Tag Archives: ಕಲಾವಿದರು

ಎಸ್.ಎಂ.ವೀರಭದ್ರಪ್ಪ

S M Veerabadrappa

ಎಸ್.ಎಂ.ವೀರಭದ್ರಪ್ಪ (೧೨.೪.೧೯೨೨ – ೨೭.೨-೧೯೬೬): ನಾಟಕ ರಂಗದ ಆತ್ಮೀಯರಲ್ಲಿ ’ಐನೋರು’ ಎಂದೇ ಪ್ರಸಿದ್ಧರಾಗಿದ್ದ ರಂಗಭೂಮಿಯ ನಟ ವೀರಭದ್ರಪ್ಪನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಮಾರನಾಯ್ಕನಹಳ್ಳಿ. ಬಾಲ್ಯದಿಂದಲೇ, ಹಳ್ಳಿಯಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳಿಂದ ಆಕರ್ಷಿತರಾಗಿ ಇಡೀ ರಾತ್ರಿ ಕುಳಿತು ವೀಕ್ಷಿಸುತ್ತಿದ್ದ ನಾಟಕಗಳು. ಅಭಿನಯ ಕಲೆ ಎಂದರೆ ಪಂಚಪ್ರಾಣ. ದೊಡ್ಡ ನಟನಾಗಬೇಕು. ಭೀಮ, ಘಟೋತ್ಕಜರಂತಹ ಪಾತ್ರ ಮಾಡಬೇಕೆಂಬ ಹಿರಿದಾದ ಆಸೆ. ಆದರೆ ನಾಟಕ ನಂಬಿ ಹೊಟ್ಟೆ ತುಂಬದೆಂದು ಆರಿಸಿಕೊಂಡಿದ್ದು ಶಿಕ್ಷಣ ಕ್ಷೇತ್ರ. ತುಮಕೂರಿನ ನಾರ್ಮಲ್ ಸ್ಕೂಲಿನಿಂದ ಪಡೆದ ವಿ.ಟಿ.ಸಿ ತರಬೇತಿ, ಚಿತ್ರದುರ್ಗದಲ್ಲಿ ಕೈಗೊಂಡ ಉಪಾಧ್ಯಾಯರ ವೃತ್ತಿ. ಆರುವರ್ಷಗಳ ಕಾಲ …

ಪೂರ್ತಿ ಓದಿ...

ಎಂ.ಶ್ರೀನಾಥ್ ಮರಾಠೆ

M Srinatha Marate

ಎಂ.ಶ್ರೀನಾಥ್ ಮರಾಠೆ (೧೯೪೪): ತಮ್ಮ ಸಿರಿಕಂಠದಿಂದ ಪ್ರಖ್ಯಾತರಾಗಿರುವ ಶ್ರೀನಾಥ ಮರಾಠೆಯವರು ಹುಟ್ಟಿದ್ದು ಕಾರ್ಕಳ ತಾಲ್ಲೂಕಿನ ಮಾಳ ಎಂಬಲ್ಲಿ. ತಂದೆ ಮಹಾದೇವ ಮರಾಠೆ, ತಾಯಿ ಅನ್ನಪೂರ್ಣ. ವಿದ್ಯಾಭ್ಯಾಸ ಹೈಸ್ಕೂಲು ವರೆಗೆ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಗಾಯನದತ್ತ ಬೆಳೆದ ಒಲವು ದೇವರ ನಾಮ ಹಾಡುಗಾರಿಕೆಯ ಹಲವಾರು ಸ್ಫರ್ಧೆಗಳಲ್ಲಿ ಬಹುಮಾನ ವಿಜೇತರು. ಇವರ ಸಂಗೀತದ ಆಸಕ್ತಿಗೆ ಪ್ರೋತ್ಸಾಹ ನೀಡಿದವರು ಎಚ್.ಗಣಪತಿಭಟ್‌ ಪಾಠಕ್ ಮತ್ತು ಡಿ. ವಿಶ್ವನಾಥ ಪಾಠಕ್‌ರವರು. ೧೬ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ ಪ್ರಾರಂಭ. ಕೆ.ವಿ. ಸುಬ್ರಹ್ಮಣ್ಯ ಅಯ್ಯರ್‌ ರವರಲ್ಲಿ ಗುರುಕುಲ ಪದ್ಧತಿಯಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮುಂದುವರೆದ ವಿದ್ಯಾಭ್ಯಾಸಕ್ಕಾಗಿ ಸೇರಿದ್ದು …

