Tag Archives: ಕಲಾವಿದರು

ಕನ್ನೆಪ್ಪಾಡಿ ರಾಮಕೃಷ್ಣ

Kannapadi Ramakrishna

[sociallocker]ಕನ್ನೆಪ್ಪಾಡಿ ರಾಮಕೃಷ್ಣ (೨೯.೪.೧೯೨೫ – ೨೩.೭.೨೦೦೦): ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳಿಗೆ ಅಷ್ಟೇನೂ ಪ್ರಾಮುಖ್ಯತೆ ಇರದಿದ್ದಕಾಲದಲ್ಲೇ ’ಶಿಂಗಣ್ಣ’ ಎಂಬ ಕಾಲ್ಪನಿಕ ಹೆಸರುಕೊಟ್ಟು ವ್ಯಂಗ್ಯ ಚಿತ್ರ ರಚಿಸಿ ಹೆಸರು ಮಾಡಿದ ರಾಮಕೃಷ್ಣರು ಹುಟ್ಟಿದ್ದು ಪುತ್ತೂರು ಬಳಿ ಹಾರಾಡಿ. ತಂದೆ ಪರಮೇಶ್ವರ ಶಾಸ್ತ್ರಿ, ತಾಯಿ ಸತ್ಯ ಸತ್ಯಭಾಮಾ ದೇವಿ, ೧೯೪೩ ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ವ್ಯಂಗ್ಯ ಚಿತ್ರ ಕಲ್ಕತ್ತಾದಿಂದ ಹೊರಡುತ್ತಿದ್ದ ಓರಿಯಂಟ್ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿತ. ಓದಿದ್ದು ಕೈಗಾರಿಕಾ ರಸಾಯನ ಶಾಸ್ತ್ರದಲ್ಲಿ ಪದವಿ. ಸಾಬೂನು ತಯಾರಿಕಾ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮ. ಕಲಿತ ಪದವಿಗಳನ್ನು ಬದಿಗಿಟ್ಟು ಆಯ್ಕೆ …

ಪೂರ್ತಿ ಓದಿ...

ರಾಜಮ್ಮ ಕೇಶವಮೂರ್ತಿ

Rajammakeshavmurthy

ರಾಜಮ್ಮ ಕೇಶವಮೂರ್ತಿ (೨೮.೦೪.೧೯೨೯): ಕರ್ನಾಟಕ ಸಂಗೀತದ ಅಭಿನವ ಶಾರದೆ ಎಂದೇ ಪ್ರಸಿದ್ಧರಾಗಿರುವ ರಾಜಮ್ಮನವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ. ತಂದೆ ಲಕ್ಷ್ಮೀ ಕಾಂತಯ್ಯ, ತಾಯಿ ಗುಂಡಮ್ಮ, ಸರಕಾರಿ ಕೆಲಸದಲ್ಲಿದ್ದ ತಂದೆಗೆ ಭದ್ರಾವತಿಗೆ ವರ್ಗ. ಅಲ್ಲಿ ಆಸ್ಥಾನ ವಿದ್ವಾನ್ ದೇವೇಂದ್ರಪ್ಪ, ಬಿ. ಶೇಷಪ್ಪ, ರಾಮಾಜೋಯಿಸ್, ಕೆ.ಎಸ್. ರಾಮಚಂದ್ರನ್‌ರವರಲ್ಲಿ ಪ್ರಾರಂಭಿಕ ಶಿಕ್ಷಣ. ೧೯೪೭ ರಲ್ಲಿ ಸಂಗೀತದ ಸೀನಿಯರ್‌ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆ. [sociallocker]ಮದುವೆಯ ನಂತರ ಮೈಸೂರಿಗೆ ತೆರಳಿ ಆರ್‌.ಕೆ. ನಾರಾಯಣಸ್ವಾಮಿ, ಆರ್‌.ಕೆ. ಶ್ರೀಕಂಠನ್ ರವರಲ್ಲಿ ಪ್ರೌಢಶಿಕ್ಷಣ. ವಿದ್ವತ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ. ಉದ್ಯೋಗಕ್ಕೆ …

ಪೂರ್ತಿ ಓದಿ...

