ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ

indian former

ನೇಗಿಲ ಯೋಗಿಯ ಈ ಹಾಡು ನಮ್ಮ ರೈತರಿಗೆ ದೊರೆತ ಬಹು ದೊಡ್ಡ ಸನ್ಮಾನವೆಂದು ನನಗನಿಸುತ್ತದೆ. ಅಂತ ಒಂದು ಸನ್ಮಾನ ವಿಶ್ವಮಾನವ ಕುವೆಂಪು‘ರವರಿಂದ ದೊರಕಿರುವುದು ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಕಾಮನಬಿಲ್ಲು ಚಿತ್ರವನ್ನು ನಾನಿನ್ನೂ ವೀಕ್ಷಿಸಿಲ್ಲ, ಹಾಡನ್ನೂ ಕೂಡ. ಆದರೆ ಈ ಹಾಡು ನಮ್ಮ ಕವಿಗಳ ಕಡೆಯಿಂದ ರೈತರಿಗೆ ಸರ್ವಕಾಲಿಕ ಕೊಡುಗೆ. ಅದೇ ಕಾರಣಕ್ಕೇನೋ ಈ ಹಾಡು ನಮ್ಮ ರಾಜ್ಯದ ರೈತರ ಹಾಡಾಗಿ ಸ್ವೀಕರಿಸಲಾಗಿದೆ. ಈ ಹಾಡಿನಲ್ಲಿ ಯಾವದೇ ಕೊರತೆಗಳಿಲ್ಲ. ಆರಂಭದಿಂದ ಅಂತ್ಯದವರೆಗೂ ನಮ್ಮನ್ನು ಮಗ್ನಗೊಳಿಸುತ್ತದೆ. ಸರಿಯಾಗಿ ಆಲಿಸಿದ್ದೆ ಆದಲ್ಲಿ, ರೋಮಾಂಚನಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಈ ಹಾಡಿನಲ್ಲಿ ಇರುವ …

ಪೂರ್ತಿ ಓದಿ...

ನಿದ್ರೆ ಮಾಡುವಾಗ ಕೆಟ್ಟ ಕನಸು ಬೀಳುತ್ತಿದ್ದರೆ, ಇಗ್ನೋರ್‌ ಮಾಡಬೇಡಿ ಎಚ್ಚರವಿರಲಿ..

bad dream

ಒಂದು ವೇಳೆ ನೀವು ನಿದ್ರೆಯಲ್ಲಿ ಪದೇ ಪದೇ ಕನಸು ಕಾಣುತ್ತಿದ್ದರೆ, ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೇ ಇದ್ದರೆ ನೀವು ಎಚ್ಚರದಿಂದ ಇರಲೇಬೇಕು. ಹೀಗೆ ಮುಂದುವರೆದರೆ ನೀವು ಪೋಸ್ಟ್‌ ಟ್ರಾಮ್ಯಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ಗೆ ಗುರಿಯಾಗಲಿದ್ದೀರಿ. ಈ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿ ಬೇಗನೆ ವಿಚಲಿತರಾಗುತ್ತಾರೆ ಹಾಗೂ ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಮನೋವಿಜ್ಞಾನಿ ಡಾ. ಪ್ರಶಾಂತ್‌ ಶುಕ್ಲ ತಿಳಿಸಿದ್ದಾರೆ. ಡಾ. ಶುಕ್ಲಾ ಅವರು ತಮ್ಮ ಸಂಶೋಧನೆಯ ಮೂಲಕ ಹೇಳಿರುವಂತೆ ಬಾಲ್ಯದಲ್ಲಿ ಮನಸ್ಸಿಗೆ ಏನಾದರು ಆಘಾತ ಉಂಟಾದರೆ ಅಥವಾ ಕುಟುಂಬದಲ್ಲಿ ಏನಾದರು ಆಘಾತ ಉಂಟಾದರೆ ಈ …

ಪೂರ್ತಿ ಓದಿ...

ರಾಜಸ್ಥಾನದಲ್ಲಿರುವ ತನೋಟ್ ಮಾತಾ ದೇವಾಲಯ: ಇಲ್ಲಿ ಪಾಕಿಸ್ಥಾನ 3 ಸಾವಿರ ಬಾಂಬ್ ಹಾಕಿದ್ದರೂ ಒಂದೂ ಸಿಡಿದಿರಲಿಲ್ಲ!