ಪೂರ್ತಿ ಓದಿ...

ಬಿ.ಆರ್‌.ಗೋವಿಂದಸ್ವಾಮಿ

BR Govindaswami

ಬಿ.ಆರ್‌.ಗೋವಿಂದಸ್ವಾಮಿ (೧೦.೪.೧೯೧೭ – ೨೫.೧.೧೯೬೬): ಸುಪ್ರಸಿದ್ಧ ಪಿಟೀಲು ವಿದ್ವಾಂಸರಾದ ಗೋವಿಂದಸ್ವಾಮಿಯವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ. ತಂದೆ ರಾಮಯ್ಯ. ತಾಯಿ ನಾಗಮ್ಮ. ತಂದೆ ಮೃದಂಗ ವಿದ್ವಾಂಸರಾಗಿದ್ದರೆ, ಚಿಕ್ಕಪ್ಪ ಕರ್ನಾಟಕ ಸಂಗೀತ ಗಾಯಕರು ಮತ್ತು ಪಿಟೀಲು ವಾದಕರು. ಸಂಗೀತಗಾರರ ವಂಶ. ಸಾಮಾನ್ಯ ವಿದ್ಯಾಭ್ಯಾಸಕ್ಕಿಂತ ಸಂಗೀತದ ಕಡೆಗೆ ಬೆಳೆದ ಹೆಚ್ಚು ಒಲವು. ಚಿಕ್ಕಪ್ಪನವರಿಂದಲೇ ಪಿಟೀಲು ಮೊದಲ ಪಾಠ, ನಂತರ ಮೃದಂಗ ವಿದ್ವಾನ್ ಎಚ್.ಪುಟ್ಟಚಾರಿಯವರಲ್ಲಿ ಮುಂದುವರೆದ ಸಂಗೀತ ಸಾಧನೆ. ಪಿಟೀಲು ವಾದನದಲ್ಲಿ ಗಳಿಸಿದ ಪ್ರಭುತ್ವ. ಪ್ರಸಿದ್ಧ ಗಾಯಕರಾದ ಬಿ.ಎಸ್.ಅಯ್ಯಂಗಾರ್‌ ಮತ್ತು ಮೃದಂಗ ವಿದ್ವಾನ್ ಪುಟ್ಟಚಾರಿಯವರೊಡನೆ ಕೈಗೊಂಡ ಭಾರತ ಪ್ರವಾಸ. ಸಿಕಿಂದರಾಬಾದ್, ಪುಣೆ, …

ಪೂರ್ತಿ ಓದಿ...