ಪದ್ಮಚರಣ್

Padmacharan

ಪದ್ಮಚರಣ್ (೨೧.೪.೧೯೨೦ – ೨೨.೭-೨೦೦೨): ಸುಗಮ ಸಂಗೀತ ಕ್ಷೇತ್ರದ ಹರಿಕಾರರಾದ ಎ.ವಿ.ಕೃಷ್ಣಮಾಚಾರ್ಯರು (ಪದ್ಮಚರಣ್)ರು ಹುಟ್ಟಿದ್ದು ಚಿತ್ತೂರು ಜಿಲ್ಲೆಯ ಮದನ ಪಲ್ಲಿ ತಾಲ್ಲೂಕಿನ ಬಡಿಕಾಯಲ ಪಲ್ಲೆ ಗ್ರಾಮದ ’ಗುತ್ತಿ’ ಎಂಬಲ್ಲಿ. ತಂದೆ ಆಸೂರಿ ವೀರರಾಘವಾಚಾರ್ಯಲು, ತಾಯಿ ಜಾನಕಮ್ಮ. ತಾಯಿಗೆ ಸೊಗಸಾದ ಕಂಠದ ಜೊತೆಗೆ ಸಂಗೀತದಲ್ಲಿ ಆಸಕ್ತಿ. ತಾಯಿ ಹಾಡುತ್ತಿದ್ದ ಹಾಡುಗಳನ್ನು ಕೇಳಿ ಕೇಳಿ ಹುಡುಗನ ಕಂಠದಿಂದಲೂ ಹೊಮ್ಮುತ್ತಿದ್ದ ಸುಮಧುರ ಸಂಗೀತ. ಎಂಟನೆಯ ವರ್ಷದಿಂದಲೇ ಸಂಗೀತ ಕಲಿಕೆ. ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮದ ಬಳಿ ಪಿಟೀಲು ಕಲಿಕೆ. ಹಲವಾರು ಭಾಷೆಗಳಲ್ಲಿ ಪಡೆದ ಪಾಂಡಿತ್ಯ. ಕನ್ನಡ, ಇಂಗ್ಲಿಷ್, ಸಂಸ್ಕೃತ, …

ಪೂರ್ತಿ ಓದಿ...

ಎಚ್. ಜಿ. ದತ್ತಾತ್ರೇಯ

HG Dattatreya

ಎಚ್. ಜಿ. ದತ್ತಾತ್ರೇಯ (೨೦.೦೪.೧೯೪೨) ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ನಟರಾಗಿ ಮಹಾನ್ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದವರಾಗಿದ್ದಾರೆ. ಜೀವನ: ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೆಯನವರು ಏಪ್ರಿಲ್ ೨೦, ೧೯೪೨ರಂದು ಚಿತ್ರದುರ್ಗದಲ್ಲಿ ಜನಿಸಿದರು. ಅವರ ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಓದಿದ್ದು ಎಂಜನಿಯರಿಂಗ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಎಂ.ಇ.ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್‌ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್‌ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ …

ಪೂರ್ತಿ ಓದಿ...

