ಕವಿಗಳು | ಸಾಹಿತಿಗಳು | ಕಲಾವಿದರು

ಎಂ.ಎನ್.ಗಂಗಾಧರ ರಾಯರು

MN Gangadhararayaru

ಎಂ.ಎನ್.ಗಂಗಾಧರ ರಾಯರು (೦೩.೪.೧೮೮೮ – ೧೨.೩.೧೯೬೧): ನಟಭಯಂಕರರೆನಿಸಿದ್ದ ವೃತ್ತಿ ರಂಗಭೂಮಿ ಕಲಾವಿದರಾದ ಗಂಗಾಧರರಾಯರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಗುಬ್ಬಿಯಲ್ಲಿ. ತಂದೆ ನರಸಿಂಹಯ್ಯ, ತಾಯಿ ಸಾಕಮ್ಮ. ವಿದ್ಯಾಭ್ಯಾಸ ಕೂಲಿಮಠದಲ್ಲಿ. ಅಕ್ಷರತಿದ್ದಿ ಮಗ್ಗಿ ಕಲಿತು, ಸ್ತೋತ್ರ ಕಂಠಪಾಠ ಮಾಡಿಕೊಂಡ ಬಾಲಕ. ಅಚ್ಚರಿಹುಟ್ಟಿಸುವ ದೇಹದಾರ್ಢ್ಯ. ದೊಡ್ಡಗಂಟಲು, ಪುಟ್ಟಭೀಮಸೇನ/ಭೋಜಯ್ಯ, ಹಳ್ಳಿಯವರು ಇಟ್ಟ ಹೆಸರು. ಕುಸ್ತಿಪಟ್ಟು, ವರಸೆಗಳನ್ನು ಕಲಿತು ಜಟ್ಟಿಯಂತಾದ ದೇಹ. ಭಜನೆ, ಸಂಗೀತ, ಹರಿಕಥೆ ನಾಟಕಗಳತ್ತ ಹರಿದ ಒಲವು. ನಾಟಕವೆಂದರೆ ಪಂಚಪ್ರಾಣ. ತುಮಕೂರಿನಲ್ಲಿ ಓದಿದ್ದು ಎಸ್.ಎಸ್.ಎಲ್‌.ಸಿ. ಮೂಕನ ಹಳ್ಳಿಯಲ್ಲಿ ತೆರೆದ ಪ್ರಾಥಮಿಕ ಶಾಲೆಯಲ್ಲಿ ದೊರೆತ ಉಪಾಧ್ಯಾಯರ ಹುದ್ದೆ. …

ಪೂರ್ತಿ ಓದಿ...

ಪ್ರೊ. ಡಿ.ಕೆ. ರಾಜೇಂದ್ರ

DK Rajendra

ಪ್ರೊ. ಡಿ.ಕೆ. ರಾಜೇಂದ್ರ (೦೩.೦೪.೧೯೪೨): ಜನಪದ ಸಾಹಿತ್ಯ, ವಿಮರ್ಶೆ, ಸಂಪಾದನೆ, ವಿಚಾರ ಸಾಹಿತ್ಯ – ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು ಅತ್ಯಮೂಲ್ಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ರಾಜೇಂದ್ರರವರು ಹುಟ್ಟಿದ್ದು ಕವಿ ಕಲಾವಿದರ, ಕಲೆಗಳ ಬೀಡಾದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದ ಪಟೇಲರ ಮನೆತನದಲ್ಲಿ ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ. ಪ್ರಾರಂಭಿಕ ಶಿಕ್ಷಣ ದಂಡಿನ ಶಿವರದಲ್ಲಿ. ಪ್ರೌಢಶಾಲಾ ಶಿಕ್ಷಣ ಅರಕಲಗೂಡು ಮತ್ತು ಶಿರಾ ಪ್ರೌಢಶಾಲೆಗಳಲ್ಲಿ. ಹಾಸನದ ಪ್ರಥಮ ದರ್ಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ನಂತರದ ವಿದ್ಯಾಭ್ಯಾಸ ಮೈಸೂರು. ಮೈಸೂರು ವಿಶ್ವವಿದ್ಯಾಲಯದಿಂದ …

ಪೂರ್ತಿ ಓದಿ...