ಲಕ್ಷ್ಮೀ ಎನ್.ಮೂರ್ತಿ

Lakshmi Murthy

ಲಕ್ಷ್ಮೀ ಎನ್.ಮೂರ್ತಿ (೦೯.೦೪.೧೯೫೯): ಭರತನಾಟ್ಯ, ಸಂಗೀತ, ಯೋಗ, ಕ್ರೀಡೆ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಕಲೆಗಳ ಜೊತೆಗೆ ಅಬಲೆಯರ ಸ್ವಾವಲಂಬನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಡಿಯುತ್ತಿರುವ ಲಕ್ಷ್ಮಿಯರು ಹುಟ್ಟಿದ್ದು ಬೆಂಗಳೂರು. ತಂದೆ ಶ್ರೀಕಂಠಯ್ಯ, ತಾಯಿ ಗೌರಮ್ಮ, ಬಿ.ಎಂ.ಶ್ರೀಯವರ ಮೊಮ್ಮಗಳು. ಸಾಹಿತ್ಯ, ಕಲೆಗಳ ಬೀಡಾದ ಮನೆತನ. ಓದಿದ್ದು ಎಂ.ಎ. ಬಾಲ್ಯದಿಂದಲೂ ನೃತ್ಯದ ಬಗ್ಗೆ ಬೆಳೆದ ವಿಶೇಷ ಒಲವು. ಕಲಿತದ್ದು ಭರನತಾಟ್ಯ. ಬಿ.ಆರ್‌. ಅಲಮೇಲು ರವರಲ್ಲಿ ನೃತ್ಯಕಲಿಕೆ. ಯು.ಎಸ್.ಕೃಷ್ಣರಾವ್ ದಂಪತಿಗಳ ಶಿಷ್ಯೆಯಾಗಿ ಗುರುಕುಲ ಪದ್ಧತಿಯಲ್ಲಿ ಪಡೆದ ನೃತ್ಯಶಿಕ್ಷಣ. ಭರತನಾಟ್ಯದಲ್ಲಿ ವಿದ್ವತ್, ಸುಗಮಸಂಗೀತ, ಕೂಚುಪುಡಿ, ಯೋಗ, ನಟನೆ, ಚಿತ್ರಕಲೆ ಮುಂತಾದವುಗಳಲ್ಲಿ …

ಪೂರ್ತಿ ಓದಿ...

ಕುಮಾರ ಗಂಧರ್ವ

Kumara Gandharva

ಕುಮಾರ ಗಂಧರ್ವ (೦೮.೪.೧೯೨೪ – ೧೨.೧.೧೯೯೨): ಖ್ಯಾತ ಹಿಂದುಸ್ತಾನಿ ಗಾಯಕರು. ಜೀವನ: ಕುಮಾರ ಗಂಧರ್ವರ ಜನ್ಮನಾಮ ಶಿವಪುತ್ರ ಕೊಂಕಾಳಿಮಠ. ಇವರು ಏಪ್ರಿಲ್‌ ೮, ೧೯೨೪ರಂದು ಬೆಳಗಾವಿ ಜಿಲ್ಲೆಯ ಸೂಳಿಭಾವಿಯಲ್ಲಿ ಜನಿಸಿದರು. ಇವರದ್ದು ಬಾಲಪ್ರತಿಭೆ. ಇನ್ನೂ ದಟ್ಟಡಿ ಇಡುವಾಗ ಒಂದು ದಿನ ‘ನನಗೆ ಹಾಡಲು ಬರುತ್ತದೆ’ ಎಂದ ಬಾಲಕನಿಗೆ ಹಾಡಲು ಬಂದೇ ಬಿಟ್ಟಿತ್ತು. ತಂದೆ ಸಿದ್ಧರಾಮಯ್ಯ ಸ್ವತಃ ಸಂಗೀತಗಾರರಾಗಿದ್ದರು. ಸೋದರಮಾವ ಕಲ್ಲಯ್ಯಸ್ವಾಮಿ ಸಂಬರಗಿಮಠ ಶಿರಹಟ್ಟಿ ವೆಂಕೋಬರಾಯರ ನಾಟಕ ಕಂಪನಿ, ವಾಮನರಾವ ಮಾಸ್ತರರ ನಾಟಕ ಕಂಪನಿ ಮತ್ತು ಸೀಮೀಕೇರಿ ನಾಟಕ ಕಂಪನಿಗಳಲ್ಲಿ ಗಾಯಕ ನಟರಾಗಿದ್ದರು. ಅವರು ಕುಮಾರ …

ಪೂರ್ತಿ ಓದಿ...