Shri Tanot Mata Temple

ಆಧ್ಯಾತ್ಮ, ಧರ್ಮಗಳ ಬಗ್ಗೆ ಇಡಿ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದೆ ಭಾರತ. ಭರತ ವರ್ಷದ ಅಸ್ಥಿತ್ವವೂ ಸಹ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಉತೃಷ್ಟ ಸಂಸ್ಕಾರ, ಪರಂಪರೆಯಿಂದಲೇ ಸಾಧ್ಯವಾಗಿದೆ. ಪರಕೀಯರ ದಾಳಿ, ಅವರ ಆಡಳಿತದ ಅವಧಿಯಲ್ಲಿ ಇಲ್ಲಿನ ಆಚರಣೆ, ಸಂಸ್ಕೃತಿಗಳಿಗೆ ಉಂಟಾದ ಗದಾಪ್ರಹಾರದ ಹೊರತಾಗಿಯೂ ಇಂದಿಗೂ ಭಾರತ ತನ್ನ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ವಿಷಯವಾಗಿದೆ. ರಾಜಸ್ಥಾನದ ತನೋಟ್ ಮಾತಾ ದೇವಾಲಯ ಇಂತಹ ಅಚ್ಚರಿಗಳ ಸಾಲಿಗೆ ಸೇರುವ ದೇವಾಲಯವಾಗಿದೆ. ರಾಜಸ್ಥಾನ ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ. ರಾಜಸ್ಥಾನದ ಜೈಸಲ್ಮೇರ್ ನಿಂದ 120 ಕಿಮೀ …

ಪೂರ್ತಿ ಓದಿ...

ಪ್ರಯಾಣದಲ್ಲಿ ಹಣ ಉಳಿತಾಯ ಹೇಗೆ ? ಇಲ್ಲಿವೆ ಉಪಯುಕ್ತ ಮಾಹಿತಿಗಳು

travel

ನಾನು ಇಷ್ಟು ಅಗ್ಗವಾಗಿ ಪ್ರಯಾಣಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಆಗಾಗ್ಗೆ ಪ್ರಶ್ನೆ ಎದುರಾಗುತ್ತದೆ. ನಾನೇನು ಖುಷಿ ಪಡಲು ಸಿಗುವ ಸಮಯವನ್ನು ಕಳೆದುಕೊಳ್ಳುವುದಿಲ್ಲ. ಉದಾಹರಣೆಗೆ ನಾನೊಮ್ಮೆ ದೆಹಲಿಯಿಂದ ಮನಾಲಿಗೆ ನಾಲ್ಕು ದಿನಗಳ ಪ್ರವಾಸವನ್ನು ಕೇವಲ ರೂ. 5000ದಲ್ಲಿ ಮುಗಿಸಿ ಬಂದೆ. ಅದರಲ್ಲಿ ನನ್ನ ಹೋಗಿ ಬರುವ ಪ್ರಯಾಣದ ವೆಚ್ಚ, ಊಟದ ವೆಚ್ಚ ಮತ್ತು ಹೊಟೇಲ್ ವೆಚ್ಚಗಳೂ ಸೇರಿದ್ದವು. ನಾನಿದನ್ನು ಹೇಗೆ ಮಾಡಿದೆ ಎಂದು ಅಚ್ಚರಿಯೇ? ಆ ಒಂದು ಪ್ರವಾಸದ ವಿವರಗಳನ್ನು ತಿಳಿಸುವ ಬದಲಾಗಿ ನಾನು ಪ್ರತೀ ಬಾರಿ ಪ್ರಯಾಣಿಸುವಾಗಲೂ ಹೀಗೆ ಅಗ್ಗದಲ್ಲಿ ಮುಗಿಸಲು ಹೇಗೆ ಸಾಧ್ಯವಾಗುತ್ತದೆ …

ಪೂರ್ತಿ ಓದಿ...

ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಆಡಳಿತ ನಡೆಸುವ ಮಲೇಷ್ಯಾ ಸುಲ್ತಾನರು!

