Recent Posts

ಪಂಪ

ಪಂಪ (ಕ್ರಿ.ಶ. ೯೦೨-೯೫೦) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಎಂಬ ಎರಡು ಕೃತಿಗಳ ಕರ್ತೃ. ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ ಒಬ್ಬನಾಗಿದ್ದನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. ಹಿನ್ನೆಲೆ ಪಂಪನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಲಬ್ಬೆ. ಕ್ರಿ.ಶ.ಸುಮಾರು ೯೩೫ ರಿಂದ ೯೫೫ರ ವರೆಗೆ ಆಳಿದ …

ಪೂರ್ತಿ ಓದಿ...

ದುರ್ಗಸಿಂಹ

ದುರ್ಗಸಿಂಹನು ತನ್ನವಿಚಾರವನ್ನು ತನ್ನಕೃತಿಯಲ್ಲಿ ಕನ್ನಡದ ಆದಿ ಕವಿ ಪಂಪನ ಹಾಗೆ ವಿವರವಾಗಿ ನಿವೇದಿಸಿಕೊಂಡಿರುವುದರಿಂದ ಕವಿಚರಿತೆಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಅವನು ತನ್ನ ಊರು ಕರ್ನಾಟಕದ ಸಯ್ಯಡಿಯ ಅಗ್ರಹಾರವೆಂದು ಹೇಳಿದ್ದಾನೆ. ‘ಛಂದೋಂಬು ಯನ್ನು ಬರೆದ ನಾಗವರ್ಮನ ಊರು ಅದೇ ಆಗಿದೆ. ಅದು ಕಿಸುಕಾಡುನಾಡಿನಲ್ಲಿದೆ ಎಂದು ಅವನು ಹೇಳಿದ್ದಾನೆ. ಆ ಸಯ್ಯಡಿಯಲ್ಲಿ ತನ್ನ ಚಕ್ರವರ್ತಿಯ ಆಜ್ಞೆಯಂತೆ ಹರಿಹರಭವನಗಳನ್ನು ದುರ್ಗಸಿಂಹನು ಕಟ್ಟಿಸಿದನಂತೆ, ಸಯ್ಯಡಿ ಇಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿದೆ. ದುರ್ಗಸಿಂಹನು ಪದ್ಯಗಳು ಸೂಕ್ತಿ ಸುಧಾರ್ಣವದಲ್ಲಿ ದೊರಕುವುದರಿಂದ ದುರ್ಗಸಿಂಹನು ಕ್ರಿ.ಶ. ೧೧೩೯ ರಿಂದ ಕ್ರಿ.ಶ. ೧೧೪೯ರ ವರೆಗೆ ಆಳಿದ ಚಾಲುಕ್ಯ …

ಪೂರ್ತಿ ಓದಿ...

ಜನ್ನ

ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ.(ಕಾಲ :ಕ್ರಿ.ಶ.೧೧೮೦-೧೨೬೦) ತಂದೆ ತಾಯಿಗಳು ,ಮತ್ತು ಪರಿವಾರ : ಈತನ ತಂದೆ ಶಂಕರ(ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು ; ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು. ಜೈನಮತೀಯನಾದರೂ, ಅವನ ಸಾಹಿತ್ಯ ಕೃಷಿ, ಸರ್ವಪ್ರಾಕಾರಗಳನ್ನು ವ್ಯಾಪಿಸಿತ್ತು : ಜನ್ನನು, …

