Tag Archives: ಕಲಾವಿದರು

ಬಿ. ವಿ. ಕಾರಂತ

B V Karanth

ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು.   ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕಾರಂತರು ಹೊಸ ಭಾಷ್ಯ ಬರೆದಂತಹವರು. ಬಾಬುಕೋಡಿ ವೆಂಕಟರಮಣ ಕಾರಂತರು ಜನಿಸಿದ್ದು ಸೆಪ್ಟೆಂಬರ್ 19, 1929ರಂದು ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ.   ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗನಾದ ವೆಂಕಟರಮಣನನ್ನು (ಬಿ.ವಿ.ಕಾರಂತ) ತಾಯಿ ಲಕ್ಷ್ಮಮ್ಮ ಕೊಂಡಾಟದಿಂದ’ ‘ಬೋಯಣ್ಣ’ಎಂದು ಕರೆಯುತ್ತಿದ್ದರು. ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು,  ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು,  ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, …

ಪೂರ್ತಿ ಓದಿ...

ಶ್ರೀರಂಗ

sriranga

ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ನಾಟಕಕಾರ, ಸಾಹಿತಿ ಮತ್ತು ಶ್ರೇಷ್ಠ ವಿದ್ವಾಂಸ ‘ಶ್ರೀರಂಗ’ ಎಂಬ ಕಾವ್ಯನಾಮಾಂಕಿತ ಮಹಾನ್ ಪ್ರತಿಭಾನ್ವಿತ ಆದ್ಯ ರಂಗಾಚಾರ್ಯರ ಜನ್ಮ ದಿನ ಸೆಪ್ಟಂಬರ್ 26. ಅವರು 1904ರಲ್ಲಿ ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು. ಪುಣೆಯಲ್ಲಿ ಬಿ.ಎ ವಿಧ್ಯಾಭ್ಯಾಸದ ನಂತರ, ಲಿಂಕನ್ ವಿಶ್ವವಿಧ್ಯಾಲಯದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕರ್ನಾಟಕ ಏಕೀಕರಣದಲ್ಲಿ ಶ್ರೀರಂಗರು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದರು. 1944ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ …

ಪೂರ್ತಿ ಓದಿ...

ಗುಬ್ಬಿ ವೀರಣ್ಣ

ಅಕ್ಟೋಬರ್ 18 ಕನ್ನಡ ರಂಗಭೂಮಿಯ ಮೇರುಸದೃಶರಾದ ಗುಬ್ಬಿ ವೀರಣ್ಣನವರ ಸಂಸ್ಮರಣಾ ದಿನವಾಗಿದೆ.  ಕನ್ನಡ ರಂಗಭೂಮಿಗೆ ಕಾಯಕಲ್ಪ ನೀಡಿ ಅದಕ್ಕೆ ಶ್ರೇಷ್ಠತೆಯನ್ನು ದೊರಕಿಸಿಕೊಟ್ಟದ್ದೇ ಅಲ್ಲದೆ, ಕನ್ನಡ ಚಲನಚಿತ್ರರಂಗಕ್ಕೂ ಮಹತ್ತರ ರೀತಿಯಲ್ಲಿ ಅಡಿಪಾಯ ಹಾಕಿದವರು ಗುಬ್ಬೀ ವೀರಣ್ಣನವರು.  ಕನ್ನಡ ರಂಗಭೂಮಿಯ ಸಿದ್ಧಿಪುರುಷರಿವರು. ವೀರಣ್ಣನವರು ಈಗ ತಾಲ್ಲೂಕು ಕೇಂದ್ರವೆನಿಸಿರುವ, ಅಂದು ಗ್ರಾಮವಾಗಿದ್ದ ಗುಬ್ಬಿಯಲ್ಲಿ 1890ರ ವರ್ಷದಲ್ಲಿ ಜನಿಸಿದರು.  ತಂದೆ ಹಂಪಣ್ಣನವರು ಮತ್ತು ತಾಯಿ ರುದ್ರಾಂಬೆಯವರು. ಕನ್ನಡ ರಂಗಭೂಮಿಯಲ್ಲಂತೂ ‘ಗುಬ್ಬಿ ಕಂಪೆನಿ’ಯದ್ದು ಆಚಂದ್ರಾರ್ಕ ಹೆಸರು.  ಈ  ‘ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ’ ಪ್ರಾರಂಭವಾದದ್ದು ಗುಬ್ಬಿ ವೀರಣ್ಣನವರು ಹುಟ್ಟಿದ್ದಕ್ಕೆ 6 …

ಪೂರ್ತಿ ಓದಿ...

ವೇಣುಗೋಪಾಲ ಕಾಸರಗೋಡು

Venugopala kasargod

ನೆರೆರಾಜ್ಯಕ್ಕೆ ಸೇರಿಹೋದ ಕನ್ನಡದ ಹೃದಯವುಳ್ಳ ಕಾಸರಗೋಡಿನಲ್ಲಿ ಕನ್ನಡದ ಉಸಿರನ್ನು ಜೀವಂತವಾಗಿಡಲು ನಿರಂತರ ಶ್ರಮಿಸಿದವರಲ್ಲಿ ವೇಣುಗೋಪಾಲ ಕಾಸರಗೋಡು ಒಬ್ಬ ಪ್ರಮುಖರು.  ಸಾಹಿತ್ಯ ಮತ್ತು  ರಂಗಭೂಮಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಹುಮುಖ ಪ್ರತಿಭೆಯ ವೇಣುಗೋಪಾಲರು  ಕಾಸರಗೋಡಿನ ಕಾರಡ್ಕದಲ್ಲಿ ನವೆಂಬರ್ 10, 1948ರ ವರ್ಷದಲ್ಲಿ ಜನಿಸಿದರು.  ತಂದೆ ಪೊನ್ನೆಪ್ಪಲ ನಾರಾಯಣ ಭಟ್ಟರು ಮತ್ತು  ತಾಯಿ ಅದಿತಿ. ವೇಣುಗೋಪಾಲ ಕಾಸರಗೋಡು ಅವರು ಕನ್ನಡದಲ್ಲಿ ಎಂ.ಎ. ಮತ್ತು ಎಂ.ಫಿಲ್. ಪದವಿಗಳನ್ನು ಗಳಿಸಿದ ನಂತರ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ 1972 ರಲ್ಲಿ ವೃತ್ತಿಯನ್ನಾರಂಭಿಸಿ 2004 ರಲ್ಲಿ ನಿವೃತ್ತರಾಗುವವರೆವಿಗೂ ಅದೇ ಕಾಲೇಜಿನಲ್ಲಿದ್ದರು. ಅವರು …

ಪೂರ್ತಿ ಓದಿ...

ಬಿ. ಜಯಮ್ಮ

Jayamma

ಬಿ. ಜಯಮ್ಮ ಕನ್ನಡ ರಂಗಭೂಮಿ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಾರಂಭಿಕ ದಶಕಗಳ ಬಹುದೊಡ್ಡ ಹೆಸರು.  ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದರಾದ ಬಿ. ಜಯಮ್ಮನವರು ನವೆಂಬರ್ 26, 1915ರ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ  ಜನಿಸಿದರು.  ತಂದೆ ಟಿ.ಎನ್. ಮಲ್ಲಪ್ಪನವರು. ತಾಯಿ ರಂಗ ಕಲಾವಿದೆ ಬಿ. ಕಮಲಮ್ಮನವರು. ತಂದೆ ಮಲ್ಲಪ್ಪನವರಿಗೆ ಮಗಳು ಎಂ.ಬಿ.ಬಿ.ಎಸ್ ಓದಿ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ಬಾಲಕಿ ಜಯಮ್ಮನಿಗದರೋ ಸಂಗೀತ, ನೃತ್ಯ, ನಾಟಕಗಳಲ್ಲಿ ಅಭಿರುಚಿ. ರಸಿಕ ಜನಾನಂದ ನಾಟಕ ಸಭಾ ಕಂಪನಿಯ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲಿ ನಟಿಸಿದ ಜಯಮ್ಮನವರು  ಸೀತಾಕಲ್ಯಾಣ ನಾಟಕದ …

ಪೂರ್ತಿ ಓದಿ...

ಕೆರೆಮನೆ ಮಹಾಬಲ ಹೆಗಡೆ

keremane mahabala hegde

ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದವರು ಮಹಾಬಲರ ಹೆಗಡೆ. ಮಹಾಬಲರು ಹುಟ್ಟಿದ್ದು ಜೂನ್ 30, 1927ರ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ.  ತಂದೆ ತಾಯಿ ಶ್ರೀರಾಮ ಹೆಗಡೆ ತಾಯಿ ಮಾದೇವಿ. ಮಹಾಬಲರು ಚಿತ್ರಾಪುರದ ಶ್ರೀಪಾದರಾಯರಿಂದ ಹಿಂದೂಸ್ಥಾನಿ ಸಂಗೀತದ ಪ್ರಾರಂಭಿಕ ಅಭ್ಯಾಸ ನಡೆಸಿದ ನಂತರದಲ್ಲಿ  ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಸಂಗೀತ ಶಿಕ್ಷಣ ಪಡೆದರು.  ಶಾಲೆಯಲ್ಲಿ ಕಲಿತದ್ದು  ನಾಲ್ಕನೇ ತರಗತಿಯವರೆಗೆ ಮಾತ್ರ. ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿ. ಅಪ್ಪಟ ತುಂಟ. ಪುಂಡಾಟ. ಆದರೆ ಚಿಕ್ಕಪ್ಪ ಕೆರೆಮನೆ ಶಿವರಾಮ …

ಪೂರ್ತಿ ಓದಿ...

