Tag Archives: ಕಲಾವಿದರು

ಕರ್ಣಾಟ ಭಾರತ ಕಥಾಮಂಜರಿ

Kumaravyasa

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. ಇದು ಮೂಲ ಮಹಾಭಾರತದ ಮೊದಲ 10 ಪರ್ವಗಳನ್ನು ಒಳಗೊಂಡಿದೆ. ಹತ್ತನೇ ಗದಾಪರ್ವದಲ್ಲಿ, ಕೆಲವೇ ಪದ್ಯಗಳಲ್ಲಿ ಧರ್ಮರಾಯನ ಪಟ್ಟಾಭಿಷೇಕದ ಕಥಾಭಾಗವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ. ಕುಮಾರವ್ಯಾಸನನ್ನು “ರೂಪಕಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಯಲಾಗಿದೆ. ಕುಮಾರವ್ಯಾಸ ಭಾರತ ಇದು ವೇದವ್ಯಾಸರಿಂದ ರಚಿತವಾದ ಮಹಾಭಾರತವನ್ನು ತನ್ನದೇ ಆದ ಶೈಲಿ ಮತ್ತು ಅಗತ್ಯ ಮಾರ್ಪಾಟಿನೊಂದಿಗೆ ಕನ್ನಡದಲ್ಲಿ ಭಾಮಿನಿಷಟ್ಪದಿ ಛಂದಸ್ಸಿನಲ್ಲಿ ಗದುಗಿನ ನಾರಣಪ್ಪನು ಬರೆದ ಕನ್ನಡ ನಾಡಿನ ಅತ್ಯಂತ ಜನಪ್ರಿಯ ಕಾವ್ಯ. ಇವನು …

ಪೂರ್ತಿ ಓದಿ...

ಎ.ವಿ. ಪ್ರಕಾಶ್‌

A V Prakasha

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, ತಾಯಿ ಶಂಕರಮ್ಮ. ತಂದೆಯಿಂದಲೇ ಸಂಗೀತದ ಮೊದಲ ಪಾಠ. ಟಿ.ಆರ್‌. ಕೃಷ್ಣಮೂರ್ತಿ, ಸಿ.ಎಂ. ಮಧುರಾನಾಥ್‌, ಎಂ.ಆರ್‌.ಕೃಷ್ಣ, ಪ್ರೊ.ರಾ. ವಿಶ್ವೇಶ್ವರನ್‌, ಡಾ. ಎನ್‌. ರಮಣಿ ಮುಂತಾದವರ ಬಳಿ ಕೊಳಲಿನ ಶಿಕ್ಷಣ. ಐದು ದಶಕಗಳಿಂದಲೂ ನಾಡಿನಾದ್ಯಂತ ನಡೆಸಿಕೊಡುತ್ತಿರುವ ಕೊಳಲುವಾದನ ಕಚೇರಿಗಳು. ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರ. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್‌, ಶ್ರೀಕೃಷ್ಣ ಗಾನಸಭಾ ಅಲ್ಲದೇ ಮೈಲಾಪುರ್‌, ಪೂನಾ, ಹೈದರಾಬಾದ್‌, ಶೃಂಗೇರಿ ಸಂಗೀತೋತ್ಸವ, ಸಾರ್ಕ್‌ಸಮ್ಮೇಳನ, ಮೈಸೂರು …

ಪೂರ್ತಿ ಓದಿ...

