ಪ್ರೊ. ಎನ್.ಎ. ನಿಕ್ಕಂ (೫-೫-೧೯೦೩ – ೧೯೭೪): ದಾರ್ಶನಿಕ, ತತ್ತ್ವಶಾಸ್ತ್ರ ಪ್ರಾಧ್ಯಾಪಕ, ಚಿಂತಕ ನಾರಾಯಣರಾವ್ ಅಪ್ಪೂರಾವ್ ನಿಕ್ಕಂರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣ ಕೆಸ್ತೂರು, ಮದ್ದೂರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ೧೯೨೯ರ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿ. ಬಾಬಾ ಸ್ಮಾರಕ ಸುವರ್ಣಪದಕ ವಿಜೇತರು. ದಾಮೋದರದಾಸ್ ವಿದ್ಯಾರ್ಥಿವೇತನದಿಂದ ಇಂಗ್ಲೆಂಡಿನಲ್ಲಿ ತತ್ತ್ವಶಾಸ್ತ್ರದಲ್ಲಿ ಉಚ್ಚಶಿಕ್ಷಣ. [sociallocker]೧೯೪೪ರಲ್ಲಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ. ಫುಲ್‌ಬ್ರೈಟ್ ಮತ್ತು ಫೋರ‍್ಡ್ ಫೌಂಡೇಶನ್ ವಿದ್ಯಾರ್ಥಿವೇತನದಿಂದ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ. ಸೆಲಿಮನ್ …
ಪೂರ್ತಿ ಓದಿ...ಗೀತಾ ಬಾಲಸುಬ್ರಹ್ಮಣ್ಯಂ
ಗೀತಾ ಬಾಲಸುಬ್ರಹ್ಮಣ್ಯಂ (೦೫.೦೫.೧೯೫೬): ಕೊಣನೂರಿನ ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನದಿಂದ ಬಂದ ಗೀತಾರವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ. ತಂದೆ ಸಂಗೀತ ವಿದ್ವಾಂಸರಾದ ರಾಮಕೃಷ್ಣಶಾಸ್ತ್ರಿಗಳು, ತಾಯಿ ವಾಗೀಶ್ವರಿ ಶಾಸ್ತ್ರಿ, ಪ್ರಸಿದ್ಧ ಲೇಖಕಿ. ಓದಿದ್ದು ಬಿ.ಎಸ್ಸಿ. ಸಂಗೀತಾಭಿರುಚಿಯಿಂದ ಪಡೆದದ್ದು ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿ ಮತ್ತು ಸೀನಿಯರ್ ಗ್ರೇಡ್ ಸಂಗೀತ, ಶೇಷಾದ್ರಿಪುರಂ ಬಾಲಕಿಯರ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ. [sociallocker]ಶಾಲಾ ಕಾಲೇಜು ದಿನಗಳಿಂದಲೂ ಬೆಂಗಳೂರು ಮೈಸೂರು, ತಿಪಟೂರು, ಚಿತ್ರದುರ್ಗ ಹೀಗೆ ಹಲವಾರು ಕಡೆ ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತ, ಭಾವಗೀತೆ, ಚಿತ್ರಗೀತೆಗಳ ಸ್ಪರ್ಧೆಯಲ್ಲಿ …
ಪೂರ್ತಿ ಓದಿ...ಡಾ. ಸುಮತೀಂದ್ರನಾಡಿಗ್
ಡಾ. ಸುಮತೀಂದ್ರನಾಡಿಗ್ (೪-೫-೧೯೩೫): ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ನಾಡಿಗರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ತಂದೆ ರಾಘವೇಂದ್ರರಾವ್, ತಾಯಿ ಸುಬ್ಬಮ್ಮ. ತಂದೆ ಪೊಲೀಸ್ ವೃತ್ತಿಯಲ್ಲಿದ್ದುದರಿಂದ ನಾಡಿಗರ ಬಾಲ್ಯ ಕಳಸ, ಸೊರಬ, ಶಿರಾಳ ಕೊಪ್ಪ ಆನವಟ್ಟಿ, ಸಾಗರ ಹೀಗೆ ಮಲೆನಾಡು, ಬಯಲು ಸೀಮೆಯಲ್ಲಿ ವಿದ್ಯಾಭ್ಯಾಸ. ಇಂಟರ್ ಮೀಡಿಯೆಟ್ ಓದಿದ್ದು ಶಿವಮೊಗ್ಗ ಕಾಲೇಜು. ಕುವೆಂಪುರವರನ್ನು ಮೊದಲ ಬಾರಿಗೆ ಕಂಡು ರಾಮಾಯಣ ದರ್ಶನಂ ಓದಿ ಪುಳಕಿತರಾದರು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಕೈಬರಹದ ಪತ್ರಿಕೆಯಲ್ಲಿ ಕವನ ಪ್ರಕಟ. ಇವರ ಕವನ ಓದಿದ …
ಪೂರ್ತಿ ಓದಿ...ಎಚ್.ಕೆ. ನರಸಿಂಹಮೂರ್ತಿ
ಎಚ್.ಕೆ. ನರಸಿಂಹಮೂರ್ತಿ (೦೪.೦೫.೧೯೪೬): ದೇಶದ ಅತ್ಯುತ್ತಮ ಪಿಟೀಲು ವಾದಕರೆನಿಸಿರುವ ನರಸಿಂಹ ಮೂರ್ತಿಯವರು ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ತಂದೆ ಎಚ್.ಎಸ್. ಕೃಷ್ಣಮೂರ್ತಿ, ಸ್ವಾತಂತ್ರ‍್ಯ ಹೋರಾಟಗಾರರು. ತಾಯಿ ಜಯಲಕ್ಷ್ಮಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ. ಸಂಗೀತದಲ್ಲಿ ಬೆಳೆದ ಒಲವು. ಕೇಶವಯ್ಯನವರಿಂದ ಕಲಿತ ಗಾಯನ ಮತ್ತು ಎಚ್.ಟಿ. ಪುಟ್ಟಸ್ವಾಮಯ್ಯ, ಎಚ್.ವಿ. ಕೃಷ್ಣನ್, ಎಂ.ಸಿ. ಪುಟ್ಟಸ್ವಾಮಯ್ಯ, ಟಿ.ಪುಟ್ಟಸ್ವಾಮಯ್ಯ, ಎ.ಕೆ.ಮುತ್ತಣ್ಣ ಇವರ ಬಳಿ ಕಲಿತದ್ದು ಗಾಯನ ಹಾಗೂ ಪಿಟೀಲು ವಾದನ. ಕರ್ನಾಟಕ ಸರಕಾರದ ಟೆಕ್ನಿಕಲ್ ಬೋರ್ಡ್‌ನಿಂದ ಸೀನಿಯರ್ ಮ್ಯೂಸಿಕ್, ಮದರಾಸಿನ ಸೆಂಟ್ರಲ್ ಕಾಲೇಜ್ ಆಫ್ ಮ್ಯೂಸಿಕ್ ನಿಂದ ಪ್ರಥಮ ದರ್ಜೆಯಲ್ಲಿ …
ಪೂರ್ತಿ ಓದಿ...ಗಾಯತ್ರಿ ಮೂರ್ತಿ
ಗಾಯತ್ರಿ ಮೂರ್ತಿ (೦೪.೦೫.೧೯೪೮): ಮಕ್ಕಳ ಸಾಹಿತ್ಯ ಕ್ಷೇತ್ರದ ಕಥೆ, ಕವನ, ವಿಜ್ಞಾನ ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಗಾಯತ್ರಿ ಮೂರ್ತಿಯವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ರಾಮಸ್ವಾಮಿ ಮತ್ತು ತಾಯಿ ಇಂದುಮತಿ. ಪ್ರಾರಂಭಿಕ ಶಿಕ್ಷಣ ಕುಣಿಗಲ್, ಪ್ರೌಢಶಾಲಾ ವಿದ್ಯಾಭ್ಯಾಸ ಶಿವಮೊಗ್ಗ ಹಾಗೂ ಮೈಸೂರುಗಳಲ್ಲಿ. ಶಾರದಾ ವಿಲಾಸ್ ಕಾಲೇಜಿನಿಂದ ಬಿ.ಎಸ್ ಸಿ. ಹಾಗೂ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಿಂದ ಪಡೆದ ಎಂ.ಎಸ್ ಸಿ. ಪದವಿ. ಅಧ್ಯಾಪಕರಾಗಿ ಸೇರಿದ್ದು ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ. ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಬೋಧಿಸಿದಷ್ಟೇ ಅಲ್ಲದೆ …
ಪೂರ್ತಿ ಓದಿ...ಡಾ. ಭುಜೇಂದ್ರ ಮಹಿಷವಾಡಿ
