ಭಗವಂತನ ಕೃಪೆಯಿದ್ದರೆ ಅರಳಿದ ಹೂವು ಬಾಡುವುದಿಲ್ಲ. ಹಚ್ಚಿದ ದೀಪ ಆರುವುದಿಲ್ಲ. ಸದ್ಯದ ಆಧುನಿಕ ಯುಗದಲ್ಲೂ ಈ ಮಾತನ್ನು ನಿಜವಾಗಿಸಿ ಪವಾಡದರ್ಶನ ಮಾಡಿಸುತ್ತಿರುವುದು ಹಾಸನ ಜಿಲ್ಲೆಯ ಹಾಸನಾಂಬೆ ಕ್ಷೇತ್ರ. ದೇವಾಲಯಗಳೆಂದರೆ ಪ್ರತಿನಿತ್ಯ ಪೂಜೆ, ಆರತಿ, ದರ್ಶನ ಹೀಗೆ ನಡೆಯುತ್ತವೆ. ಆದರೆ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಮಾಡಬೇಕೆಂದರೆ ಭಕ್ತರು ಒಂದು ವರ್ಷ ಕಾಯಬೇಕು. ಹಾಸನಾಂಬೆಯ ದೇವಾಲಯದ ಬಾಗಿಲು ತೆರೆಯುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತಿವರ್ಷ ಆಶ್ವಯುಜ ಮಾಸದ ಪೌರ್ಣಿಮೆಯ ನಂತರ ಬರುವ ಗುರುವಾರದಂದು ಶಾಸ್ತೋಕ್ತವಾಗಿ ಬಾಗಿಲನ್ನು ತೆರೆಯಲಾಗುತ್ತದೆ. ನಂತರ ಬಲಿಪಾಡ್ಯಮಿಯ ಮಾರನೆಯ ದಿನ ಬಾಗಿಲನ್ನು …
ಪೂರ್ತಿ ಓದಿ...