Tag Archives: ಜಾನಪದ

ಕೋಳಿ ಅಂಕ

ಕೋಳಿ ಅಂಕ

ಕೋಳಿ ಅಂಕ ಕೋಳಿಗಳ ಕಾದಾಟದ ಆಟ. ಎರಡು ಬಲಿತ, ಬಲಿಷ್ಠ ಹುಂಜಗಳ ಕಾಲಿಗೆ ಹರಿತವಾದ ಸಣ್ಣ ಕತ್ತಿ(ಬಾಲು)ಗಳನ್ನು ಕಟ್ಟಿ ಅವುಗಳನ್ನು ಹೋರಾಟಕ್ಕೆ ಬಿಡುವರು. ಹುಂಜಗಳು ಪರಸ್ಪರ ಕಾದಾಡುವಾಗ ಯಾವ ಹುಂಜವುೆದುರಾಳಿಯನ್ನು ಗಾಯಗೊಳಿಸಿ ಹೈರಾಣಾಗಿಸುವುದೋ ಆ ಹುಂಜವು ವಿಜಯಿಯಾದಂತೆ. ಅದರ ಯಜಮಾನನಿಗೆ ಬಹುಮಾನ ಸಲ್ಲುವುದು. ಅಂತೆಯೇ ಕೋಳಿ ಅಂಕದಲ್ಲಿ ಗೆಲ್ಲಲೆಂದು ಮುತುವರ್ಜಿವಹಿಸಿ ಕೋಳಿ ಸಾಕುವುದೂ ಸಹಜ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಆಟವು ಕೋಳಿ ಕಟ್ಟ ಎಂದು ಪ್ರಸಿದ್ಧಿ. ಕಂಬಳದಂತೆಯೇ ಕೋಳಿ ಕಟ್ಟವೂ ಸ್ಥಳೀಯರಲ್ಲಿ ಜನಪ್ರಿಯ. ಗೆಲ್ಲಬಹುದಾದ ಕೋಳಿಯ ಮೇಲೆ ಬಾಜಿ ಕಟ್ಟುವುದರಿಂದ ಇದನ್ನು ಜೂಜಾಟ …

ಪೂರ್ತಿ ಓದಿ...

ಕೋಲಾಟ

kolata

ಕೋಲಾಟ ಒಂದು ಗಂಡು ಕಲೆ, (ಹೆಣ್ಣು ಮಕ್ಕಳು ಕೋಲಾಡುವುದು ಅಪರೂಪ). ಹಾಡು ಮತ್ತು ಕುಣಿತವು ಬೆರೆತಿರುವಂತಹ ಕಲೆಯಾಗಿರುವುದು. ಗೋಕುಲದಲ್ಲಿ ಶ್ರೀ ಕೃಷ್ಣನ ಜನನವಾದಾಗ ಯಾದವರು ಕೋಲಾಡುವ ಮೂಲಕ ತಮ್ಮ ಸಂತೋಷವನ್ನು ವ್ತಕ್ತಪಡಿಸಿದುದು ಮತ್ತು ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಗೆ ಆಟವಾಡಿದುದು ಕೋಲಾಟದ ಪ್ರಾಚೀನವಾದ ಕಲೆಯನ್ನು ತಿಳಿಸುತ್ತದೆ. ಕೋಲು ತರುವ ಮತ್ತ್ತು ಬಿಡುವ ಆಚರಣೆ ಗ್ರಾಮದ ಹಬ್ಬಗಳಲ್ಲಿ ಮೊದಲು ಕೋಲು ತರುವ ಮತ್ತು ಹಬ್ಬದ ನಂತರ ಕೋಲು ಬಿಡುವ ಆಚರಣೆಗಳಿವೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ಆಚರಣೆ ಹೀಗಿದೆ. ನವರಾತ್ರಿ ಆರಂಭವಾಗುವ ಮೊದಲು …

ಪೂರ್ತಿ ಓದಿ...

