತಿ ಸಮೀಪದಲ್ಲಿನ ರಸ್ತೆಯ ಬದಿಯಲ್ಲಿ ಅಗೆದ ಗುಂಡಿಗಳಲ್ಲಿ ಇದೇ ಕಾಲದ ಜನವಸತಿಯಿದ್ದ ಕುರುಹುಗಳಾದ …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಬಾದಾಮಿ ಪ್ರದೇಶದ ಐತಿಹಾಸಿಕ ಭಿತ್ತಿಚಿತ್ರಗಳು

Baadaami Images

ಕರ್ನಾಟಕದ ಕಲಾ ಪರಂಪರೆಯಲ್ಲಿ ಬಾದಾಮಿಯ ಐತಿಹಾಸಿಕ ಭಿತ್ತಿಚಿತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ಕರ್ನಾಟಕದ ಶಿಷ್ಟ ಪರಂಪರೆಯ ಚಿತ್ರಕಲಾ ಇತಿಹಾಸವನ್ನು ಇಲ್ಲಿಂದಲೇ ಆರಂಭಿಸುವ ವಿದ್ವಾಂಸರು ಇವುಗಳನ್ನು ಕುರಿತಾಗಿ ಹಲವು ನಿಟ್ಟಿನಲ್ಲಿ ಅಧ್ಯಯನ ಮಾಡಿದ್ದಾರೆ. ಬಾದಾಮಿ ಪ್ರದೇಶದ ಆಳರಸರು ಅಂದಿನ ಕಲಾವಿದರಿಗೆ ರಾಜಾಶ್ರಯ ನೀಡಿ ಅವರಿಂದ ಚಿತ್ರಗಳನ್ನು ಬರೆಯಿಸುವುದರ ಮೂಲಕ ಕಲಾ ಪೋಷಕರಾಗಿ ಮುಂದಿನ ದಿನಗಳಲ್ಲಿ ಚಿತ್ರರಚನಾ ಪರಂಪರೆಯನ್ನು ಜೀವಂತವಾಗಿಡುವುದರ ಸಲುವಾಗಿ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ಬಾದಾಮಿಯ ಐತಿಹಾಸಿಕ ಚಿತ್ರಗಳಿಂದ ಕನ್ನಡಿಗರ ಕಲಾಮಾನ, ಧರ್ಮಾಭಿಮಾನ, ಸಾಂಸ್ಕೃತಿಕ ಜೀವನದ ಶ್ರೀಮಂತಿಕೆ, ನಂಬಿಕೆ, ಆಚರಣೆ, ಸಾಮಾಜಿಕ ಜೀವನಗಳಂತಹ ಸಂಗತಿಗಳನ್ನು ಅರಿತುಕೊಳ್ಳಬಹುದು. ಅಂದಿನ …

ಪೂರ್ತಿ ಓದಿ...

ಚಾಲುಕ್ಯ

Baadami Chalukyaru

ಚಾಲುಕ್ಯ ವಂಶ ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ಬೆಳವಣಿಗೆ ಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು. ಕೆಲವು ಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ (ಈಗ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿದೆ) ನಗರವನ್ನು ರಾಜಧಾನಿಯಾಗಿ ಮಾಡಿದ. ಆತನ ಮಕ್ಕಳು ಚಾಲುಕ್ಯ ಸಾಮ್ರಾಜ್ಯವನ್ನು ಈಗಿನ ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸಿದರು. ಪುನರುತ್ಥಾನ ಮತ್ತು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ವಿಜಯಸ್ತಂಭಗಳು

