Tag Archives: ಆರೋಗ್ಯ

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು ಅಮೂಲ್ಯ ಪೋಷಕಾಂಶಗಳಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಗಳಲ್ಲಿ ಲಿಮೋಲಿನ್, ಬಯೋಫ್ಲೇವನಾಯ್ಡ್, ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ನಂತಹ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ವಾಸ್ತವವಾಗಿ ಈ ಪೋಷಕಾಂಶಗಳು ತಿರುಳಿನಲ್ಲಿರುವುದಕ್ಕಿಂತಲೂ ಹೆಚ್ಚು ಪೌಷ್ಟಿಕ ಮೌಲ್ಯಗಳನ್ನು ಹೊಂದಿದ್ದು ಹೆಚ್ಚು ಆರೋಗ್ಯಕರವಾಗಿವೆ. ವಿಶೇಷವಾಗಿ ಕಿತ್ತಳೆಯ ಸಿಪ್ಪೆಯಲ್ಲಿರುವ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳಿಗೆ ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣಗಳಿವೆ. ಅಲ್ಲದೇ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಬನ್ನಿ, …

ಪೂರ್ತಿ ಓದಿ...

ನಿಮ್ಮ ಜೀವನದಲ್ಲಿ ಯಾವುದೇ ರೋಗಗಳು ಬರಬಾರದು ಅಂದ್ರೆ ಜ್ಯೂಸ್ ಕುಡಿಯಿರಿ

neem juice

ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಖಾಯಿಲೆಗಳು ಕೂಡ ವೇಗವಾಗಿ ಬೆಳೆಯುತ್ತಾ ಇದೆ, ದಿನ ದಿನಕ್ಕೆ ಹೊಸ ಹೊಸ ಖಾಯಿಲೆ ಮನುಷ್ಯನಿಗೆ ಆವರಿಸುತ್ತಿದೆ, ಒಂದು ರೋಗಕ್ಕೆ ಮದ್ದು ಕಂಡು ಹಿಡಿಯುವಷ್ಟರಲ್ಲಿ ಮತ್ತೊಂದು ಖಾಯಿಲೆ ಶುರು ಬಂದಿರುತ್ತೆ, ಕೆಲವು ಜನಕ್ಕೆ ಅಂತು ಕೇಳಲೇ ಬೇಡಿ ಅವ್ರು ತಿಂಗಳಿಗೆ ಒಂದು ವಾರ ಆದರು ಆಸ್ಪತ್ರೆ ಸುತ್ತೋದು ಬಿಡಲ್ಲ ಏಕೆ ಅಂದ್ರೆ ಇದಕೆಲ್ಲ ಕಾರಣವು ಸಹ ನಾವೇ. ನಾವು ತಿನ್ನುವ ಆಹಾರ, ಕಲಬೆರಕೆ, ನಾವು ಕುಡಿಯುವ ಗಾಳಿ ನೀರು ಎಲ್ಲವು ಅಶುದ್ದವಗಿದೆ, ನಾವು ನಮ್ಮ ದೇಹವನ್ನು ರಕ್ಷಾ ಕವಚದಂತೆ ಇಟ್ಕೊಬೇಕು ಅಂದ್ರೆ …

ಪೂರ್ತಿ ಓದಿ...