ಸಿ.ಎಸ್.ಉಷಾ

CS Usha

ಸಿ.ಎಸ್.ಉಷಾ (೦೨.೦೪.೧೯೫೭): ಪಿಟೀಲುವಾದಕರಾಗಿ ಖ್ಯಾತಿ ಪಡೆದಿರುವ ಉಷಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಿ.ಎಸ್.ಸುಂದರಮ್, ತಾಯಿ ಸೀತಾ, ತಾಯಿಯೇ ಸಂಗೀತದ ಮೊದಲ ಗುರು. ಓದಿದ್ದು ಬಿ.ಎಸ್ಸಿ. ಸಂಗೀತದಲ್ಲಿ ಆಸಕ್ತಿ ಹೊಂದಿ ಪಡೆದ ಎಂ.ಎ. ಪದವಿ. ಮೊದಲ ರ್ಯಾಂಕ್ ವಿದ್ಯಾರ್ಥಿನಿ. ಎಳೆತನದಲ್ಲಿ ಕಲಿತದ್ದು ಭರತನಾಟ್ಯವಾದರೂ ಗಾಯನ ಮತ್ತು ವಾದನದ ಕಡೆಗೆ ಸೆಳೆದ ಮನಸ್ಸು. ಪ್ರಾರಂಭಿಕ ಶಿಕ್ಷಣ ಸುಕನ್ಯ, ಭೀಮಾಚಾರ್‌, ಆರ್‌. ರಾಜಲಕ್ಷ್ಮಿ ಮತ್ತು ಎಸ್.ಶೇಷಗಿರಿರಾವ್‌ರವರಲ್ಲಿ. ಜ್ಯೂನಿಯರ್‌ ಮತ್ತು ಸೀನಿಯರ್‌ ಗ್ರೇಡ್‌ಗಳಲ್ಲಿ ರ್ಯಾಂಕ್‌ ವಿದ್ಯಾರ್ಥಿನಿ. ಮುಂದವರೆದ ಶಿಕ್ಷಣ ಕ್ಕಾಗಿ ಸೇರಿದ್ದು ಬೆಂಗಳೂರು ವಿಶ್ವವಿದ್ಯಾಲಯ ಪಿಟೀಲು ವಾದನ ಕಲಿಯಲು ಅರ್ಜಿ …

ಪೂರ್ತಿ ಓದಿ...

ಮಾನ್ವಿ ನರಸಿಂಗರಾವ್

Manvi Narasingarao

ಮಾನ್ವಿ ನರಸಿಂಗರಾವ್ (೨.೪.೧೯೧೧ – ೯.೯.೧೯೬೯): ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದ ನವ್ಯ ಬರಹಗಾರರಲ್ಲಿ ಒಬ್ಬರೆನಿಸಿದ್ದಾರೆ. ಜೀವನ: ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವ ನಿರ್ಮಾಣದಲ್ಲಿ ಪ್ರಮುಖರಾದ ‘’ಮಾನ್ವಿ ನರಸಿಂಗರಾವ್’’’ ಏಪ್ರಿಲ್ ೨, ೧೯೧೧ರಂದು ರಾಯಚೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರರಾವ್ ಅವರು ಮತ್ತು ತಾಯಿ ಚಂದ್ರಮ್ಮನವರು. ತಂದೆ ರಾಘವೇಂದ್ರ ರಾವ್ ಅವರು ರಾಯಚೂರಿನ ತಹಸೀಲ್‌ದಾರರ ಕಚೇರಿಯಲ್ಲಿ ಗಿರ್ದಾವರ್ ಆಗಿದ್ದರು. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ರಾಯಚೂರಿನ ಹಮ್‌ದರ್ದ್ ಹೈಸ್ಕೂಲಿನಲ್ಲಿ ಓದಿದ ನರಸಿಂಗರಾಯರು ಪ್ರತಿಭಾವಂತ ವಿದ್ಯಾರ್ಥಿ ಎಂಬ ಖ್ಯಾತಿ ಪಡೆದಿದ್ದರು. ಮೆಟ್ರಿಕ್ ನಂತರದಲ್ಲಿ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ …

ಪೂರ್ತಿ ಓದಿ...

