Tag Archives: ಕವಿರಾಜ ಮಾರ್ಗ

ಮಾರ್ಗಂವಿಚಾರಂ

ನೋಂದಾಯಿಸಿ | ರಹಸ್ಯಪದವನ್ನು ಮರೆತಿರೆ? ಕಣಜ ತಿಳಿಯಿರಿ ಕಣಜವನ್ನು ತುಂಬಿ! ಬರೆಯಲು ಆರಂಭಿಸಿ! ಕೀಲಿಮಣೆ ಸಹಾಯ ನಮ್ಮನ್ನು ಸಂಪರ್ಕಿಸಿ ಮಾಹಿತಿ ಬಳಕೆ ಸೂಚನೆ ಅಬಾಧ್ಯತೆ ಘೋಷಣೆ ಕನ್ನಡ ಬ್ಲಾಗ್ ಸೂಚಿ ಕಣಜವನ್ನು ಪಸರಿಸಿ ಕಣಜ > ಕನ್ನಡ > ಪ್ರಾಚೀನ ಕೃತಿಗಳು > ಕವಿರಾಜಮಾರ್ಗ > ಮಾರ್ಗಂವಿಚಾರಂ ಮಾರ್ಗಂವಿಚಾರಂ ಮಾರ್ಗಂವಿಚಾರಂ ಗೀತಿಕೆ || ಆಱದು ಪೀನಂ ಮಾರ್ಗ-ಗ[1]ತಿಯಂ ತ[2]ಱಸಲಲಾಗದಾರ್ಗಂ ಬಹು-ವಿಕಲ್ಪದೊಳ್ | ಕುಱತು ಪೂರ್ವ-ಶಾಸ್ತ್ರ-ಪ[3]ದವಿಯಂ ತೆೞೆದಿರೆ ಪೇೞ್ವೆನಿನಿಸಂ ಕನ್ನಡದೊಳ್ ||೪೬|| ೪೩. ಹೀಗಿರುವುದು “ಅನುಪ್ರಾಸ”. ಒಂದು ಪಾದಾಂತ್ಯದಲ್ಲಿ ಇಟ್ಟ ಅಕ್ಷರವನ್ನೇ ಮುಂದಿನ ಎಲ್ಲ ಪಾದಾಂತ್ಯಗಳಲ್ಲಿಯೂ …

ಪೂರ್ತಿ ಓದಿ...

ಸಮಬಂಧ-ಗುಣ

ಸಮ-ಬಂಧಮೆಂಬುದಕ್ಕುಂ ಸಮನಿಸಿ ಕಿ[1]ವಿಗೆಸಱ ಬಾ[2]ರದಾದಂ ಮಟ್ಟಂ | ಸಮೆದ ಪದದಾ ವಿಭೇದ-ಕ್ರಮಮೆರಡಕ್ಕುಂ ಮೃದು-ಸ್ಫುಟೋಕ್ತಿಯಿನ[3]ದಱಂ ||೪೬|| ಮೃದುತರ-ವರ್ಣಾನುಗಮಾಸ್ಪದ-ವಿರಚನೆಯೊಳಗೆ ತೋರ್ಪುದದು ಮೃದುಬಂಧಂ | ವಿದಿತ-ಸ್ಫುಟಾಕ್ಷರಾಧಿಕ-ಪದ-ವಿತಚಿತಮಪ್ಪುದಕ್ಕುಮಾ ಸ್ಫುಟಬಂಧಂ ||೫೭|| ದೊರೆಕೊಳೆ ನೋಡಿದನಾಯತ-ಕ[4]ರುಣಾಪಾಂಗದೊಳೆ ಲೋಲ-ಲೋಚನ-ಯುಗೆಯಂ | ಗುರು-ಜಘನ-ಪಯೋಧರ-ಯುಗ-ಭರ-ವಿಧುರೆಯನಾ ಧರಾಪತಿವಿಧು-ಮುಖೀಯಂ ||೫೮|| ೫೬. ಕಿವಿಗೆ ಎಡರುತೊಡರಾಗದಂತೆ ಮಟ್ಟಸವಾಗಿ ವಿರಚಿತವಾಗಿರುವ ಕಾವ್ಯ ಬಂಧವೇ ‘ಸಮ’ ಬಂಧ ಇದರಲ್ಲಿ ಎರಡು ಬಗೆಗಳು-(೧) ಮೃದೂಕ್ತಿ (೨) ಸ್ಫುಟೋಕ್ತಿ. *ಇಲ್ಲಿ – ಸೂಚಿತಪಾಠ- ‘(ಅಂದಂಬಟ್ಟಿಂ)’ ಎಂಬುದು ಪ್ರಕೃತೋಪಯೋಗಿಯಲ್ಲ. ಎಲ್ಲ ಗುಣಯೋಜನೆಯೂ ಅಂದವಾಗಿದ್ದೇ ಇರುತ್ತದೆ; ಅದು ಸಮಬಂಧದ ವೈಶಿಷ್ಟ್ಯವೇನೂ ಅಲ್ಲ. ‘ಮಟ್ಟ’ ಎಂದರೆ ಏರುತಗ್ಗಿಲ್ಲದ ಸಮತಲವೆಂಬರ್ಥ ಕನ್ನಡದಲ್ಲಿ ಪ್ರಸಿದ್ಧವಾಗಿಯೇ …