ಜಿ. ಚನ್ನಮ್ಮ

G Channamma

ಜಿ. ಚನ್ನಮ್ಮ (೧೯.೪.೧೯೧೩ – ೨೦.೧.೧೯೮೬): ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಸಬಲರಾಗಬೇಕೆಂದು ಅಪೇಕ್ಷಿಸಿ ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಚನ್ನಮ್ಮನವರು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ಸ್ವಾತಂತ್ಯ್ರ ಹೋರಾಟಗಾರರಾದ ಗೌಡಗೆರೆ ಮಡಿವಾಳಯ್ಯ ಗುರುಬಸವಯ್ಯ ನವರು. ತಾಯಿ ವೀಣಾವಾದಕಿ ರಾಜಮ್ಮ. ಸಾಮಾನ್ಯ ಶಿಕ್ಷಣ ಎಸ್.ಎಸ್.ಎಲ್.ಸಿ. ವರೆಗೆ. ಬಾಲ್ಯದಿಂದಲೇ ಮೂಡಿದ ಸಂಗೀತಾಸಕ್ತಿ. ಸರಕಾರದ ವಿದ್ಯಾರ್ಥಿ ವೇತನ ಪಡೆದು, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಚಿದಂಬರಂಗೆ ಹೋಗಿ ಪ್ರೊಫೆಸರ್‌ ಪೊನ್ನಯ್ಯ ಪಿಳ್ಳೆಯವರಲ್ಲಿ ಕಲಿತ ಉನ್ನತ ಸಂಗೀತ ಶಿಕ್ಷಣ. ಅಂದಿನ ಕಾಲದಲ್ಲೇ ಏಕಾಂಗಿಯಾಗಿ ಹೊರನಾಡಿಗೆ ಹೋಗಿ ಕಲಿತ ದಿಟ್ಟ ಹುಡುಗಿ. ತಮಿಳುನಾಡಿನಿಂದ ಹಿಂದಿರುಗಿ ಬಂದ …

ಪೂರ್ತಿ ಓದಿ...

ಕೆ.ಎಲ್.ನಾಗರಾಜಶಾಸ್ತ್ರಿ

ಕೆ.ಎಲ್.ನಾಗರಾಜಶಾಸ್ತ್ರಿ (೧೮.೦೪.೧೯೨೬): ಐವತ್ತು ವರ್ಷಗಳಿಂದಲೂ ರಂಗಭೂಮಿಯ ಕಲಾಸೇವೆಯಲ್ಲಿ ನಿರತರಾಗಿದ್ದು ಹಲವಾರು ವೃತ್ತಿ ರಂಗಭೂಮಿಯ ಸಂಸ್ಥೆಗಳಿಗೆ ನಾಟಕ ರಚನೆ, ವಾದ್ಯ ಸಂಗೀತದ ನೆರವು ನೀಡುತ್ತಾ ಬಂದಿರುವ ನಾಗರಾಜ ಶಾಸ್ತ್ರಿಗಳು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ. ತಂದೆ ಲಕ್ಷ್ಮಿ ನರಸಿಂಹ ಶಾಸ್ತ್ರಿಗಳು, ತಾಯಿ ಗೌರಮ್ಮ. ತಾಯಿಯಿಂದಲೇ ಸಂಗೀತದ ಪ್ರಥಮ ಪಾಠ. ಬೆಂಗಳೂರಿನ ಚಾಮರಾಜೇಂದ್ರ ಮಹಾಪಾಠ ಶಾಲೆಯಲ್ಲಿ ಆರು ವರ್ಷ ಕಾಲ ಸಂಸ್ಕೃತಾಧ್ಯಯನ ಮತ್ತು ವೇದಾಧ್ಯಯನ ಶಿಕ್ಷಣ. ಜೊತೆಗೆ ಪಿಟೀಲು ಮತ್ತು ಕೊಳಲು ವಾದನದ ಕಲಿಕೆ. ತಾವರೆಕೆರೆಯ ಮೃದಂಗ ವಿದ್ವಾನ್ ಸುಬ್ಬಯ್ಯ ಭಾಗವತರಿಂದ ಸಂಗೀತ …

ಪೂರ್ತಿ ಓದಿ...