ಜನಪದ ನಂಬಿಕೆಗಳು

nambikegalu

ಜನಪದ ನಂಬಿಕೆಗಳು ಜನಜೀವನದಲ್ಲಿ ನಡೆದಾಡುವ ನಾಣ್ಯಗಳಿದ್ದಂತೆ. ಅವು ಜನತೆಯ ಜೀವನಾನುಭವದ ಮೂಸೆಯಿಂದ ಮೂಡಿ ಬಂದು, ಬದುಕಿನಲ್ಲಿ ಬೆರೆತು ಪರಿಣಾಮಕಾರಿಯಾಗಿ ಪ್ರಭಾವಬೀರಿ ಜೀವಂತವಾಗಿವೆ. ಜನತಾಭಾವದ ಅಭಿವ್ಯಕ್ತಿಗಳಾದ ಜನಪದ ನಂಬಿಕೆಗಳು, ಜನತೆಯ ಪರಂಪರಾಗತ ಜ್ಞಾನಸುಧೆ, ಸುಸಂಸ್ಕೃತ ಹೃದಯದ ಪರಿಪಕ್ವ ಅನುಭವದ ಸಾರವೆಂದು ಹೇಳಬಹುದು. ಹೀಗಾಗಿ ಇವು ಜನಜೀವನದಲ್ಲಿ ಹಾಸುಹೊಕ್ಕಾಗಿ ಸೆರಿ, ಅವರ ಬದುಕನ್ನೇ ನಿಯಂತ್ರಿಸಿ ನಿರ್ದೇಶಿಸುವ ಪ್ರಮುಖ ಶಕ್ತಿಯಾಗಿ ಪರಿಣಾಮಿಸಿ, ಜನಪದ ಬದುಕಿಗೆ ವಜ್ರಕವಚವಾಗಿದೆ. ಈ ಹಿನ್ನೆಲೆಯಲ್ಲಿ ಜನಪದ ನಂಬಿಕೆಗಳ ಒಂದು ಪ್ರಮುಖ ಅಂಗವಾದ ‘ಮಾನವ ಸಂಬಂಧಿ ನಂಬಿಕೆ’ ಗಳನ್ನು ಕುರಿತು ಇನ್ನು ನೋಡಬಹುದು. ಸಮಾಜಶಾಸ್ತ್ರ, ಮಾನವಶಾಸ್ತ್ರ, …

ಪೂರ್ತಿ ಓದಿ...

ಮದುವೆ ಮನೆಯಲ್ಲಿ ಜರೆಯುವ ಹಾಡು

marriage

ಹವ್ಯಕರ ಮದುವೆ ಮನೆಯಲ್ಲಿ ಬಹಳ ಹಿಂದೆ ಜರೆಯುವ ಹಾಡು ಹೇಳುವ ಪದ್ಧತಿ ಇತ್ತು. ಈಗ ಮದುವೆಯಲ್ಲಿ ಯಾವ ಹಾಡನ್ನು ಹೇಳುವುದೂ ಅಪರೂಪವಾಗಿದೆ. ಹಾಡಿನ ಮೂಲಕ ನೆಂಟರು ಒಬ್ಬರನ್ನೊಬ್ಬರು ಜರೆಯುವುದು ಆಕ್ಷೇಪಕ್ಕೆಂದಲ್ಲ. ಅದು ಒಂದು ಖುಷಿಗಾಗಿ ಅಷ್ಟೆ. ಇದಕ್ಕೆ “joking relationship” ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಹೊಸ ಬಾಂಧವ್ಯ ನಿಕಟವಾಗುತ್ತದೆಯೆಂದು ಭಾವಿಸಲಾಗುತ್ತದೆ. ಹವ್ಯಕರಲ್ಲಿ ಮದುವೆ ಕಾರ್ಯಕ್ರಮದ ವಿಧಿಗಳಲ್ಲಿ ಮಂತ್ರಗಳು ಹೇಗಿವೆಯೋ ಹಾಗೆ ಪ್ರತಿಯೊಂದು ವಿಧಿಗೂ ಪ್ರತ್ಯೇಕ ಮತ್ತು ವೈವಿಧ್ಯವಾದ ಹಾಡುಗಳಿವೆ. ಹವ್ಯಕರ ಮದುವೆ ಮನೆಯಲ್ಲಿ ಜರೆಯುವ ಹಾಡು ಗಂಡಿನ ಕಡೆಯವರು: ಕಲ್ಯಾಣವೇ ಕಪ್ಪಿನ ಕಲ್ಯಾಣವೇ …

ಪೂರ್ತಿ ಓದಿ...