ಶೇಣಿಗೋಪಾಲ ಕೃಷ್ಣಭಟ್

Sheni Gopalakrishna Bhat

ಶೇಣಿಗೋಪಾಲ ಕೃಷ್ಣಭಟ್ (೦೭-೪-೧೯೧೮ – ೧೮.೭.೨೦೦೬ ): ಯಕ್ಷಗಾನ ಕ್ಷೇತ್ರದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗಕರ್ತೃ, ಮೇಳದಯಜಮಾನ ಹೀಗೆ ಹಲವು ಹತ್ತು ಮುಖಗಳ ಪ್ರತಿಭೆಯ ಸಂಗಮವಾಗಿದ್ದ ಗೋಪಾಲಕೃಷ್ಣ ಭಟ್ ರವರು ಹುಟ್ಟಿದ್ದು ಕಾಸರಗೋಡು ತಾಲ್ಲೂಕಿನ ಕುಂಬಳೆಯ ಎಡನಾಡುಗ್ರಾಮದಲ್ಲಿ. ತಂದೆ ನಾರಾಯಣಭಟ್ಟ, ತಾಯಿ ಲಕ್ಷ್ಮೀಅಮ್ಮ. ಮೂರು ವರ್ಷ ತುಂಬುವ ಮುನ್ನವೇ ಪಿತೃವಾತ್ಸಲ್ಯದಿಂದ ವಂಚಿತರು. ತಾಯಿ, ಅಜ್ಜಿಯ ಆಸರೆ. ತಾಯಿ ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಭಾಗವತ ಗ್ರಂಥಗಳ ಸುಶ್ರಾವ್ಯ ಹಾಡುಗಾರ್ತಿ. ಬೇಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಆಗಲೇ ಶ್ರೀ ಸುಬ್ರಹ್ಮಣ್ಯ ಕೃಪಾ ಪೋಷಿತ ನಾಟಕ ಮಂಡಲಿಯ ಬಾಲನಟನಾಗಿ …

ಪೂರ್ತಿ ಓದಿ...

ಹು.ಮ. ರಾಮಾರಾಧ್ಯ

HM Ramaradya

ಹು.ಮ. ರಾಮಾರಾಧ್ಯ (೦೬.೦೪.೧೯೦೭ – ೨೦.೧೨.೧೯೭೩): ಗಮಕ ಕಲಾವಿದರಾದ ರಾಮಾರಾಧ್ಯರು ಹುಟ್ಟಿದ್ದು ನಂಜನಗೂಡಿನ ಬಳಿಯ ಹುಲ್ಲಹಳ್ಳಿ. ತಂದೆ ಮಲ್ಲಾರಾಧ್ಯ, ತಾಯಿ ಪಾರ್ವತಮ್ಮ. ಓದಿದ್ದು ಮೈಸೂರಿನಲ್ಲಿ. ಅಧ್ಯಾಪಕರಾಗಿ ಉದ್ಯೋಗಕ್ಕೆ ಸೇರಿದ್ದು ತಾಂಡವಪುರದಲ್ಲಿ. ಎಳೆವೆಯಿಂದಲೇ ನಾಟಕದ ಕಲೆಯಗೀಳು. ಹುಲ್ಲಹಳ್ಳಿಯ ’ದಿ ಅಸೋಸಿಯೇಟೆಡ್ ಡ್ರಾಮ್ಯಾಟಿಕ್ಸ್’ ಕಂಪನಿಯ ಕಾಳಿದಾಸ, ಸದಾರಮೆ, ಗುಲೇಬಕಾವಲಿ ಮೊದಲಾದ ನಾಟಕಗಳ ನಟ. ಸುಶ್ರಾವ್ಯ ಕಂಠದ ಹಾಡುಗಾರ. ಗುಬ್ಬಿಕಂಪನಿಯ ನಟರಾಗಿಯೂ ಹಲವಾರು ವರ್ಷ ಪಡೆದ ಅನುಭವ. ಕೆಲಕಾಲ ತಾಂಡವಪುರ, ರಾವದೂರು ಮುಂತಾದೆಡೆ ಪ್ರಾಥಮಿಕ ಶಾಲಾ ಅಧ್ಯಾಪಕರ ಉದ್ಯೋಗ. ಪಂಡಿತ್ ಪರೀಕ್ಷೆಗೆ ಕುಳಿತವರು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾದರು. ೧೯೪೨ರಲ್ಲಿ …

ಪೂರ್ತಿ ಓದಿ...