ಬಿ.ವಿ. ರಾಮಮೂರ್ತಿ

B V Ramamurthy

ಬಿ.ವಿ. ರಾಮಮೂರ್ತಿ (೧೪-೧೦-೧೯೩೩ – ೨೪-೩-೨೦೦೪) ಪ್ರಖ್ಯಾತ ವ್ಯಂಗ್ಯ ಚಿತ್ರಕಾರರಾದ ರಾಮಮೂರ್ತಿಯವರು ಹುಟ್ಟಿದ್ದು ಬೆಂಗಳೂರಿನ ರಾಣಾಸಿಂಗ್‌ ಪೇಟೆಯಲ್ಲಿ. ತಂದೆ ಗಿರಿಯಪ್ಪ, ತಾಯಿ ಹುಚ್ಚಮ್ಮ. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಬೆಳೆದ ಆಸಕ್ತಿ. ಮನೆಯ ಗೋಡೆಗಳೇ ಚಿತ್ರ ರಚನೆಯ ಕ್ಯಾನ್ವಾಸ್‌. ಓದಿದ್ದು ಬಿ.ಎಸ್ಸಿ. ವೃತ್ತಿಗಾಗಿ ಆಯ್ದುಕೊಂಡಿದ್ದು ವ್ಯಂಗ್ಯ ಚಿತ್ರರಚನೆಯ ಬದುಕು. ಆಂಗ್ಲ ವ್ಯಂಗ್ಯಚಿತ್ರಕಾರ ಡೇವಿಡ್‌ಲೋ ರವರಿಂದ ಪಡೆದ ಸ್ಫೂರ್ತಿ. ೧೯೫೦ ರಲ್ಲಿ ಶೇಷಪ್ಪನವರ ಕಿಡಿ ಪತ್ರಿಕೆಗಾಗಿ ಬಿಡಿಸಿದ ರಾಜಕೀಯ ವ್ಯಂಗ್ಯ ಚಿತ್ರಗಳು. ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಸಂಪದಕರಾಗಿದ್ದ ಪೋತನ್‌ ಜೋಸಫ್‌ವರರಿಂದ ನೇಮಕಗೊಂಡು ಉದ್ಯೋಗಿಯಾಗಿ ಸೇರಿದ್ದು ಡೆಕ್ಕನ್‌ ಹೆರಾಲ್ಡ್‌ ಬಳಗ. ಪ್ರಜಾವಾಣಿ, …

ಪೂರ್ತಿ ಓದಿ...

ಎಸ್.ಕೆ.ನಾಡಿಗ್‌

Sk Nadig

ಎಸ್.ಕೆ. ನಾಡಿಗ್‌ (೦೬.೦೫.೧೯೨೮): ವ್ಯಂಗ್ಯಚಿತ್ರದ ಮೂಲಕ ಹಾಸ್ಯದ ಹೊನಲನ್ನು ಹರಿಸುತ್ತಿರುವ ನಾಡಿಗ್‌ರವರು ಹುಟ್ಟಿದ್ದು ಶಿವಮೊಗ್ಗದಲ್ಲಿ. ತಂದೆ ಕೃಷ್ಣ ಸ್ವಾಮಿರಾವ್ ನಾಡಿಗ್, ತಾಯಿ ರಾಧಮ್ಮ, ಓದಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಮರ್ಸ್‌ ಪದವಿಗಾಗಿ. ಚಿಕ್ಕಂದಿನಿಂದಲೂ ಗೆರೆಗಳೊಡನೆ ಚೆಲ್ಲಾಟ, ತೋಚಿದ್ದು-ಗೀಚಿದ್ದು. ಕೊರವಂಜಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಆರ್‌.ಕೆ. ಲಕ್ಷ್ಮಣ್‌ರವರ ವ್ಯಂಗ್ಯ ಚಿತ್ರಗಳನ್ನ ನೋಡಿ ತಾನೂ ಏಕೆ ಬರೆಯಬಾರದೆಂಬ ಆಲೋಚನೆ. ೧೯೪೭ರಲ್ಲಿ ಮೊದಲ ವ್ಯಂಗ್ಯಚಿತ್ರ ಆಂಗ್ಲ ಪತ್ರಿಕೆ ಮಿನಿ ಮ್ಯಾಗ್‌ ನಲ್ಲಿ ಪ್ರಕಟಿತ. ಇದುವರೆವಿಗೂ ಬರೆದ ವ್ಯಂಗ್ಯ ಚಿತ್ರಗಳ ಸಂಖ್ಯೆ ಸುಮಾರು ೨೦ ಸಾವಿರಕ್ಕೂ ಹೆಚ್ಚು. [sociallocker]ಕೊರವಂಜಿ, ಪ್ರಜಾವಾಣಿ, ಜನಪ್ರಗತಿ, ಶಂಕರ್ಸ್‌ …

ಪೂರ್ತಿ ಓದಿ...

