ಕವಿಗಳು | ಸಾಹಿತಿಗಳು | ಕಲಾವಿದರು

ಡಾ. ಚೆನ್ನಣ್ಣ ವಾಲೀಕಾರ

Chennanna Valikar

ಡಾ. ಚೆನ್ನಣ್ಣ ವಾಲೀಕಾರ (೬-೪-೧೯೪೩): ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಕುಸ್ತಿ, ಹಾಡುಗಾರಿಕೆ, ಬಯಲಾಟದ ಒಕ್ಕಲು ಮನೆತನದಲ್ಲಿ ಹುಟ್ಟಿದವರು ಚೆನ್ನಣ್ಣ ವಾಲೀಕಾರರು. ತಂದೆ ಧೂಳಪ್ಪ ವಾಲೀಕಾರ, ತಾಯಿ ಸಾಬಮ್ಮ. ಪ್ರೌಢಶಿಕ್ಷಣದವರೆಗೆ ಶಹಬಾದ, ಗುಲಬರ್ಗಾ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸ್ನಾತಕೋತ್ತರ ಶಿಕ್ಷಣ ಮತ್ತು ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’ ಪ್ರಬಂಧ ಮಂಡಿಸಿ ಗಳಿಸಿದ್ದು ಪಿಎಚ್.ಡಿ ಪದವಿ. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಪ್ರೌಢಶಾಲಾ ಶಿಕ್ಷಕರಾಗಿ ೧೯೬೫-೬೯ರವರೆಗೆ ; ರಾಯಚೂರಿನ ಕಾಲೇಜು ಉಪನ್ಯಾಸಕರಾಗಿ ೧೯೭೧-೭೮ರವರೆಗೆ, …

ಪೂರ್ತಿ ಓದಿ...

ರಾಘವೇಂದ್ರ ಇಟಗಿ

Raghavendra Itagi

ರಾಘವೇಂದ್ರ ಇಟಗಿ (೦೬.೦೪.೧೯೨೬ – ೦೮.೧೨.೧೯೯೭) ಕನ್ನಡದ ಪ್ರಖ್ಯಾತ ಕವಿಗಳಲ್ಲೊಬ್ಬರು. ಜೀವನ: ಕವಿ ರಾಘವೇಂದ್ರ ಇಟಗಿಯವರು ೧೯೨೬ರ ಏಪ್ರಿಲ್ ೬ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿಯಲ್ಲಿ ಜನಿಸಿದರು. ತಂದೆ ಪ್ರಹ್ಲಾದಾಚಾರ್ಯರು, ತಾಯಿ ಸೀತಮ್ಮನವರು. ರಾಘವೇಂದ್ರ ಇಟಗಿಯವರ ಹೆಚ್ಚಿನ ಶಾಲಾ ವಿದ್ಯಾರ್ಜನೆ ನಡೆದದ್ದು ಕೊಪ್ಪಳದಲ್ಲಿ. ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ ಇಟಗಿಯವರು ಹೈದರಾಬಾದ್ ಆಕಾಶವಾಣಿಯಲ್ಲಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದ ರಾಘವೇಂದ್ರ ಇಟಗಿಯವರು, ಖಾಸಗಿಯಾಗಿ ಕುಳಿತು ಮಾನ್ವಿ ನರಸಿಂಗರಾಯರ ಸಹಾಯದಿಂದ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ …

ಪೂರ್ತಿ ಓದಿ...

ಹು.ಮ. ರಾಮಾರಾಧ್ಯ

HM Ramaradya

ಹು.ಮ. ರಾಮಾರಾಧ್ಯ (೦೬.೦೪.೧೯೦೭ – ೨೦.೧೨.೧೯೭೩): ಗಮಕ ಕಲಾವಿದರಾದ ರಾಮಾರಾಧ್ಯರು ಹುಟ್ಟಿದ್ದು ನಂಜನಗೂಡಿನ ಬಳಿಯ ಹುಲ್ಲಹಳ್ಳಿ. ತಂದೆ ಮಲ್ಲಾರಾಧ್ಯ, ತಾಯಿ ಪಾರ್ವತಮ್ಮ. ಓದಿದ್ದು ಮೈಸೂರಿನಲ್ಲಿ. ಅಧ್ಯಾಪಕರಾಗಿ ಉದ್ಯೋಗಕ್ಕೆ ಸೇರಿದ್ದು ತಾಂಡವಪುರದಲ್ಲಿ. ಎಳೆವೆಯಿಂದಲೇ ನಾಟಕದ ಕಲೆಯಗೀಳು. ಹುಲ್ಲಹಳ್ಳಿಯ ’ದಿ ಅಸೋಸಿಯೇಟೆಡ್ ಡ್ರಾಮ್ಯಾಟಿಕ್ಸ್’ ಕಂಪನಿಯ ಕಾಳಿದಾಸ, ಸದಾರಮೆ, ಗುಲೇಬಕಾವಲಿ ಮೊದಲಾದ ನಾಟಕಗಳ ನಟ. ಸುಶ್ರಾವ್ಯ ಕಂಠದ ಹಾಡುಗಾರ. ಗುಬ್ಬಿಕಂಪನಿಯ ನಟರಾಗಿಯೂ ಹಲವಾರು ವರ್ಷ ಪಡೆದ ಅನುಭವ. ಕೆಲಕಾಲ ತಾಂಡವಪುರ, ರಾವದೂರು ಮುಂತಾದೆಡೆ ಪ್ರಾಥಮಿಕ ಶಾಲಾ ಅಧ್ಯಾಪಕರ ಉದ್ಯೋಗ. ಪಂಡಿತ್ ಪರೀಕ್ಷೆಗೆ ಕುಳಿತವರು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾದರು. ೧೯೪೨ರಲ್ಲಿ …