ಜಿ.ವಿ. ಹಿರೇಮಠ

G V Herimath

ಜಿ.ವಿ. ಹಿರೇಮಠ (೦೫.೦೪.೧೯೧೭): ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ’ರೇಡಿಯೊಕಾಕ’ ಎಂದೇ ಪ್ರಸಿದ್ಧರಾಗಿರುವ ಹಿರೇಮಠ ರವರು ಹುಟ್ಟಿದ್ದು ಗದಗುತಾಲ್ಲೂಕಿನ ಡಂಬಳದಲ್ಲಿ. ಪ್ರಾಥಮಿಕ ಶಿಕ್ಷಣ ಗದಗ್‌ನಲ್ಲಿ. ಸಂಸ್ಕೃತ ನಾಟಕ ಕುರುಕ್ಷೇತ್ರದಲ್ಲಿ ಪಾತ್ರವಹಿಸಿ ಪಡೆದರಂಗ ಪ್ರವೇಶ. ಪಂ.ಭೀಮಸೇನ ಜೋಶಿಯವರ ತಂದೆ ಗುರಾಚಾರ್ಯ ಜೋಶಿಯವರೇ ಇವರಿಗೆ ಸಂಸ್ಕೃತ ಕಲಿಸಿದ ಗುರುಗಳು. ಗಣೇಶನ ಹಬ್ಬ, ನವರಾತ್ರಿ, ಉಗಾದಿ ಹಬ್ಬ ಹುಣ್ಣಿಮೆ ದಿವಸಗಳಲ್ಲಿ ಯುವಕ ಯುವತಿಯರು ಗುಂಪುಕಟ್ಟಿ, ಅಂಗಡಿಗಳಿಂದ ಚಂದಾವಸೂಲುಮಾಡಿ ಮಾಡುತ್ತಿದ್ದ ‘ಕೋಲುಮೇಳ’. ಹವ್ಯಾಸಿಗುಂಪು ತಯಾರಿಸಿ ಆಡುತ್ತಿದ್ದ ನಾಟಕಗಳು. ನವಜೀವನ ನಾಟಕದಿಂದ ಬಂದ ಖ್ಯಾತಿ. ವೃತ್ತಿರಂಗಭೂಮಿಯಿಂದ ಬಂದ ಆಹ್ವಾನ. ಮಹಮದ್ ಪೀರ್‌ರವರ ’ಸಂಸಾರನೌಕ’, …

ಪೂರ್ತಿ ಓದಿ...