ಡಾ. ಭುಜೇಂದ್ರ ಮಹಿಷವಾಡಿ (೦೩.೦೫.೧೯೨೫ – ೧೫.೦೩.೧೯೮೨): ಕನ್ನಡ ಸಾಹಿತ್ಯದಲ್ಲಿ ಎಲೆಮರೆಯ ಕಾಯಿಯಂತೆಯೇ ಬದುಕಿ, ಕಾವ್ಯಕ್ಷೇತ್ರಕ್ಕೆ ಸತ್ವಯುತ ಕೃತಿಗಳನ್ನು ನೀಡಿದ ಕೃಷ್ಣಾತೀರದ ಅಪ್ಪಟ ಪ್ರತಿಭೆಯ ಭುಜೇಂದ್ರ ಮಹಿಷವಾಡಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮಹಿಷಿವಾಡಿಯಲ್ಲಿ ೧೯೨೫ ರ ಮೇ ೩ರಂದು. [sociallocker]ಪ್ರಾರಂಭಿಕ ಶಿಕ್ಷಣ ಮಹಿಷವಾಡಿಯಲ್ಲಿ. ಪ್ರೌಢಶಾಲಾ ವಿದ್ಯಾಭ್ಯಾಸ ಅಥಣಿ ಮತ್ತು ಬನಹಟ್ಟಿಯಲ್ಲಿ. ಬೆಳಗಾವಿಯಲ್ಲಿ ಬಿ.ಎ. ಆನರ್ಸ್ ಮತ್ತು ಬಿ.ಎಡ್. ಪದವಿಯ ನಂತರ ಸಾಂಗ್ಲಿಯಲ್ಲಿ ಪಡೆದ ಎಂ.ಎ. ಪದವಿ. “ಕವಿಚಕ್ರವರ್ತಿ ಜನ್ನನ ಜೀವನ ಹಾಗೂ ಕೃತಿಗಳು: ವಿವೇಚನೆ” ಎಂಬ ಪ್ರೌಢ ಪ್ರಬಂದ ಮಾಡಿಸಿ ಪಡೆದ …
ಪೂರ್ತಿ ಓದಿ...ಡಿ.ವಿ. ಬಡಿಗೇರ
ಡಿ.ವಿ. ಬಡಿಗೇರ (೩-೫-೧೯೫೧) ಚುಟುಕಗಳು ಜೇನಿನ ಹನಿಗಳು ಎಂದು ಭಾವಿಸಿ ಚುಟುಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಕವಿ ಡಿ.ವಿ. ಬಡಿಗೇರರವರು ಹುಟ್ಟಿದ್ದು ಗದಗ-ಬೆಟಗೇರಿ. ತಂದೆ ವಿರೂಪಾಕ್ಷಪ್ಪ, ತಾಯಿ ಜಾನಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಗದಗ-ಬೆಟಗೇರಿಯಲ್ಲಿ. ಕಾಲೇಜಿಗೆ ಸೇರಿದ್ದು ಜೆ.ಟಿ. ಕಾಲೇಜು ಬೆಟಗೇರಿ, ಬಿ.ಎ. ಪದವಿ. ‘ಕೆಲಸವಿಲ್ಲದಿದ್ದರಿಂದ ಕವಿಯಾದೆ’ ಎಂದು ಹೇಳಿಕೊಳ್ಳುವ ಬಡಿಗೇರರವರು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿದ್ದು ೧೯೭೭ರಲ್ಲಿ. ಉದ್ಯೋಗ ಸಿಕ್ಕಿತೆಂದು ಕವನ ಬರೆಯುವುದನ್ನು ನಿಲ್ಲಿಸದೆ ನಿಂತಲ್ಲಿ, ಕುಂತಲ್ಲಿ ರಚಿಸಿದ ಹನಿಗವನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಬೆಳಕು ಕಂಡಿವೆ. [sociallocker]ವಿದ್ಯಾರ್ಥಿ ದೆಸೆಯಲ್ಲಿಯೇ …
ಪೂರ್ತಿ ಓದಿ...ಎಂ.ಎಸ್.ಜಯಮ್ಮ
ಎಂ.ಎಸ್.ಜಯಮ್ಮ (೦೩.೦೫.೧೯೨೫ – ೨೯.೦೬.೧೯೯೯): ಸಂಗೀತಕ್ಕಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಗುರುಕುಲ ಪದ್ಧತಿಯಲ್ಲಿ ಶಿಷ್ಯರನ್ನು ತಯಾರು ಮಾಡಿದ ಜಯಮ್ಮನವರು ಹುಟ್ಟಿದ್ದು ಮೈಸೂರು. ತಂದೆ ಎಂ. ಸುಬ್ಬರಾವ್, ತಾಯಿ ಸೀತಾಬಾಯಿ. ಓದಿದ್ದು ಪ್ರೌಢಶಾಲೆಯವರೆಗೆ. ತಮ್ಮ ಆರನೆಯ ವಯಸ್ಸಿನಿಂದಲೇ ಸಂಗೀತಾಭ್ಯಾಸ. ಸಂಗೀತ ವಿದುಷಿ ನೀಲಮ್ಮ ಕಡಾಂಬಿಯವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಸಂಗೀತ ಶಿಕ್ಷಣ. ವೀಣೆ ಸುಬ್ಬಣ್ಣನವರ ಶಿಷ್ಯೆಯಾಗಿ ಕಲಿತ ವೀಣಾವಾದನ. ನಾಟ್ಯವಿಶಾರದೆ ಅಕ್ಕಮ್ಮಣ್ಣಿಯವರಲ್ಲಿ ಮುಂದುವರೆದ ಸಂಗೀತ ಪಾಠ. ಆಸ್ಥಾನ ವಿದ್ವಾನ್ ತಿಟ್ಟಿಕೃಷ್ಣಯ್ಯಂಗಾರ್‌ರವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಪ್ರೌಢಶಿಕ್ಷಣ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿಯವರು ನಡೆಸುವ ಸಂಗೀತ ಪರೀಕ್ಷೆಯಲ್ಲಿ …
ಪೂರ್ತಿ ಓದಿ...ಮಾಯಾರಾವ್
ಮಾಯಾರಾವ್ (೦೨.೦೫.೧೯೨೮): ಕಥಕ್ ಶೈಲಿಯಲ್ಲಿ ಕರ್ನಾಟಕಕ್ಕೆ ಹೆಸರು ತಂದ ನೃತ್ಯಗಾರ್ತಿ ಮಾಯಾರಾವ್ ರವರು ಹುಟ್ಟಿದ್ದು. ಬೆಂಗಳೂರು. ತಂದೆ ಸಂಜೀವರಾವ್. ತಾಯಿ ಲಲಿತಾ ಬಾಯಿ. ಓದಿದ್ದು ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಬ್ಯಾಚುಲರ್ ಪದವಿ, ಸೆಂಟ್ರಲ್ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ. [sociallocker]ಆರರ ವಯಸ್ಸಿನಲ್ಲಿಯೇ ಪಂ. ರಾಮರಾವ್ ಹೊನ್ನಾವರ ರವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತದ ಶಿಕ್ಷಣ, ಸಂಪ್ರದಾಯದ ಮನೆತನದಲ್ಲಿ ಸಂಗೀತ ದೈನಂದಿನ ಹಾಡು-ಹಸೆಗೆ ಸೀಮಿತ. ಆದರೆ ನೃತ್ಯ ಕಲಿತದ್ದು ಆಕಸ್ಮಿಕ, ಕಥಕ್ ನೃತ್ಯಪಟು ಸೋಹನ್‌ಲಾಲ್ ಕರ್ನಾಟಕಕ್ಕೆ ಬಂದಾಗ ಇವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದು ಇವರ ಸೋದರಿಯರು ನೃತ್ಯ ಕಲಿಕೆಗಾರಂಭಿಸಿದಾಗ …
ಪೂರ್ತಿ ಓದಿ...ಬಸವಪ್ಪ ಶಾಸ್ತ್ರೀ
ಬಸವಪ್ಪ ಶಾಸ್ತ್ರೀ (೦೨.೦೫.೧೮೪೩ – ೧೮೯೧): ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ‘ಅಭಿನವ ಕಾಳಿದಾಸ’ ಎಂಬ ಬಿರುದು ಪಡೆದ ಬಸವಪ್ಪ ಶಾಸ್ತ್ರಿಗಳು ಹುಟ್ಟಿದ್ದು ೧೮೪೩ರ ಮೇ ೨ರಂದು. ತಂದೆ ಮಹದೇವ ಶಾಸ್ತ್ರಿಗಳು, ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದ ಪುರೋಹಿತರಾಗಿದ್ದವರು. ತಾಯಿ ಬಸವಂಬಿಕೆ. ತಾತನವರು (ತಂದೆಯ ತಂದೆ) ಇಂದಿನ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ನರಸಂದ್ರ (ನಾರುಸಂದ್ರ) ಗ್ರಾಮದ ರುದ್ರಾಕ್ಷಿ ಮಠಾಧ್ಯಕ್ಷರಾಗಿದ್ದ ಮುರುಡು ಬಸವಸ್ವಾಮಿಗಳು. [sociallocker]ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದು, ಮತ್ತೊಬ್ಬ ಆಸ್ಥಾನ ವಿದ್ವಾಂಸರಾಗಿದ್ದ ಗರಳಪುರಿ ಶಾಸ್ತ್ರಿಗಳಲ್ಲಿ …
ಪೂರ್ತಿ ಓದಿ...