ಮತ್ತೂರು ಕೃಷ್ಣಮೂರ್ತಿ: (ಜನನ-ಆಗಸ್ಟ್ 8,೧೯೨೯) ರಂದು ಶಿವಮೊಗ್ಗ ಜಿಲ್ಲೆ ಮಾಥುರ್ ಗ್ರಾಮದ ಶ್ರೀ ಎಂ.ರಾಮಕೃಷ್ಣಯ್ಯ ಹಾಗೂ ಶ್ರಿಮತಿ.ನ೦ಜಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣವನ್ನು ಹೊಂದಿ,ಪದವಿಯ ನಂತರ ಕೃಷಿಯನ್ನು ತೆಗೆದುಕೊಂಡು ಸಂಸ್ಕೃತವನ್ನು ಕಲಿತರು. ಇವರು ರಾಮಾಯಣ, ಮಹಾಭಾರತ, ಮತ್ತು ಭಾಗವತಪುರಾಣದಲ್ಲಿ ಅಧ್ಯಯನವನ್ನು ಹೊ೦ದಿದ್ದರು.ಇವರು ಬಹಳವಾಗಿ ಗಮಕ ಕಲಾವಿದರಾದ ರಾಮಶಾಸ್ತ್ರಿ ಮತ್ತು ಲಕ್ಷ್ಮಿ ಕೇಶವ ಶಾಸ್ತ್ರಿ ಅವರಿ೦ದ ಪ್ರಭಾವಿತರಾಗಿದ್ದರು. ಸ್ವಾತಂತ್ರ್ಯಹೋರಾಟದಲ್ಲಿ ಅವರ ಭಾಗವಹಿಸುವಿಕೆ ಅವರಿಗೆ ತಮಿಳು ಮತ್ತು ಹಿಂದಿ ಕಲಿಯಲು ಅನುಕೂಲ ಕಲ್ಪಿಸಿತು. ಸಂಸ್ಕೃತ ವಿದ್ವಾಂಸರಾದ ಇವರು ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ ಸಾಹಿತ್ಯ …
ಪೂರ್ತಿ ಓದಿ...ಗಮಕಿ ಎಂ. ರಾಘವೇಂದ್ರರಾವ್
ಎಂ. ರಾಘವೇಂದ್ರರಾವ್ ಅವರು ನಾಡು ಕಂಡ ಪ್ರಖ್ಯಾತ ಗಮಕಿಗಳಲ್ಲಿ ಒಬ್ಬರು. ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು ಆಗಸ್ಟ್ 7, 1914ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಜನಿಸಿದರು. ಅವರ ತಂದೆ ಮೈಸೂರು ನೀಲಕಂಠ ಕೇಶವರಾಯರು ಮತ್ತು ತಾಯಿ ವೆಂಕಟಲಕ್ಷ್ಮಮ್ಮನವರು. ರಾಘವೇಂದ್ರರಾಯರಿಗೆ ತಂದೆಯಿಂದಲೇ ಸಾಹಿತ್ಯದ ಪಾಠ ಮೊದಲ್ಗೊಂಡಿತು. ಹತ್ತನೇ ವಯಸ್ಸಿನಿಂದಲೇ ಪ್ರಾರಂಭವಾದ ಅವರ ಗಮಕ, ಅವರ ಕಡೆಯ ಉಸಿರಿನವರೆಗೂ ಅವರೊಡನೆ ನಿರಂತರವಾಗಿತ್ತು. ಸುಮರು 75 ವರ್ಷಗಳಷ್ಟು ದೀರ್ಘಕಾಲ ಅವರು ಗಮಕವನ್ನೇ ಉಸಿರಾಡಿದವರು ಮೈಸೂರಿನ ಜವಳಿ ಅಂಗಡಿ ತಮ್ಮಯ್ಯನವರಲ್ಲಿ ಗಮಕ ಅಭ್ಯಾಸವನ್ನು ಗುರುಕುಲಪದ್ಧತಿಯಲ್ಲಿ …
ಪೂರ್ತಿ ಓದಿ...ಗಂಗಮ್ಮ ಕೇಶವಮೂರ್ತಿ
ಗಂಗಮ್ಮ ಕೇಶವಮೂರ್ತಿ ಸಂದರ್ಶನ: ಅನುಪಮಾ ಫಾಸಿ ಇಂದಿನಿಂದ ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಗಮಕ ಸಮ್ಮೇಳನ ನಡೆಯುತ್ತಿದೆ. ಈ ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವವರು ಗಮಕ ಕಲೆಯಲ್ಲಿ ಬಹಳಷ್ಟು ಸಾಧನೆ ಮಾಡಿ ಅನೇಕರಿಗೆ ಸ್ಪೂರ್ತಿಯಾಗಿರುವವರು ಗಂಗಮ್ಮ ಕೇಶವಮೂರ್ತಿಯವರು. ಅವರ ಅನುಭವಗಳು ಇಂತಿವೆ: ಗಮಕದಲ್ಲಿ ಆಸಕ್ತಿ ಬೆಳೆದಿದ್ದು ಹೇಗೆ? ನನ್ನ ತಂದೆ ಮೇಷ್ಟ್ರು. ಅವರಿಗೆ ಬೇರೆ ಬೇರೆ ಕಡೆಗೆ ವರ್ಗವಾಗುತ್ತಿತ್ತು. ಹೀಗಾಗಿ ಅವರು ಎಲ್ಲಿಗೆ ಹೋದರೂ ಅಲ್ಲಿನ ವಿಶೇಷತೆಯನ್ನು ಗಮನಿಸಿ ಕಲಿತುಕೊಳ್ಳುತ್ತಿದ್ದರು. ಅವರ ವಿಶೇಷ ಆಸಕ್ತಿ ಇದ್ದದ್ದು ಹಾಡುಗಳನ್ನು ಹಾಡುವುದರಲ್ಲಿ. ಶಾಲೆಯಲ್ಲಿನ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. …
ಪೂರ್ತಿ ಓದಿ...ಸಂ.ಗೋ. ಬಿಂದೂರಾಯರು
ತಮ್ಮ ಸುಶ್ರಾವ್ಯ ಕಾವ್ಯವಾಚನದ ಮೂಲಕ ಮಹಾಭಾರತದ ಕಾಲಕ್ಕೆ ಕೇಳುಗರನ್ನು ಕೊಂಡೊಯ್ಯುತ್ತಿದ್ದ ಸಂ. ಗೋ. ಬಿಂದೂರಾಯರು ಜನವರಿ 24, 1877ರಲ್ಲಿ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು. ತಂದೆ ಗೋವಿಂದರಾಯರು, ತಾಯಿ ರಮಾಬಾಯಿ. ಬಿಂದೂರಾಯರ ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗದಲ್ಲಿ ನಡೆಯಿತು. ರಾಯರು ತರಗತಿಯಲ್ಲಿ ಕುಳಿತದ್ದಕ್ಕಿಂತ ಹರಿಕಥೆ, ಸಂಗೀತ ಕಚೇರಿಯಲ್ಲಿ ಕುಳಿತದ್ದೇ ಹೆಚ್ಚು. ರಾಯರು ಶಿಕ್ಷಣದ ನಂತರ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪ್ರಾರಂಭಿಸಿ, ನಂತರದಲ್ಲಿ ಬದುಕಿಗಾಗಿ ಗಂಧದೆಣ್ಣೆ ಕಾರ್ಖಾನೆ, ವಸ್ತು ಪ್ರದರ್ಶನ ಶಾಖೆ, ಕೃಷ್ಣರಾಜೇಂದ್ರ ಮಿಲ್ ಹೀಗೆ ಹಲವಾರು ಕಡೆ ದುಡಿದರು. ಬಿಂದೂರಾಯರು ನೌಕರಿ ನಿಮಿತ್ತ ಮೈಸೂರು ಸೇರಿದ …
ಪೂರ್ತಿ ಓದಿ...ಕೊಡಗಿನ ಅನಂತಪದ್ಮನಾಭರಾವ್
ಒಂದು ಕಾಲದಲ್ಲಿ ಕೊಡಗು ಒಂದು ಸ್ವತಂತ್ರ ಸಂಸ್ಥಾನವಾಗಿದ್ದು ಅಲ್ಲಿನ ಹಾಲೇರಿ ರಾಜ ಮನೆತನದವರು ಈ ರಾಜ್ಯವನ್ನು ಆಳುತ್ತಿದ್ದರು. ಅನಂತರದಲ್ಲಿ ಇದು ಒಂದು ಪ್ರತ್ಯೇಕ ರಾಜ್ಯವಾಗಿ 1956 ರಲ್ಲಿ ರಾಜ್ಯ ವಿಭಜನೆಯಾದಾಗ ಕರ್ನಾಟಕಕ್ಕೆ ಸೇರಿ ಈಗ ಒಂದು ಜಿಲ್ಲೆಯಾಗಿದೆ. ಸಂಪೂರ್ಣ ಆಂಗ್ಲಾಡಳಿತಕ್ಕೆ ಒಳಪಟ್ಟಿದ್ದ ಕೊಡಗು ಆಂಗ್ಲಾನುಕರಣೆಯನ್ನೇ ರೂಢಿಸಿಕೊಂಡಿತ್ತು. ಕನ್ನಡ ಸಂಸ್ಕೃತಿ-ಭಾಷಾಭಿಮಾನದ ಬಗ್ಗೆ ಅಂತಹ ಕಾಳಜಿಯಿರಲಿಲ್ಲ. ಅಂತಹ ಒಂದು ಸಂದರ್ಭದಲ್ಲಿ ಮೈಸೂರಿನ ಕುಟುಂಬವೊಂದು ಕೊಡಗಿಗೆ ವಲಸೆ ಹೋಯಿತು. ಅಲ್ಲಿಯೇ ನೆಲೆ ನಿಂತಿತು. ಇಂತಹ ಕುಟುಂಬದಿಂದ ಬಂದವರೇ ‘ಮೈ.ಶೇ. ಅನಂತಪದ್ಮನಾಭರಾಯರು’. ಹೆಸರಾಂತ ಸಾಹಿತಿ, ಗಮಕಿ. ಇವರ ಜನನ ದಿನಾಂಕ …
ಪೂರ್ತಿ ಓದಿ...