ಕೇವಲ 5 ನಿಮಿಷ ಪ್ರತಿದಿನ ಈ ವ್ಯಾಯಾಮ ಮಾಡುತ್ತ ಬಂದ್ರೆ ಸಾಕು

ವ್ಯಾಯಾಮ

ಕೇವಲ 5 ನಿಮಿಷ ಪ್ರತಿದಿನ ಈ ವ್ಯಾಯಾಮ ಮಾಡುತ್ತ ಬಂದ್ರೆ ಸಾಕು. ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ. ತೂಕ ಇಳಿಸಿಕೊಂಡು ಆರೋಗ್ಯವಾಗಿರಲು ಬಯಸುವವರು ಪಾರ್ಕ್ ಅಥವಾ ಸಮುದ್ರ ತೀರದಲ್ಲಿ ಐದು ನಿಮಿಷ ರನ್ನಿಂಗ್ ಮಾಡಿದ್ರೆ ಸಾಕು. ಇದ್ರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದಾಗಿದೆ. ಹಗ್ಗದಾಟ ಕೂಡ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಪ್ರತಿದಿನ 5 ನಿಮಿಷ ಹಗ್ಗದಾಟ ಆಡಿ. ಹೃದಯ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸ್ಕಿಪ್ಪಿಂಗ್ ನಿಂದ ಬೆವರು ಜಾಸ್ತಿ ಬರುತ್ತದೆ. ಇದು ದೇಹದಲ್ಲಿರುವ ವಿಷವನ್ನು ಹೊರ ಹಾಕುತ್ತದೆ. ರನ್ನಿಂಗ್, ಸ್ಕಿಪ್ಪಿಂಗ್ ಅಲ್ಲದೆ ಸೂರ್ಯ ನಮಸ್ಕಾರ ನಿಮ್ಮ …

ಪೂರ್ತಿ ಓದಿ...

ಮನೆ ತೂಥ್ ಪೇಸ್ಟ್ ಆರೋಗ್ಯಕ್ಕೆ ಒಳ್ಳೆಯದು

How To Make Your Own Toothpaste

ನೀವು ನಕ್ಕಾಗ ಹೊಳೆಯುವ ದಂತಪಂಕ್ತಿಗಳು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತವೆ. ಸುಂದರ ನಗುವಿಗೆ ಕಾರಣವಾಗುತ್ತದೆ. ಕ್ಷಮಿಸಿ, ಇದು ಯಾವುದೇ ಟೂಥ್ ಪೇಸ್ಟ್ ಜಾಹೀರಾತಲ್ಲ. ಮಾರುಕಟ್ಟೆಯಲ್ಲಿಂದು ಸಾವಿರಾರು ಕೃತಕ ಡೆಂಟಲ್ ಕೇರ್ ಉತ್ಪನ್ನಗಳು ಬರುತ್ತಿವೆ. ಆದರೆ ನಾವು ಹೇಳಹೊರಟದ್ದು ನೀವು ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಡೆಂಟಲ್ ಕೇರ್ ಬಗ್ಗೆ. ಹಲ್ಲು, ಒಸಡು, ಬಾಯಿಯ ಆರೈಕೆಗೆ ಇದಕ್ಕಿಂತ ಬೆಸ್ಟ್ ಉಪಾಯ ಯಾವುದಿದೆ? 1. ಲವಂಗ : ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು ಲವಂಗ ಬಳಸಿ. ಇದು ಆಂಟಿ-ಬ್ಯಾಕ್ಟಿರಿಯಾ ಗುಣಹೊಂದಿದ್ದು ಬಾಯಿಯ ಕೆಟ್ಟ ವಾಸನೆಯನ್ನೂ …

ಪೂರ್ತಿ ಓದಿ...

ಉಪಯುಕ್ತವಾದ ಭಾರತೀಯ ಆಕಳುಗಳು ಹಾಗೂ ಅಪಾಯಕಾರಿಯಾದ ವಿದೇಶಿ ಆಕಳುಗಳು!