ಗೀತಾ ಬಾಲಸುಬ್ರಹ್ಮಣ್ಯಂ

Geetha Balasubramanyam

ಗೀತಾ ಬಾಲಸುಬ್ರಹ್ಮಣ್ಯಂ (೦೫.೦೫.೧೯೫೬): ಕೊಣನೂರಿನ ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನದಿಂದ ಬಂದ ಗೀತಾರವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ. ತಂದೆ ಸಂಗೀತ ವಿದ್ವಾಂಸರಾದ ರಾಮಕೃಷ್ಣಶಾಸ್ತ್ರಿಗಳು, ತಾಯಿ ವಾಗೀಶ್ವರಿ ಶಾಸ್ತ್ರಿ, ಪ್ರಸಿದ್ಧ ಲೇಖಕಿ. ಓದಿದ್ದು ಬಿ.ಎಸ್ಸಿ. ಸಂಗೀತಾಭಿರುಚಿಯಿಂದ ಪಡೆದದ್ದು ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿ ಮತ್ತು ಸೀನಿಯರ್‌ ಗ್ರೇಡ್ ಸಂಗೀತ, ಶೇಷಾದ್ರಿಪುರಂ ಬಾಲಕಿಯರ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ. [sociallocker]ಶಾಲಾ ಕಾಲೇಜು ದಿನಗಳಿಂದಲೂ ಬೆಂಗಳೂರು ಮೈಸೂರು, ತಿಪಟೂರು, ಚಿತ್ರದುರ್ಗ ಹೀಗೆ ಹಲವಾರು ಕಡೆ ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತ, ಭಾವಗೀತೆ, ಚಿತ್ರಗೀತೆಗಳ ಸ್ಪರ್ಧೆಯಲ್ಲಿ …

ಪೂರ್ತಿ ಓದಿ...

ಎಚ್.ಕೆ. ನರಸಿಂಹಮೂರ್ತಿ

HK Narasimhamurthy

ಎಚ್.ಕೆ. ನರಸಿಂಹಮೂರ್ತಿ (೦೪.೦೫.೧೯೪೬): ದೇಶದ ಅತ್ಯುತ್ತಮ ಪಿಟೀಲು ವಾದಕರೆನಿಸಿರುವ ನರಸಿಂಹ ಮೂರ್ತಿಯವರು ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ತಂದೆ ಎಚ್.ಎಸ್. ಕೃಷ್ಣಮೂರ್ತಿ, ಸ್ವಾತಂತ್ರ‍್ಯ ಹೋರಾಟಗಾರರು. ತಾಯಿ ಜಯಲಕ್ಷ್ಮಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ. ಸಂಗೀತದಲ್ಲಿ ಬೆಳೆದ ಒಲವು. ಕೇಶವಯ್ಯನವರಿಂದ ಕಲಿತ ಗಾಯನ ಮತ್ತು ಎಚ್.ಟಿ. ಪುಟ್ಟಸ್ವಾಮಯ್ಯ, ಎಚ್.ವಿ. ಕೃಷ್ಣನ್, ಎಂ.ಸಿ. ಪುಟ್ಟಸ್ವಾಮಯ್ಯ, ಟಿ.ಪುಟ್ಟಸ್ವಾಮಯ್ಯ, ಎ.ಕೆ.ಮುತ್ತಣ್ಣ ಇವರ ಬಳಿ ಕಲಿತದ್ದು ಗಾಯನ ಹಾಗೂ ಪಿಟೀಲು ವಾದನ. ಕರ್ನಾಟಕ ಸರಕಾರದ ಟೆಕ್ನಿಕಲ್ ಬೋರ್ಡ್‌‌ನಿಂದ ಸೀನಿಯರ್‌ ಮ್ಯೂಸಿಕ್, ಮದರಾಸಿನ ಸೆಂಟ್ರಲ್ ಕಾಲೇಜ್ ಆಫ್ ಮ್ಯೂಸಿಕ್ ನಿಂದ ಪ್ರಥಮ ದರ್ಜೆಯಲ್ಲಿ …

ಪೂರ್ತಿ ಓದಿ...

