Tag Archives: ಎಪ್ರಿಲ್

ಡಾ. ಮಲ್ಲಿಕಾಘಂಟಿ

Mallikaghanti

ಡಾ. ಮಲ್ಲಿಕಾಘಂಟಿ (೧೭-೪-೧೯೫೯): ಸ್ತ್ರೀವಾದಿ, ಮಹಿಳಾ ಹೋರಾಟಗಾರ್ತಿ, ಸ್ತ್ರೀಯರ ಸಾಮಾಜಿಕ ಸುಧಾರಣೆಗೋಸ್ಕರ ದುಡಿಯುತ್ತಿರುವ ಮಲ್ಲಿಕಾ ಘಂಟಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಅಗಸಬಾಳ ಗ್ರಾಮದಲ್ಲಿ. ತಂದೆ ಶಂಕರಪ್ಪ ಮತ್ತು ತಾಯಿ ಪಾರ್ವತಿಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ. ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ ಪಿ.ಯು.ವರೆಗೆ ವಿದ್ಯಾಭ್ಯಾಸ, ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ. ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ “ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ” ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಓದಿನ ಜೊತೆಗೆ ಸಾಹಿತ್ಯ ರಚನೆಯ ಹವ್ಯಾಸ. ವಿದ್ಯಾರ್ಥಿನಿಯಾಗಿದ್ದಾಗಲೇ …

ಪೂರ್ತಿ ಓದಿ...

ಆನಂದಕಂದ

Anandkanda

ಆನಂದಕಂದ (೧೬-೪-೧೯೦೦ – ೩೦-೧೦-೧೯೮೨): ಸಂಪಾದನೆ, ಸಂಶೋಧನೆಯಲ್ಲಿ ಶ್ರೇಷ್ಠರೆನಿಸಿದ ಆನಂದಕಂದರ ನಿಜನಾಮ ಬೆಟಗೇರಿ ಕೃಷ್ಣಶರ್ಮ. ಇವರು ಹುಟ್ಟಿದ್ದು ಗೋಕಾಕ ತಾಲ್ಲೂಕಿನ ಬೆಟಗೇರಿ. ತಂದೆ ಶ್ರೀನಿವಾಸರಾವ್, ತಾಯಿ ರಾಧಾಬಾಯಿ. ಪ್ರಾರಂಭಿಕ ಶಿಕ್ಷಣ ಬೆಟಗೇರಿಯಲ್ಲೇ. ಮುಲ್ಕಿ ಪರೀಕ ಪಾಸು ಮಾಡಿದ ನಂತರ ಪುಣೇಕರ ನರಸಿಂಹಾಚಾರ‍್ಯರಲ್ಲಿ ಶಿಷ್ಯತ್ವ. ೧೯೨೬ರಲ್ಲಿ ಬೆಂಗಳೂರಿನ ಆರ್ಯ ವಿದ್ಯಾಶಾಲೆಯ ಶಿಕ್ಷಕ ವೃತ್ತಿಯ ಹೊಣೆ. ಪುನಃ ಧಾರವಾಡಕ್ಕೆ ಹೋಗಿ ಗೆಳೆಯರ ಗುಂಪಿನ ಸಂಘಟನೆ. ಮನೋಹರ ಗ್ರಂಥಮಾಲೆಯ ಪ್ರಾರಂಭಕ್ಕೆ ಕಾರಣೀಭೂತರು. ೧೯೩೮ರಲ್ಲಿ ‘ಜಯಂತಿ’ ಪತ್ರಿಕೆ ಪ್ರಾರಂಭ. ಹಲವಾರು ಲೇಖಕರನ್ನು ಹುರಿದುಂಬಿಸಿ ಪತ್ರಿಕೆಗೆ ಬರೆಸಿದರು. ನೂರಾರು ಲೇಖಕರನ್ನು ಪತ್ರಿಕೆಯ …

ಪೂರ್ತಿ ಓದಿ...