೧. ಭಾರತೀಯ ಆಕಳಿನ ವೈಶಿಷ್ಟ ಗಳು ಭಾರತೀಯ ತಳಿಯ ಆಕಳುಗಳು ಸ್ಥಳೀಯ ವಾತಾವರಣದೊಂದಿಗೆ ಹೊಂದಿಕೊಂಡಿವೆ. ಅವುಗಳು ಬಿಸಿಲು ಸಹಿಸಲು ಸಕ್ಷಮವಾಗಿವೆ. ಅವುಗಳಿಗೆ ಸ್ವಲ್ಪ ನೀರು ಸಾಕಾಗುತ್ತದೆ. ಅವುಗಳು ದೂರ ಪ್ರಯಾಣ ಮಾಡಬಲ್ಲವು. ಭಾರತದಲ್ಲಿನ ಹಸುಗಳು ಭಾರತದ ಆಯಾ ಭಾಗದಲ್ಲಿ ನೈಸರ್ಗಿಕ ಹುಲ್ಲನ್ನು ಸೇವಿಸಿ ಬದುಕಬಲ್ಲವು. ಅವುಗಳಲ್ಲಿ ಅನೇಕ ಸೋಂಕು ರೋಗಗಳಿಗೆ ಪ್ರತಿಬಂಧಿಸುವ ಕ್ಷಮತೆಯು ಅಧಿಕವಾಗಿರುತ್ತದೆ. ಈ ಹಸುಗಳನ್ನು ಯೋಗ್ಯ ರೀತಿ ಯಲ್ಲಿ ಪಾಲನೆ-ಪೋಷಣೆ ಮಾಡಿ ಅವುಗಳಿಗೆ ಪೌಷ್ಠಿಕ ಆಹಾರವೂ ದೊರೆತರೆ, ಅವುಗಳು ಹೆಚ್ಚು ಪ್ರಮಾಣದಲ್ಲಿ ಹಾಲನ್ನು ಉತ್ಪಾದಿಸಬಲ್ಲವು. ೨. ವಿದೇಶಿ ಹಸುಗಳ ತಳಿಗಿಂತ ಅಧಿಕವಾಗಿ …

ಪೂರ್ತಿ ಓದಿ...

ಸೊಂಟ ನೋವು ನಿವಾರಣೆ

back pain

ಅನೇಕ ಜನರು ಸೊಂಟ ನೋವಿನಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಯವುದೇ ಕೆಲಸ ಮಾಡದಿದ್ದರೂ ನಿತ್ಯ ಸೊಂಟ ನೋವು ಉಂಟಾಗುತ್ತಿರುತ್ತದೆ. ಕೇವಲ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಈ ಮಾತ್ರೆಯು ಸೊಂಟ ನೋವನ್ನು ಸಂಪೂರ್ಣ ಗುಣಪಡಿಸಲ್ಲ. ಆದರೆ ಆಯುರ್ವೇದಲ್ಲಿ ಇದಕ್ಕೆ ಅದ್ಭುತವಾದ ಚಿಕಿತ್ಸೆ ಇದೆ. ಇದರಲ್ಲಿರುವ ಮೂರು ವಿಧದ ಚಿಕಿತ್ಸೆಯು ಶಾಶ್ವತ ಪರಿಹಾರ ನೀಡುತ್ತದೆ ಎಂದು ಡಾ.ಮಂಜರಿ ರಾಜೇಶ ಹೇಳುತ್ತಾರೆ. ಸೊಂಟ ನೋವಿಗೆ ಜೀವನಶೈಲಿಯೂ ಪ್ರಮುಖ ಕಾರಣ. ಮುಖ್ಯವಾಗಿ ಆಹಾರದಲ್ಲಿ ವ್ಯತ್ಯಾಸ, ರಾತ್ರಿ ವೇಳೆ ನಿದ್ರೆ ಬಾರದೆ ಹಗಲು ವೇಳೆಯಲ್ಲಿ ನಿದ್ರೆ ಮಾಡುವುದು, ಕೆಲವು ಹವ್ಯಾಸಗಳು ಕೂಡ …

ಪೂರ್ತಿ ಓದಿ...

ಆರೋಗ್ಯಕರವಾದ ಕಿಡ್ನಿಗೆ ಹಿತ್ತಲ ಗಿಡದ ತರಕಾರಿಗಳೇ ಸಾಕು!