ಬಸವಲಿಂಗಶಾಸ್ತ್ರಿ ಬಾಳೀಮಠ

ಬಸವಲಿಂಗಶಾಸ್ತ್ರಿ ಬಾಳೀಮಠ (೧೭.೦೪.೧೯೧೭): ಹಿರಿಯ ರಂಗ ಕಲಾವಿದರಾದ ಬ. ಶಿ. ಬಾಳೀಮಠ ರವರು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ. ತಂದೆ ಪುಟ್ಟಯ್ಯ ಚ.ಹಿರೇಮಠ. ತಾಯಿ ಪಾರ್ವತಮ್ಮ. ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ನಾಟಕಗಳತ್ತ ಒಲವು. ಶಾಲೆಯ ವಿಶೇಷ ಕಾರ್ಯಕ್ರಮಗಳಿಗೆಲ್ಲಾ ಚಿಕ್ಕ ಚಿಕ್ಕ ಏಕಾಂಕ ನಾಟಕಗಳನ್ನು ಬರೆದು ರಂಗದ ಮೇಲೆ ತಂದು ನಟರಾಗಿಯೂ ಗಳಿಸಿದ ಯಶಸ್ಸು. ’ದಾರಿ ದೀಪ’ ಎಂಬ ಕೈ ಬರಹದ ಪತ್ರಿಕೆಯ ಸಂಪಾದಕರಾಗಿ, ಹಲವಾರು ಸಹ ವಿದ್ಯಾರ್ಥಿಗಳಿಂದ ಬರೆಸಿ, ಬರೆದು ಪ್ರಕಟಿಸಿದ ಸಾಹಸಿ ವಿದ್ಯಾರ್ಥಿ. ಶಾಲೆಯ ಪಾಠಕ್ಕಿಂತ ಪುರಾಣ ಪ್ರವಚನಗಳನ್ನು ಕೇಳುವ, ನಾಟಕ ದೊಡ್ಡಾಟಗಳನ್ನು ನೋಡುವ …

ಪೂರ್ತಿ ಓದಿ...

ಎಂ.ಪ್ರಭಾಕರ್

M Prabhakar

ಎಂ.ಪ್ರಭಾಕರ್ (೧೫.೦೪.೧೯೨೨) ಕವನದ ಪ್ರತಿಯೊಂದು ಸಾಲನ್ನೂ ಆಸ್ವಾದಿಸಿ, ಅಂತರ್ಮುಖಿಯಾಗಿ ಹೃದಯದಾಳದಿಂದ ಹಾಡುವ ಗಾಯಕರಾದ ಪ್ರಭಾಕರ ರವರು ಹುಟ್ಟಿದ್ದು ಭಟ್ಕಳದಲ್ಲಿ. ತಂದೆ ಎಂ. ರಂಗರಾವ್, ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣಿತರು. ತಾಯಿ ಶಿಕ್ಷಕಿಯಾಗಿದ್ದ ಕಾವೇರಿ ಬಾಯಿ. ಕೀರ್ತನಕಾರ, ಸಂಗೀತಗಾರರ ಮನೆತನ. ಅಣ್ಣ ತಮ್ಮಂದಿರೆಲ್ಲರೂ ಒಂದಲ್ಲ ಒಂದು ರೀತಿ ಸಂಗೀತ ವಾದ್ಯದಲ್ಲಿ ಪರಿಣತರೆ. ಸಹೋದರಿಯರಾದ ಪಂಢರಿಬಾಯಿ, ಮೈನಾವತಿಯವರು ಚಿತ್ರಲೋಕದ ತಾರೆಯರು. ಸಂಚಾರಿ ನಾಟಕ ಮಂಡಳಿಯೊಂದು ಊರಿಗೆ ಬಂದಾಗ ಅದರೊಡನೆ ಸೇರಿ ರಂಗಗೀತೆಗಳು, ದೇವರ ನಾಮಗಳು, ಕೀರ್ತನೆಗಳನ್ನು ಹಾಡುತ್ತಾ ಊರೂರು ಸುತ್ತಿದರು. ಸುತ್ತಾಟ ಬೇಸರವೆನಿಸಿ ಒಂದು ರೀತಿ …

ಪೂರ್ತಿ ಓದಿ...