ಡಾ. ಅಬ್ದುಲ್ ಹಮೀದ್

Abdul Hameed

ಡಾ. ಅಬ್ದುಲ್ ಹಮೀದ್ಕ (೧೫-೪-೧೯೩೭): ನ್ನಡ, ಹಿಂದಿ ಎರಡು ಭಾಷೆಯಲ್ಲೂ ಪ್ರಾವೀಣ್ಯತೆ ಗಳಿಸಿರುವ ಅಬ್ದುಲ್ ಹಮೀದ್‌ರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿ. ತಂದೆ ಮಹಮದ್ ಬುಡೇನ್ ಸಾಬ್, ತಾಯಿ ಮೆಹಬೂಬ್ ಬೀ. ಪ್ರಾರಂಭಿಕ ಶಿಕ್ಷಣ ಹಂದನಕೆರೆಯಲ್ಲಿ. ಹೈಸ್ಕೂಲು ಓದಿದ್ದು ತಿಪಟೂರಿನಲ್ಲಿ. ಇಂಟರ್ ಮೀಡಿಯೆಟ್ ಪಾಸು ಮಾಡಿದ್ದು ಭೂಪಾಲ್‌ನಲ್ಲಿ. ನಂತರ ಪದವಿ ಗಳಿಸಿದ್ದೆಲ್ಲ ಅಪಾರ. ಸ್ವ-ಅಧ್ಯಯನದಿಂದ ಬಾಹ್ಯ ವಿದ್ಯಾರ್ಥಿಯಾಗಿ ಸಾಸಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಮತ್ತು ಎಂ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್. ಪದವಿ. “ಸೂಫಿ ಪಥ …

ಪೂರ್ತಿ ಓದಿ...

ಎಂ.ಪ್ರಭಾಕರ್

M Prabhakar

ಎಂ.ಪ್ರಭಾಕರ್ (೧೫.೦೪.೧೯೨೨) ಕವನದ ಪ್ರತಿಯೊಂದು ಸಾಲನ್ನೂ ಆಸ್ವಾದಿಸಿ, ಅಂತರ್ಮುಖಿಯಾಗಿ ಹೃದಯದಾಳದಿಂದ ಹಾಡುವ ಗಾಯಕರಾದ ಪ್ರಭಾಕರ ರವರು ಹುಟ್ಟಿದ್ದು ಭಟ್ಕಳದಲ್ಲಿ. ತಂದೆ ಎಂ. ರಂಗರಾವ್, ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣಿತರು. ತಾಯಿ ಶಿಕ್ಷಕಿಯಾಗಿದ್ದ ಕಾವೇರಿ ಬಾಯಿ. ಕೀರ್ತನಕಾರ, ಸಂಗೀತಗಾರರ ಮನೆತನ. ಅಣ್ಣ ತಮ್ಮಂದಿರೆಲ್ಲರೂ ಒಂದಲ್ಲ ಒಂದು ರೀತಿ ಸಂಗೀತ ವಾದ್ಯದಲ್ಲಿ ಪರಿಣತರೆ. ಸಹೋದರಿಯರಾದ ಪಂಢರಿಬಾಯಿ, ಮೈನಾವತಿಯವರು ಚಿತ್ರಲೋಕದ ತಾರೆಯರು. ಸಂಚಾರಿ ನಾಟಕ ಮಂಡಳಿಯೊಂದು ಊರಿಗೆ ಬಂದಾಗ ಅದರೊಡನೆ ಸೇರಿ ರಂಗಗೀತೆಗಳು, ದೇವರ ನಾಮಗಳು, ಕೀರ್ತನೆಗಳನ್ನು ಹಾಡುತ್ತಾ ಊರೂರು ಸುತ್ತಿದರು. ಸುತ್ತಾಟ ಬೇಸರವೆನಿಸಿ ಒಂದು ರೀತಿ …

ಪೂರ್ತಿ ಓದಿ...