ಪೂರ್ತಿ ಓದಿ...

ಗಾಮ್ಯೋಕ್ತಿ

ಗೋಪಾಳ-ಬಾಳ-ಲಲನಾ-ಚಾಪಳ-ವಾಚಳ-ಕಿತವ-ಬಾಹ್ಲೀಕಾದಿ- | ವ್ಯಾಪಾರಮಗಳ್ ಗ್ರಾಮ್ಯಳಾಪಂಗಳ್ ಮಾರ್ಗ-ಯುಗಳ-ಪರಿಹಾರ್ಯಂಗಳ್ ||೮೨|| ೮೧. ಇದು ದಾಕ್ಷಿಣಾತ್ಯರ ಕವಿಮಾರ್ಗದಲ್ಲಿಯ ‘ಉದಾರ’ ಗುಣ. ಉದೀಚ್ಯ ಅಥವಾ ಉತ್ತರಮಾರ್ಗದವರು (ನಾನಾ) ವಿಶೇಷಣಸಹಿತವಾದ ಹೇಮಾಂಗದ, ಲೀಲಾಂಬುಜ, ವಿಚಿತ್ರಚಿತ್ರ ಇತ್ಯಾದಿಗಳನ್ನೇ (‘ಉದಾರ’)ವೆಂದು ಮೆಚ್ಚುವರು. *ಒಂದು ಶಬ್ದ ಸಾಕಾಗುವಂತಿರುವ ಸ್ಥಳದಲ್ಲಿಯೂ ಅದಕ್ಕೆ ಪರಿಪೋಷಾತಿಶಯವುಂಟಾಗುವುದೆಂಬ ಭಾವನೆಯಿಂದ ವಿಶೇಷಣವೊಂದನ್ನು ಸೇರಿಸಿಕೊಂಡೇ ಹೇಳುವುದು ಉತ್ತರಮಾರ್ಗದ ಲಕ್ಷಣ. ಉದಾಹರಣೆಗೆ, ‘ಅಂಗದ’ ಎಂದರೇ ಚಿನ್ನದ ತೋಳಬಂದಿ. ಆದರೂ ಔತ್ತರೇಯರು ‘ಹೇಮಾಂಗದ’ ಎಂದು ಸವಿಶೇಷಣವಾಗಿಯೇ ಅದನ್ನು ಹೇಳಿವರು. ‘ಅಂಬುಜ’ ಎಂದು ಸುಮ್ಮನೆ ಹೇಳುವ ಬದಲು ‘ಲೀಲಾಂಬುಜ’ ಎಂದೇ ವಿಶೇಷಣವನ್ನು ಕೂಡಿಸಿ ಹೇಳುವರು. ‘ಚಿತ್ರ’ ಎಂದು ಹೇಳಬೇಕಾದ …

ಪೂರ್ತಿ ಓದಿ...

