ಸಿ.ಎನ್‌ ‌. ಮುಕ್ತಾ

CN Mukta

ಸಿ.ಎನ್‌ ‌. ಮುಕ್ತಾ (೩೦.೪.೧೯೫೧): ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್‌. ಮುಕ್ತಾರವರು ಹುಟ್ಟಿದ್ದು ಚಿತ್ರದುರ್ಗದಲ್ಲಿ ೧೯೫೧ ರ ಏಪ್ರಿಲ್‌ ೩೦ ರಂದು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿಗಳು, ಇವರ ಅಣ್ಣನೇ ಪ್ರಖ್ಯಾತ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾಯರು. ತಂದೆಯ ತಾಯಿಯ ಅಣ್ಣನವರೇ ‘ಕೆಲವು ನೆನಪುಗಳು’ ಕರ್ತೃ ನವರತ್ನ ರಾಮರಾಯರು. ಮುಕ್ತಾರವರ ತಾಯಿ ಕಮಲಮ್ಮ.   [sociallocker] ಪ್ರಾರಂಭಿಕ ಶಿಕ್ಷಣ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸಂತೆ ಸರಗೂರು ಹಾಗೂ ಕೆ.ಆರ್. ನಗರಗಳಲ್ಲಿ. ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ …

ಪೂರ್ತಿ ಓದಿ...

ಡಾ. ಬಿ.ಪಿ. ರಾಧಾಕೃಷ್ಣ

BP Radhakrishna

ಡಾ. ಬಿ.ಪಿ. ರಾಧಾಕೃಷ್ಣ (೩೦.೦೪.೧೯೧೮ – ೨೬.೦೧.೨೦೧೨): ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಸಾಹಿತಿಗಳಷ್ಟೇ ಅಲ್ಲದೆ ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ದುಡಿದವರ ಪಾಲೂ ಸಾಕಷ್ಟಿದೆ. ಹೀಗೆ ಅಂತಾರಾಷ್ಟ್ರೀಯ ಭೂವಿಜ್ಞಾನಿಯಾಗಿದ್ದ, ಕರ್ನಾಟಕದಲ್ಲಿನ ಖನಿಜ ನಿಕ್ಷೇಪಗಳನ್ನು ಗುರುತಿಸಿದ್ದಲ್ಲದೆ ಜಲಸಂಪತ್ತನ್ನು ಪರಿಣಾಮಕಾರಿಯಾಗಿ ಗ್ರಾಮೀಣ ಜನತೆಗೂ ಒದಗಿಸಲು ಯೋಜನೆಗಳನ್ನು ಕೈಗೊಂಡು ಕರ್ನಾಟಕದ ಏಳಿಗೆಗಾಗಿ ದುಡಿದ ರಾಧಾಕೃಷ್ಣರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಿ.ಪುಟ್ಟಯ್ಯ, ತಾಯಿ ವೆಂಕಮ್ಮ.   [sociallocker] ರಾಧಾಕೃಷ್ಣರ ವಿದ್ಯಾಭ್ಯಾಸವೆಲ್ಲ ನಡೆದುದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದ ಪದವಿಯನ್ನು (ಬಿ.ಎಸ್ಸಿ.ಆನರ್ಸ್) ೧೯೩೭ರಲ್ಲಿ ಪಡೆದು ಮೈಸೂರು ಸಂಸ್ಥಾನದ ಭೂವಿಜ್ಞಾನ ಇಲಾಖೆಗೆ ಕ್ಷೇತ್ರ ಸಹಾಯಕರಾಗಿ …

ಪೂರ್ತಿ ಓದಿ...

ಸಿಸು ಸಂಗಮೇಶ

Sisu Sangamesh

ಸಿಸು ಸಂಗಮೇಶ (೨೯.೪.೧೯೨೯ – ೨೯.೫.೨೦೦೧): ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ‘ಸಿಸು’ ಸಂಗಮೇಶರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಯರನಾಳವೆಂಬ ಗ್ರಾಮ. ಇವರ ಮೊದಲ ಹೆಸರು ಸಂಗಮೇಶ ಸಿದ್ಧರಾಮಪ್ಪ ಮನಗೊಂಡ. ತಂದೆ ಸಿದ್ಧರಾಮಪ್ಪ, ತಾಯಿ ಗೌರಮ್ಮ. ಶಿಕ್ಷಣ ಪಡೆದುದು ವಿಜಾಪುರ ಜಿಲ್ಲೆಯ ಹಲವಾರು ಕಡೆ. [sociallocker]ಶಾಲಾ ಅಧ್ಯಾಪಕರಾಗಿ ೧೯೪೮ರಲ್ಲಿ ಉದ್ಯೋಗಕ್ಕೆ ಸೇರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೮೪ರಲ್ಲಿ ನಿವೃತ್ತರಾದರು. ಅಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ಕವಿತೆ, ಅನುವಾದ, ಪ್ರೌಢಸಾಹಿತ್ಯ, ಸಂಪಾದನೆ, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ …

ಪೂರ್ತಿ ಓದಿ...