ಡಾ. ದೇವೇಂದ್ರಕುಮಾರ ಹಕಾರಿ

Devendrakumar Hakari

ಡಾ. ದೇವೇಂದ್ರಕುಮಾರ ಹಕಾರಿ (೧೪-೪-೧೯೩೧ – ೭-೪-೨೦೦೭): ಜೀವನಚರಿತ್ರೆ, ವಿಮರ್ಶೆ, ಕಾವ್ಯ, ಕಾದಂಬರಿ ಹೀಗೆ ಎಲ್ಲ ಪ್ರಕಾರದಲ್ಲಿಯೂ ಹೆಸರು ಗಳಿಸಿರುವ ಹಕಾರಿಯವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ತಂದೆ ಸಿದ್ದಪ್ಪ, ತಾಯಿ ಮಲ್ಲವ್ವ. ಪ್ರಾಥಮಿಕ ಶಿಕ್ಷಣ ಪಡೆದುದು ಹುಟ್ಟಿದೂರಿನಲ್ಲಿ. ಕಲೆ, ಸಂಸ್ಕೃತಿ, ನಾಟಕ, ವಿಜ್ಞಾನ ಎಲ್ಲದರಲ್ಲಿಯೂ ಕಲಿತು ಏಳನೆಯ ವರ್ಗಕ್ಕೆ ಸೇರಿದ್ದು ಗುಲಬರ್ಗಾದ ಉಸ್ಮಾನಿಯಾ ಹೈಸ್ಕೂಲು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಜಾನಪದ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ’ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ …

ಪೂರ್ತಿ ಓದಿ...

ವಿಜಯ ಸಾಸನೂರ

Vijaya Sasanur

ವಿಜಯ ಸಾಸನೂರ (೧೪.೪.೧೯೪೮ – ೦೧.೦೩.೨೦೦೧): ರೋಚಕ ಕಾದಂಬರಿಗಳನ್ನೂ ಧಾರಾವಾಹಿಯಾಗಿ ಪತ್ರಿಕೆಗಳಲ್ಲಿ ಪ್ರಕಟಿಸಿ ಕನ್ನಡ ಓದುಗರನ್ನು ಬೆಳೆಸುವುದರಲ್ಲಿ ಪ್ರಮುಖರಾಗಿದ್ದ ವಿಜಯಸಾಸನೂರರು ಹುಟ್ಟಿದ್ದು ವಿಜಾಪುರದಲ್ಲಿ ೧೯೪೮ ರ ಏಪ್ರಿಲ್‌ ೧೪ ರಂದು. ತಂದೆ ಬಿ.ಟಿ. ಸಾಸನೂರ, ಕನ್ನಡ ಖ್ಯಾತ ಪ್ರಾಧ್ಯಾಪಕರು, ಪ್ರಿನ್ಸಿಪಾಲರು, ಹಾಗೂ ಲೋಕಸೇವಾ ಆಯೋಗದ ಸದಸ್ಯರು ಆಗಿದ್ದರು. ತಾಯಿ ಸುಮಿತ್ರಾಬಾಯಿಯವರು ವಿದ್ಯಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರು. ಪ್ರಾರಂಭಿಕ ಶಿಕ್ಷಣ ವಿಜಾಪುರದಲ್ಲಿ. ಎಸ್‌.ಎಸ್‌.ಎಲ್‌.ಸಿ. ಯಲ್ಲಿ ೪ ನೆಯ ರ್ಯಾಂಕ್‌ ಪಡೆದ ವಿದ್ಯಾರ್ಥಿ. ಬೀದರ್‌ನ ಭೂಮರೆಡ್ಡಿ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ (೪ ನೇ ರ್ಯಾಂಕ್‌). ಮುಂಬಯಿ …

ಪೂರ್ತಿ ಓದಿ...

