Tag Archives: ಎಪ್ರಿಲ್

ಪದ್ಮಚರಣ್

Padmacharan

ಪದ್ಮಚರಣ್ (೨೧.೪.೧೯೨೦ – ೨೨.೭-೨೦೦೨): ಸುಗಮ ಸಂಗೀತ ಕ್ಷೇತ್ರದ ಹರಿಕಾರರಾದ ಎ.ವಿ.ಕೃಷ್ಣಮಾಚಾರ್ಯರು (ಪದ್ಮಚರಣ್)ರು ಹುಟ್ಟಿದ್ದು ಚಿತ್ತೂರು ಜಿಲ್ಲೆಯ ಮದನ ಪಲ್ಲಿ ತಾಲ್ಲೂಕಿನ ಬಡಿಕಾಯಲ ಪಲ್ಲೆ ಗ್ರಾಮದ ’ಗುತ್ತಿ’ ಎಂಬಲ್ಲಿ. ತಂದೆ ಆಸೂರಿ ವೀರರಾಘವಾಚಾರ್ಯಲು, ತಾಯಿ ಜಾನಕಮ್ಮ. ತಾಯಿಗೆ ಸೊಗಸಾದ ಕಂಠದ ಜೊತೆಗೆ ಸಂಗೀತದಲ್ಲಿ ಆಸಕ್ತಿ. ತಾಯಿ ಹಾಡುತ್ತಿದ್ದ ಹಾಡುಗಳನ್ನು ಕೇಳಿ ಕೇಳಿ ಹುಡುಗನ ಕಂಠದಿಂದಲೂ ಹೊಮ್ಮುತ್ತಿದ್ದ ಸುಮಧುರ ಸಂಗೀತ. ಎಂಟನೆಯ ವರ್ಷದಿಂದಲೇ ಸಂಗೀತ ಕಲಿಕೆ. ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮದ ಬಳಿ ಪಿಟೀಲು ಕಲಿಕೆ. ಹಲವಾರು ಭಾಷೆಗಳಲ್ಲಿ ಪಡೆದ ಪಾಂಡಿತ್ಯ. ಕನ್ನಡ, ಇಂಗ್ಲಿಷ್, ಸಂಸ್ಕೃತ, …

ಪೂರ್ತಿ ಓದಿ...

ಡಾ. ವಿಜಯಾ ಸುಬ್ಬರಾಜ್

Vijaya Subbaraj

ಡಾ. ವಿಜಯಾ ಸುಬ್ಬರಾಜ್ (೨೦-೪-೧೯೪೭): ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸೀತಾರಾಂ, ತಾಯಿ ಲಕ್ಷ್ಮಿ. ವಿದ್ಯಾಭ್ಯಾಸವೆಲ್ಲವೂ ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ., ಎಲ್.ಎಲ್.ಬಿ. ಮತ್ತು ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿ. ಜೊತೆಗೆ ಹಿಂದಿ ಸಾಹಿತ್ಯರತ್ನ ಪದವೀಧರೆ. ಉದ್ಯೋಗಕ್ಕೆ ಸೇರಿದ್ದು ಎಂ.ಇ.ಎಸ್. ಕಾಲೇಜು, ಪ್ರಾಧ್ಯಾಪಕರ ಹುದ್ದೆ. ನಿವೃತ್ತಿಯ ತನಕವೂ ಅಲ್ಲೇ ಸೇವೆ. ‘ಕನ್ನಡದಲ್ಲಿ ಗೀತ ನಾಟಕಗಳು : ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಸುಮಾರು ಐವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ, ಯಶಸ್ವಿ ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ. ಹಲವಾರು …

ಪೂರ್ತಿ ಓದಿ...

ಎ. ಪಂಕಜ

A Pankaja

ಎ. ಪಂಕಜ (೨೦.೦೪.೧೯೩೨): ಸಮಾಜಸೇವಕಿ, ಲೇಖಕಿ, ಉತ್ತಮ ಗೃಹಿಣಿ ಎನಿಸಿದ ಪಂಕಜರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಪಾವಗಡದಲ್ಲಿ ೧೯೩೨ ರ ಏಪ್ರಿಲ್‌ ೨೦ ರಂದು. ತಂದೆ ಶ್ರೀನಿವಾಸಾಚಾರ್, ತಾಯಿ ವಕುಳಮ್ಮ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ಇವರ ಮೇಲೂ ಬೀರಿದ ಪ್ರಭಾವ. ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದವರು. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ. ಇವರು ಹುಟ್ಟಿದ ಸಂದರ್ಭದಲ್ಲಿ ದೇಶದ ತುಂಬೆಲ್ಲ ದೇಶ ಪ್ರೇಮ, ಸ್ವಾತಂತ್ಯ್ರ, …

ಪೂರ್ತಿ ಓದಿ...