ಕವಿರಾಜ ಮಾರ್ಗದ ರಸೋಚಿತ-ಗುಣವಿಶೇಷಗಳು

ಕವಿರಾಜ ಮಾರ್ಗದ ರಸೋಚಿತ-ಗುಣವಿಶೇಷಗಳು ಗೀತಿಕೆ || ಬಗೆದು ಮಾರ್ಗ-ದ್ವಿತಯ-ಗತಿಗಳಂ ಪ್ರ[1]ಗುಣ-ಗುಣ-ಗಣೋದಯರ್ಕಳ್ ವಿತರ್ಕದಿಂ | ಸೊಗಯಿಸುವಂತು ವಚನ-ರಚನೆಯಿಂ ನೆಗೞರೆ ಬೆರಸಿ ಪೇೞ್ಗೆ ರಸ-ವಿಶೇಷದೊಳ್ ||೯೮|| ಉತ್ಪಲಮಾಲೆ || ವೀರ-ರಸಂ ಸ್ಫುಟೋಕ್ತಿಯಿನುದಾರ- ಕರುಣಾ-ರಸಂ ಮೃದೂ- | ಚ್ಚಾರಣೆಯಿಂದಮದ್ಭುತ-ರಸಂ ನಿಬಿಡೋಕ್ತಿಗಳಿಂದಮಲ್ತೆ ಶೃಂ- | ಗಾರ-ರಸಂ ಸಮಂತು ಸುಕುಮಾರ-ತರೋಕ್ತಿಗಳಿಂ ಪ್ರಸನ್ನ-ಗಂ- ಭೀರ-ತರೋಕ್ತಿಯಿಂ ಪ್ರಕಟಮಕ್ಕೆ ರಸಂ ಸತತಂ ಪ್ರ[2]ಶಾಂತಮುಂ ||೯೯|| ೯೮. *ಉತ್ತರಮಾರ್ಗ ದಕ್ಷಿಣಮಾರ್ಗ ಎಂಬ* ಎರಡು ಮಾರ್ಗಗಳ ಪರಿಗಳನ್ನೂ ಗುಣಾತಿಶಯಸಮೇತರಾದ ಕವೀಶ್ವರರು ಚೆನ್ನಾಗಿ ಪರಾಮರ್ಶಿಸಿ, ಪದ ರಚನೆ ಸೊಗಯಿಸುವಹಾಗೆ (ವಿಶಿಷ್ಟ) ಗುಣಗಳನ್ನು ವಿಶಿಷ್ಟರಸಗಳಲ್ಲಿ ಬಳಸಿ ಹೇಳಬೇಕು. *ರಸವಿಶೇಷಗಳಿಗೆ ಗುಣವಿಶೇಷಗಳ ನಿರ್ದೇಶನ …

ಪೂರ್ತಿ ಓದಿ...

ಕವಿರಾಜ ಮಾರ್ಗದ ಗಾಮ್ಯೋಕ್ತಿ

ಕವಿರಾಜ ಮಾರ್ಗದ ಗಾಮ್ಯೋಕ್ತಿ ಗೋಪಾಳ-ಬಾಳ-ಲಲನಾ-ಚಾಪಳ-ವಾಚಳ-ಕಿತವ-ಬಾಹ್ಲೀಕಾದಿ- | ವ್ಯಾಪಾರಮಗಳ್ ಗ್ರಾಮ್ಯಳಾಪಂಗಳ್ ಮಾರ್ಗ-ಯುಗಳ-ಪರಿಹಾರ್ಯಂಗಳ್ ||೮೨|| ೮೧. ಇದು ದಾಕ್ಷಿಣಾತ್ಯರ ಕವಿಮಾರ್ಗದಲ್ಲಿಯ ‘ಉದಾರ’ ಗುಣ. ಉದೀಚ್ಯ ಅಥವಾ ಉತ್ತರಮಾರ್ಗದವರು (ನಾನಾ) ವಿಶೇಷಣಸಹಿತವಾದ ಹೇಮಾಂಗದ, ಲೀಲಾಂಬುಜ, ವಿಚಿತ್ರಚಿತ್ರ ಇತ್ಯಾದಿಗಳನ್ನೇ (‘ಉದಾರ’)ವೆಂದು ಮೆಚ್ಚುವರು. *ಒಂದು ಶಬ್ದ ಸಾಕಾಗುವಂತಿರುವ ಸ್ಥಳದಲ್ಲಿಯೂ ಅದಕ್ಕೆ ಪರಿಪೋಷಾತಿಶಯವುಂಟಾಗುವುದೆಂಬ ಭಾವನೆಯಿಂದ ವಿಶೇಷಣವೊಂದನ್ನು ಸೇರಿಸಿಕೊಂಡೇ ಹೇಳುವುದು ಉತ್ತರಮಾರ್ಗದ ಲಕ್ಷಣ. ಉದಾಹರಣೆಗೆ, ‘ಅಂಗದ’ ಎಂದರೇ ಚಿನ್ನದ ತೋಳಬಂದಿ. ಆದರೂ ಔತ್ತರೇಯರು ‘ಹೇಮಾಂಗದ’ ಎಂದು ಸವಿಶೇಷಣವಾಗಿಯೇ ಅದನ್ನು ಹೇಳಿವರು. ‘ಅಂಬುಜ’ ಎಂದು ಸುಮ್ಮನೆ ಹೇಳುವ ಬದಲು ‘ಲೀಲಾಂಬುಜ’ ಎಂದೇ ವಿಶೇಷಣವನ್ನು ಕೂಡಿಸಿ ಹೇಳುವರು. …

ಪೂರ್ತಿ ಓದಿ...