ತುಳುನಾಡಿನ ಬನದ ‘ಮೂರಿಲೆ ಕುದ್ಪೆ’

ಕರುನಾಡಿನ ಕರಾವಳಿಯ ಚಿಕ್ಕ ಪ್ರದೇಶ ತುಳುನಾಡು. ಇಲ್ಲಿಯ ಆಚರಣೆಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದನ್ನು ನಾವು ಸೂಕ್ಷ್ಮವಾಗಿ ಹುಡುಕುತ್ತಾ ಹೋದಾಗ ನಮಗೆ ತೆರೆದುಕೊಳ್ಳುವ ಮಜಲುಗಳು ಅನೇಕ. ಪ್ರತಿಯೊಂದು ಆಚರಣೆಯು ತನ್ನದೇ ಆದ ಪ್ರಾಮುಖ್ಯತೆವನ್ನು ಎತ್ತಿ ಹಿಡಿಯುತ್ತದೆ. ಇಲ್ಲಿ ಬರುವ ಆಚರಣೆಗಳು ಮಾನವನ ಪ್ರಾಮುಖ್ಯವನ್ನು ತೋರಿಸುತ್ತದೆ. ಕೆಲವು ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ, ಮನೆತನದಿಂದ ಮನೆತನಕ್ಕೆ ಭಿನ್ನವಾಗಿ ಕಂಡು ಬರುವುದು ತುಳುನಾಡಿನ ವಿಶೇಷತೆ. ಇಂದಿನ ಗ್ರಾಮೀಣ ಜೀವನಕ್ಕೆ ನಗರ ಬದುಕಿನ ಪ್ರಭಾವದಲ್ಲಿಯು ತುಳುನಾಡಿನ ಆಚರಣೆಗಳು ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿರುವುದು ಇಲ್ಲಿನ ಜನರ ನಂಬಿಕೆ ಮತ್ತು ಭಕ್ತಿಗೆ …

ಪೂರ್ತಿ ಓದಿ...

ವೀರಗಾಸೆ’ ಕುಣಿತದ ಹಿನ್ನಲೆ ಬಗ್ಗೆ ಪ್ರಚಲಿತವಿರುವ ಒಂದು ಪೌರಾಣಿಕ ಪ್ರಸಂಗ

Veeragase

ಪೌರಾಣಿಕ ಕಥೆಯನ್ನು ಆಧಾರಿಸಿದ ಈ ವೀರಗಾಸೆ ಕುಣಿತವು ದಕ್ಷಬ್ರಹ್ಮ ಮತ್ತು ಈಶ್ವರನಿಗೆ ಸೇರಿದ ಒಂದು ಸುಂದರ ಕತನವಾಗಿದೆ. ಒಮ್ಮೆ ದಕ್ಷಬ್ರಹ್ಮನೂ ಒಂದು ಯಜ್ಞವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಾಗ ತನ್ನ ಮಗಳನ್ನು ಮತ್ತು ಅಳಿಯನನ್ನು ಕರೆಯುವುದಿಲ್ಲದಿರುವಾಗ ನಡೆಯುವ ಒಂದು ಘಟನಾವಾಳಿಯ ಚಿತ್ರಣ. ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ. ದಕ್ಷಬ್ರಹ್ಮ …

ಪೂರ್ತಿ ಓದಿ...

ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ

ಭಾರತೀಯ ನಾರಿ ಅಂದಾಕ್ಷಣ, ನೆನಪಿಗೆ ಬರುವವಳೇ ಸೀರೆಯುಟ್ಟ ನಾರಿ. ನಮ್ಮ ದೇಶೀಯ ಸಂಸ್ಕೃತಿಯ ಜೀವಾಳವೇ ಸೀರೆ. ನೀರೆಯ ಅಂದದ ಉಡುಪಾದ ಸೀರೆಗೆ ಅದರದ್ದೇ ಆದ ಗೌರವಗಳಿವೆ. ಅಂದಗಾತಿಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸೀರೆಗೆ ಮತ್ತು ಸೀರೆಯುಡುವ ಶೈಲಿಗೆ ವಿದೇಶಿಯರೂ ಮನಸೋತಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿಯೇ ಅತ್ಯಂತ ಪುರಾತನ ಉಡುಗೆ ಸೀರೆ. ಅನಾದಿ ಕಾಲದಿಂದ ಸೀರೆಯು ನಮ್ಮ ದೇಶದ ಮಹಿಳೆಯರ ಪ್ರಮುಖ ಉಡುಗೆ. ಸೀರೆಯ ಬಳಕೆ ಎಲ್ಲಿಂದ ಪ್ರಾರಂಭವಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಎಲ್ಲಿಯೂ ಇಲ್ಲ. ಆದರೆ, ಕ್ರಿಸ್ತ ಪೂರ್ವ 2000 …

ಪೂರ್ತಿ ಓದಿ...

ರಂಗೋಲಿ

Rangoli

ರಂಗವಲ್ಲಿ ಅಥವಾ ರಂಗೋಲಿ ಚಿತ್ರಕಲೆಯ ಬಿಂದುಜ ಎಂಬ ವಿಭಾಗಕ್ಕೆ ಸೇರಿದ ಒಂದು ಜಾನಪದ ಕಲೆ.ರಂಗವಲ್ಲಿ ಎಂದರೆ ಬಣ್ಣಗಳಿಂದ ಅಲಂಕರಿಸಿದ ಲತೆಗಳು ಎಂದರ್ಥವಿದೆ.ಸ್ತ್ರೀಯರು ತಮ್ಮ ಕಲಾನೈಪುಣ್ಯ,ಕಲ್ಪನಾ ಶಕ್ತಿಯ ಅಭಿವ್ಯಕ್ತಿಯಾಗಿ ಬೆರಳುಗಳ ಸಹಾಯದಿಂದ ಮೂಡಿಸುವ ಕಲೆಯಾಗಿ ಹೆಚ್ಚು ಪ್ರಚಲಿತ.ಹುಡಿಮಣ್ಣು,ಸುಣ್ಣ,ಬಣ್ಣದ ಹುಡಿಗಳನ್ನು ಉಪಯೋಗಿಸುವ ಚಿತ್ರಗಳು. ಮುಂಜಾನೆ ಕೋಳಿ ಕೂಗುವ ವೇಳೆ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಹೊಸ್ತಿಲಿಗೆ ರಂಗೋಲಿ ಇಟ್ಟು, ಮನೆಯ ಮುಂದಿನ ಅಂಗಳದಲ್ಲಿಯೂ ರಂಗೋಲಿ ಇಡುವ ಸಂಸ್ಕೃತಿ ನಮ್ಮದು. ಮನೆಯ ಮೆಟ್ಟಿಲ ಮುಂದೆ ಒಪ್ಪವಾಗಿ ಸಾರಿಸಿದ ಜಾಗದಲ್ಲಿ ಬಿಳಿಯ ರಂಗೋಲಿ ಪುಡಿಯಿಂದ ಇಟ್ಟ ಚುಕ್ಕಿ ರಂಗೋಲಿಯ ಸೊಗಸೇ ಬೇರೆ. ಆ …

ಪೂರ್ತಿ ಓದಿ...