ಕನ್ನೆಪ್ಪಾಡಿ ರಾಮಕೃಷ್ಣ

Kannapadi Ramakrishna

[sociallocker]ಕನ್ನೆಪ್ಪಾಡಿ ರಾಮಕೃಷ್ಣ (೨೯.೪.೧೯೨೫ – ೨೩.೭.೨೦೦೦): ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳಿಗೆ ಅಷ್ಟೇನೂ ಪ್ರಾಮುಖ್ಯತೆ ಇರದಿದ್ದಕಾಲದಲ್ಲೇ ’ಶಿಂಗಣ್ಣ’ ಎಂಬ ಕಾಲ್ಪನಿಕ ಹೆಸರುಕೊಟ್ಟು ವ್ಯಂಗ್ಯ ಚಿತ್ರ ರಚಿಸಿ ಹೆಸರು ಮಾಡಿದ ರಾಮಕೃಷ್ಣರು ಹುಟ್ಟಿದ್ದು ಪುತ್ತೂರು ಬಳಿ ಹಾರಾಡಿ. ತಂದೆ ಪರಮೇಶ್ವರ ಶಾಸ್ತ್ರಿ, ತಾಯಿ ಸತ್ಯ ಸತ್ಯಭಾಮಾ ದೇವಿ, ೧೯೪೩ ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ವ್ಯಂಗ್ಯ ಚಿತ್ರ ಕಲ್ಕತ್ತಾದಿಂದ ಹೊರಡುತ್ತಿದ್ದ ಓರಿಯಂಟ್ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿತ. ಓದಿದ್ದು ಕೈಗಾರಿಕಾ ರಸಾಯನ ಶಾಸ್ತ್ರದಲ್ಲಿ ಪದವಿ. ಸಾಬೂನು ತಯಾರಿಕಾ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮ. ಕಲಿತ ಪದವಿಗಳನ್ನು ಬದಿಗಿಟ್ಟು ಆಯ್ಕೆ …

ಪೂರ್ತಿ ಓದಿ...

ಪ್ರೊ. ಎ.ವಿ. ನಾವಡ

AV Navad

ಪ್ರೊ. ಎ.ವಿ. ನಾವಡ (೨೮-೪-೧೯೪೬):ಭಾಷಾವಿಜ್ಞಾನಿ, ಕೋಶವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡರವರು ಹುಟ್ಟಿದ್ದು ಮಂಗಳೂರು ಸಮೀಪದ ಕೋಟೆಕಾರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಪ್ರಾರಂಭಿಕ ಶಿಕ್ಷಣ ಆನಂದಾಶ್ರಮದ ಶಾಲೆಯಲ್ಲಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ೫ನೇ ರ‍್ಯಾಂಕ್ ವಿಜೇತರು. [sociallocker]ಉದ್ಯೋಗಕ್ಕಾಗಿ ಸೇರಿದ್ದು ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜು, ೧೯೭೦-೯೪ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ೨೪ ವರ್ಷ ಸೇವೆ. ೧೯೯೪ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ …

ಪೂರ್ತಿ ಓದಿ...