ಇಡಗುಂಜಿ ಕೃಷ್ಣ ಯಾಜಿ

krishnayaji

ವೇಷಧಾರಿಯಾಗಿ ಯಕ್ಷ ರಂಗಕ್ಕೆ ಕಾಲಿಟ್ಟ ಇಡಗುಂಜಿ ಕೃಷ್ಣ ಯಾಜಿ ನಂತರದಲ್ಲಿ ಹೆಸರು ಮಾಡಿದ್ದು ಚಂಡೆ ವಾದಕರಾಗಿ. 40 ವರ್ಷಗಳಿಂದ ಚಂಡೆ ವಾದಕರಾಗಿದ್ದರೂ ‘ಸಾಧನೆ ಸಾಲದು’ ಎಂಬ ಭಾವ ಅವರದು. ಈ ಸಾಧಕರನ್ನು ಬೆಂಗಳೂರಿನಲ್ಲಿ ನಾಳೆ ಸನ್ಮಾನಿಸಲಾಗುತ್ತಿದೆ. ಯಕ್ಷ ರಂಗವನ್ನು ಪ್ರವೇಶಿಸಿದ್ದು ವೇಷಧಾರಿಯಾಗಿ. ಶುರುವಾದದ್ದು ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷದಿಂದ. ನಂತರ ಸುಬ್ರಹ್ಮಣ್ಯ, ಚಂದ್ರಹಾಸ, ಅಭಿಮನ್ಯು, ಅರ್ಜುನ ಮುಂತಾದ ವೇಷಗಳು ಬರಲಾರಂಭಿಸಿದವು. ಇದ್ದಕ್ಕಿದ್ದಂತೆ ತಿರುವು ಪಡೆದ ಕಲಾಜೀವನ ಅವರನ್ನು ಬಡಗುತಿಟ್ಟಿನ ಖ್ಯಾತ ಚಂಡೆ ವಾದಕರನ್ನಾಗಿ ರೂಪಿಸಿತು. ಹೊನ್ನಾವರ ತಾಲೂಕಿನ ಇಡಗುಂಜಿಯ ಕೃಷ್ಣ ಯಾಜಿ ಅವರದು …

ಪೂರ್ತಿ ಓದಿ...

ಕೆರೆಮನೆ ಶಿವರಾಮ ಹೆಗಡೆ

ಅದು ಸೂರ್ಯೋದಯದ ಸಮಯ. ಶರಾವತಿ ನದಿ ದಂಡೆಯಲ್ಲಿ ನಿಂತು ಕಿಸೆಗೆಕೈಹಾಕಿದರೆ ಒಂದು ಪಾವಲಿಯೂ ಇಲ್ಲ. ಆ ಕಾಲದಲ್ಲಿ ಹೊಳೆ ದಾಟಲುದೋಣಿಯವನಿಗೆ ಒಂದಾಣೆ ಕೊಡಬೇಕಿತ್ತು. ಆ ವ್ಯಕ್ತಿ ಚಿಂತಿಸಲಿಲ್ಲ. ನೇರ ದುರ್ಗಾಕೇರಿಯ (ಹೊನ್ನಾವರ) ಕಾಸಿಂ ಸಾಹೇಬನ  ಬೀಡಿ ಅಂಗಡಿಗೆ ತೆರಳಿ ಬಾಗಿಲು ತಟ್ಟಿದ. ವಿಷಯ ತಿಳಿಸಿದಾಗ ಕಾಸಿಂ ದುಡ್ಡು ತೆಗೆದಿಟ್ಟ. ಸಾಮಾನ್ಯರಾಗಿದ್ದರೆ ಅದನ್ನು ಎತ್ತಿಕೊಂಡು ಹೊರಡುತ್ತಿದ್ದರು. ಆದರೆ ಹಣದ ಅಗತ್ಯವಿದ್ದವ ಅಪ್ಪಟ ಸ್ವಾಭಿಮಾನಿ. ಬ್ಯಾಡ್ವೋ ಸೈಬ. ಒಂದಾಣೆಯಷ್ಟು ಬೀಡಿ ಕಟ್ಟಿ ಕೊಡ್ತೇನೆ ಎಂದ. ಬೀಡಿ-ಗೀಡಿ ಏನೂ ಬ್ಯಾಡ ಮಾಣಿ, ರೊಕ್ಕ ತಗಂಡು ಹೋಗೆಂದು ಕಾಸಿಂ ಜಬರ್‌ದಸ್ತ್ …

ಪೂರ್ತಿ ಓದಿ...