ವಿ.ಬಿ. ಹಿರೇಗೌಡರ್

VB Herigowdar

ರಾಷ್ಟ್ರೀಯಮಟ್ಟದ ಕಲಾಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿರೇಗೌಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದಲ್ಲಿ. ತಂದೆ ಬಸವನಗೌಡ, ತಾಯಿಗಂಗಮ್ಮ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪದವಿ, ಡಿ.ವಿ.ಹಾಲಭಾವಿ ಮತ್ತು ಎಂ.ವಿ. ಮಿಣಜಿಗಿಯವರಲ್ಲಿ ಪಡೆದ ಲಲಿತ ಕಲಾಶಿಕ್ಷಣ, ಆರ್ಟ್ಸ್ ಮಾಸ್ಟರ್‌ ಪದವಿ. ದಾವಣಗೆರೆ ಲಲಿತಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೦೩ರಲ್ಲಿ ನಿವೃತ್ತಿ. ಕುವೆಂಪು ವಿಶ್ವವಿದ್ಯಾಲಯದ ಲಲಿತ ಕಲಾ ಅಧ್ಯಯನ ಮಂಡಲಿಯ ಅಧ್ಯಕ್ಷರಾಗಿ, ಸೆನೆಟ್‌ ಸದಸ್ಯರಾಗಿ, ಹೊರರಾಜ್ಯದ ಕಲೆ ಮತ್ತು ಕರಕುಶಲ ಮಂಡಲಿ ಸದಸ್ಯರಾಗಿ, ಗುಲಬರ್ಗಾ, ಬೆಂಗಳೂರು, ಮೈಸೂರು, ಕನ್ನಡ ವಿಶ್ವವಿದ್ಯಾಲಯಗಳ ಲಲಿತಕಲಾ ಅಧ್ಯಯನ ಮಂಡಲಿ, ಪರೀಕ್ಷಾ ಮಂಡಲಿ, …

ಪೂರ್ತಿ ಓದಿ...

ಮಹಾಬಲ ಮೂರ್ತಿ ಕೊಡ್ಲೆಕೆರೆ

Mahabala Murthy

ಮಹಾಬಲ ಮೂರ್ತಿ ಕೊಡ್ಲೆಕೆರೆ (೦೧.೦೪.೧೯೫೮): ಕವಿ, ಕತೆಗಾರ, ಯಕ್ಷಗಾನ ಕಲೆಯ ಹವ್ಯಾಸಿ ನಟರಾದ ಮಹಾಬಲ ಮೂರ್ತಿ ಕೊಡ್ಲೆಕೆರೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ೧೯೫೮ರ ಏಪ್ರಿಲ್ ೧ರಂದು. ತಂದೆ ಗಜಾನನ ಅನಂತ ಭಟ್ಟ ಕೊಡ್ಲೆಕೆರೆ, ತಾಯಿ ಭೂದೇವಿ ಗಜಾನನ ಕೊಡ್ಲೆಕೆರೆ. ಪ್ರಾರಂಭಿಕ ಶಿಕ್ಷಣ ಗೋಕರ್ಣ, ಕುಮಟಾದ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ (ರಾಜಕೀಯ ಶಾಸ್ತ್ರ) ಎಂ.ಎ. ಪದವಿ ಜೊತೆಗೆ ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮ. ಉದ್ಯೋಗಕ್ಕಾಗಿ ಸೇರಿದ್ದು ಕರ್ನಾಟಕ ಬ್ಯಾಂಕ್‌ನಲ್ಲಿ. ಹಿರಿಯ ವ್ಯವಸ್ಥಾಪಕರ ಹುದ್ದೆಗೇರಿ ಪಡೆದ ನಿವೃತ್ತಿ. …

ಪೂರ್ತಿ ಓದಿ...

