ಸ್ವಾತಂತ್ರ್ಯ ಹೋರಾಟಗಾರರು

ಖುದಿರಾಮ್ ಭೋಸ್

Khudiram Bose

‘ಕಿಂಗ್ಸ್ ಫೊರ್ಡ್’ ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿರುತ್ತಾನೆ. ಬಿಳಿ ಚರ್ಮದ ನಾಯಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿಶ್ಚಯಿಸಿದ ಅಂದಿನ ಕ್ರಾಂತಿಕಾರಿಗಳು ಅವನನ್ನು ಕೊಲ್ಲಲು ನಿರ್ಧರಿಸುತ್ತಾರೆ. ಆದರೆ ಇದರ ಸುಳಿವು ಪಡೆದ ಬ್ರಿಟೀಷ್ ಸರ್ಕಾರ ಕಿಂಗ್ಸ್ ಫೊರ್ಡ್ ನನ್ನು ಮುಜಾಫರಪುರಕ್ಕೆ ವರ್ಗಾಯಿಸುತ್ತದೆ. ಕಿಂಗ್ಸ್ ಫೊರ್ಡನ ರಕ್ತದಾಹದಿಂದ ಬೇಸತ್ತಿದ್ದ ಕ್ರಾಂತಿಕಾರರಿಗೆ ವರ್ಗಾವಣೆಯ ಸುದ್ದಿ ಅಡ್ದಿಯಾಗಲಿಲ್ಲ. ಅವನನ್ನು ಕೊಲ್ಲುವ ಅವಕಾಶವನ್ನು ಹದಿನೆಂಟು ವರ್ಷದ ಸಿಡಿಲ ಮರಿಗೆ ವಹಿಸಲಾಯಿತು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿ ಕಿಂಗ್ಸ್ ಫೋರ್ಡನ ಚಲನವಲನಗಳನ್ನು …

ಪೂರ್ತಿ ಓದಿ...

ತುಮಕೂರು ಜಿಲ್ಲೆಯ ಸ್ವಾತಂತ್ರ್ಯ ವೀರರು – ಒಂದು ಕಿರು ಪರಿಚಯ

೯೩೪ ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ಸ್ವರ್ಣಪುಟವನ್ನು ಜೋಡಿಸಿದ ವರ್ಷ. ಮಹಾತ್ಮಗಾಂಧೀಜಿಯವರು ಹರಿಜನೋದ್ದಾರ ನಿಧಿಸಂಗ್ರಹಕ್ಕಾಗಿ ತುಮಕೂರಿಗೆ ಬಂದರು. ಆ ಮಹಾತ್ಮರಿತ್ತ ದಿವ್ಯ ಸ್ಪೂರ್ತಿ ಅನೇಕ ತ್ಯಾಗ ವೀರರ ಸೃಷ್ಟಿಗೆ ಕಾರಣವಾಯಿತು. ಖಾದಿ ಪ್ರಚಾರ, ಹರಿಜನೋದ್ದಾರ, ಪಾನನಿರೋಧಗಳಿಗಾಗಿ ಜಿಲ್ಲೆಯ ಜನತೆ ಕಂಕಣ ತೊಟ್ಟರು. ೧೯೩೮ರಲ್ಲಿ ಮತ್ತೊಂದು ಮೈಲಿಗಲ್ಲಾಗಿ ಧ್ವಜಸತ್ಯಾಗ್ರಹ ನಡೆಯಿತು. ಕುಣಿಗಲ್, ಮಧುಗಿರಿ, ತುಮಕೂರು ಮುಂತಾದೆಡೆ ಮುಖಂಡರುಗಳ ನಾಯಕತ್ವದಲ್ಲಿ ಸತ್ಯಾಗ್ರಹ ನಡೆದು, ಅನೇಕರ ದಸ್ತಗಿರಿಗಳಾದವರು. ೧೯೩೯ರಲ್ಲಿ ಶಿರಾವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅರಣ್ಯ ಸತ್ಯಾಗ್ರಹವೂ ನಡೆಯಿತು. ಈ ಪ್ರಬಲ ಸತ್ಯಾಗ್ರಹದಲ್ಲಿ ಜಿಲ್ಲೆಯ ಸಮಸ್ತ ನಾಯಕರುಗಳಲ್ಲದೆ ಸುಮಾರು ೪೫೦ಮಂದಿ ದಸ್ತಗಿರಿಯಾಯಿತು. …

ಪೂರ್ತಿ ಓದಿ...