ಮಲ್ಪೆ ರಾಮದಾಸ ಸಾಮಗ

malpe ramadasa saamaga

ಇಪ್ಪತ್ತನೇ ಶತಮಾನದ ಯಕ್ಷಗಾನ ಲೋಕ ಇಬ್ಬರು ಹಿರಿಯ ಕಲಾವಿದರನ್ನು ಕಂಡಿದೆ.   ಇವರಲ್ಲಿ  ದೊಡ್ಡ ಸಾಮಗ ಅಂದರೆ ಮಲ್ಪೆ ಶಂಕರನಾರಾಯಣ ಸಾಮಗ ಮತ್ತೊಬ್ಬರು ಸಣ್ಣ ಸಾಮಗರೆಂದೇ ಖ್ಯಾತರಾದ ಅವರ ತಮ್ಮ ಮಲ್ಪೆ ರಾಮದಾಸ ಸಾಮಗ. ದೊಡ್ಡ ಸಾಮಗರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕಲಾವಿದರಾಗಿ ಅಸಾಧಾರಣ ಕೊಡುಗೆಯನ್ನಿತ್ತು ಯಕ್ಷರಂಗವನ್ನು ಸುಮಾರು 4 ದಶಕಗಳ ಕಾಲ ಆಳಿ ಹೋದವರು.  ಸ್ವತಃ ಶೇಣೀ ಗೋಪಾಲಕೃಷ್ಣ ಭಟ್ಟರೂ ಕೂಡಾ ಅವರನ್ನು ‘ಗುರು’ ಎಂದೇ ಸಂಬೋಧಿಸುತ್ತಿದ್ದರು. ಅವರ ತಮ್ಮ ಸಣ್ಣ ಸಾಮಗರೋ ಶೇಣಿ ಅವರೊಂದಿಗಿನ ತಾಳಮದ್ದಲೆಗಳಿಗೆ ಒಳ್ಳೆಯ ಜೊತೆ.  ಈ ಪ್ರತಿಭಾವಂತ ಸಾಮಗ …

ಪೂರ್ತಿ ಓದಿ...

ಶೇಣಿ ಗೋಪಾಲಕೃಷ್ಣ ಭಟ್

ಯಕ್ಷಗಾನ ಕ್ಷೇತ್ರದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗಕರ್ತೃ, ಮೇಳದಯಜಮಾನ ಹೀಗೆ ಹಲವು ಹತ್ತು ಮುಖಗಳ ಪ್ರತಿಭೆಯ ಸಂಗಮರಾಗಿದ್ದ ಗೋಪಾಲಕೃಷ್ಣ ಭಟ್ಟರು  ಕಾಸರಗೋಡು ತಾಲ್ಲೂಕಿನ ಕುಂಬಳೆಯ ಎಡನಾಡುಗ್ರಾಮದಲ್ಲಿ ಏಪ್ರಿಲ್ 7, 1918ರಲ್ಲಿ ಜನಿಸಿದರು.  ತಂದೆ ನಾರಾಯಣಭಟ್ಟರು, ತಾಯಿ ಲಕ್ಷ್ಮೀಅಮ್ಮನವರು. ಗೋಪಾಲಕೃಷ್ಣ ಭಟ್ಟರು  ಮೂರು ವರ್ಷ ತುಂಬುವ ಮುನ್ನವೇ ಪಿತೃವಾತ್ಸಲ್ಯದಿಂದ ವಂಚಿತರಾದರು. ತಾಯಿ, ಅಜ್ಜಿಯ ಆಸರೆಯಲ್ಲಿ ಬದುಕು ನಡೆಯಿತು. ತಾಯಿ ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಭಾಗವತ ಗ್ರಂಥಗಳ ಸುಶ್ರಾವ್ಯ ಹಾಡುಗಾರ್ತಿ. ಭಟ್ಟರು ಬೇಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿದ್ದಾಗಲೇ ‘ಶ್ರೀ ಸುಬ್ರಹ್ಮಣ್ಯ ಕೃಪಾ ಪೋಷಿತ ನಾಟಕ’ ಮಂಡಲಿಯ …

ಪೂರ್ತಿ ಓದಿ...