kidny

ಕಿಡ್ನಿಯಲ್ಲಿ ಕಂಡುಬರುವ ನೋವು ಅಥವಾ ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಸಮಸ್ಯೆ ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಈ ಯಾತನಾಮಯ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಮೂಡಿದ ಭಯವಾಗಿದ್ದರೆ ಮೊಟ್ಟ ಮೊದಲನೆಯದಾಗಿ ನೀವು ತಿನ್ನುವ ಆಹಾರ ಮತ್ತು ಸೇವಿಸುವ ಪಾನೀಯದ ಕಡೆಗೆ ಗಮನ ಕೊಡಿ… ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ? ನೀವೊ೦ದು ವೇಳೆ ಮೂತ್ರಪಿ೦ಡಗಳಿಗೆ (ಕಿಡ್ನಿ) ಸ೦ಬ೦ಧಿಸಿದ ಅನಾರೋಗ್ಯದಿ೦ದ ಬಳಲುತ್ತಿರುವಿರಾದರೆ ಅಥವಾ ನಿಮ್ಮ ಸಾಮಾನ್ಯ ಆರೋಗ್ಯದ ಕುರಿತ೦ತೆ ನಿಮಗೆ ಕಾಳಜಿವಹಿಸುವುದು ಅಗತ್ಯವೆ೦ದೆನಿಸಿದರೆ, ಈ …

ಪೂರ್ತಿ ಓದಿ...

ರಾತ್ರಿ ಊಟ ಮಾಡಿದ ತಕ್ಷಣ ಮಾಡಬಾರದ 10 ಕಾರ್ಯಗಳು!

meal

ಯಾರೋ ಓರ್ವ ಮಹಾಶಯರು ಹೇಳಿರುವ ಪ್ರಕಾರ “ನಮ್ಮ ಹವ್ಯಾಸಗಳು ಹೇಗಿರುತ್ತವೆಯೋ, ಅದರ೦ತೆಯೇ ನಾವು ರೂಪುಗೊ೦ಡಿರುತ್ತೇವೆ”. ನಮ್ಮ ಹವ್ಯಾಸಗಳ ಪೈಕಿ ಕೆಲವನ್ನು ನಮಗೆ ಕಲಿಸಿಕೊಟ್ಟಿರುವ೦ತಹದ್ದಾಗಿರುತ್ತದೆ ಹಾಗೂ ಇನ್ನು ಕೆಲವನ್ನು ಸ್ವತ: ನಾವೇ ರೂಢಿಸಿಕೊ೦ಡಿರುವ೦ತಹವುಗಳಾಗಿರುತ್ತವೆ. ನಮಗೆ ಕಲಿಸಿಕೊಟ್ಟಿರುವ೦ತಹ ಹಾಗೂ ಸ್ವಯ೦ ನಾವೇ ರೂಢಿಸಿಕೊ೦ಡಿರುವ೦ತಹ ಹವ್ಯಾಸಗಳು ಕೆಲವೊಮ್ಮೆ ನಮ್ಮ ಜೀವನಶೈಲಿಯನ್ನು ರೂಪಿಸುತ್ತವೆ ಹಾಗೂ ಆಯಾ ಜೀವನಶೈಲಿಗನುಗುಣವಾಗಿ ನಾವು ಒ೦ದೋ ಆರೋಗ್ಯವ೦ತರಾಗಿರುತ್ತೇವೆ ಇಲ್ಲವೇ ರೋಗಗ್ರಸ್ತರಾಗಿರುತ್ತೇವೆ. ನಾವೆಲ್ಲರೂ ಆಹಾರಪ್ರಿಯರು. ಜೀವನದ ಮೂಲಭೂತ ಸೊಗಸುಗಳ ಪೈಕಿ ಆಹಾರದ ಕುರಿತು ಇರುವಷ್ಟು ಅಪ್ಯಾಯಮಾನವಾದ ಭಾವನೆಯು ಬೇರಾವುದರ ಕುರಿತೂ ಇರಲಿಕ್ಕಿಲ್ಲ. ನಮ್ಮ ಜೀರ್ಣಾ೦ಗ ವ್ಯೂಹವು ನಾವು …

ಪೂರ್ತಿ ಓದಿ...