ಶಂಕರಗೌಡ ಬೆಟ್ಟದೂರು

B Shankaragowda Bettadur

ಶಂಕರಗೌಡ ಬೆಟ್ಟದೂರು (೧೪.೦೪.೧೯೨೮): ಕರ್ನಾಟಕದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು. ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಕೀರ್ತಿ ಶಂಕರಗೌಡ ಬೆಟ್ಟದೂರು ಅವರದ್ದು. ಜೀವನ: ಶಂಕರ ಗೌಡರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಏಪ್ರಿಲ್ ೧೪, ೧೯೨೮ರ ವರ್ಷದಲ್ಲಿ ಜನಿಸಿದರು. ಗುಲ್ಬರ್ಗದ ಸರಕಾರಿ ಪ್ರೌಢಶಾಲೆಯಲ್ಲಿ ಓದಿದ ನಂತರದಲ್ಲಿ ಮದರಾಸು, ಮುಂಬಯಿಗಳಲ್ಲಿ ತಮ್ಮ ಶಿಕ್ಷಣವನ್ನು ನಡೆಸಿದ ಶಂಕರಗೌಡರು ಮುಂಬೈನ ಚಿತ್ರಕಲಾ ಶಾಲೆ ಮತ್ತು ವಿಶ್ವಭಾರತಿ ಶಾಂತಿ ನಿಕೇತನಗಳಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದರು. ಶಾಂತಿನಿಕೇತನದಲ್ಲಿ ಅವರು ವಿಶ್ವದ ಶ್ರೇಷ್ಠ ಚಿತ್ರಗಾರರಲ್ಲೊಬ್ಬರಾದ …

ಪೂರ್ತಿ ಓದಿ...

ಭಾಗ್ಯಮೂರ್ತಿ

Bhagya Murthy

ಭಾಗ್ಯಮೂರ್ತಿ (೧೩.೦೪.೧೯೫೧): ಗಾನಕೋಗಿಲೆ ಎನಿಸಿರುವ ಭಾಗ್ಯಮೂರ್ತಿಯವರು ಹುಟ್ಟಿದ್ದು ಬೆಂಗಳೂರು. ತಂದೆ ಸುಬ್ರಹ್ಮಣ್ಯಶಾಸ್ತ್ರಿ, ತಾಯಿ ರಂಗನಾಯಕಮ್ಮ. ಬಿ.ಎಂ.ಎಸ್. ಮಹಿಳಾ ಕಾಲೇಜಿನಿಂದ ಪಡೆದ ಬಿ.ಎ. ಪದವಿ, ಸಾಂಪ್ರದಾಯಿಕ ಸಂಗೀತ ಪರಂಪರೆಯ ಮನೆತನ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಬೆಳೆದ ಆಸಕ್ತಿ. ಎಂ. ಪ್ರಭಾಕರ್‌ ರವರಲ್ಲಿ ಕರ್ನಾಟಕ ಹಾಗೂ ಸುಗಮ ಸಂಗೀತದಲ್ಲಿ ಪಡೆದ ಶಿಕ್ಷಣ. ನೃತ್ಯ ರಂಗ ಪ್ರವೇಶಗಳ ಹಲವಾರು ಕಾರ್ಯಕ್ರಮಗಳಲ್ಲಿ, ದೇವಾಲಯ ಉತ್ಸವಗಳಲ್ಲಿ ಪ್ರಧಾನ ಗಾಯಕಿಯಾಗಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗಾರ್ತಿಯರಾದ ಪದ್ಮಾ ಸುಬ್ರಹ್ಮಣ್ಯಂ, ಕೃಷ್ಣವೇಣಿ, ಶಾಂತಾ ಧನಂಜಯ ಮುಂತಾದವರ ನೃತ್ಯ ಕಾರ್ಯಕ್ರಮಗಳಿಗೆ ನೀಡಿದ ನೃತ್ಯ ಸಂಗೀತ. ಜಾನಪದ …

ಪೂರ್ತಿ ಓದಿ...