ಎಚ್. ಜಿ. ದತ್ತಾತ್ರೇಯ

HG Dattatreya

ಎಚ್. ಜಿ. ದತ್ತಾತ್ರೇಯ (೨೦.೦೪.೧೯೪೨) ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ನಟರಾಗಿ ಮಹಾನ್ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದವರಾಗಿದ್ದಾರೆ. ಜೀವನ: ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೆಯನವರು ಏಪ್ರಿಲ್ ೨೦, ೧೯೪೨ರಂದು ಚಿತ್ರದುರ್ಗದಲ್ಲಿ ಜನಿಸಿದರು. ಅವರ ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಓದಿದ್ದು ಎಂಜನಿಯರಿಂಗ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಎಂ.ಇ.ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್‌ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್‌ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ …

ಪೂರ್ತಿ ಓದಿ...

ಡಾ. ಶ್ರೀಕೃಷ್ಣಭಟ್ ಅರ್ತಿಕಜೆ

Srikrishnabhat Arthikaje

ಡಾ. ಶ್ರೀಕೃಷ್ಣಭಟ್ ಅರ್ತಿಕಜೆ (೧೯-೪-೧೯೪೫): ಸಾಹಿತ್ಯ, ಸಂಗೀತ, ಯಕ್ಷಗಾನ, ಸಂಶೋಧನೆ ಇವೆಲ್ಲದರಲ್ಲೂ ಪ್ರಾವೀಣ್ಯತೆ ಪಡೆದಿರುವ ಶ್ರೀಕೃಷ್ಣಭಟ್‌ರವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಡುವನ್ನೂರು ಅರ್ತಿಕಜೆ ಮನೆಯಲ್ಲಿ. ತಂದೆ ಶ್ಯಾಮಭಟ್, ತಾಯಿ ಸಾವಿತ್ರಿ ಅಮ್ಮ. ಪುತ್ತೂರು, ಎಡನೀರು, ಕಾಸರ ಗೋಡಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಓದು. ಪಿ.ಯು.ಗೆ ಸೇರಿದ್ದು ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರು, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಬಿ.ಎ. (೧೯೬೯) ಪದವಿ. ಪ್ರಥಮರ‍್ಯಾಂಕ್, ೧೯೭೧ರಲ್ಲಿ ಎಂ.ಎ. ಪ್ರಥಮ ರ‍್ಯಾಂಕ್ ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ, ಮದರಾಸು ವಿಶ್ವವಿದ್ಯಾಲಯದಲ್ಲಿ “ಕನ್ನಡದಲ್ಲಿ ಶಾಸನ ಸಾಹಿತ್ಯ” ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. …

ಪೂರ್ತಿ ಓದಿ...

ಜಿ. ಚನ್ನಮ್ಮ

G Channamma

ಜಿ. ಚನ್ನಮ್ಮ (೧೯.೪.೧೯೧೩ – ೨೦.೧.೧೯೮೬): ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಸಬಲರಾಗಬೇಕೆಂದು ಅಪೇಕ್ಷಿಸಿ ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಚನ್ನಮ್ಮನವರು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ಸ್ವಾತಂತ್ಯ್ರ ಹೋರಾಟಗಾರರಾದ ಗೌಡಗೆರೆ ಮಡಿವಾಳಯ್ಯ ಗುರುಬಸವಯ್ಯ ನವರು. ತಾಯಿ ವೀಣಾವಾದಕಿ ರಾಜಮ್ಮ. ಸಾಮಾನ್ಯ ಶಿಕ್ಷಣ ಎಸ್.ಎಸ್.ಎಲ್.ಸಿ. ವರೆಗೆ. ಬಾಲ್ಯದಿಂದಲೇ ಮೂಡಿದ ಸಂಗೀತಾಸಕ್ತಿ. ಸರಕಾರದ ವಿದ್ಯಾರ್ಥಿ ವೇತನ ಪಡೆದು, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಚಿದಂಬರಂಗೆ ಹೋಗಿ ಪ್ರೊಫೆಸರ್‌ ಪೊನ್ನಯ್ಯ ಪಿಳ್ಳೆಯವರಲ್ಲಿ ಕಲಿತ ಉನ್ನತ ಸಂಗೀತ ಶಿಕ್ಷಣ. ಅಂದಿನ ಕಾಲದಲ್ಲೇ ಏಕಾಂಗಿಯಾಗಿ ಹೊರನಾಡಿಗೆ ಹೋಗಿ ಕಲಿತ ದಿಟ್ಟ ಹುಡುಗಿ. ತಮಿಳುನಾಡಿನಿಂದ ಹಿಂದಿರುಗಿ ಬಂದ …

ಪೂರ್ತಿ ಓದಿ...