ಕವಿರಾಜ ಮಾರ್ಗದ ದುಷ್ಕರ-ಕಾಮ್ಯಬಂಧಗಳು

ಕವಿರಾಜ ಮಾರ್ಗದ ದುಷ್ಕರ-ಕಾಮ್ಯಬಂಧಗಳು ಶ್ಲೋಕ || ಗೋ[1]ಮೂತ್ರಿಕಂ ಸಯಮಕಂ ಪ್ರೇಮದಿಂ ಗೋಪಿತ-ಕ್ರಿಯಂ | ಶ್ರೀಮದರ್ಧ-ಭ್ರಮಂ ಚಕ್ರ-ನಾಮಂ ಮುರಜ-ಬಂಧಕಂ ||೧೧೨|| ೧೧೦. ‘ಭೂರಮಣಿಯ ಸಸ್ಯಸಂಪದದ ಸುಂದರಗುಣಾತಿಶಯಸಮೇತಳಾಗಿ ಅಧಿಕಶೋಭೆಯನ್ನು ತಳೆದಳು’ ಎಂಬುದು ದಕ್ಷಿಣಮಾರ್ಗ. ‘ಸಮುದ್ರವೆಂಬ ಒಡ್ಯಾಣದಿಂದ ಬಳಸಲ್ಪಟ್ಟ ನಡುವುಳ್ಳ ಭೂದೇವಿ ಅಧಿಕಶೋಭೆಯಿಂದ ಸೊಬಗುವಡೆಯಿತು’. ಎಂಬುದು ಉತ್ತರಾಪಥ. ಇಲ್ಲಿ ಮೊದಲ ಉದಾಹರಣೆಯಲ್ಲಿ ಭೂದೇವಿಯನ್ನು ಕುರಿತ ಕ್ರಿಯಾಪದ ಸ್ರೀಲಿಂಗದಲ್ಲಿದ್ದರೆ ಎರಡನೆಯ ಉದಾಹರಣೆಯಲ್ಲಿ ನಪುಂಸಕಲಿಂಗದಲ್ಲಿದೆ. ಇದೇ ಭೇದ. ಎರಡೂ ಸರಿಯೆ. ೧೧೧. ನಿರ್ಣಯವಾಗಿ ಹೀಗೆ ಮಾರ್ಗದ್ವಯದಲ್ಲಿಯೂ ಯೋಗ್ಯಪ್ರಯೋಗ ಯಾವುದೆಂಬುದರ ಬಗೆಗೆ ಒಂದಿಷ್ಟನ್ನು ದಿಗ್ದರ್ಶನಕ್ಕಾಗಿ ಹೇಳಿರುವೆನು. ಗುಣಾತಿಶಯವುಳ್ಳ ಕವಿಗಳು ಇದನ್ನು ಕಡೆಗಣಿಸದೆ ತಮಗೆ …

ಪೂರ್ತಿ ಓದಿ...