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

Sangolli Rayanna

“ತಾಯೆ, ನಿಮ್ಮ ಕಾಲನ್ನು ಮುಟ್ಟಿ ಆಣೆ ಮಾಡುತ್ತೇನೆ ಈ ಆಂಗ್ಲರು ಮೋಸದಿಂದ ನಮ್ಮಿಂದ ಕಿತ್ತು ಕೊಂಡಿರುವ ಕಿತ್ತೂರನ್ನು ಗೆದ್ದು ನಿಮ್ಮ ಕಾಲಿಗೆ ತಂದು ಅರ‍್ಪಿಸುತ್ತೇನೆ. ಇಲ್ಲವಾದಲ್ಲಿ ನಿನಗೆ ನನ್ನ ಸೋತ ಮೂತಿ ತೋರಿಸುವುದಿಲ್ಲ. ಏಕೆಂದರೆ ಹೋರಾಟದಲ್ಲಿ ಸಾವಪ್ಪುತ್ತೇನೆ”. ಹವ್ದು ಇದು ವೀರನೊಬ್ಬನ ಮಾತುಗಳೇ ಆಗಿರಬೇಕು. 190 ವರುಶಗಳ ಹಿಂದೆ ಬಡಗಣ ಕರ‍್ನಾಟಕದ ಬೆಳಗಾವಿ ಜಿಲ್ಲೆಯ ಬಯ್ಲಹೊಂಗಲದ ದೊಡ್ಡ ಬಂಗಲೆಯೊಂದರಲ್ಲಿ ವೀರ ಸಂಗೊಳ್ಳಿ ರಾಯಣ್ಣನು, ರಾಣಿ ಚೆನ್ನಮ್ಮನಿಗೆ ನೀಡಿದ ಆಣೆಯಿದು. ರಾಯಣ್ಣನ ಹುಟ್ಟೂರು ಸಂಗೊಳ್ಳಿ, ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಯ ದಂಡೆಯ ಮೇಲೆ …

ಪೂರ್ತಿ ಓದಿ...

ಆಚಾರ್ಯ ವಿನೋಬಾ ಭಾವೆ

’ಭೂದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು ಆಚಾರ್ಯ  ವಿನೋಬಾ ಭಾವೆ.  ವಿನೋಬಾ ಅವರು  ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋದೆ ಗ್ರಾಮದಲ್ಲಿ  ಸೆಪ್ಟೆಂಬರ್ 11, 1895ರಂದು  ಜನಿಸಿದರು.   ಅವರ ಮೂಲ ಹೆಸರು ವಿನಾಯಕ್ ನರಹರಿ ಭಾವೆ. ಬಾಲ್ಯದಲ್ಲಿಯೇ ವಿವಿಧ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು.  ಅವರಿಗೆ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು.  1916ರಲ್ಲಿ ತಮ್ಮ ಇಂಟರ್ ಮೀಡಿಯೆಟ್ ಪರೀಕ್ಷೆಗಗಾಗಿ  ಮುಂಬೈಗೆ ಹೊರಟಿದ್ದ ವಿನೋಬಾ ಭಾವೆ ಅವರಿಗೆ ಮಹಾತ್ಮ ಗಾಂಧಿಯವರ ಬರಹವೊಂದು ಕಣ್ಣಿಗೆ ಬಿದ್ದು, ತಮ್ಮ ಓದು ಬರಹದ ಪ್ರಮಾಣ ಪತ್ರಗಳಿಗೆಲ್ಲ ಬೆಂಕಿಗೆ ಹಚ್ಚಿಬಿಟ್ಟರಂತೆ.    ತಮ್ಮ …

ಪೂರ್ತಿ ಓದಿ...