ವಸುಮತಿ ಉಡುಪ

Vasumathi Udupi

ವಸುಮತಿ ಉಡುಪ (೧೮-೪-೧೯೪೮): ಪ್ರಖ್ಯಾತ ಕಥೆಗಾರ್ತಿ ವಸುಮತಿ ಉಡುಪರು ಹುಟ್ಟಿದ್ದು ಹೊಸನಗರ ತಾಲ್ಲೂಕಿನ ‘ನಗರ’ದಲ್ಲಿ. ತಂದೆ ಕಿರಣಗೆರೆ ರಂಗಾಭಟ್ಟರು, ತಾಯಿ ತ್ರಿಪುರಾಂಬ. ಪಿ.ಯು.ವರೆಗೆ ಓದಿದ್ದು ತೀರ್ಥಹಳ್ಳಿಯಲ್ಲಿ. ಪಿ.ಯು. ಮುಗಿಯುತ್ತಿದ್ದಂತೆ ಮದುವೆಯಾಗಿ ಓದು ಅನಿವಾರ‍್ಯವಾಗಿ ಕಂಡ ಮುಕ್ತಾಯ. ಪತಿಗೆ ಸರಿಗಟ್ಟುವ ಆಶಯದಿಂದ ತೊಡಗಿಸಿಕೊಂಡದ್ದು ಬರವಣಿಗೆಯಲ್ಲಿ. ಬರಹಗಾರರೆಲ್ಲರಂತೆ ಬರೆಯಲು ಪ್ರಾರಂಭಿಸಿದ್ದು ಕವಿತೆಯಿಂದಲಾದರೂ ಆಯ್ದುಕೊಂಡದ್ದು ಕಥಾಕ್ಷೇತ್ರ. ಜನಪ್ರಿಯ ಸಾಹಿತ್ಯ ಅಥವಾ ಮತ್ತಾವುದೇ ಸಾಹಿತ್ಯವೆನ್ನದೆ, ಯಾವ ‘ಇಸಂ’ಗೂ ಒಳಪಡದೆ, ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ. ಅಕ್ಕಪಕ್ಕದಲ್ಲಿ ಕಂಡ ವ್ಯಕ್ತಿಗಳೇ ನಾಯಕ, …

ಪೂರ್ತಿ ಓದಿ...

ಕೆ.ಎಲ್.ನಾಗರಾಜಶಾಸ್ತ್ರಿ

ಕೆ.ಎಲ್.ನಾಗರಾಜಶಾಸ್ತ್ರಿ (೧೮.೦೪.೧೯೨೬): ಐವತ್ತು ವರ್ಷಗಳಿಂದಲೂ ರಂಗಭೂಮಿಯ ಕಲಾಸೇವೆಯಲ್ಲಿ ನಿರತರಾಗಿದ್ದು ಹಲವಾರು ವೃತ್ತಿ ರಂಗಭೂಮಿಯ ಸಂಸ್ಥೆಗಳಿಗೆ ನಾಟಕ ರಚನೆ, ವಾದ್ಯ ಸಂಗೀತದ ನೆರವು ನೀಡುತ್ತಾ ಬಂದಿರುವ ನಾಗರಾಜ ಶಾಸ್ತ್ರಿಗಳು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ. ತಂದೆ ಲಕ್ಷ್ಮಿ ನರಸಿಂಹ ಶಾಸ್ತ್ರಿಗಳು, ತಾಯಿ ಗೌರಮ್ಮ. ತಾಯಿಯಿಂದಲೇ ಸಂಗೀತದ ಪ್ರಥಮ ಪಾಠ. ಬೆಂಗಳೂರಿನ ಚಾಮರಾಜೇಂದ್ರ ಮಹಾಪಾಠ ಶಾಲೆಯಲ್ಲಿ ಆರು ವರ್ಷ ಕಾಲ ಸಂಸ್ಕೃತಾಧ್ಯಯನ ಮತ್ತು ವೇದಾಧ್ಯಯನ ಶಿಕ್ಷಣ. ಜೊತೆಗೆ ಪಿಟೀಲು ಮತ್ತು ಕೊಳಲು ವಾದನದ ಕಲಿಕೆ. ತಾವರೆಕೆರೆಯ ಮೃದಂಗ ವಿದ್ವಾನ್ ಸುಬ್ಬಯ್ಯ ಭಾಗವತರಿಂದ ಸಂಗೀತ …

ಪೂರ್ತಿ ಓದಿ...