ಪೂರ್ತಿ ಓದಿ...

ಪ್ರೊ. ಟಿ. ಎಸ್. ನಾಗರಾಜಶೆಟ್ಟಿ

TS Nagaraja Shetty

ಪ್ರೊ. ಟಿ. ಎಸ್. ನಾಗರಾಜಶೆಟ್ಟಿ (೧೬.೦೪.೧೯೫೩): ಮಕ್ಕಳ ಮನಸ್ಸನ್ನು ಮುಟ್ಟುವಂತೆ ಮನರಂಜನೆ, ನೀತಿಯನ್ನು ಕತೆ ಕವನಗಳ ಮೂಲಕ ಹೇಳುತ್ತಾ, ಲಯಬದ್ಧವಾಗಿ ಹಾಡಿ ಕುಣಿದು, ಹೂವಿನಂತೆ ಅರಳಿ ಸಂತೋಷಿಸುವಂತಹ ಮಕ್ಕಳ ಸಾಹಿತ್ಯ ರಚನೆಯಲ್ಲಿ ಅಗ್ರಗಣ್ಯರೆನಿಸಿದ್ದು ಪಂಜೆ, ರಾಜರತ್ನಂ, ದೇವುಡು, ಹೊಯ್ಸಳ, ಸಿಸು ಸಂಗಮೇಶ, ಈಶ್ವರ ಚಂದ್ರ ಚಿಂತಾಮಣಿ ಮುಂತಾದವರುಗಳ ಹಾದಿಯಲ್ಲಿ ಸಾಗಿರುವ ನಾಗರಾಜಶೆಟ್ಟರು ಹುಟ್ಟಿದ್ದು ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ. ತಂದೆ ಶ್ರೀರಾಮಯ್ಯ, ತಾಯಿ ವನಲಕ್ಷಮ್ಮ. ಚಾಕವೇಲುವಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಪ್ರೌಢಶಾಲೆಗೆ ಸೇರಿದ್ದು ಬೆಂಗಳೂರಿನ ರಾಷ್ಟ್ರೀಯ ಪ್ರೌಢಶಾಲೆ. ಸೆಂಟ್ರಲ್ ಕಾಲೇಜಿನಿಂದ ಬಿ.ಎ. …

ಪೂರ್ತಿ ಓದಿ...

ಜಿ.ವಿ. ಹಿರೇಮಠ

G V Herimath

ಜಿ.ವಿ. ಹಿರೇಮಠ (೦೫.೦೪.೧೯೧೭): ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ’ರೇಡಿಯೊಕಾಕ’ ಎಂದೇ ಪ್ರಸಿದ್ಧರಾಗಿರುವ ಹಿರೇಮಠ ರವರು ಹುಟ್ಟಿದ್ದು ಗದಗುತಾಲ್ಲೂಕಿನ ಡಂಬಳದಲ್ಲಿ. ಪ್ರಾಥಮಿಕ ಶಿಕ್ಷಣ ಗದಗ್‌ನಲ್ಲಿ. ಸಂಸ್ಕೃತ ನಾಟಕ ಕುರುಕ್ಷೇತ್ರದಲ್ಲಿ ಪಾತ್ರವಹಿಸಿ ಪಡೆದರಂಗ ಪ್ರವೇಶ. ಪಂ.ಭೀಮಸೇನ ಜೋಶಿಯವರ ತಂದೆ ಗುರಾಚಾರ್ಯ ಜೋಶಿಯವರೇ ಇವರಿಗೆ ಸಂಸ್ಕೃತ ಕಲಿಸಿದ ಗುರುಗಳು. ಗಣೇಶನ ಹಬ್ಬ, ನವರಾತ್ರಿ, ಉಗಾದಿ ಹಬ್ಬ ಹುಣ್ಣಿಮೆ ದಿವಸಗಳಲ್ಲಿ ಯುವಕ ಯುವತಿಯರು ಗುಂಪುಕಟ್ಟಿ, ಅಂಗಡಿಗಳಿಂದ ಚಂದಾವಸೂಲುಮಾಡಿ ಮಾಡುತ್ತಿದ್ದ ‘ಕೋಲುಮೇಳ’. ಹವ್ಯಾಸಿಗುಂಪು ತಯಾರಿಸಿ ಆಡುತ್ತಿದ್ದ ನಾಟಕಗಳು. ನವಜೀವನ ನಾಟಕದಿಂದ ಬಂದ ಖ್ಯಾತಿ. ವೃತ್ತಿರಂಗಭೂಮಿಯಿಂದ ಬಂದ ಆಹ್ವಾನ. ಮಹಮದ್ ಪೀರ್‌ರವರ ’ಸಂಸಾರನೌಕ’, …