ಎಸ್.ಡಿ. ಇಂಚಲ

SB Inchala

ಎಸ್.ಡಿ. ಇಂಚಲ (೦೧.೦೪.೧೯೧೩ – ೦೭.೦೪.೧೯೭೪): ನಿಸರ್ಗವನ್ನು ಪ್ರೀತಿಸುವ, ಗುರು ಹಿರಿಯರನ್ನು ಗೌರವಿಸುವ ಗುಣಗಳಿಂದ ಕೂಡಿದ್ದ ಗಂಡುಕವಿ, ವೀರಕವಿ, ನಿಸರ್ಗಕವಿ ಎಂದೇ ಪ್ರಖ್ಯಾತರಾಗಿದ್ದ ಶಿವಪುತ್ರಪ್ಪ ದೇವಪ್ಪ ಇಂಚಲರವರು ಹುಟ್ಟಿದ್ದು ಹಿರೇಬಾಗೇವಾಡಿಯಲ್ಲಿ ೧೯೧೩ರ ಏಪ್ರಿಲ್ ೧ರಂದು. ತಂದೆ ದೇವಪ್ಪ ಚಿನ್ನಪ್ಪ ಇಂಚಲ, ತಾಯಿ ಬಸವಂತವ್ವ. ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದಿಂದ ನಾಲ್ಕು ತಲೆಮಾರುಗಳ ಹಿಂದೆಯೇ ಇವರ ವಂಶಸ್ಥರು ಹಿರೇಬಾಗೇವಾಡಿಗೆ ಬಂದು ನೆಲೆಸಿದವರು. ತಂದೆ ದೇವಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು. ಎಸ್.ಡಿ. ಇಂಚಲರವರ ಪ್ರಥಮಿಕ ಶಾಲಾ ವಿದ್ಯಾಭ್ಯಾಸ ನಡೆದುದು ಹಿರೇಬಾಗೇವಾಡಿಯಲ್ಲಿ. ೧೩ರ ವಯಸ್ಸಿನಲ್ಲಿಯೇ ಮುಲ್ಕಿ ಪರೀಕ್ಷೆಯನ್ನು ಇಡೀ …

ಪೂರ್ತಿ ಓದಿ...

ಡಾ. ಸಂಗಮೇಶ ಸವದತ್ತಿ ಮಠ

Sangamesh Savadatti Math

ಭಾಷಾ ವಿಜ್ಞಾನ ಕ್ಷೇತ್ರದ ವಿದ್ವನ್ಮಣಿಗಳಾದ ಸಂಗಮೇಶ ಸವದತ್ತಿ ಮಠರವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುರಗೋಡು ಗ್ರಾಮದಲ್ಲಿ. ತಂದೆ ದಂಡಯ್ಯ, ತಾಯಿ ಪಾರ್ವತಿ. ಪ್ರಾಥಮಿಕ ವಿದ್ಯಾಭ್ಯಾಸ ಸಂಕೇಶ್ವರ, ರಾಯಭಾಗ, ಮುಂಡರಗಿಯಲ್ಲಿ, ಕಾಲೇಜಿಗೆ ಸೇರಿದ್ದು ಗದಗದ ಜೆ.ಟಿ. ಕಾಲೇಜು, ಬಿ.ಎ. ಪದವಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಮತ್ತು ಭಾಷಾ ವಿಜ್ಞಾನ ಪದವಿ. HARIHARA’S RAGALES-A LINGUISTIC ANALYSISಗೆ ಪಡೆದ ಪಿಎಚ್.ಡಿ. ಪದವಿ. ನಂತರ ಉದ್ಯೋಗಕ್ಕೆ ಸೇರಿದ್ದು ಕೊಪ್ಪಳದ ಗವಿ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ೧೯೬೫-೬೮ರವರೆಗೆ. ನರಗುಂದದ ಮುನಿಸಿಪಲ್ ಡಿಗ್ರಿ ಕಾಲೇಜಿನಲ್ಲಿ ೧೯೭೦-೭೨ರವರೆಗೆ. ಕರ್ನಾಟಕ …

ಪೂರ್ತಿ ಓದಿ...