ಪೂರ್ತಿ ಓದಿ...
  • vishwanandini-005

    ವಿಶ್ವನಂದಿನಿ ಲೇಖನ ಮಾಲೆ – 005

    ಗ್ರಹಣಕಾಲದಲ್ಲಿ ಪಠಿಸಬೇಕಾದ ಶ್ಲೋಕಗಳ ಅರ್ಥಾನುಸಂಧಾನ ಗ್ರಹಣದ ಸಂದರ್ಭದಲ್ಲಿ ಅಷ್ಟದಿಕ್ಕುಗಳಲ್ಲಿ ನೆಲೆನಿಂತು ನಮ್ಮನ್ನು ರಕ್ಷಿಸುವ ದೇವತೆಗಳನ್ನು ವಿಶೇಷವಾಗಿ ಪ್ರಾರ್ಥಿಸಬೇಕು ಎಂದು ಶಾಸ್ತ್ರ ತಿಳಿಸುತ್ತದೆ. ಕೆಳಗಿನ ಶ್ಲೋಕಗಳನ್ನು ಅರ್ಥದ ಸಮೇತವಾಗಿ ಮೊದಲಿಗೆ ಒಂದೆರಡು ಬಾರಿ ಓದಿ, ಅದನ್ನು ಮನಸ್ಸಿಗೆ ತಂದು ಕೊಂಡು ಆ ಬಳಿಕ ಆ ಶ್ಲೋಕಗಳನ್ನು ಪಠಿಸುತ್ತಾ ಆ ದೇವತೆಗಳಿಗೆ ಅವರ ಅಂತರ್ಯಾಮಿಯಾದ ಭಗವಂತನಿಗೆ ನಮಸ್ಕಾರಗಳನ್ನು ಸಮರ್ಪಿಸಿ. ಮೊಟ್ಟ ಮೊದಲಿಗೆ ಗುರುಗಳ, ಪರಮಗುರುಗಳ, ಗುರುಪರಂಪರೆಯ ಜ್ಞಾನಿಗಳ, ಶ್ರೀಮದಾಚಾರ್ಯರ, ವೇದವ್ಯಾಸದೇವರ ಪರಮಮಂಗಳ ರೂಪಗಳನ್ನು ನೆನೆದು ನಮಸ್ಕರಿಸಿ. ಮೊದಲಿಗೆ ಪೂರ್ವದಿಕ್ಕಿಗೆ ಮುಖ ಮಾಡಿ ಎರಡೂ ಕೈಗಳನ್ನು ಜೋಡಿಸಿ, ಪೂರ್ವದಿಕ್ಕಿನಲ್ಲಿ ಸಮಸ್ತ …

    ಪೂರ್ತಿ ಓದಿ...
  • ವಿಶ್ವನಂದಿನಿ ಲೇಖನ ಮಾಲೆ – 019

  • sudarshan chakra

    ಶ್ರೀ ಕೃಷ್ಣನ ಸುದರ್ಶನಚಕ್ರವನ್ನೇ ಬಯಸಿದ ಬಿಲ್ಲುಗಾರ

    ಮಕ್ಕಳೇ, ಇದು ಮಹಭಾರತದಲ್ಲಿ ಬರುವ ಕಥೆ. ನಿಮಗೆಲ್ಲ ಅಪೂರ್ವ ಬಿಲ್ವಿದ್ಯಾ ಗುರು ದ್ರೊಣಾಚಾರ್ಯರ ಬಗ್ಗೆ ಗೊತ್ತೇ ಇದೆ. ಇವರು ಕೌರವರಿಗೂ, ಪಾಂಡವರಿಗೂ ಬಿಲ್ವಿದ್ಯೆ ಕಲಿಸಿದ ಗುರು. ಇವರಿಗೆ ಅಶ್ವತ್ಥಾಮನೆಂಬ ಮಗನಿದ್ದನು. ಅವನು ತನ್ನ ತಂದೆ ದ್ರೊಣರಿಂದ ಹಾಗು ಸೋದರಮಾವ ಕೃಪಾಚಾರ್ಯರಿಂದ ಬಿಲ್ವಿದ್ಯೆ ಕಲಿತು ಶ್ರೇಷ್ಠ ಬಿಲ್ಲುಗಾರನದನು. ಅನೇಕ ಗೌಪ್ಯ ಬಾಣ ಪ್ರಯೋಗಗಳನ್ನೆಲ್ಲಾ ಕಲಿತು ಬಹುಬೇಗ ನಿಸ್ಸೀಮನಾದನು. ಹೀಗಿರುವಾಗ ಅವನಿಗೆ ಶ್ರೀಕೃಷ್ಣನು ಪಾಂಡವರಿಗೆ ಅಭಯವಿತ್ತ ವಿಷಯ ತಿಳಿಯಿತು. ಅವನು ತಾನೂ ಹೋಗಿ ಶ್ರೀಕೃಷ್ಣನಿಂದ ಏನನ್ನಾದರೂ ಪಡೆಯಲು ಇದೇ ಸುಸಮಯವೆಂದು ಭಾವಿಸಿದನು. ಶ್ರೀಕೃಷ್ಣನಲ್ಲಿ ಅವನು, “ನೋಡು ನನ್ನ …

