GST ಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಟಿಪ್ಸ್
Jootoor
July 10, 2017
ಕವನಗಳು
4,305 ವೀಕ್ಷಕರು
- ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದಾಗಿನಿಂದ ಜೇಬಿಗೆ ಕತ್ತರಿ, ಗ್ರಾಹಕರಿಗೆ ಹೊರೆ, ಬರೆ ಇವೇ ಮೊದಲಾದ ಪದಗಳು ಕೇಳಿ ಬರುತ್ತಿವೆ.
- ಇಂತಹ ಜಿ.ಎಸ್.ಟಿ.ಯಿಂದ ತಪ್ಪಿಸಿಕೊಳ್ಳಲು ಸಿಂಪಲ್ ಸೂತ್ರಗಳು ಇಲ್ಲಿವೆ. ನೀವು ಮನೆಯಿಂದ ಹೊರಗೆ ಹೋಗುವಾಗ ನೀರಿನ ಬಾಟಲಿ ಜೊತೆಗಿರಲಿ. ಹೊರಗೆ ನೀರು ಖರೀದಿಸಿದರೆ ಹೊರೆ ಎನಿಸಬಹುದು.
- ಹೋಟೆಲ್ ಗಳಿಗೆ ಹೋಗಿ ತಿಂಡಿ, ತಿನಿಸು ತಿನ್ನುವ ಬದಲು ಮನೆಯಿಂದಲೇ ನಿಮಗೆ ಇಷ್ಟವಾದ ತಿಂಡಿಯನ್ನು ಬಾಕ್ಸ್ ಗೆ ಹಾಕಿಕೊಂಡು ಕೆಲಸಕ್ಕೆ ಹೋಗಬಹುದಾಗಿದೆ.
- ಇನ್ನು ವೀಕೆಂಡ್ ನಲ್ಲಿ ಮನೆಯಿಂದ ದೂರ ಉಳಿಯದೇ, ಫ್ಯಾಮಿಲಿಯೊಂದಿಗೆ ಕಾಲ ಕಳೆಯಿರಿ. ಮನೆ ಮಂದಿಯೆಲ್ಲಾ ಸೇರಿಕೊಂಡು ಸಂಭ್ರಮಿಸಿರಿ.
- ಸಿನಿಮಾ ನೋಡಲು ಮಲ್ಟಿಫ್ಲೆಕ್ಸ್ ಗಳ ಬದಲು ಥಿಯೇಟರ್ ಗೆ ಹೋಗುವುದು ಒಳಿತು. ಇನ್ನು ಶಾಪಿಂಗ್ ಮಾಡಲು ಹೋಗಿ ಸಮಯ, ಹಣ ವ್ಯರ್ಥ ಮಾಡಿಕೊಳ್ಳುವ ಬದಲು ಊರಿಗೆ ಹೋಗಿ ಬಂಧುಗಳು, ಸ್ನೇಹಿತರೊಂದಿಗೆ ಕಾಲ ಕಳೆಯಿರಿ.
- ಕೆಲಸ ಮುಗಿಸಿ ಮನೆಗೆ ಹೋಗುವಾಗ ಹೋಟೆಲ್ ಗೆ ಹೋಗದೇ ಸೀದಾ ಮನೆಗೆ ಹೋಗಿ ಕಾಫಿ, ಟೀ ಕುಡಿಯಿರಿ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ. ಐಷಾರಾಮಿ ಜೀವನಕ್ಕೆ ಬ್ರೇಕ್ ಹಾಕಿದಲ್ಲಿ ಜಿ.ಎಸ್.ಟಿ. ಹೊರೆಯಿಂದ ಪಾರಾಗಬಹುದು.