Tag Archives: ಕಲಾವಿದರು

ದೇವಲಕುಂದ ವಾದಿರಾಜ್

Devalakunda Vaadiraj

ದೇವಲಕುಂದ ವಾದಿರಾಜ್ (೨೦-೩-೧೯೨೦ – ೨೨-೨-೧೯೯೩): ನಾಡುಕಂಡ ಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರೆನಿಸಿದ್ದಾರೆ. ಜೀವನ: ಸಾಂಪ್ರದಾಯಕ ಶಿಲ್ಪಕಲೆಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಗೌರವ ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ ಮಾರ್ಚ್ ೨೦, ೧೯೨೦ರಂದು ಜನಿಸಿದರು. ತಂದೆ ಸುಬ್ಬರಾಯಭಟ್ಟರದು ಅರ್ಚಕ ವೃತ್ತಿ, ತಾಯಿ ಲಕ್ಷ್ಮಮ್ಮನವರು. ತಂದೆಯ ಅಕಾಲ ಮರಣದಿಂದಾಗಿ. ಹರಿದು ತಿನ್ನುವ ಬಡತನ ಅವರ ಕುಟುಂಬಕ್ಕೆ ಪ್ರಾಪ್ತವಾಯಿತು. ತಾಯಿ ಲಕ್ಷಮ್ಮನವರು ಮಗ ವಾದಿರಾಜನೊಡನೆ ಮೈಸೂರು ಸೇರಿದರು. ಶಾಲೆಗೆ ಚಕ್ಕರ್ ಚಿತ್ರಕೆ ಹಾಜರ್: ಹುಡುಗನಿಗೋ ಶಾಲೆಗೆ ಚಕ್ಕರ್ ಹಾಕಿ ಚಿತ್ರ ಬಿಡಿಸುವಲ್ಲಿ ಆಸಕ್ತಿ. ಮುಂದೆ ತಾಯಿ ಮಗ …

ಪೂರ್ತಿ ಓದಿ...

ವಾಸುದೇವ ಗಿರಿಮಾಜಿ

Vaasudeva Girimaji

ವಾಸುದೇವ ಗಿರಿಮಾಜಿ (೧೯-೩-೧೯೧೨ – ೨೪-೮-೧೯೯೩): ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿದವರು. ಜೀವನ: ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧರಾದ ವಾಸುದೇವ ಗಿರಿಮಾಜಿ ಅವರು ಮಾರ್ಚ್ ೧೯, ೧೯೧೨ರ ವರ್ಷದಲ್ಲಿ ಜನಿಸಿದರು. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಗೌರಿನರಸಿಂಹಯ್ಯ, ಬಿ. ರಾಚಪ್ಪ, ಸಮುಖದ ಲಕ್ಷ್ಮೀಪತಿ ಶಾಸ್ತ್ರಿ, ಸೋಮಾಜಿರಾವ್ ಜೊತೆಗೆ ವಾಸುದೇವ ಗಿರಿಮಾಜಿ ಅವರೂ ಪ್ರಸಿದ್ಧರಾಗಿದ್ದರು. ತಂದೆ ಗೋವಿಂದರಾವ್ ಗಿರಿಮಾಜಿ ತಾಯಿ ತುಂಗಮ್ಮನವರು. ಸ್ವಯಂ ಕಲಾವಿದರು, ಕಲಾಪ್ರೇಮಿಗಳಾದ ತಂದೆಯೊಡನೆ ರಂಗ ತಾಲೀಮಿನ ಸ್ಥಳಕ್ಕೆ ಹೋಗುತ್ತಿದ್ದ ವಾಸುದೇವರಿಗೂ ರಂಗಭೂಮಿಯ ನಂಟು ಕೂಡಿಬಂತು. ಬಾಲನಟನಾಗಿ: …

ಪೂರ್ತಿ ಓದಿ...