ಪೂರ್ತಿ ಓದಿ...

ಗೋವಿಂದಮೂರ್ತಿ ದೇಸಾಯಿ

Govinda Murthy Desai

ಗೋವಿಂದಮೂರ್ತಿ ದೇಸಾಯಿ (೦೫.೦೪.೧೯೨೭ – ೧೫.೧೨.೨೦೧೧): ಐತಿಹಾಸಿಕ ವಸ್ತುವುಳ್ಳ ಕಥೆ, ಕಾದಂಬರಿಗಳ ರಚನೆಯಲ್ಲಿ ಪ್ರಖ್ಯಾತರಾಗಿದ್ದ ಗೋವಿಂದಮೂರ್ತಿ ದೇಸಾಯಿಯವರು ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ. ತಂದೆ ದಾಸಪ್ಪ ನಾಯಕ ದೇಸಾಯಿ. ತಾಯಿ ಯಮುನಾ ಬಾಯಿ. ಸೋದರಮಾವನ ಮನೆಯಲ್ಲಿದ್ದುಕೊಂಡು ಓದಿದ್ದು ಮೆಟ್ರಿಕ್ಯುಲೇಷನ್‌ವರೆಗೆ. ತಂದೆಯ ಅಕಾಲಿಕ ಮರಣದಿಂದಾಗಿ ಪ್ರೀತಿಯಿಂದ ವಂಚಿತರಾದ ಗೋವಿಂದಮೂರ್ತಿ ದೇಸಾಯಿಯವರಿಗೆ ಓದಿಗಿಂತ ತಂಗಿ ತಮ್ಮಂದಿರ ಜವಾಬ್ದಾರಿಯು ಪ್ರಮುಖವಾಗಿದ್ದು ಮೆಟ್ರಿಕ್ಯುಲೇಷನ್‌ನಂತರ ಸೇರಿದ್ದು ಇಂಪೀರಿಯಲ್ ಬ್ಯಾಂಕಿನಲ್ಲಿ ಗುಮಾಸ್ತರಾಗಿ. ಧಾರವಾಡಕ್ಕೆ ವರ್ಗವಾದ ನಂತರ ಬಿ.ಎ. ಪದವಿ ಪಡೆದ ಸಂದರ್ಭದಲ್ಲಿ ಇಂಪೀರಿಯಲ್ ಬ್ಯಾಂಕ್ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವಾಗಿ ಪರಿವರ್ತನೆ …

ಪೂರ್ತಿ ಓದಿ...

ಶ್ರೀನಿವಾಸ ವೈದ್ಯ

Srinivas Vydya

ಶ್ರೀನಿವಾಸ ವೈದ್ಯ (೦೪.೦೪.೧೯೩೬): ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧಗಳು ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡದ ಜಿಲ್ಲೆಯ ನವಲಗುಂದದಲ್ಲಿ ೧೯೩೬ರ ಏಪ್ರಿಲ್ ೪ ರಂದು. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೆ. ೧೯೫೯ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿಯ ಜೊತೆಗೆ ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ (೧೯೮೦) ಪಡೆದ ಪತ್ರಿಕೋದ್ಯಮ ಡಿಪ್ಲೊಮ. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ …

ಪೂರ್ತಿ ಓದಿ...