ಕವಿರಾಜ ಮಾರ್ಗದ ಉಪಸಂಹಾರ

ಉಪಸಂಹಾರ ಪುಷ್ಪಿತಾಗ್ರಾ ವೃತ್ತಂ || ಅತಿಶಯಧ[1]ವಳೋಪ+ನೀತಮಾರ್ಗೋ- ಚಿತ-ಗತಿ-ಭಾವಿತಮಾ[2]ರ್ಗಳಂಕ್ರಿಯಾರ್ಥಂ | ಚತುರ-ಕವಿ-ಜನಾನುಯಾತ-ಸಾರ ಸ್ವತ-ಗುಣದೊಳ್ ಬ[3]ಗೆದಂತೆ ಕೂಡಲಾರ್ಕುಂ ||೧೫೩|| ೧೫೩. ಯಾರಿಗೆ (ಆರ್ಗೆ+ಅಳಂಕ್ರಿಯಾರ್ಥಂ ಎಂದು ಪದಚ್ಛೇದ) ನೃಪತುಂಗೋಕ್ತವಾದ ಕ್ರಮದಿಂದ ಅಲಂಕಾರವಿಚಾರ ಪ್ರತೀತವಾಗಿದೆಯೋ, ಅವರು ಮಹಾಕವಿಗಳಿಂದ ಅನುಸೃತವಾದ ಸಾರಸ್ವತಗುಣದಲ್ಲಿ ಬೇಕಾದಂತೆ ಕೂಡಿಕೊಳ್ಳಬಲ್ಲವರಾಗುತ್ತಾರೆ. ಮಾಲಿನೀವೃತ್ತ || ಬುಧ-ಗುಣ-ಗಣನಾತೀತಾಂತರಂ ಶಬ್ದತತ್ತ್ವಾಂ- ಬುಧಿ-ವಿವಿಧ-ವಿಧಾನಾಳಂಕ್ರಿಯಾ-ವೀ[4]ಚಿಮಾಳಂ | ವಿಧುರ-ಗತಿ-ವಿಲೋಡ್ಯಂ ತಳ್ತು ನಿಲ್ತಪ್ಪುದಾ ವಾ | ಗಧಿಪ-ವಚನ-ಮಾಲಾ-ಪಾವನೀಯಂ ಗಭೀರಂ ||೧೫೪|| ಉತ್ತಲಮಾಲಾವೃತ್ತಂ || ಭಾವಿಸಿ ಶಬ್ದ-ತತ್ತ್ವ-ಸಮಯ-ಸ್ಥಿತಿಯಂ ಕುಱ[5]ತೊಂದಶೇಷಭಾ- ಷಾ-ವಿಷಯೋಕ್ತಿಯಂ ಬಗೆದುನೋಡಿ ಪುರಾಣ-ಕವಿ-ಪ್ರಭು-ಪ್ರಯೋ ಗಾವಿಳ-ಸದ್ಗುಣೋದಯಮನಾ[6]ಯ್ದವಱಂ ಸಮೆದೊಂದು ಕಾವ್ಯದಿಂ ಶ್ರೀವಿಜಯ-ಪ್ರಭೂತ-ಮುದಮಂ ತ[7]ನಗಾಗಿಸಿದೊಂ ಕವೀಶ್ವರಂ ||೧೫೫|| ೧೫೪. *ಇದು ಈ ಶಬ್ದಾಲಂಕಾರ …

ಪೂರ್ತಿ ಓದಿ...

ಕವಿರಾಜ ಮಾರ್ಗದ ಪೀಠಿಕೆ

ಕವಿರಾಜಮಾರ್ಗ ೧. ಪೀಠಿಕೆ ೨. ಪ್ರಥಮ-ಪರಿಚ್ಛೇದಂ – ದೋಷ್ಯಾ – ದೋಷಾನುವರ್ಣನ – ನಿರ್ಣಯಂ ೩. ದ್ವಿತೀಯ ಪರಿಚ್ಛೇದಂ – ಶಬ್ದಾಲಂಕಾರ – ವರ್ಣನ – ನಿರ್ಣಯಂ ೪. ತೃತೀಯ ಪರಿಚ್ಛೇದಂ – ಅರ್ಥಾಲಂಕಾರ ಪ್ರಕರಣಂ ೫. ಪದ್ಯಗಳ ಸೂಚಿ ೧. ಕವಿರಾಜಮಾರ್ಗದ ಹಸ್ತಪ್ರತಿಗಳು, ಮುದ್ರಿತ ಆವೃತ್ತಿಗಳು ಮತ್ತು ಅಧ್ಯಯನ ಗ್ರಂಥಗಳು : ಆಗಸ್ಟ್ ೧೮೯೭ ರಲ್ಲಿ ಕೆ. ಬಿ. ಪಾಠಕರು ಮೂರು ಹಸ್ತಪ್ರತಿಗಳ ಆಧಾರದಿಂದ ಕವಿರಾಜಮಾರ್ಗವನ್ನು ಮೊತ್ತಮೊದಲಿಗೆ ಸಂಪಾದಿಸಿ ಮುದ್ರಣಕ್ಕೆ ಕೊಟ್ಟರು. ಗ್ರಂಥವು ೧೮೯೮ ರಲ್ಲಿ ಬೆಂಗಳೂರು ಗೌರ‍್ನಮೆಂಟ್ ಸೆಂಟ್ರಲ್ ಪ್ರೆಸ್‌ನಲ್ಲಿ ಮುದ್ರಿತವಾಗಿ …

ಪೂರ್ತಿ ಓದಿ...