ಕನ್ನಡ ವ್ಯಾಕರಣ ಪರಂಪರೆ: ಕನ್ನಡ ಭಾಷೆಯ ಲಭ್ಯ ಪ್ರಾಚೀನ ದಾಖಲೆಯೆಂದರೆ ಕ್ರಿ.ಶ. ಸುಮಾರು 450ರ ಹಲ್ಮಿಡಿ ಶಾಸನ. ಅದರ ನಂತರದಲ್ಲಿ ಹಲವಾರು ಶಾಸನಗಳು ಲಭ್ಯವಿದ್ದು ಕನ್ನಡ ಗದ್ಯಪದ್ಯಗಳ ಶ್ರೇಷ್ಠ ಮಾದರಿಗಳನ್ನು ನಮಗೆ ಪರಿಚಯಿಸು ತ್ತವೆ. ವ್ಯಾಕರಣದ ಕಟ್ಟುಪಾಡುಗಳನ್ನು ನಿಯತವಾಗಿ ಪಾಲಿಸುವ ಒಂದು ವ್ಯವಸ್ಥಿತ ಹಾಗೂ ಸಮೃದ್ಧ ಭಾಷೆಯಾಗಿ ಕನ್ನಡವು ಬೆಳೆದಿರುವುದನ್ನು ಇವುಗಳಲ್ಲಿ ಕಾಣುತ್ತೇವೆ. ಹೀಗಾಗಿ ಈ ಅವಧಿಯಲ್ಲಿ ಕನ್ನಡ ವ್ಯಾಕರಣಗಳು ಯಾವು ದಾದರೂ ರಚಿತವಾಗಿ ಬಳಕೆಯಲ್ಲಿದ್ದಿರಬಹುದೇ ಎಂಬ ಸಂಶಯ ಮೂಡಲು ಅವಕಾಶವಿದೆ. ಆದರೆ ಲಭ್ಯ ಕನ್ನಡ ಕೃತಿಗಳಲ್ಲಿ ಮೊದಲನೆಯದಾದ ‘ಕವಿರಾಜ ಮಾರ್ಗ’ದ (ಕ್ರಿ.ಶ. 850) …
ಪೂರ್ತಿ ಓದಿ...