ಮಹಾಭಾರತವನ್ನು ಆಧರಿಸಿದ ಕಥೆಗಳು ಜನರಿಂದ ಜನರಿಗೆ ದಾಟುತ್ತಾ ಹೋದಂತೆ ಮೂಲಕಥೆಯಿಂದ ಸ್ವಲ್ಪಸ್ವಲ್ಪವಾಗಿ ಬದಲಾವಣೆ ಪಡೆಯುತ್ತಾ ಇಂದು ಮೂಲಕಥೆಗೂ ಭಿನ್ನವಾಗಿ ಮೂಲಕಥೆಯ ಸತ್ಯತೆಯನ್ನೇ ಪ್ರಶ್ನಿಸುವಂತಾಗಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಮತ್ತು ಕೆಟ್ಟ ಮುಖಗಳಿವೆ. ಇದಕ್ಕೆ ಭಗವಾನ್ ಕೃಷ್ಣನೂ ಹೊರತಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಉದಾಹರಣೆಗೆ ಗಾಂಧಾರಿಗೆ ಕಣ್ಣಿದ್ದೂ ಗಂಡನಿಗೆ ಕಣ್ಣಿಲ್ಲದ ಕಾರಣ ಕಣ್ಣಿಗೆ ಪಟ್ಟಿಕಟ್ಟಿ ಗಂಡನ ಕುರುಡಿನಲ್ಲಿ ಭಾಗಿಯಾಗುವ ಮೂಲಕ ಪಾತಿವ್ರತೆಯ ಮಹತ್ವವನ್ನು ಕೊಂಡಾಡಿದರೆ ಮಗ ದುರ್ಯೋಧನ ಮಾಡುತ್ತಿರುವುದು ತಪ್ಪು ಎಂದು ತಿಳಿದೂ ತನ್ನ ಕಣ್ಣಿನ …
ಪೂರ್ತಿ ಓದಿ...