ಎಂ.ಎಸ್.ಜಯಮ್ಮ

MS Jayamma

ಎಂ.ಎಸ್.ಜಯಮ್ಮ (೦೩.೦೫.೧೯೨೫ – ೨೯.೦೬.೧೯೯೯): ಸಂಗೀತಕ್ಕಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಗುರುಕುಲ ಪದ್ಧತಿಯಲ್ಲಿ ಶಿಷ್ಯರನ್ನು ತಯಾರು ಮಾಡಿದ ಜಯಮ್ಮನವರು ಹುಟ್ಟಿದ್ದು ಮೈಸೂರು. ತಂದೆ ಎಂ. ಸುಬ್ಬರಾವ್, ತಾಯಿ ಸೀತಾಬಾಯಿ. ಓದಿದ್ದು ಪ್ರೌಢಶಾಲೆಯವರೆಗೆ. ತಮ್ಮ ಆರನೆಯ ವಯಸ್ಸಿನಿಂದಲೇ ಸಂಗೀತಾಭ್ಯಾಸ. ಸಂಗೀತ ವಿದುಷಿ ನೀಲಮ್ಮ ಕಡಾಂಬಿಯವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಸಂಗೀತ ಶಿಕ್ಷಣ. ವೀಣೆ ಸುಬ್ಬಣ್ಣನವರ ಶಿಷ್ಯೆಯಾಗಿ ಕಲಿತ ವೀಣಾವಾದನ. ನಾಟ್ಯವಿಶಾರದೆ ಅಕ್ಕಮ್ಮಣ್ಣಿಯವರಲ್ಲಿ ಮುಂದುವರೆದ ಸಂಗೀತ ಪಾಠ. ಆಸ್ಥಾನ ವಿದ್ವಾನ್ ತಿಟ್ಟಿಕೃಷ್ಣಯ್ಯಂಗಾರ್‌ರವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಪ್ರೌಢಶಿಕ್ಷಣ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿಯವರು ನಡೆಸುವ ಸಂಗೀತ ಪರೀಕ್ಷೆಯಲ್ಲಿ …

ಪೂರ್ತಿ ಓದಿ...

ಮಾಯಾರಾವ್

Maya Rao

ಮಾಯಾರಾವ್ (೦೨.೦೫.೧೯೨೮): ಕಥಕ್ ಶೈಲಿಯಲ್ಲಿ ಕರ್ನಾಟಕಕ್ಕೆ ಹೆಸರು ತಂದ ನೃತ್ಯಗಾರ್ತಿ ಮಾಯಾರಾವ್ ರವರು ಹುಟ್ಟಿದ್ದು. ಬೆಂಗಳೂರು. ತಂದೆ ಸಂಜೀವರಾವ್. ತಾಯಿ ಲಲಿತಾ ಬಾಯಿ. ಓದಿದ್ದು ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಬ್ಯಾಚುಲರ್‌ ಪದವಿ, ಸೆಂಟ್ರಲ್ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ. [sociallocker]ಆರರ ವಯಸ್ಸಿನಲ್ಲಿಯೇ ಪಂ. ರಾಮರಾವ್ ಹೊನ್ನಾವರ ರವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತದ ಶಿಕ್ಷಣ, ಸಂಪ್ರದಾಯದ ಮನೆತನದಲ್ಲಿ ಸಂಗೀತ ದೈನಂದಿನ ಹಾಡು-ಹಸೆಗೆ ಸೀಮಿತ. ಆದರೆ ನೃತ್ಯ ಕಲಿತದ್ದು ಆಕಸ್ಮಿಕ, ಕಥಕ್ ನೃತ್ಯಪಟು ಸೋಹನ್‌ಲಾಲ್ ಕರ್ನಾಟಕಕ್ಕೆ ಬಂದಾಗ ಇವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದು ಇವರ ಸೋದರಿಯರು ನೃತ್ಯ ಕಲಿಕೆಗಾರಂಭಿಸಿದಾಗ …

ಪೂರ್ತಿ ಓದಿ...