ಜ್ಯೋತಿ ಜಿ. ಹೆಗಡೆ

Jyoti G Hegde

ಜ್ಯೋತಿ ಜಿ. ಹೆಗಡೆ (೧೭.೦೩.೧೯೬೩): ಪ್ರಪಂಚದ ಪ್ರಪ್ರಥಮ ರುದ್ರವೀಣಾ ವಾದಕಿ ಜ್ಯೋತಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಸತ್ಯನಾರಾಯಣ ದೇವಗುಡಿ, ತಾಯಿ ಶಾಂತಾ ದೇವಗುಡಿ. ಸಂಗೀತದಲ್ಲಿ ಎಂ.ಎ. ಪದವಿ. ಸಂಗೀತಾಭ್ಯಾಸ ಪ್ರಾರಂಭಿಸಿದ್ದು ಪಂ. ಬಿಂದುಮಾಧವ ಪಾಠಕ್ ರವರಲ್ಲಿ. ೧೫ ವರ್ಷಗಳ ನಿರಂತರ ಸಿತಾರ್ ಹಾಗೂ ರುದ್ರವೀಣಾ ಕಲಿಕೆ. ನಂತರ ಇಂದೂಧರ ನಿರೋಡಿಯವರಲ್ಲಿ ಧ್ರುಪದ್ ಶೈಲಿಯ ಅಭ್ಯಾಸ. ಜಗತ್ ಪ್ರಸಿದ್ಧ ರುದ್ರವೀಣಾ ವಾದಕರಾದ ದೆಹಲಿಯ ಉಸ್ತಾದ್ ಅಸದ್‌ಖಾನ್ ಮತ್ತು ಧ್ರುಪದ್ ಶೈಲಿಯ ಗಾಯಕರಾದ ಉಸ್ತಾದ್ ಫರೀದುದ್ದೀನ್ ಡಾಗರ್ ರವರಲ್ಲಿ ಮುಂದುವರಿಕೆ. ಹಿಂದೂಸ್ತಾನಿ ಸಂಗೀತವನ್ನು ರುದ್ರವೀಣೆಯಲ್ಲಿ ನುಡಿಸುವುದು ಕಷ್ಟದಾಯಕವಾದರೂ …

ಪೂರ್ತಿ ಓದಿ...

ಪುಟ್ಟರಾಜ ಗವಾಯಿ

Puttaraj Gawai

ಪುಟ್ಟರಾಜ ಗವಾಯಿ (೦೩.೦೩.೧೯೧೪): ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯ ಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ …

ಪೂರ್ತಿ ಓದಿ...

ಅ.ನ. ರಾಮಣ್ಣ

AN Ramanna

ಅ.ನ. ರಾಮಣ್ಣ (೦೨.೦೩.೧೯೪೦): ವೃತ್ತಿ ರಂಗಭೂಮಿಯಿಂದ ಹಿಡಿದು ಆಧುನಿಕ ನಾಟಕಗಳವರೆಗೆ ಹಲವಾರು ವಿಭಿನ್ನ ಪಾತ್ರಗಳ ಮೂಲಕ ರಂಗಭೂಮಿಗೆ ಕೊಡುಗೆ ನೀಡಿರುವ ರಾಮಣ್ಣ ಹುಟ್ಟಿದ್ದು ಮಂಡ್ಯ ಜಿಲ್ಲೆಗೆ ಸೇರಿದ ಹದಮಗೆರೆ ಗ್ರಾಮ. ತಂದೆ ನರಸಯ್ಯ, ತಾಯಿ ನರಸಮ್ಮ. ಓದಿದ್ದು ಎಸ್.ಎಸ್.ಎಲ್.ಸಿ., ಎಚ್.ಎ.ಎಲ್.ನಲ್ಲಿ ದೊರೆತ ಉದ್ಯೋಗ, ಹಳ್ಳಿಯಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳಿಂದ ಪಡೆದ ಪ್ರೇರಣೆ. ಸ್ಕೂಲಿನಲ್ಲಿದ್ದಾಗಲೇ ಸಣ್ಣ ಪುಟ್ಟ ಪಾತ್ರದಿಂದ ನಾಟಕದತ್ತ ವಾಲಿದ ಮನಸ್ಸು. ಕೆ.ಆರ್. ನಗರದ ಸಂತೆ ಸರಗೂರು ಅನಂತರಾಯರ ಕಲಾ ಪ್ರೋತ್ಸಾಹದಿಂದ ‘ರಾಯರ ಸೊಸೆ’ ಸಾಮಾಜಿಕ ನಾಟಕದಲ್ಲಿ ವಹಿಸಿದ ಪ್ರಮುಖ ಪಾತ್ರ. ಹೆಸರಾಂತ ಹರಿಕಥಾ …

ಪೂರ್ತಿ ಓದಿ...