ಕಿಡ್ನಿಯ ಆರೋಗ್ಯಕ್ಕಾಗಿ ಮಾಡಬೇಕಾದ ಕಾರ್ಯಗಳಿವು

human kidneys highlighted in body

ಭಾರತದಲ್ಲಿ ಪ್ರತೀವರ್ಷ 2 ಲಕ್ಷ ಜನರು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಸುಮಾರು 40% ಮಹಿಳೆಯರು. ಭಾರತದಲ್ಲಿರುವ ಕಿಡ್ನಿ ರೋಗಿಗಳಲ್ಲಿ ಶೇ. 90ರಷ್ಟು ಜನರು ತಮ್ಮ ಕಾಯಿಲೆಯನ್ನು ಗುಣಪಡಿಸಲು ವೆಚ್ಚ ಭರಿಸಲು ಶಕ್ತಿ ಇಲ್ಲದವರು! ಕಿಡ್ನಿ ಸಮಸ್ಯೆ ಹೆಚ್ಚಾಗಿ ಮಧುಮೇಹಿಗಳಲ್ಲಿ ಕಂಡು ಬರುತ್ತದೆ. ಭಾರತ ಮಧುಮೇಹಿಗಳ ದೇಶವೆಂದೇ ಗುರುತಿಸಲ್ಪಟ್ಟಿದೆ. ಆದ್ದರಿಂದಲೇ ಕಿಡ್ನಿ ಸಮಸ್ಯೆಯೂ ಹೆಚ್ಚಾಗುತ್ತಿದೆ. ಹೃದಯಾಘಾತ, ಅಧಿಕ ರಕ್ತದೊತ್ತಡ, ಮನೆಯಲ್ಲಿ ಯಾರಾದೂ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದರೆ, 60 ವರ್ಷದ ಮೇಲ್ಪಟ್ಟವರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅದಲ್ಲದೆ ಒಬೆಸಿಟಿ, ಕೊಲೆಸ್ಟ್ರಾಲ್, ಮೂತ್ರ ವಿಸರ್ಜನೆಗೆ …

ಪೂರ್ತಿ ಓದಿ...

ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

Reasons of Snoring

ಗೊರಕೆ ಹೊಡೆಯುವುದು ಹಲವರ ಸಾಮಾನ್ಯ ಸಮಸ್ಯೆ. ನಿದ್ದೆಯನ್ನು ಹಾಳುಗೆಡಹುವ ಈ ಗೊರಕೆ ಸಮಸ್ಯೆಯಿಂದ ಅನೇಕರು ಬಳಲುತ್ತಿರುತ್ತಾರೆ. ಆದರೆ ಗೊರಕೆ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದೆ ಉಸಿರಾಟದ ಗಂಭೀರ ತೊಂದರೆಯೂ ಉಂಟಾಗಬಹುದು. ವಯಸ್ಸಾದಂತೆ ಗೊರಕೆ ಬರುವುದು ಸಹಜ. ಆದರೆ ಗೊರಕೆಗೆ ವಯಸ್ಸೊಂದೇ ಕಾರಣವಾಗಬೇಕಿಲ್ಲ. ಇನ್ನೂ ಅನೇಕ ಕಾರಣಗಳಿವೆ. ಆ ಕಾರಣಗಳನ್ನು ತಿಳಿದುಕೊಂಡರೆ ಗೊರಕೆ ನಿವಾರಣೆಗೆ ಸಹಕಾರಿಯಾಗುತ್ತದೆ. ಅದೇನೆಂದು ಇಲ್ಲಿ ತಿಳಿದುಕೊಳ್ಳಿ. ಗೊರಕೆಗೆ ಕಾರಣಗಳು ಯಾವುದು? [sociallocker]ತೂಕ ಹೆಚ್ಚಳ: ತೂಕ ಹೆಚ್ಚಳವೂ ಗೊರಕೆಗೆ ಸಾಮಾನ್ಯ ಕಾರಣ. ಕೆಲವು ಬಾರಿ ಕುತ್ತಿಗೆಯಲ್ಲಿ ಸೇರಿಕೊಳ್ಳುವ ಕೊಬ್ಬು, ಗಂಟಲಿನ ಎಲುಬನ್ನು ಎಲುಬನ್ನು ಕಿರಿದಾಗಿಸಿ …

ಪೂರ್ತಿ ಓದಿ...