Tag Archives: ಎಲ್. ಎಸ್. ಶೇಷಗಿರಿ ರಾವ್

ಭದ್ರಾಚಲ ರಾಮದಾಸರು

ರಾಮಾಯಣದ ಕಾಲದಿಂದಲೂ ನಮ್ಮ ಜನ ಶ್ರೀರಾಮನನ್ನು ದೇವರೆಂದು ನಂಬಿದ್ದಾರೆ. ಹಾಗೆ ನಂಬಿ ಆತನನ್ನು ಪೂಜಿಸುವ ರಾಮಭಕ್ತರನ್ನು ನಾವು ನಮ್ಮ ದೇಶದ ಎಲ್ಲ ಕಡೆಯಲ್ಲಿಯೂ ಕಾಣಬಹುದು. ನಂಬಿ ಕರೆದರೆ ದೇವರು ಬಂದೇ ಬರುತ್ತಾನೆ ಎಂದು ಸಾರುವ ಕಷ್ಟದಲ್ಲಿದ್ದ ಭಕ್ತರನ್ನು ಶ್ರೀರಾಮನು ಉದ್ಧಾರ ಮಾಡಿದ ಎಷ್ಟೋ ಕಥೆಗಳು ಪ್ರಚಾರದಲ್ಲಿವೆ. ಅಂತಹ ಕಥೆಗಳಲ್ಲಿ ಭದ್ರಾಚಲ ರಾಮದಾಸರ ಕಥೆಯೂ ಒಂದು. ಶ್ರೀ ರಾಮನ ಆಶಿರ್ವಾದ: “ಭದ್ರಾಚಲ” ಎಂದರೆ ಭದ್ರ, ಎಂಬ ಹೆಸರಿನ ಒಂದು ಪರ್ವತ ಎಂದು ಅರ್ಥ. ಈ ಪರ್ವತ ಆಂಧ್ರಪ್ರದೇಶದ ಖಮ್ಮಮ್ಮ ಜಿಲ್ಲೆಯಲ್ಲಿದೆ. ಅದರ ಪಕ್ಕದಲ್ಲಿ ಗೋದಾವರಿ ನದಿ ಹರಿಯುತ್ತದೆ. …

ಪೂರ್ತಿ ಓದಿ...

ಲವ ಕುಶ

ಶ್ರೀರಾಮಚ೦ದ್ರ, ಸೀತಾದೇವಿ – ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಕೇಳದವರಾರು? ತ೦ದೆಯ ಮಾತನ್ನು ಉಳಿಸುವುದಕ್ಕಾಗಿ ಶ್ರೀರಾಮಚ೦ದ್ರನು ರಾಜಪದವಿಯನ್ನು ಸಹ ತೊರೆದು ವನವಾಸವನ್ನು ಕೈಗೊ೦ಡ. ಹೂವಿನ೦ತೆ ಕೋಮಲೆಯಾದ ಸೀತಾದೇವಿ ತನ್ನ ಗ೦ಡನನ್ನು ನೆರಳಿನ೦ತೆ ಅನುಸರಿಸಿ ಅರಣ್ಯಕ್ಕೆ ಹೋದಳು. ಈ ಗ೦ಡ – ಹೆ೦ಡತಿಯರು ಬಾಳಿನ ಉದ್ದಕ್ಕೂ ಪಡಬಾರದ ಕಷ್ಟ ಸ೦ಕಟಗಳಿಗೆ ತುತ್ತಾದರು. ಆದರೂ ಅವರು ಧರ್ಮವನ್ನು ಬಿಡಲಿಲ್ಲ. ಇದರಿ೦ದಲೇ ಅವರು ನಮಗೆ ಆದರ್ಶರಾಗಿದ್ದಾರೆ. ಆ ಶ್ರೀರಾಮ – ಸೀತಾದೇವಿಯರ ಜೀವನ ಕಥೆಯೇ ‘ರಾಮಾಯಣ’, ಅದನ್ನು ‘ಸೀತಾಚರಿತ್ರೆ’ ಎ೦ದೂ ಕರೆಯುತ್ತಾರೆ. ರಾಮಾಯಣವನ್ನು ಮೊಟ್ಟಮೊದಲು ರಚಿಸಿದ ಕವಿ ವಾಲ್ಮೀಕಿ. …

ಪೂರ್ತಿ ಓದಿ...

ವಾಲ್ಮೀಕಿ

valmiki

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ. ಶ್ರೀರಾಮ, ಸೀತಾದೇವಿ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಯಾರು ಕೇಳಿಲ್ಲ? ಶ್ರೀರಾಮನವಮಿ ದೊಡ್ಡ ಹಬ್ಬ. ರಾಮೋತ್ಸವಗಳನ್ನು ನಡೆಸಿ ಶ್ರೀರಾಮ ಮತ್ತು ಸೀತೆಯರ ಕಥೆಯನ್ನು ಜನ ಮತ್ತೆ ಮತ್ತೆ ಕೇಳುತ್ತಾರೆ. ಅವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ಶ್ರೀರಾಮ ಮತ್ತು ಸೀತಾದೇವಿಯರ ಕಥೆಯೇ ರಾಮಾಯಣ. ಸ್ವಾರಸ್ಯವಾದ ಒಂದು ಸಂಗತಿ ಎಂದರೆ ಶ್ರೀ ರಾಮನೇ ರಾಮಾಯಣದ ಕಥೆಯನ್ನು ಕೇಳಿ ಸಂತೋಷಪಟ್ಟನು. ಅವನ ಮುಂದೆ ಆ ಕಥೆಯನ್ನು ಪದ್ಯರೂಪದಲ್ಲಿ ಇಂಪಾಗಿ ಹಾಡಿದವರು ಇಬ್ಬರು ಹುಡುಗರು …

ಪೂರ್ತಿ ಓದಿ...