ಟಿ.ಆರ್‌. ಶ್ರೀನಾಥ್‌

TR Srinath

ಟಿ.ಆರ್‌. ಶ್ರೀನಾಥ್‌ (೦೧.೦೫.೧೯೫೮): ಪ್ರಖ್ಯಾತ ಕೊಳಲು ವಾದಕರಲ್ಲಿ ಒಬ್ಬರಾದ ಶ್ರೀನಾಥ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಟಿ.ಎನ್. ರಾಮಮೂರ್ತಿ, ತಾಯಿ ಕಮಲಮ್ಮ. ಓದಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದ ಆಹಾರ ಮತ್ತು ಸಂಶೋಧನಾ ಕೇಂದ್ರ (CFTRI) ದಿಂದ ಸ್ವರ್ಣಪದಕದೊಡನೆ ಪಡೆದ ಎಂ.ಎಸ್ಸಿ. ಪದವಿ. ಆಹಾರ ಸಂಶೋಧನಾ ವಿಭಾಗದಲ್ಲಿದ್ದ ಸಂಶೋಧನೆ ಮತ್ತು ಸಲಹೆಗಾರರು. [sociallocker]ಬಾಲ್ಯದಿಂದಲೂ ಸಂಗೀತದಲ್ಲಿ ಬೆಳೆದು ಬಂದ ಆಸಕ್ತಿಯಿಂದ ಕಲಿತದ್ದು ಕೊಳಲು. ಮೈಸೂರಿನ ಪ್ರಖ್ಯಾತ ಕೊಳಲು ವಾದಕರಾದ ಎ.ವಿ.ಪ್ರಕಾಶ್‌. ದಿಂಡಿಗಲ್ ಎಸ್.ವಿ.ನಟರಾಜನ್ ಮತ್ತು ಬಿ.ಎನ್. ಸುರೇಶ್‌ರವರಲ್ಲಿ ಕೊಳಲು ವಾದನ ಶಿಕ್ಷಣ ಮತ್ತು ರುದ್ರ ಪಟ್ಟಣದ ಆರ್‌.ಎನ್. ತ್ಯಾಗರಾಜನ್‌ರವರಲ್ಲಿ …

ಪೂರ್ತಿ ಓದಿ...

ಕೆ.ಎಸ್.ಹಡಪದ

KS Hadapada

ಕೆ.ಎಸ್.ಹಡಪದ (೩೦.೦೪.೧೯೩೨ – ೨೭.೧೦.೨೦೦೬): ತಬಲ ವಾದನದ ಮಾಂತ್ರಿಕರೆನಿಸಿದ್ದ ಕರವೀರಪ್ಪ ಶಿವಪ್ಪ ಹರಪದ ರವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ. ಸಂಗೀತ ಪರಂಪರೆಯ ಮನೆತನ. ಅಜ್ಜ ಚರ್ಮ ವಾದ್ಯ ನಿಪುಣರು, ತಂದೆ ಶಿವಪ್ಪ ಕರಡಿ ಮಜಲು ನುಡಿಸುವುದರಲ್ಲಿ ಪ್ರಖ್ಯಾತರು. [sociallocker]ತಬಲ ನುಡಿಸುವುದೆಂದರೆ ಬಾಲಕನಾಗಿದ್ದ ಹಡಪದರಿಗೆ ಸಂತಸದ ವಿಷಯ. ಸ್ಕೂಲಿಗೆ ಚಕ್ಕರ್‌ ಹೊಡೆದು ತಬಲ ನುಡಿಸುವುದನ್ನು ಕಂಡು, ತಬಲ ಕಲಿಕೆಗಾಗಿ ಸೇರಿಸಿದ್ದು ಗದಗಿನ ವೀರೇಶ್ವರ ಪುಣ್ಯಾಶ್ರಮ. ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಹತ್ತು ವರ್ಷಕ್ಕೂ ಮಿಕ್ಕು ತಬಲ ಕಲಿಕೆ. ತಬಲದಲ್ಲಿ ಉನ್ನತ …

ಪೂರ್ತಿ ಓದಿ...