12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ ಒಂದು ಹೊಸ ಯುಗ – ಬಸವಯುಗದ ತತ್ವಾಚರಣೆ ಪರಿಣಾಮಗಳನ್ನು ನಿಚ್ಚಳವಾಗಿ ಕಾಣಬಹುದು. ಶರಣರ ತತ್ವಾಚರಣೆಗಳು 12 ನೇ ಶತಮಾನಕ್ಕೆ ಸೀಮಿತವಾಗದೇ 900 ವರ್ಷಗಳಾದ ನಂತರವೂ ಆಚರಣೆಯಲ್ಲಿ ಇರುವುದು ವಚನಗಳಲ್ಲಿನ ಸಾರ್ಥಕ ವಿಚಾರಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಯಾರನ್ನೂ ದೂರದೇ, ದೂರವಿಡದೇ ಎಲ್ಲರನ್ನೂ ಒಳಗೊಂಡು ಸಮಗ್ರವಿಕಾಸ ಸಾಧಿಸುವ ಬಸವಣ್ಣನವರ ‘ಇವನಾರವ ಇವನಾರವ, ಇವನಾರವನೆಂದೆಣಿನಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆಣಿನಸಯ್ಯ, ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದೆಣಿಸಯ್ಯಾ’ ಅಣ್ಣ ಬಸವಣ್ಣನು ಇವ ನಮ್ಮವ ಎಂದು ಎಲ್ಲರನ್ನೂ ಆದರಿಸುವುದನ್ನು ಬದುಕಿನ …
ಪೂರ್ತಿ ಓದಿ...