ರಾಜಮ್ಮ ಕೇಶವಮೂರ್ತಿ

Rajammakeshavmurthy

ರಾಜಮ್ಮ ಕೇಶವಮೂರ್ತಿ (೨೮.೦೪.೧೯೨೯): ಕರ್ನಾಟಕ ಸಂಗೀತದ ಅಭಿನವ ಶಾರದೆ ಎಂದೇ ಪ್ರಸಿದ್ಧರಾಗಿರುವ ರಾಜಮ್ಮನವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ. ತಂದೆ ಲಕ್ಷ್ಮೀ ಕಾಂತಯ್ಯ, ತಾಯಿ ಗುಂಡಮ್ಮ, ಸರಕಾರಿ ಕೆಲಸದಲ್ಲಿದ್ದ ತಂದೆಗೆ ಭದ್ರಾವತಿಗೆ ವರ್ಗ. ಅಲ್ಲಿ ಆಸ್ಥಾನ ವಿದ್ವಾನ್ ದೇವೇಂದ್ರಪ್ಪ, ಬಿ. ಶೇಷಪ್ಪ, ರಾಮಾಜೋಯಿಸ್, ಕೆ.ಎಸ್. ರಾಮಚಂದ್ರನ್‌ರವರಲ್ಲಿ ಪ್ರಾರಂಭಿಕ ಶಿಕ್ಷಣ. ೧೯೪೭ ರಲ್ಲಿ ಸಂಗೀತದ ಸೀನಿಯರ್‌ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆ. [sociallocker]ಮದುವೆಯ ನಂತರ ಮೈಸೂರಿಗೆ ತೆರಳಿ ಆರ್‌.ಕೆ. ನಾರಾಯಣಸ್ವಾಮಿ, ಆರ್‌.ಕೆ. ಶ್ರೀಕಂಠನ್ ರವರಲ್ಲಿ ಪ್ರೌಢಶಿಕ್ಷಣ. ವಿದ್ವತ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ. ಉದ್ಯೋಗಕ್ಕೆ …

ಪೂರ್ತಿ ಓದಿ...

ತ.ರಾ.ಸುಬ್ಬರಾಯ | ತ.ರಾ.ಸು.

[sociallocker]ತ.ರಾ.ಸುಬ್ಬರಾಯ (೨೧-೪-೧೯೨೦ – ೧೦-೪-೧೯೮೪): ಪತ್ರಿಕಾರಂಗ, ಸಾಹಿತ್ಯ, ಸ್ವಾತಂತ್ರ್ಯಾಂದೋಲನ ಹೀಗೆ ನಾನಾ ಪ್ರಕಾರಗಳಲ್ಲಿ ದುಡಿದು ಪ್ರಖ್ಯಾತರಾದ ತ.ರಾ.ಸುಬ್ಬರಾಯರು ಹುಟ್ಟಿದ್ದು ಹರಿಹರ ತಾಲ್ಲೂಕಿನ ಮಲೆ ಬೆನ್ನೂರಿನಲ್ಲಿ. ತಂದೆ ವಕೀಲರಾಗಿದ್ದ ರಾಮಸ್ವಾಮಯ್ಯ, ತಾಯಿ ಸೀತಮ್ಮ. ಓದಿದ್ದು ಚಿತ್ರದುರ್ಗದಲ್ಲಿ ಮೆಟ್ರಿಕ್‌ವರೆಗೆ. ಇಂಟರ್ ಮೀಡಿಯೆಟ್ ಸೇರಿದರಾದರೂ ಪೂರ್ಣಗೊಳಿಸಲಿಲ್ಲ. ಆದರೆ ಸಾಹಿತ್ಯ ಇವರ ವಂಶಕ್ಕೆ ಪಾರಂಪರ‍್ಯವಾಗಿ ಬಂದ ಬಳುವಳಿ. ದೊಡ್ಡಪ್ಪ ಟಿ.ಎಸ್. ವೆಂಕಣ್ಣಯ್ಯನವರದು ಒಂದೆಡೆ, ಚಿಕ್ಕಪ್ಪ ತ.ಸು.ಶಾಮರಾಯರದು ಮತ್ತೊಂದೆಡೆ ದೊರೆತ ಸಾಹಿತ್ಯ ಪ್ರೇರಣೆ. ತ.ರಾ.ಸು.ಗೆ ಅಸಾಧ್ಯ ಓದು ಬರಹದ ಹುಚ್ಚು. ಒಂದು ಸಾರೆ ವೆಂಕಣ್ಣಯ್ಯನವರು, ಮಾತನಾಡಿದಷ್ಟು ಬರವಣಿಗೆ ಸುಲಭವಲ್ಲವೆಂದು ರೇಗಿಸಿದಾಗ ‘ಪುಟ್ಟನ …

ಪೂರ್ತಿ ಓದಿ...