ಸುಜನಾ (ಎಸ್. ನಾರಾಯಣ ಶೆಟ್ಟಿ)

Sujana

ಸುಜನಾ (ಎಸ್. ನಾರಾಯಣ ಶೆಟ್ಟಿ) (೧೩-೪-೧೯೩೦): ಕಾವ್ಯ, ವಿಮರ್ಶೆ, ಅಧ್ಯಯನ ಮುಂತಾದ ಸೃಜನಾತ್ಮಕ ಸಾಹಿತ್ಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸುಜನಾ ನಾಮದ ಎಸ್. ನಾರಾಯಣಶೆಟ್ಟಿಯವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕೃಷ್ಣರಾಜ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ. ತಂದೆ ಸುಬ್ಬಯ್ಯಶೆಟ್ಟಿ, ತಾಯಿ ಗೌರಮ್ಮ. ಹೊಳೆ ನರಸೀಪುರ, ಬೆಂಗಳೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ. ಕುವೆಂಪು, ಡಿ.ಎಲ್.ಎನ್.ರವರ ಶಿಷ್ಯತ್ವದಿಂದ ಪ್ರಭಾವಿತರಾಗಿ ತಾವೂ ಅಧ್ಯಾಪಕರಾಗಬೇಕೆಂದು ಪಡೆದದ್ದು ಎಂ.ಎ. ಪದವಿ. ಉದ್ಯೋಗ ಪ್ರಾರಂಭಿಸಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಅಧ್ಯಾಪನದ ಜೊತೆಗೆ ರೂಢಿಸಿಕೊಂಡಿದ್ದು ಕಾವ್ಯರಚನೆ ಮತ್ತು ವಿಮರ್ಶೆ. ಗ್ರೀಕ್ ನಾಟಕಗಳ ಬಗ್ಗೆ ವಿಶೇಷ ಒಲವು. …

ಪೂರ್ತಿ ಓದಿ...

ಸೂರ್ಯನಾರಾಯಣ ಚಡಗ

Suryanarayana Chadaga

ಸೂರ್ಯನಾರಾಯಣ ಚಡಗ (೧೩.೦೪.೧೯೩೨ – ೧೪.೧೧.೨೦೦೬) : ತಾವು ಬರೆದಿದ್ದರ ಜೊತೆಗೆ ಉದಯೋನ್ಮುಖ ಬರಹಗಾರರ ಕೃತಿಗಳನ್ನೂ ಪ್ರಕಟಿಸಿ ಉತ್ತೇಜಿಸುತ್ತಾ, ಹಿರಿಯ ಸಾಹಿತಿಗಳನ್ನು ಸನ್ಮಾನಿಸಿ ಸಂಭ್ರಮಿಸುತ್ತಿದ್ದ ಸೂರ್ಯನಾರಾಯಣ ಚಡಗರು ಹುಟ್ಟಿದ್ದು ೧೯೩೨ ರ ಏಪ್ರಿಲ್‌ ೧೩ ರಂದು ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ. ತಂದೆ ನಾರಾಯಣ ಚಡಗ, ತಾಯಿ ಶೇಷಮ್ಮ. ಹುಟ್ಟಿದೂರಿನಲ್ಲಿಯೇ ಪ್ರಾರಂಭಿಕ ಶಿಕ್ಷಣ. ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ಮನೆಯಲ್ಲಿ ಇದ್ದ ಭಾವನವರು ಕವಿ ಮುದ್ದಣನ ರಾಮೇಶ್ವಮೇಧವನ್ನೂ ಓದಿ ಹೇಳುತ್ತಿದ್ದರು. ಹುಡುಗನಾಗಿದ್ದ ಇವರ ಮನಸ್ಸಿನ ಮೇಲೂ ಪರಿಣಾಮಬೀರಿ ತಾನೂ ಅದೇರೀತಿ ಏಕೆ ಬರೆಯಬಾರದು ಎಂಬ …

ಪೂರ್ತಿ ಓದಿ...