ಬಸವಲಿಂಗಶಾಸ್ತ್ರಿ ಬಾಳೀಮಠ

ಬಸವಲಿಂಗಶಾಸ್ತ್ರಿ ಬಾಳೀಮಠ (೧೭.೦೪.೧೯೧೭): ಹಿರಿಯ ರಂಗ ಕಲಾವಿದರಾದ ಬ. ಶಿ. ಬಾಳೀಮಠ ರವರು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ. ತಂದೆ ಪುಟ್ಟಯ್ಯ ಚ.ಹಿರೇಮಠ. ತಾಯಿ ಪಾರ್ವತಮ್ಮ. ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ನಾಟಕಗಳತ್ತ ಒಲವು. ಶಾಲೆಯ ವಿಶೇಷ ಕಾರ್ಯಕ್ರಮಗಳಿಗೆಲ್ಲಾ ಚಿಕ್ಕ ಚಿಕ್ಕ ಏಕಾಂಕ ನಾಟಕಗಳನ್ನು ಬರೆದು ರಂಗದ ಮೇಲೆ ತಂದು ನಟರಾಗಿಯೂ ಗಳಿಸಿದ ಯಶಸ್ಸು. ’ದಾರಿ ದೀಪ’ ಎಂಬ ಕೈ ಬರಹದ ಪತ್ರಿಕೆಯ ಸಂಪಾದಕರಾಗಿ, ಹಲವಾರು ಸಹ ವಿದ್ಯಾರ್ಥಿಗಳಿಂದ ಬರೆಸಿ, ಬರೆದು ಪ್ರಕಟಿಸಿದ ಸಾಹಸಿ ವಿದ್ಯಾರ್ಥಿ. ಶಾಲೆಯ ಪಾಠಕ್ಕಿಂತ ಪುರಾಣ ಪ್ರವಚನಗಳನ್ನು ಕೇಳುವ, ನಾಟಕ ದೊಡ್ಡಾಟಗಳನ್ನು ನೋಡುವ …

ಪೂರ್ತಿ ಓದಿ...

ಅಜ್ಜಂಪುರ ಜಿ. ಸೂರಿ

Ajjampura G Suri

ಅಜ್ಜಂಪುರ ಜಿ. ಸೂರಿ (೧೭.೦೪.೧೯೩೯ – ೨೫.೦೫.೨೦೦೮): ಕವಿ, ವಚನಕಾರ, ಕಾದಂಬರಿಕಾರ, ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆ ಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ ೧೯೩೯ ರ ಏಪ್ರಿಲ್‌ ೧೭ ರಂದು. ಗೋವಿಂದಪ್ಪ, ತಾಯಿ ಪಾರ್ವತಮ್ಮ. ತಂದೆಯವರದು ಬಳೆಮಾರುವ ಕಾಯಕ ಪ್ರವೃತ್ತಿ ಆಯುರ್ವೇದ ಮತ್ತು ಅಧ್ಯಾತ್ಮ. ಲೌಕಿಕ ಚಿಕಿತ್ಸೆಗೆ ಆಯುರ್ವೇದ ಚಿಕಿತ್ಸೆ ನೀಡಿದರೆ ಪಾರಮಾರ್ಥಿಕಕ್ಕೆ ಅಧ್ಯಾತ್ಮ ಚಿಕಿತ್ಸೆ ನೀಡುತ್ತ ಗೋವಿಂದಾರ್ಯರೆನಿಸಿದ್ದರು. ಈ ಪರಿಸರದಲ್ಲಿ ಬೆಳೆದ ಸೂರಿಯವರ ಮೇಲೂ ಆದ ಪರಿಣಾಮದಿಂದ ರೂಢಿಸಿಕೊಂಡ ಸುಸಂಸ್ಕೃತ ಬದುಕು. ಅಜ್ಜಂಪುರದಲ್ಲಿ …

ಪೂರ್ತಿ ಓದಿ...