Baadaami Chaalukyara Vijayastambagalu

ಪುರಾತನದಿಂದಲೂ ನಮ್ಮ ಶಿಲ್ಪಶಾಸ್ತ್ರದಲ್ಲಿ ಕಂಬಗಳ ಪ್ರಸ್ತಾವನೆ ಬಂದಿದೆ. ಋಗ್ವೇದದಲ್ಲಿ ‘ಸ್ಥೂನ’ ಎಂಬ ಪದವನ್ನೂ, ‘ಉಪ ಮಿತ್’ ಎಂಬ ಪದವನ್ನು ಋಗ್ವೇದ ಹಾಗೂ ಅಥರ್ವಣ ವೇದಗಳಲ್ಲೂ, ಶಿವನನ್ನು ಚರಾಚರವಸ್ತುಗಳನ್ನು ಹಿಡಿದು ನಿಲ್ಲಿಸಿರುವ ಸ್ತಂಭವೆಂದೂ, ಕಟಕ ಸಂಹಿತದಲ್ಲಿ ‘ಸ್ತಂಭ’ವೆಂಬ ಪದವನ್ನೂ ಉಪಯೋಗಿಸಲಾಗಿದೆ. ‘ಸ್ತಭ್’ ಧಾತುವಿನಿಂದ ಉತ್ಪತ್ತಿಯಾಗಿರುವ ‘ಸ್ತಂಭ’ವು ಹಿಡಿ, ನಿಲ್ಲಿಸು, ಆಧರಿಸು ಎಂಬ ಅರ್ಥವನ್ನು ಕೊಡುತ್ತದೆ. ‘ವಿಜಯಸ್ಥಂಭ’ ‘ವಿಜಯದ ಕೀರ್ತಿಯನ್ನು ನಿಲ್ಲಿಸು ವಂತಹದು. ಕಂಬಕ್ಕೆ ಸ್ತಂಭ, ಸ್ಕಂಭ, ಸ್ಥಾನು, ಜಂಘಾ, ಅಂಗ್ರಿಕಾ, ಚರಣ, ಪಾದ, ಧನಾ, ಸ್ಥೂಲಿ, ಭಾರಕ, ಅರಣಿ, ಧಾರ ಎಂದು ಅನೇಕ ಹೆಸರುಗಳಿವೆ. ಕಂಬವನ್ನು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಚಾಲುಕ್ಯರ ಗಜಲಕ್ಷ್ಮಿ ಶಿಲ್ಪಗಳು

Chaalukyara Gajalakshmi Shilegalu

ಭಾರತೀಯ ಶಿಲ್ಪಕಲೆಯು ಸಾಂಕೇತಿಕವೂ ಹೌದು, ಆಧ್ಯಾತ್ಮಿಕವೂ ಹೌದು. ಲಕ್ಷ್ಮಿ ದೇವತೆಯ ಶಿಲ್ಪ ರಚನೆಯಲ್ಲೂ ಇದು ಸತ್ಯವಾದುದು. ಲಕ್ಷ್ಮಿ ಎಂಬ ಪದವು ‘ಲಕ್ಷ್ಮ’ ದಿಂದ ವ್ಯತ್ಪತ್ತಿ ಹೊಂದಿದ್ದು ಅದಕ್ಕೆ ‘ಸಂಕೇತ’ ಎಂಬ ಅರ್ಥವಿದೆ. ಲಕ್ಷ್ಮಿಪೂಜೆಯು ವೇದಕಾಲದಷ್ಟು ಪ್ರಾಚೀನವಾದುದು. ಋಗ್ವೇದದ ಶ್ರೀಸೂಕ್ತದಲ್ಲಿ ಲಕ್ಷ್ಮಿಯ ವರ್ಣನೆ ಸುದೀರ್ಘವಾಗಿದೆ. ಅತಿ ಪ್ರಾಚೀನ ಗಜಲಕ್ಷಿ ಶಿಲ್ಪಗಳನ್ನು ಭಾರಹುತ ಮತ್ತು ಸಾಂಚಿಯ ಸ್ತೂಪಗಳ ತೋರಣಗಳಲ್ಲಿ ಕಾಣುತ್ತೇವೆ. ಕ್ರಿ.ಪೂ. ಎರಡನೆಯ ಶತಮಾನದಷ್ಟು ಪ್ರಾಚೀನವಾದ ಈ ಶಿಲ್ಪಗಳಲ್ಲಿ ಲಕ್ಷ್ಮಿಯು ಕಮಲದ ಮೇಲೆ ಕುಳಿತಿರುವಂತೆ ಇಲ್ಲವೆ ನಿಂತಂತೆ ಮತ್ತು ಆನೆಗಳಿಂದ ಸೇವೆ ಸ್ವೀಕರಿಸುವಂತೆ ಶಿಲ್ಪಿತಳಾಗಿದ್ದಾಳೆ. ಈ ಶಿಲ್ಪ …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ಕೋಟೆಗಳು ವಿನ್ಯಾಸ ಹಾಗೂ ವಾಸ್ತು ವಿಶೇಷ