ಆರ್.ಎಂ. ಹಡಪದ

RM Hadapada

ಆರ್.ಎಂ. ಹಡಪದ (೧-೩-೧೯೩೬ – ೨೦೦೩): ಸದಾ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯ ಅಭಿವ್ಯಕ್ತಿಯಾದ ಹಡಪದ ರವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾದಾಮಿ. ತಂದೆ ಮಲ್ಲಪ್ಪ, ತಾಯಿ ಬಸಮ್ಮ. ಕಲೆಯ ಬೀಡಾದ ಬಾದಾಮಿಯೇ ಬಾಲಕನ ಮೇಲೆ ಬೀರಿದ ಪ್ರಭಾವ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಚಿತ್ರ ಬರೆಯುವ ಗೀಳು. ಸ್ನೇಹಿತರ ಪಾಟಿಯ ಮೇಲೆ ಬಿಡಿಸುತ್ತಿದ್ದ ಚಿತ್ರಗಳು ಇವರ ಕಲೆಗೆ ನೀರೆರೆದ ಉಪಾಧ್ಯಾಯರು ಬಿರಾದಾರ. ಎಸ್.ಎಸ್.ಎಲ್.ಸಿ. ಮುಗಿಸಿ ಹುಬ್ಬಳ್ಳಿಯ ಕಲಾಶಾಲೆಯಿಂದ ಪಡೆದ ಶಿಕ್ಷಣ. ೧೯೬೧ರಲ್ಲಿ ಮಿಣಜಿಗಿಯವರು ಡ್ರಾಯಿಂಗ್ ಟೀಚರ್ಸ್ ಇನ್‌ಸ್ಟಿಟ್ಯೂಟನ್ನು ಬೆಂಗಳೂರಲ್ಲಿ ತೆರೆದಾಗ ಹಡಪದ ರವರು …

ಪೂರ್ತಿ ಓದಿ...

ಪ್ರಶಸ್ತಿ ಪುರಸ್ಕೃತರು

Karnataka State Awards

ಕರ್ನಾಟಕದ ವಿವಿಧ ಪ್ರಶಸ್ತಿಗಳ ಬಗೆಗಿನ ಲೇಖನಗಳು: ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು: ಎಂ. ಮರಿಯಪ್ಪ ಭಟ್ಟ | ಪ್ರೊ.ಜಿ.ವೆಂಕಟಸುಬ್ಬಯ್ಯ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು: ಎಸ್.ನಿಜಲಿಂಗಪ್ಪ | ಡಾ. ಸಿ. ಎನ್. ಆರ್. ರಾವ್ | ಭೀಮಸೇನ ಜೋಷಿ | ಡಾ.ರಾಜ್‌ಕುಮಾರ್ | ವೀರೇಂದ್ರ ಹೆಗ್ಗಡೆ | ಶ್ರೀ …

ಪೂರ್ತಿ ಓದಿ...