ಪದ್ಮಚರಣ್

Padmacharan

ಪದ್ಮಚರಣ್ (೨೧.೪.೧೯೨೦ – ೨೨.೭-೨೦೦೨): ಸುಗಮ ಸಂಗೀತ ಕ್ಷೇತ್ರದ ಹರಿಕಾರರಾದ ಎ.ವಿ.ಕೃಷ್ಣಮಾಚಾರ್ಯರು (ಪದ್ಮಚರಣ್)ರು ಹುಟ್ಟಿದ್ದು ಚಿತ್ತೂರು ಜಿಲ್ಲೆಯ ಮದನ ಪಲ್ಲಿ ತಾಲ್ಲೂಕಿನ ಬಡಿಕಾಯಲ ಪಲ್ಲೆ ಗ್ರಾಮದ ’ಗುತ್ತಿ’ ಎಂಬಲ್ಲಿ. ತಂದೆ ಆಸೂರಿ ವೀರರಾಘವಾಚಾರ್ಯಲು, ತಾಯಿ ಜಾನಕಮ್ಮ. ತಾಯಿಗೆ ಸೊಗಸಾದ ಕಂಠದ ಜೊತೆಗೆ ಸಂಗೀತದಲ್ಲಿ ಆಸಕ್ತಿ. ತಾಯಿ ಹಾಡುತ್ತಿದ್ದ ಹಾಡುಗಳನ್ನು ಕೇಳಿ ಕೇಳಿ ಹುಡುಗನ ಕಂಠದಿಂದಲೂ ಹೊಮ್ಮುತ್ತಿದ್ದ ಸುಮಧುರ ಸಂಗೀತ. ಎಂಟನೆಯ ವರ್ಷದಿಂದಲೇ ಸಂಗೀತ ಕಲಿಕೆ. ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮದ ಬಳಿ ಪಿಟೀಲು ಕಲಿಕೆ. ಹಲವಾರು ಭಾಷೆಗಳಲ್ಲಿ ಪಡೆದ ಪಾಂಡಿತ್ಯ. ಕನ್ನಡ, ಇಂಗ್ಲಿಷ್, ಸಂಸ್ಕೃತ, …

ಪೂರ್ತಿ ಓದಿ...

ಡಾ. ವಿಜಯಾ ಸುಬ್ಬರಾಜ್

Vijaya Subbaraj

ಡಾ. ವಿಜಯಾ ಸುಬ್ಬರಾಜ್ (೨೦-೪-೧೯೪೭): ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸೀತಾರಾಂ, ತಾಯಿ ಲಕ್ಷ್ಮಿ. ವಿದ್ಯಾಭ್ಯಾಸವೆಲ್ಲವೂ ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ., ಎಲ್.ಎಲ್.ಬಿ. ಮತ್ತು ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿ. ಜೊತೆಗೆ ಹಿಂದಿ ಸಾಹಿತ್ಯರತ್ನ ಪದವೀಧರೆ. ಉದ್ಯೋಗಕ್ಕೆ ಸೇರಿದ್ದು ಎಂ.ಇ.ಎಸ್. ಕಾಲೇಜು, ಪ್ರಾಧ್ಯಾಪಕರ ಹುದ್ದೆ. ನಿವೃತ್ತಿಯ ತನಕವೂ ಅಲ್ಲೇ ಸೇವೆ. ‘ಕನ್ನಡದಲ್ಲಿ ಗೀತ ನಾಟಕಗಳು : ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಸುಮಾರು ಐವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ, ಯಶಸ್ವಿ ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ. ಹಲವಾರು …

ಪೂರ್ತಿ ಓದಿ...

ಎ. ಪಂಕಜ

A Pankaja

ಎ. ಪಂಕಜ (೨೦.೦೪.೧೯೩೨): ಸಮಾಜಸೇವಕಿ, ಲೇಖಕಿ, ಉತ್ತಮ ಗೃಹಿಣಿ ಎನಿಸಿದ ಪಂಕಜರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಪಾವಗಡದಲ್ಲಿ ೧೯೩೨ ರ ಏಪ್ರಿಲ್‌ ೨೦ ರಂದು. ತಂದೆ ಶ್ರೀನಿವಾಸಾಚಾರ್, ತಾಯಿ ವಕುಳಮ್ಮ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ಇವರ ಮೇಲೂ ಬೀರಿದ ಪ್ರಭಾವ. ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದವರು. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ. ಇವರು ಹುಟ್ಟಿದ ಸಂದರ್ಭದಲ್ಲಿ ದೇಶದ ತುಂಬೆಲ್ಲ ದೇಶ ಪ್ರೇಮ, ಸ್ವಾತಂತ್ಯ್ರ, …

ಪೂರ್ತಿ ಓದಿ...
Google+ Publisher