ಎಂ.ಎನ್.ಗಂಗಾಧರ ರಾಯರು

MN Gangadhararayaru

ಎಂ.ಎನ್.ಗಂಗಾಧರ ರಾಯರು (೦೩.೪.೧೮೮೮ – ೧೨.೩.೧೯೬೧): ನಟಭಯಂಕರರೆನಿಸಿದ್ದ ವೃತ್ತಿ ರಂಗಭೂಮಿ ಕಲಾವಿದರಾದ ಗಂಗಾಧರರಾಯರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಗುಬ್ಬಿಯಲ್ಲಿ. ತಂದೆ ನರಸಿಂಹಯ್ಯ, ತಾಯಿ ಸಾಕಮ್ಮ. ವಿದ್ಯಾಭ್ಯಾಸ ಕೂಲಿಮಠದಲ್ಲಿ. ಅಕ್ಷರತಿದ್ದಿ ಮಗ್ಗಿ ಕಲಿತು, ಸ್ತೋತ್ರ ಕಂಠಪಾಠ ಮಾಡಿಕೊಂಡ ಬಾಲಕ. ಅಚ್ಚರಿಹುಟ್ಟಿಸುವ ದೇಹದಾರ್ಢ್ಯ. ದೊಡ್ಡಗಂಟಲು, ಪುಟ್ಟಭೀಮಸೇನ/ಭೋಜಯ್ಯ, ಹಳ್ಳಿಯವರು ಇಟ್ಟ ಹೆಸರು. ಕುಸ್ತಿಪಟ್ಟು, ವರಸೆಗಳನ್ನು ಕಲಿತು ಜಟ್ಟಿಯಂತಾದ ದೇಹ. ಭಜನೆ, ಸಂಗೀತ, ಹರಿಕಥೆ ನಾಟಕಗಳತ್ತ ಹರಿದ ಒಲವು. ನಾಟಕವೆಂದರೆ ಪಂಚಪ್ರಾಣ. ತುಮಕೂರಿನಲ್ಲಿ ಓದಿದ್ದು ಎಸ್.ಎಸ್.ಎಲ್‌.ಸಿ. ಮೂಕನ ಹಳ್ಳಿಯಲ್ಲಿ ತೆರೆದ ಪ್ರಾಥಮಿಕ ಶಾಲೆಯಲ್ಲಿ ದೊರೆತ ಉಪಾಧ್ಯಾಯರ ಹುದ್ದೆ. …

ಪೂರ್ತಿ ಓದಿ...

ಸಿ.ಎಸ್.ಉಷಾ

CS Usha

ಸಿ.ಎಸ್.ಉಷಾ (೦೨.೦೪.೧೯೫೭): ಪಿಟೀಲುವಾದಕರಾಗಿ ಖ್ಯಾತಿ ಪಡೆದಿರುವ ಉಷಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಿ.ಎಸ್.ಸುಂದರಮ್, ತಾಯಿ ಸೀತಾ, ತಾಯಿಯೇ ಸಂಗೀತದ ಮೊದಲ ಗುರು. ಓದಿದ್ದು ಬಿ.ಎಸ್ಸಿ. ಸಂಗೀತದಲ್ಲಿ ಆಸಕ್ತಿ ಹೊಂದಿ ಪಡೆದ ಎಂ.ಎ. ಪದವಿ. ಮೊದಲ ರ್ಯಾಂಕ್ ವಿದ್ಯಾರ್ಥಿನಿ. ಎಳೆತನದಲ್ಲಿ ಕಲಿತದ್ದು ಭರತನಾಟ್ಯವಾದರೂ ಗಾಯನ ಮತ್ತು ವಾದನದ ಕಡೆಗೆ ಸೆಳೆದ ಮನಸ್ಸು. ಪ್ರಾರಂಭಿಕ ಶಿಕ್ಷಣ ಸುಕನ್ಯ, ಭೀಮಾಚಾರ್‌, ಆರ್‌. ರಾಜಲಕ್ಷ್ಮಿ ಮತ್ತು ಎಸ್.ಶೇಷಗಿರಿರಾವ್‌ರವರಲ್ಲಿ. ಜ್ಯೂನಿಯರ್‌ ಮತ್ತು ಸೀನಿಯರ್‌ ಗ್ರೇಡ್‌ಗಳಲ್ಲಿ ರ್ಯಾಂಕ್‌ ವಿದ್ಯಾರ್ಥಿನಿ. ಮುಂದವರೆದ ಶಿಕ್ಷಣ ಕ್ಕಾಗಿ ಸೇರಿದ್ದು ಬೆಂಗಳೂರು ವಿಶ್ವವಿದ್ಯಾಲಯ ಪಿಟೀಲು ವಾದನ ಕಲಿಯಲು ಅರ್ಜಿ …

ಪೂರ್ತಿ ಓದಿ...