ಯಳಂದೂರು ತಾಲ್ಲೂಕು

ಯಳಂದೂರು ತಾಲ್ಲೂಕು: ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. ೧೦೧೮ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು. ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಹುನಗುಂದದ ಬಾದಾಮಿ ಚಾಲುಕ್ಯರ ಅವಶೇಷಗಳು

Hungunda

ವಿಜಾಪುರ ಜಿಲ್ಲೆಯ ಹುನಗುಂದ ನಗರದಲ್ಲಿ ರಾಮಲಿಂಗೇಶ್ವರ ದೇವಾಲಯದತ್ತ ಇತಿಹಾಸಕಾರರ ಗಮನವಿನ್ನೂ ಸೆಳೆದಿಲ್ಲ.[1] ಬಹುಪುರಾತನವಾದ ಈ ದೇವಾಲಯವನ್ನು ಇತ್ತೀಚೆ ಜೀರ್ಣೋದ್ಧಾರ ಮಾಡಿದ್ದರೂ ಅದಿನ್ನೂ ಹಾಳು ಸ್ಥಿತಿಯಲ್ಲಿ ಇದ್ದಂತೆ ಕಾಣುವುದು. ಒಳಹೊರ ಭಾಗಕ್ಕೆಲ್ಲ ಸುಣ್ಣ ಬಳಿಯಲಾಗಿರುವುದರಿಂದ ಅದರ ಕಲಾಸಂಪತ್ತೂ ಅಡಗಿಕೊಂಡುಬಿಟ್ಟಿದೆ. ಈ ದೇವಾಲಯದ ಸಭಾಮಂಟಪದ ಭುವನೇಶ್ವರಿಯಲ್ಲಿಯ ಶಾಸನವನ್ನು ಈ ಮೊದಲು ಗುರುತಿಸಿ, ಪ್ರಕಟಿಸಲಾಗಿದೆ(SII XI, Pt, I.,No.೧೧೩ of ೧೦೭೪). ಅರಸರ ಬಸದಿಗೆ ದತ್ತಿ ಕೊಟ್ಟ ಬಗ್ಗೆ ಇಲ್ಲಿ ಉಲ್ಲೇಖ ಬರುವುದರಿಂದ, ಈ ಶಾಸನಕ್ಕೂ ಮತ್ತು ರಾಮಲಿಂಗೇಶ್ವರ ದೇವಾಲಯಕ್ಕೂ ಸಂಬಂಧವಿಲ್ಲ ಎನ್ನುವ ಮಾತು ಸ್ಪಷ್ಟ. ದಿನಾಂಕ ೧೨-೨-೭೪ರಂದು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ನೆಲೆ, ಹಿನ್ನೆಲೆ

Baadami Chalukyaru

ಬಾದಾಮಿ : ನಾಮ ವಿವೇಚನೆ ಶಾಸನಗಳಲ್ಲಿ ಈ ಊರ ಹೆಸರು ವಾತಾಪಿ, ಬಾದಾಮಿ ಎಂಬ ರೂಪಗಳಲ್ಲಿವೆ. ಬಾದಾಮಿಯ ಉಲ್ಲೇಖವು ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಟೊಲೆಮಿ (ಸುಮಾರು ಕ್ರಿ.ಶ. ೧೫೦) ಬರೆದ A guide to geography ಎಂಬ ಪುಸ್ತಕದಲ್ಲಿ. ಆತ ಹೆಸರಿಸಿದ ದಕ್ಷಿಣ ಭಾರತದ ನಗರಗಳಲ್ಲಿ ಬದಿಯಮಯೋಯ್ (Badiamaioi) ಒಂದಾಗಿದೆ. ಇಂದಿನ ಬಾದಾಮಿಯೇ ಟೊಲೆಮಿ ಪ್ರಸ್ತಾಪಿಸಿದ ಬದಿಯಮಯೋಯ್ ಎಂದು ಮಕ್ರಿಂಡಲ್ ಅವರು ಗುರುತಿಸಿದ್ದಾರೆ.[1] ಇದರಿಂದ ಕ್ರಿ.ಶ. ೨ನೆಯ ಶತಮಾನದ ಮಧ್ಯದಲ್ಲಿ ಈ ಊರಿನ ಹೆಸರು ಬಾದಾಮಿ ಎಂದಿತ್ತೆಂದು ತಿಳಿಯುತ್ತದೆ ಮತ್ತು ಪುರಾಣ ಹಿನ್ನೆಲೆಯುಳ್ಳ ಈ …

ಪೂರ್ತಿ ಓದಿ...