ಕನ್ನಡ ಗಾದೆಗಳು

ತಲೆಮಾರಿನಿಂದ ತಲೆಮಾರಿಗೆ ಪರಂಪರಾಗತವಾಗಿ ಹರಿದು ಬಂದಿರುವ ಸಾಂದ್ರವೂ ಬೋಧಪರವೂ ಆದ ಸೂಕ್ತಿಯೇ ಗಾದೆ (ಪ್ರಾವರ್ಬ್). ಕನ್ನಡದಲ್ಲಿ ಗಾದೆ ಪದಕ್ಕೆ ಸಂವಾದಿಯಾಗಿ ನಾಣ್ಣುಡಿ ಎಂಬ ಪದವೂ ಪ್ರಚಲಿತವಿದೆ. ಗಾದೆ ಸಂಸ್ಕೃತದ ಗಾಥಾ ಪದದಿಂದ ಬಂದಿದ್ದೆಂದು ಹೇಳುತ್ತಾರೆ. ಇದು ಗಾಥಾ ಪದದ ನೇರ ತದ್ಭವವೊ ಅಥವಾ ಪ್ರಾಕೃತದ ಗಾಹೆಯ ಮೂಲಕ ಬಂದುದೊ ಹೇಳಲು ಇಷ್ಟ. ಆದರೆ ಗಾಥಾ ಎಂಬುದು ಮೂಲದಲ್ಲಿ ಒಂದು ಛಂದಸ್ಸಿನ ಜಾತಿಯನ್ನು ಸೂಚಿಸುತ್ತದೆಯೆಂದು ಮಾತ್ರ ಹೇಳಬಹುದು. ಅಂತು “ನಾಣ್ಣುಡಿ”ಯನ್ನು ಮರೆಸುವಷ್ಟರಮಟ್ಟಿಗೆ “ಗಾದೆ” ಪ್ರಚಾರದಲ್ಲಿದೆ. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಸೂತ್ರ, ಉದ್ಧರಣೆ, ಲೋಕೋಕ್ತಿ, ಪ್ರಾಚೀನೋಕ್ತಿ …

ಪೂರ್ತಿ ಓದಿ...

ಕನ್ನಡದ ಜನಪದ ಮಹಾಕಾವ್ಯಗಳು

ಕನ್ನಡದ ಜನಪದ ಮಹಾಕಾವ್ಯಗಳು

ಸಮಾಜದಲ್ಲಿ ನಡೆಯುವ ಸಾಂಸ್ಕೃತಿಕ ಸಂಗತಿಗಳನ್ನು ಮುನ್ನೆಲೆಗೆ ತರುವ ಅಥವಾ ಅಂಚಿಗೆ ಸರಿಸಿಬಿಡುವ ಪ್ರಕ್ರಿಯೆಯು ಅಂತಹ ಸಮಾಜದಲ್ಲಿ ನಡೆಯುತ್ತಿರುವ ಸಾಮಾಜಿಕ ಚಲನವಲನಗಳ ನೇರ ಪರಿಣಾಮ. ಆ ಸಂಗತಿಗಳ ಕಲಾತ್ಮಕ ಮೌಲ್ಯಕ್ಕೂ ಈ ಬಗೆಯ ಅತಿಮಹತ್ವ, ನಿರ್ಲಕ್ಷ್ಯಗಳಿಗೂ ನಿಕಟವಾದ ಸಂಬಂಧವಿರುವುದಿಲ್ಲ. ಕಲಾತ್ಮಕ ಮೌಲ್ಯ ಯಾವುದು, ಎನ್ನುವ ತಿಳಿವಳಿಕೆಯೂ ಬದಲಾಗುತ್ತಿರುತ್ತದೆ. ಈ ಮಾತು ಕರ್ನಾಟಕದ ಜನಪದ ಮಹಾಕಾವ್ಯಗಳ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜ. ಸಾಹಿತ್ಯ ವಿಮರ್ಶೆಯ ಪ್ರಧಾನಧಾರೆಯು ಎಷ್ಟೋ ಶತಮಾನಗಳ ಕಾಲ ಅವುಗಳ ಅಸ್ತಿತ್ವವನ್ನು ಗುರುತಿಸಲೂ ಇಲ್ಲ, ಅವುಗಳನ್ನೂ ಮೆಚ್ಚಿಕೊಳ್ಳಲೂ ಇಲ್ಲ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಪ್ರಾರಂಭವಾದ …

ಪೂರ್ತಿ ಓದಿ...