    ಪೂರ್ತಿ ಓದಿ...
  • Lord Ganesh

    ಶ್ರೀ ಗಣೇಶ ಸಿಂಧುರಾಸುರನನ್ನು ವಧಿಸಿದ ಕಥೆ

  • ಅಲೆಮಾರಿಗಳ ‘ಬುಡ್ಗನಾದ’

    ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ. ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ. ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. …

    ಪೂರ್ತಿ ಓದಿ...
  • ಕೋಳಿ ಅಂಕ

    ಕೋಳಿ ಅಂಕ

  • kolata

    ಕೋಲಾಟ

  • nambikegalu

    ಜನಪದ ನಂಬಿಕೆಗಳು

  • marriage

    ಮದುವೆ ಮನೆಯಲ್ಲಿ ಜರೆಯುವ ಹಾಡು

  • Kumaravyasa

    ಕುಮಾರವ್ಯಾಸ

    ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ …

    ಪೂರ್ತಿ ಓದಿ...
  • ಕನ್ನಡ ಕವಿಗಳ ಕಾವ್ಯ ಕಲ್ಪನೆ

  • ಭರತೇಶ ವೈಭವ

  • ರತ್ನಾಕರ ವರ್ಣಿ

  • ಪಂಪ

  • Master Hiranayya

    ಮಾಸ್ಟರ್ ಹಿರಣ್ಣಯ್ಯ

    ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ …

    ಪೂರ್ತಿ ಓದಿ...
  • ಮರಿಯಪ್ಪ ನಾಟೇಕರ್

  • ಮಂಡ್ಯ ರಮೇಶ್

  • ಬಿ.ಜಯಮ್ಮ

  • ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ

  • yamuna murthy

    ಯಮುನಾ ಮೂರ್ತಿ

    ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು ಮಾರ್ಚ್ 8, 1933ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್ ಮತ್ತು ತಾಯಿ ವೆಂಕಮ್ಮನವರು. ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ …

    ಪೂರ್ತಿ ಓದಿ...
  • pratibha prahlad

    ಪ್ರತಿಭಾ ಪ್ರಹ್ಲಾದ್

  • udayashankar

    ಮಹಾನ್ ನೃತ್ಯ ಕಲಾವಿದ ಉದಯಶಂಕರ್

  • sahana

    ಸಹನಾ ಚೇತನ್

  • yamini

    ಯಾಮಿನಿ ಕೃಷ್ಣಮೂರ್ತಿ

ಸೊಬಗು: ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕನ್ನಡವೆಂಬ ನಾಡಿನಲ್ಲಿ, ನುಡಿಯಲ್ಲಿ ಕನ್ನಡವೆಂಬ ಜನಪದವು ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ನಮ್ಮ ತಾಣ (ನಮ್ಮ ಕನ್ನಡ ನಾಡು) ತಿಳಿಯಪಡಿಸುತ್ತಿದೆ.

ಕನ್ನಡವೆಂಬ ನಾಡು ನುಡಿಬಲ, ಜನಪದಬಲ ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

Google+ Publisher