ಎಂ.ಎಸ್. ಅನಂತರಾವ್

MS Ananta Rao

ಎಂ.ಎಸ್. ಅನಂತರಾವ್ (೩೧-೩-೧೯೨೫): ಮಾದಾಪುರ ಸುಬ್ಬರಾವ್ ಅನಂತರಾವ್‌ರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸುಬ್ಬರಾವ್, ತಾಯಿ ಮಹಾಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಪಡೆದುದು ಮೈಸೂರಿನಲ್ಲಿ. ತಂದೆಗೆ ಬೆಂಗಳೂರಿಗೆ ವರ್ಗ. ಇಂಟರ್ ಮೀಡಿಯೇಟ್‌ಗೆ ಸೇರಿದ್ದು ಬೆಂಗಳೂರಿಗೆ ಸೇಂಟ್ ಜೋಸೆಫ್ ಕಾಲೇಜು. ಪದವಿ ತರಗತಿಗೆ ಸೇರಲಾಗದೆ ಓದಿಗೆ ವಿಘ್ನ. ಉದ್ಯೋಗದ ಬೇಟೆ ಪ್ರಾರಂಭ. ಕೆಲವು ಕಡೆ ಸಣ್ಣ ಪುಟ್ಟ ಸ್ಥಳೀಯ ಕಛೇರಿಯಲ್ಲಿ ವೃತ್ತಿ. ಅಂಚೆ ಕಛೇರಿಯ ಸಂದರ್ಶನದಲ್ಲಿ ತೇರ್ಗಡೆ. ಖುಲಾಯಿಸಿದ ಅದೃಷ್ಟ. ಮದರಾಸು ಸರ್ಕಲ್ ಮೌಂಟ್ ರೋಡು ಪೋಸ್ಟಾಫೀಸಿನಲ್ಲಿ ೧೯೬೦ರಲ್ಲಿ ಉದ್ಯೋಗ ಪ್ರಾರಂಭ. ಮದರಾಸು ಅಂದು ದಕ್ಷಿಣ ಭಾರತದ ಚಿತ್ರೋದ್ಯಮದಕೇಂದ್ರ …

ಪೂರ್ತಿ ಓದಿ...

ಡಾ. ಸರ್ವಮಂಗಳಾ ಶಂಕರ್

Sarvamangala Shankar

ಡಾ. ಸರ್ವಮಂಗಳಾ ಶಂಕರ್ (೩೧.೦೩.೧೯೫೪): ಕದಳಿ ಶ್ರೀ ಪ್ರಶಸ್ತಿ ಪುರಸ್ಕೃರಾದ ಸರ್ವಮಂಗಳಾ ಶಂಕರ್ ರವರು ಹುಟ್ಟಿದ್ದು ಶ್ರೀರಂಗಪಟ್ಟಣ. ತಂದೆ ಎಸ್.ಸಿ. ರಾಜಶೇಖರ್, ತಾಯಿ ಪಾರ್ವತಮ್ಮ. ಬಾಲ್ಯದಿಂದಲೂ ಸಂಗೀತದತ್ತ ಒಲವು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. (ಮ್ಯೂಸಿಕ್). ‘ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ’- ಎಂ.ಫಿಲ್ ಮಹಾ ಪ್ರಬಂಧ ಮತ್ತು ‘ಸ್ವರ ವಚನಗಳು : ಒಂದು ಸಂಗೀತಾತ್ಮಕ ಅಧ್ಯಯನ’ ಮಹಾ ಪ್ರಬಂಧಕ್ಕೆ ದೊರೆತ ಪಿಎಚ್.ಡಿ. ಪದವಿ. ಸಂಗೀತದ ಉನ್ನತ ಶಿಕ್ಷಣ ಪಡೆದದ್ದು ಎಂ. ಶೇಖಗಿರಿ ಆಚಾರ್, ಆನೂರು ಎಸ್. ರಾಮಕೃಷ್ಣ, ಬಿ. ಕೃಷ್ಣಪ್ಪ, ಆರ್.ಕೆ. ಶ್ರೀಕಂಠನ್ ರವರಿಂದ. ಪ್ರಸ್ತುತ …

ಪೂರ್ತಿ ಓದಿ...