URUSAN SERI PADUKA BEGINDA

ರಾಮಾಯಣ ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದು, ರಾಮ ಹಾಗೂ ರಾಮಾಯಣದ ತತ್ವಗಳು ಭಾರತಕ್ಕಷ್ಟೇ ಅಲ್ಲದೇ ವಿದೇಶಗಳಲ್ಲೂ ಪೂಜನೀಯ ಸ್ಥಾನ ಪಡೆದಿದೆ. ಶ್ರೀಲಂಕಾ, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತದಂತೆಯೇ ರಾಮಾಯನವನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸಲಾಗುತ್ತಿದೆ. ಮಲೇಷ್ಯಾದಲ್ಲೂ ರಾಮ ಹಾಗೂ ರಾಮಾಯಣದ ಪ್ರಭಾವವಿದ್ದು, ಅಲ್ಲಿನ ಸುಲ್ತಾನರು (ಪ್ರಧಾನಮಂತ್ರಿ) ಗಳು ಪ್ರಮಾಣವಚನ ಸ್ವೀಕರಿಸುವುದು ಹಾಗೂ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ಆದೇಶಗಳನ್ನು ಹೊರಡಿಸುವುದು ಶ್ರೀ ಪಾದುಕಾ ಹೆಸರಿನಲ್ಲಿ ಅರ್ಥಾತ್ ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಎಂಬ ನಂಬಿಕೆ ಇದೆ. ರಾಮಾಯಣದಲ್ಲಿ ಭಾರತ ಶ್ರೀರಾಮನ ಪಾದುಕೆಗಳನ್ನಿಟ್ಟು ಆಡಳಿತ ನಡೆಸಿದಂತೆ ಮಲೇಷ್ಯಾದ ಸುಲ್ತಾನರು …

ಪೂರ್ತಿ ಓದಿ...

ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತು ನೋಡಿದ್ರೆ ಒಳ್ಳೆಯದು ಗೊತ್ತಾ?

Karagre

ಧನ ಹಾಗೂ ಸಂಪತ್ತು ಗಳಿಸಲು ನಾವು ಏನೇನು ಮಾಡೋದಿಲ್ಲ ಹೇಳಿ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತೇವೆ. ಜ್ಯೋತಿಷ್ಯದ ಪ್ರಕಾರ ನಾವು ಮಾಡುವ ಕೆಲಸದ ಜೊತೆಗೆ ಬೆಳ್ಳಂಬೆಳಿಗ್ಗೆ ಎದ್ದ ತಕ್ಷಣ ನಾವು ನೋಡುವ ವಸ್ತುಗಳು ಹಾಗೂ ಅದೃಷ್ಟದ ನಡುವೆ ಸಂಬಂಧವಿರುತ್ತದೆ. ಬೆಳಿಗ್ಗೆ ಯಾರ ಮುಖ ನೋಡಿದ್ನೋ, ಇವತ್ತಿನ ದಿನ ಹಾಳಾಯ್ತು ಅನ್ನೋರನ್ನು ನಾವು ಕೇಳಿದ್ದೇವೆ. ಜ್ಯೋತಿಷ್ಯ ಬೆಳಿಗ್ಗೆ ಏನನ್ನು ನೋಡಿದ್ರೆ ಒಳ್ಳೆಯದಾಗುತ್ತೆ. ಏನನ್ನು ನೋಡಿದ್ರೆ ಕೆಟ್ಟದ್ದಾಗುತ್ತೆ ಎಂಬುದನ್ನು ಹೇಳಿದೆ. ನೀವು ಏಳ್ತಾ ಇದ್ದಂತೆ ಶಂಖ, ಗಂಟೆ, ಪೂಜೆಯ ಶಬ್ದ ಕೇಳಿದ್ರೆ ನೀವು ಮಾಡುವ ಕಾರ್ಯದಲ್ಲಿ …

ಪೂರ್ತಿ ಓದಿ...

ರಕ್ಷಣೆಯನ್ನು ನೀಡುವ ಬಂಧನ- ಅದುವೇ ‘ರಕ್ಷಾ ಬಂಧನ’

raksha bandhan

“ರಕ್ಷಾ ಬಂಧನ” ಎನ್ನುವ ಹೆಸರೇ ಸೂಚಿಸುವಂತೆ ಇದು “ರಕ್ಷಣೆಯನ್ನು ನೀಡುವ ಬಂಧನ”. ಈ ಹಬ್ಬದಂದು ಸಹೋದರರು ಅವರ ಸಹೋದರಿಯರಿಗೆ ಎಂತಹ ಕಷ್ಟದಲ್ಲಾದರು ಸರಿ ಬಂದು ಕಾಪಾಡುತ್ತೇವೆ ಎಂಬ ಪ್ರಮಾಣವನ್ನು ಮಾಡುತ್ತಾರೆ. ಅದೇ ರೀತಿ ಸಹೋದರಿಯರು ದೇವರು ತಮ್ಮ ಸಹೋದರನನ್ನು ದುಷ್ಟಶಕ್ತಿಗಳಿಂದ ಕಾಪಾಡಲಿ ಎಂದು ಅರಸಿಕೊಳ್ಳುತ್ತ ರಕ್ಷಾ ಬಂಧನವನ್ನು ಕಟ್ಟುತ್ತಾರೆ. ಈ ಹಬ್ಬವು ಶ್ರಾವಣ ಪೂರ್ಣಿಮೆಯ ದಿನದಂದು ಬರುತ್ತದೆ. ಅಂದರೆ ಆಗಸ್ಟ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ. [totalpoll id=”2830″] ರೇಷ್ಮೆಯಿಂದ ಮಾಡಲಾಗಿರುವ ದಾರದಿಂದ ತಯಾರಿಸಲಾದ ರಾಖಿಯನ್ನು ಸೋದರರ ಕೈಗೆ ಕಟ್ಟಲಾಗುತ್ತದೆ. ಹೀಗೆ ಕಟ್ಟುವಾಗ ತಮ್ಮ ಸೋದರರಿಗೆ …

ಪೂರ್ತಿ ಓದಿ...

ರಕ್ಷಾಬಂಧನ ಹಬ್ಬದ ಹಿಂದಿರುವ ಪುರಾಣ ಕಥೆಗಳನ್ನು ಕೆಣಕಿದಾಗ..!

rakhi

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸುಗ್ಗಿ. ಈ ಮೂರು ನಾಲ್ಕು ತಿಂಗಳುಗಳಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಹಬ್ಬಗಳು ಬರುತ್ತಾ ಹೋಗುತ್ತವೆ, ಸಂತೋಷವನ್ನು ನೀಡುತ್ತಾ ಹೋಗುತ್ತವೆ. ಅದರಲ್ಲಿ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ. ಅಣ್ಣನ ಕೈಗಂಟಿಗೆ ಬಣ್ಣದ ರಾಖಿ ಕಟ್ಟುವ ಮೂಲಕ ತಂಗಿ ತನ್ನ ಅಣ್ಣನು ತನಗೆ ದುಷ್ಟಶಕ್ತಿಗಳಿಂದ ಸುರಕ್ಷತೆಯನ್ನು ನೀಡುವಂತಾಗಲಿ ಎಂದು ಹಾರೈಸುತ್ತಾಳೆ. ಹೌದು, ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದ್ದು. ತಾಯಿಯ ಮಮತೆಯಂತೆಯೇ ಅಣ್ಣನ ರಕ್ಷಣೆ ಪ್ರೀತಿ ಹೆಣ್ಣಿಗೆ ಬಲವಿದ್ದಂತೆ. ಅನಾದಿ ಕಾಲದಿಂದಲೂ ಅಣ್ಣ …

ಪೂರ್ತಿ ಓದಿ...