Baadami Kotegalu

ವಾನವನಂತೂ ಶಿಲಾಯುಗದಿಂದ ನಮ್ಮ ಈ ಆಧುನಿಕ ೨೧ನೆಯ ಶತಮಾನದ ವರೆಗೂ ತನ್ನ ಸ್ವರಕ್ಷಣೆಗಾಗಿ ಮನೆಗಳನ್ನೂ ಗ್ರಾಮ ಗೋಡೆಗಳನ್ನೂ ನಗರ-ರಾಜಧಾನಿಗಳ ಕೋಟೆಗಳನ್ನೂ ವಿವಿಧ ಶೈಲಿಗಳಲ್ಲಿ ಸಾಮಗ್ರಿಗಳಲ್ಲಿ ವಿನ್ಯಾಸವಾಸ್ತುಗಳಲ್ಲಿ ಕಟ್ಟುತ್ತಲೇ ಬಂದಿದ್ದಾನೆ. ಇದು ಸಂಕ್ಷಿಪ್ತತೆಯಲ್ಲಿ ಬದುಕಿಗಾಗಿ, ಜೀವಿಸುವುದಕ್ಕಾಗಿ, ರಕ್ಷಣೆಗಾಗಿ ಗವಿ ಯಿಂದ ಕೋಟೆಯವರೆಗೂ ರಕ್ಷಣಾ ವ್ಯವಸ್ಥೆಯು ನಡೆದು ಬಂದ ದಾರಿ. ಇನ್ನು ರಾಜಸ್ವ, ರಾಜ್ಯ, ಆಡಳಿತ ಮೇರೆಗಳು, ನಾಡು, ದೇಶಗಳ ಪರಿಕಲ್ಪನೆಯು ವಾಸ್ತವದಲ್ಲಿ ನೆಲೆಯೂರಲು ಸಾಗಿದಾಗ ಆಯಾ ರಾಜರುಗಳು, ತಮ್ಮ ತಮ್ಮ ನೆಲವನ್ನು ಹಾಗೂ ತಮ್ಮ ತಮ್ಮ ಜನವನ್ನು ರಕ್ಷಿಸುವ ವ್ಯವಧಾನದಲ್ಲಿ ಕೋಟೆ ಕೊತ್ತಲಗಳನ್ನು ನಿರ್ಮಿಸುವುದು ಅವಶ್ಯವಾಯಿತು. …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಆಲಂಪುರದ ದೇವಾಲಯಗಳು

Alampur Temples

ಈಗ ಕರ್ನಾಟಕದ ಹೊರಗೆ ಇರುವ, ಹಿಂದೆ ಚಾಲುಕ್ಯರ ರಾಜ್ಯದ ಭಾಗವಾಗಿದ್ದ ಈಗಿನ ಆಂಧ್ರಪ್ರದೇಶದ ಮಹಬೂಬ್‌ನಗರ ಮತ್ತು ಕರ್ನೂಲುಗಳಲ್ಲಿ ಚಾಲುಕ್ಯರು ಕಟ್ಟಿಸಿದ ಆಲಯಗಳಿವೆ. ಇವುಗಳಲ್ಲಿ ಪ್ರಮುಖವಾದವು ತುಂಗಭದ್ರೆಯ ದಕ್ಷಿಣ ತೀರದಲ್ಲಿ ಮಹಬೂಬ್ ನಗರ ಜಿಲ್ಲೆಗೆ ಸೇರಿದ ಆಲಂಪುರದ ದೇವಾಲಯ ಸಂಕೀರ್ಣ. ಇದು ಶ್ರೀಶೈಲಕ್ಕೆ ಹೋಗಲು ಪಶ್ಚಿಮದ್ವಾರದಂತಿದೆ. ಇಲ್ಲಿಯ ಮುಖ್ಯ ದೇವತೆ ಜೋಗುಳಾಂಬಾ. ಪರಶುರಾಮನು ತನ್ನ ತಾಯಿ ರೇಣುಕೆಯ ಶಿರಚ್ಛೇದನ ಇಲ್ಲಿ ಮಾಡಿದ ಎಂಬುದು ಇನ್ನೊಂದು ದಂತಕಥೆ. ಬೃಹಸ್ಪತಿ ಎಂಬ ಸ್ಥಪತಿಯ ಪತ್ನಿ ಪುಣ್ಯವತಿ. ಇಬ್ಬರೂ ಕಾಶಿವಿಶ್ವೇಶ್ವರ ಭಕ್ತರು. ದೇವನ ಕೃಪೆಯಿಂದ ಪುಣ್ಯವತಿ ಗರ್ಭ ಧರಿಸಿದಳು. ಮಗನನ್ನು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಹುನಗುಂದದ ಬಾದಾಮಿ ಚಾಲುಕ್ಯರ ಅವಶೇಷಗಳು