ಶಂಕರಗೌಡ ಬೆಟ್ಟದೂರು

B Shankaragowda Bettadur

ಶಂಕರಗೌಡ ಬೆಟ್ಟದೂರು (೧೪.೦೪.೧೯೨೮): ಕರ್ನಾಟಕದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು. ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಕೀರ್ತಿ ಶಂಕರಗೌಡ ಬೆಟ್ಟದೂರು ಅವರದ್ದು. ಜೀವನ: ಶಂಕರ ಗೌಡರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಏಪ್ರಿಲ್ ೧೪, ೧೯೨೮ರ ವರ್ಷದಲ್ಲಿ ಜನಿಸಿದರು. ಗುಲ್ಬರ್ಗದ ಸರಕಾರಿ ಪ್ರೌಢಶಾಲೆಯಲ್ಲಿ ಓದಿದ ನಂತರದಲ್ಲಿ ಮದರಾಸು, ಮುಂಬಯಿಗಳಲ್ಲಿ ತಮ್ಮ ಶಿಕ್ಷಣವನ್ನು ನಡೆಸಿದ ಶಂಕರಗೌಡರು ಮುಂಬೈನ ಚಿತ್ರಕಲಾ ಶಾಲೆ ಮತ್ತು ವಿಶ್ವಭಾರತಿ ಶಾಂತಿ ನಿಕೇತನಗಳಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದರು. ಶಾಂತಿನಿಕೇತನದಲ್ಲಿ ಅವರು ವಿಶ್ವದ ಶ್ರೇಷ್ಠ ಚಿತ್ರಗಾರರಲ್ಲೊಬ್ಬರಾದ …

ಪೂರ್ತಿ ಓದಿ...

ಭಾಗ್ಯಮೂರ್ತಿ

Bhagya Murthy

ಭಾಗ್ಯಮೂರ್ತಿ (೧೩.೦೪.೧೯೫೧): ಗಾನಕೋಗಿಲೆ ಎನಿಸಿರುವ ಭಾಗ್ಯಮೂರ್ತಿಯವರು ಹುಟ್ಟಿದ್ದು ಬೆಂಗಳೂರು. ತಂದೆ ಸುಬ್ರಹ್ಮಣ್ಯಶಾಸ್ತ್ರಿ, ತಾಯಿ ರಂಗನಾಯಕಮ್ಮ. ಬಿ.ಎಂ.ಎಸ್. ಮಹಿಳಾ ಕಾಲೇಜಿನಿಂದ ಪಡೆದ ಬಿ.ಎ. ಪದವಿ, ಸಾಂಪ್ರದಾಯಿಕ ಸಂಗೀತ ಪರಂಪರೆಯ ಮನೆತನ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಬೆಳೆದ ಆಸಕ್ತಿ. ಎಂ. ಪ್ರಭಾಕರ್‌ ರವರಲ್ಲಿ ಕರ್ನಾಟಕ ಹಾಗೂ ಸುಗಮ ಸಂಗೀತದಲ್ಲಿ ಪಡೆದ ಶಿಕ್ಷಣ. ನೃತ್ಯ ರಂಗ ಪ್ರವೇಶಗಳ ಹಲವಾರು ಕಾರ್ಯಕ್ರಮಗಳಲ್ಲಿ, ದೇವಾಲಯ ಉತ್ಸವಗಳಲ್ಲಿ ಪ್ರಧಾನ ಗಾಯಕಿಯಾಗಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗಾರ್ತಿಯರಾದ ಪದ್ಮಾ ಸುಬ್ರಹ್ಮಣ್ಯಂ, ಕೃಷ್ಣವೇಣಿ, ಶಾಂತಾ ಧನಂಜಯ ಮುಂತಾದವರ ನೃತ್ಯ ಕಾರ್ಯಕ್ರಮಗಳಿಗೆ ನೀಡಿದ ನೃತ್ಯ ಸಂಗೀತ. ಜಾನಪದ …

ಪೂರ್ತಿ ಓದಿ...