ಬಿ.ಟಿ. ಲಲಿತಾನಾಯಕ್

BT Lalithanayak

ಬಿ.ಟಿ. ಲಲಿತಾನಾಯಕ್ (೪-೪-೧೯೪೫): ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳೆರಡರಲ್ಲೂ ಅಸಾಧಾರಣ ಸಾಧನೆ ಮಾಡಿದ ಶ್ರೀಮತಿ ಲಲಿತಾನಾಯಕ್ ರವರ ಹುಟ್ಟಿದೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿತಾಂಡ. ತಂದೆ ಬಾಲಾಜಿನಾಯಕ್, ತಾಯಿ ಗಂಗಾಬಾಯಿ. ಏಕೋಪಾಧ್ಯಾಯ ಶಾಲೆ ತಾಂಡ್ಯದಲ್ಲಿ ೪ನೇ ತರಗತಿಯವರೆಗೆ ಓದು. ನಂತರ ಚಿತ್ರದುರ್ಗದಲ್ಲಿ ಎಂಟನೆಯ ತರಗತಿವರೆಗೆ. ವಿದ್ಯಾಭ್ಯಾಸ ಅವಕಾಶಗಳು ಇಲ್ಲದ ಕಾಲ. ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಪ್ರೌಢಶಾಲೆಯ ನಂತರ ಮನೆಯಲ್ಲಿಯೇ ವಿದ್ಯಾಭ್ಯಾಸ. ಕಲಿತದ್ದು ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ. ಬಿ.ಎ. ಓದುತ್ತಿದ್ದ ಅಣ್ಣ ಪ್ರತಿವಾರ ೩೦. ಕಿ.ಮೀ. ದೂರದ ಚಿಕ್ಕಮಗಳೂರಿನಿಂದ ಹಳ್ಳಿಗೆ …

ಪೂರ್ತಿ ಓದಿ...

ಬೆನಗಲ್ ರಾಮರಾವ್

Benagal Ramarao

ಬೆನಗಲ್ ರಾಮರಾವ್ (೩.೪.೧೮೭೬ – ೮.೫.೧೯೪೩) ಕನ್ನಡ ಸಾಹಿತ್ಯ ಸೇವೆ ಮಾಡಿದ ಶ್ರೇಷ್ಠರಲ್ಲಿ ಒಬ್ಬರೆನಿಸಿದ್ದಾರೆ. ಜೀವನ: ಬಹುಭಾಷಾ ಕೋವಿದರಾಗಿದ್ದ ಬೆನಗಲ್ ರಾಮರಾಯರು ಏಪ್ರಿಲ್ ೩, ೧೮೭೬ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ವಕೀಲಿ ವೃತ್ತಿ ಮಾಡುತ್ತಿದ್ದ ಮಂಜುನಾಥಯ್ಯನವರು. ರಾಮರಾಯರ ಪ್ರಾಥಮಿಕ ಶಿಕ್ಷಣ ಮೂಲ್ಕಿ, ಮಂಗಳೂರು ಮತ್ತು ಪುತ್ತೂರಿನಲ್ಲಿ ನೆರವೇರಿತು. ಮಂಗಳೂರಿನ ಸರ್ಕಾರಿ ಕಾಲೇಜು ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೮೯೬ರಲ್ಲಿ ಬಿ.ಎ. ಪದವಿ ಗಳಿಸಿದರು. ಕನ್ನಡದ ಬಗ್ಗೆ ಅವರಿಗೆ ಅಪಾರ ಒಲವು. ಪದವಿ ಗಳಿಸಿದ ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ …

ಪೂರ್ತಿ ಓದಿ...

ಶ್ರೀಕೃಷ್ಣ ಆಲನಹಳ್ಳಿ

Krishana Alanahalli

ಶ್ರೀಕೃಷ್ಣ ಆಲನಹಳ್ಳಿ (೦೩.೦೪.೧೯೪೭ – ೦೪.೦೧.೧೯೮೯): ಮೈಸೂರು ಜಿಲ್ಲೆಯ ಹೆಗ್ಗ ಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದರು. ಅಲ್ಪಾಯುಷ್ಯದಲ್ಲೇ ಮಹತ್ವದ ಸಾಧನೆ: ಶ್ರೀಕೃಷ್ಣ ಆಲನಹಳ್ಳಿ ಅವರು ೧೯೪೭ರ ವರ್ಷದಲ್ಲಿ ಏಪ್ರಿಲ್ ೩ನೇ ದಿನಾಂಕದಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದವರು. ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ. ಅವರು ನಿಧನರಾದದ್ದು ಜನವರಿ ೪, ೧೯೮೯ರಲ್ಲಿ. ಈ ಅತಿ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಅತ್ಯಂತ ಸ್ಮರಣೀಯವಾದದ್ದು. ವಿದ್ಯಾರ್ಥಿ ಜೀವನದಲ್ಲೇ ಬರಹಗಾರ: ಆಲನಹಳ್ಳಿಯವರು …

ಪೂರ್ತಿ ಓದಿ...