ಕೆರೂರು ವಾಸುದೇವಾಚಾರ‍್ಯ (೧೫-೧೦-೧೮೬೬ – ೧೧-೧-೧೯೨೧): ಹೊಸಗನ್ನಡ ಪ್ರಾರಂಭದ ಗಮನಾರ್ಹ ಕಾದಂಬರಿಗಳಲ್ಲೊಂದಾದ ‘ಇಂದಿರೆ’ಯ (೧೯೦೮) ಕರ್ತೃಕೆರೂರು ವಾಸುದೇವಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ. ತಂದೆ ಶ್ರೀನಿವಾಸಾಚಾರ್ಯರು, ತಾಯಿ ಪದ್ಮಾವತೀಬಾಯಿ. ಪ್ರಾರಂಭಿಕ ಶಿಕ್ಷಣ-ಸಂಸ್ಕೃತಾಭ್ಯಾಸ ಮನೆಯಲ್ಲಿಯೇ. ಮಾಧ್ಯಮಿಕ ವಿದ್ಯಾಭ್ಯಾಸ ಧಾರವಾಡದಲ್ಲಿ. ೧೮೮೪ರಲ್ಲಿ ಮೆಟ್ರಿಕ್ಯುಲೇಷನ್ ಪಾಸು. ಪ್ರೌಢವ್ಯಾಸಂಗಕ್ಕಾಗಿ ಸೇರಿದ್ದು ಪುಣೆಯ ಫರ್ಗುಸನ್ ಕಾಲೇಜು. ಅನನುಕೂಲತೆಯಿಂದ ವಿದ್ಯಾಭ್ಯಾಸಕ್ಕೆ ಅಡಚಣೆ. ಖಾಸಗಿಯಾಗಿ ವ್ಯಾಸಂಗ ಮಾಡಿ ಎಚ್.ಪಿ. ಪರೀಕ್ಷೆಯಲ್ಲಿ ತೇರ್ಗಡೆ. ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡಿ ವಕೀಲಿ ವೃತ್ತಿ ಪ್ರಾರಂಭ. ನಳದಮಯಂತಿ ನಾಟಕವನ್ನು ರಚಿಸಿ ರಂಗದ ಮೇಲೂ ಪ್ರಯೋಗ. ಅದೇ ಕಾಲದಲ್ಲಿ ರಚಿಸಿದ …
ಪೂರ್ತಿ ಓದಿ...ಎ.ವಿ. ಪ್ರಕಾಶ್
ಎ.ವಿ. ಪ್ರಕಾಶ್ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, ತಾಯಿ ಶಂಕರಮ್ಮ. ತಂದೆಯಿಂದಲೇ ಸಂಗೀತದ ಮೊದಲ ಪಾಠ. ಟಿ.ಆರ್. ಕೃಷ್ಣಮೂರ್ತಿ, ಸಿ.ಎಂ. ಮಧುರಾನಾಥ್, ಎಂ.ಆರ್.ಕೃಷ್ಣ, ಪ್ರೊ.ರಾ. ವಿಶ್ವೇಶ್ವರನ್, ಡಾ. ಎನ್. ರಮಣಿ ಮುಂತಾದವರ ಬಳಿ ಕೊಳಲಿನ ಶಿಕ್ಷಣ. ಐದು ದಶಕಗಳಿಂದಲೂ ನಾಡಿನಾದ್ಯಂತ ನಡೆಸಿಕೊಡುತ್ತಿರುವ ಕೊಳಲುವಾದನ ಕಚೇರಿಗಳು. ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರ. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್, ಶ್ರೀಕೃಷ್ಣ ಗಾನಸಭಾ ಅಲ್ಲದೇ ಮೈಲಾಪುರ್, ಪೂನಾ, ಹೈದರಾಬಾದ್, ಶೃಂಗೇರಿ ಸಂಗೀತೋತ್ಸವ, ಸಾರ್ಕ್‌ಸಮ್ಮೇಳನ, ಮೈಸೂರು …
ಪೂರ್ತಿ ಓದಿ...ವೀರೇಂದ್ರ ಸಿಂಪಿ
ವೀರೇಂದ್ರ ಸಿಂಪಿ (೧೪-೧೦-೧೯೩೮) ಪ್ರಸಿದ್ಧ ಪ್ರಬಂಧಕಾರರಾದ ವೀರೇಂದ್ರ ಸಿಂಪಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ. ತಂದೆ ಪ್ರಸಿದ್ಧ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣ. ಕಾಲೇಜು ಶಿಕ್ಷಣ ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ೧೯೬೨ರಲ್ಲಿ. ಉದ್ಯೋಗ ಪ್ರಾರಂಭಿಸಿದ್ದು ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೯ರಲ್ಲಿ ನಿವೃತ್ತಿ. ನಿವೃತ್ತಿಯ ನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ‍್ಯರಾಗಿ ನಾಲ್ಕು ವರ್ಷ ಸೇವೆ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಹುಚ್ಚು. …
ಪೂರ್ತಿ ಓದಿ...ಬಿ.ವಿ. ರಾಮಮೂರ್ತಿ
ಬಿ.ವಿ. ರಾಮಮೂರ್ತಿ (೧೪-೧೦-೧೯೩೩ – ೨೪-೩-೨೦೦೪) ಪ್ರಖ್ಯಾತ ವ್ಯಂಗ್ಯ ಚಿತ್ರಕಾರರಾದ ರಾಮಮೂರ್ತಿಯವರು ಹುಟ್ಟಿದ್ದು ಬೆಂಗಳೂರಿನ ರಾಣಾಸಿಂಗ್ ಪೇಟೆಯಲ್ಲಿ. ತಂದೆ ಗಿರಿಯಪ್ಪ, ತಾಯಿ ಹುಚ್ಚಮ್ಮ. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಬೆಳೆದ ಆಸಕ್ತಿ. ಮನೆಯ ಗೋಡೆಗಳೇ ಚಿತ್ರ ರಚನೆಯ ಕ್ಯಾನ್ವಾಸ್. ಓದಿದ್ದು ಬಿ.ಎಸ್ಸಿ. ವೃತ್ತಿಗಾಗಿ ಆಯ್ದುಕೊಂಡಿದ್ದು ವ್ಯಂಗ್ಯ ಚಿತ್ರರಚನೆಯ ಬದುಕು. ಆಂಗ್ಲ ವ್ಯಂಗ್ಯಚಿತ್ರಕಾರ ಡೇವಿಡ್‌ಲೋ ರವರಿಂದ ಪಡೆದ ಸ್ಫೂರ್ತಿ. ೧೯೫೦ ರಲ್ಲಿ ಶೇಷಪ್ಪನವರ ಕಿಡಿ ಪತ್ರಿಕೆಗಾಗಿ ಬಿಡಿಸಿದ ರಾಜಕೀಯ ವ್ಯಂಗ್ಯ ಚಿತ್ರಗಳು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಪದಕರಾಗಿದ್ದ ಪೋತನ್ ಜೋಸಫ್‌ವರರಿಂದ ನೇಮಕಗೊಂಡು ಉದ್ಯೋಗಿಯಾಗಿ ಸೇರಿದ್ದು ಡೆಕ್ಕನ್ ಹೆರಾಲ್ಡ್ ಬಳಗ. ಪ್ರಜಾವಾಣಿ, …
ಪೂರ್ತಿ ಓದಿ...