ಮಿಂಚುಳ್ಳಿ

ಮಿಂಚುಳ್ಳಿಗಳು ಕೊರಾಸಿಫಾರ್ಮ್ಸ್ ವರ್ಗದಲ್ಲಿನ ಚಿಕ್ಕದಿಂದ ಮಧ್ಯಮ ಗಾತ್ರದ ಪ್ರಕಾಶಮಾನವಾದ ಬಣ್ಣವನ್ನೊಂದಿದ ಪಕ್ಷಿಗಳ ಒಂದು ಪಂಗಡ. ಅವು ಜಗದ್ವ್ಯಾಪಕ ವಿತರಣೆಯನ್ನು ಹೊಂದಿವೆ, ಇವುಗಳ ಬಹುತೇಕ ತಳಿಗಳನ್ನು ಪುರಾತನ ಪ್ರಪಂಚ ಮತ್ತು ಆಸ್ಟ್ರೇಲಿಯದಲ್ಲಿ ಕಾಣಲಾಗಿತ್ತು. ಈ ಪಂಗಡವನ್ನು ಒಂಟಿ ಸಂತತಿ, ಆಲ್ಸಿಡಿನಿಡೇ, ಅಥವಾ ಮೂರು ಸಂತತಿಗಳನ್ನು, ಆಲ್ಸಿಡಿನಿಡೇ (ನದಿಯ ಮಿಂಚುಳ್ಳಿಗಳು), ಹಾಲ್ಸಿಯೊನಿಡೇ(ಮರದ ಮಿಂಚುಳ್ಳಿಗಳು), ಮತ್ತು ಸೆರಿಲಿಡೇ (ನೀರಿನ ಮಿಂಚುಳ್ಳಿಗಳು) ಒಳಗೊಂಡ ಉಪವರ್ಗ ಆಲ್ಸೆಡಿನೀಸ್ ಎಂದು ಪರಿಗಣಿಸಲಾಗುವುದು. ಸುಮಾರು 90 ಮಿಂಚುಳ್ಳಿ ತಳಿಗಳಿವೆ. ಇವೆಲ್ಲವೂ ದೊಡ್ಡದಾದ ತಲೆಗಳನ್ನು, ಉದ್ದನೆಯ, ತೀಕ್ಷ್ಣ, ಮೊನಚಾದ ಕೊಕ್ಕುಗಳನ್ನು, ಕುಳ್ಳಗಿನ ಕಾಲುಗಳನ್ನು, ಮತ್ತು ಮಂದವಾದ …

ಪೂರ್ತಿ ಓದಿ...

ಕರ್ನಾಟಕ ಪೋಲೀಸ್ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲದಿರುವ 14 ಐತಿಹಾಸಿಕ ಸತ್ಯಗಳು

police

ಕರ್ನಾಟಕಲ್ಲಿ ಪೊಲೀಸ್ ವ್ಯವಸ್ಥೆಗೆ ಸುಮಾರು 200ಕ್ಕೂ ಹೆಚ್ಚು ವರ್ಷದ ಇತಿಹಾಸ ಇದೆ. ಬೇರೆ ಬೇರೆ ಕಾಲಮಾನದಲ್ಲಿ ಬೇರೆ ಬೇರೆ ಥರ ವ್ಯವಸ್ಥೆಗಳನ್ನ ಕಂಡು ಬೆಳೆದಿದೆ ನಮ್ಮ ಕರ್ನಾಟಕ ಪೊಲೀಸ್ ವ್ಯವಸ್ಥೆ. ಬನ್ನಿ ಚುಟುಕಾಗಿ ಎಲ್ಲಾ ತಿಳ್ಕೊಳೋರಂತೆ… 1. ಮೊದಲು ನಮ್ಮಲ್ಲಿ ಪೋಲೀಸ್ನೋರು ಅಂತ ಯಾರೂ ಇರ್ಲಿಲ್ಲ ಆದ್ರೆ ತೋಟಿ-ತಳವಾರರು, ಅಮಲ್ದಾರರು, ಕಟ್ಟುಬಿಡಿ, ನೀರಗಂಟೆ, ಹೀಗೆ ಬೇರೆ ಬೇರೆ ಹೆಸರಿನ ಕಸುಬಿನೋರು ಇವತ್ತು ಪೊಲೀಸ್ನೋರು ಮಾಡೋ ಬೇರ್ ಬೇರೆ ಕೆಲ್ಸ ಮಾಡ್ತಿದ್ರು. 2. ಮೈಸೂರು ಸಂಸ್ಥಾನದಲ್ಲಿ ಮೊದಲ ಸಲ ಪೊಲೀಸ್ ಅನ್ನೋ ಹುದ್ದೆ ಹುಟ್ಟಿಕೊಂಡಿದ್ದು ಮುಮ್ಮಡಿ …

ಪೂರ್ತಿ ಓದಿ...
Google+ Publisher