Hungunda

ವಿಜಾಪುರ ಜಿಲ್ಲೆಯ ಹುನಗುಂದ ನಗರದಲ್ಲಿ ರಾಮಲಿಂಗೇಶ್ವರ ದೇವಾಲಯದತ್ತ ಇತಿಹಾಸಕಾರರ ಗಮನವಿನ್ನೂ ಸೆಳೆದಿಲ್ಲ.[1] ಬಹುಪುರಾತನವಾದ ಈ ದೇವಾಲಯವನ್ನು ಇತ್ತೀಚೆ ಜೀರ್ಣೋದ್ಧಾರ ಮಾಡಿದ್ದರೂ ಅದಿನ್ನೂ ಹಾಳು ಸ್ಥಿತಿಯಲ್ಲಿ ಇದ್ದಂತೆ ಕಾಣುವುದು. ಒಳಹೊರ ಭಾಗಕ್ಕೆಲ್ಲ ಸುಣ್ಣ ಬಳಿಯಲಾಗಿರುವುದರಿಂದ ಅದರ ಕಲಾಸಂಪತ್ತೂ ಅಡಗಿಕೊಂಡುಬಿಟ್ಟಿದೆ. ಈ ದೇವಾಲಯದ ಸಭಾಮಂಟಪದ ಭುವನೇಶ್ವರಿಯಲ್ಲಿಯ ಶಾಸನವನ್ನು ಈ ಮೊದಲು ಗುರುತಿಸಿ, ಪ್ರಕಟಿಸಲಾಗಿದೆ(SII XI, Pt, I.,No.೧೧೩ of ೧೦೭೪). ಅರಸರ ಬಸದಿಗೆ ದತ್ತಿ ಕೊಟ್ಟ ಬಗ್ಗೆ ಇಲ್ಲಿ ಉಲ್ಲೇಖ ಬರುವುದರಿಂದ, ಈ ಶಾಸನಕ್ಕೂ ಮತ್ತು ರಾಮಲಿಂಗೇಶ್ವರ ದೇವಾಲಯಕ್ಕೂ ಸಂಬಂಧವಿಲ್ಲ ಎನ್ನುವ ಮಾತು ಸ್ಪಷ್ಟ. ದಿನಾಂಕ ೧೨-೨-೭೪ರಂದು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಸಿದ್ಧನಕೊಳ್ಳದ ಚಾಲುಕ್ಯ ಕಾಲದ ಸಂಗಮೇಶ್ವರ ಮಂದಿರ

Siddayyana Kola Sangamesha Tempal

ವಾತಾಪಿಯ ಚಾಲುಕ್ಯರು ದೇವಾಲಯ ನಿರ್ಮಿತಿಯಲ್ಲಿ ವಿಶೇಷ ಆಸಕ್ತಿಯುಳ್ಳ ವರಾಗಿದ್ದರು. ಇದಕ್ಕೆ ನಿದರ್ಶನವಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ ಮತ್ತು ಮಹಾಕೂಟಗಳಲ್ಲಿ ನೂರಾರು ಸಂಖ್ಯೆಯ ದೇವಾಲಯಗಳು ನಿರ್ಮಿತವಾದುದನ್ನು ಇಂದಿಗೂ ಕಾಣುತ್ತೇವೆ. ಶಿಲ್ಪಶಾಸ್ತ್ರದ ಬೆಳವಣಿಗೆಯ ಅಭ್ಯಾಸಕ್ಕೆ ಐಹೊಳೆಯ ಮಂದಿರಗಳು ಹೆಚ್ಚು ಸಹಾಯಕಾರಿಯಾಗಿವೆ. ರಮಣೀಯ ನಿಸರ್ಗದ ಮಡಿಲಲ್ಲಿರುವ ಸಿದ್ಧನಕೊಳ್ಳ ಐಹೊಳೆಯಿಂದ ದಕ್ಷಿಣಕ್ಕೆ ಸುಮಾರು ಮೂರು ಮೈಲು ಅಂತರದಲ್ಲಿದೆ. ಈ ಕೊಳ್ಳದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯ ಒಂದು ವಿರಾಜಮಾನವಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವನ್ನು ಸ್ಥಳೀಕರು ಸಂಗಮೇಶ್ವರ ದೇವಾಲಯವೆಂದು ಕರೆಯುವ ವಾಡಿಕೆ ಇದೆ. ಈ ಮಂದಿರದ ತಳವಿನ್ಯಾಸ, ಗರ್ಭಗೃಹ, ಸಭಾಮಂಟಪ ಮತ್ತು …

ಪೂರ್ತಿ ಓದಿ...