ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ …
ಪೂರ್ತಿ ಓದಿ...ಕನ್ನಡ ಕವಿಗಳ ಕಾವ್ಯ ಕಲ್ಪನೆ
ಕನ್ನಡ ಕವಿಗಳು ತಮ್ಮ ಕೃತಿನಿರ್ಮಿತಿ ಒಂದು ಭಾಷೆಯ ಹಾಗೂ ಸಾಹಿತ್ಯ ಪರಂಪರೆಯ ಸಂದರ್ಭದಲ್ಲಿ ನಡೆಯುವ ಕ್ರಿಯೆ ಎನ್ನುವ ಬಗ್ಗೆ ನಿಚ್ಚಳವಾದ ಅರಿವನ್ನು ಇರಿಸಿಕೊಂಡವರಾಗಿದ್ದಾರೆ. ಹಿಂದಿನ ಕವಿಗಳನ್ನು ಕುರಿತು ಹೇಳುವುದಾದರೆ, ತಮ್ಮ ಪ್ರಾದೇಶಿಕ ಭಾಷೆ ಹಾಗೂ ಸಾಹಿತ್ಯ ಪರಂಪರೆಗೆ ಹಿನ್ನೆಲೆಯಾದ ಭಾರತೀಯ ಸಾಹಿತ್ಯ ಪರಂಪರೆಯೊಂದು, ಬೇರೊಂದು ಮಾತಿನಲ್ಲಿ ಹೇಳುವುದಾದರೆ ಸಂಸ್ಕೃತ ಸಾಹಿತ್ಯ ಪರಂಪರೆ ತಮ್ಮ ಸಾಹಿತ್ಯ ನಿರ್ಮಿತಿಯನ್ನು ಪ್ರಭಾವಿಸುತ್ತ ಮತ್ತು ನಿಯಂತ್ರಿಸುತ್ತ ಇದೆ ಎಂಬುದನ್ನು ಬಲ್ಲವರಾಗಿದ್ದರು. ಹೀಗಾಗಿ ಕನ್ನಡ ಕವಿಗಳಿಗೆ ಇದ್ದ ಪರಂಪರೆಯ ಪ್ರಜ್ಞೆ ಎರಡು ವಿಧವಾದದ್ದು ಎನ್ನಬಹುದು. ಒಂದು, ತಮ್ಮ ಪ್ರಾದೇಶಿಕ ಅಥವಾ ಕನ್ನಡ …
ಪೂರ್ತಿ ಓದಿ...ಭರತೇಶ ವೈಭವ
‘ಭರತೇಶ ವೈಭವ’ ರತ್ನಾಕರವರ್ಣಿಯ ಮೇರು ಕೃತಿ. ಇದು ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತುಸಾವಿರ ಪದ್ಯಗಳಿವೆ. ಆದಿತೀರ್ಥಂಕರರ ಹಿರಿಯ ಮಗ ಭರತ. ಈತನು ತನ್ನ ೯೬ಸಾವಿರ ರಾಣಿಯರ ಜೊತೆಗೆ ಭೋಗಜೀವನದಲ್ಲಿ ನಿರತನಾಗಿದ್ದ. ಈತನ ಆಯುಧಾಗಾರದಲ್ಲಿ ಪವಿತ್ರ ಚಕ್ರರತ್ನವೊಂದು ಉದಯಿಸಿ , ದಿಗ್ವಿಜಯಕ್ಕೆ ಹೊರಡಲು ಸೂಚಿಸುತ್ತದೆ. ಭರತ ವಿಜಯಯಾತ್ರೆ ಮಾಡುತ್ತ ತನ್ನ ತಮ್ಮ ಬಾಹುಬಲಿಯ ರಾಜಧಾನಿ ಪೌದನಪುರಕ್ಕೆ ಬರುತ್ತಾನೆ. ಚಕ್ರರತ್ನ ಅಲ್ಲಿ ನಿಲ್ಲುತ್ತದೆ. ಬಾಹುಬಲಿ …
ಪೂರ್ತಿ ಓದಿ...ರತ್ನಾಕರ ವರ್ಣಿ
ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿಯ ಕಾಲ ಸುಮಾರು ಕ್ರಿ.ಶ. ೧೫೫೭. ಈತನ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ. ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ. ರತ್ನಾಕರವರ್ಣಿ ರಚಿಸಿದ ಕೃತಿಗಳು: ಭರತೇಶ ವೈಭವ – ರತ್ನಾಕರವರ್ಣಿಯ ಮೇರು ಕೃತಿ. ತ್ರಿಲೋಕ ಶತಕ ಅಪರಾಜಿತೇಶ್ವರ ಶತಕ ರತ್ನಾಕರಾಧೀಶ್ವರ ಶತಕ ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು ಈ ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊಂಡಾಗ ರಚಿಸಿದ್ದಾನೆ) ಅಣ್ಣನ ಪದಗಳು ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. …
ಪೂರ್ತಿ ಓದಿ...ಪಂಪ
ಪಂಪ (ಕ್ರಿ.ಶ. ೯೦೨-೯೫೦) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಎಂಬ ಎರಡು ಕೃತಿಗಳ ಕರ್ತೃ. ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ ಒಬ್ಬನಾಗಿದ್ದನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. ಹಿನ್ನೆಲೆ ಪಂಪನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಲಬ್ಬೆ. ಕ್ರಿ.ಶ.ಸುಮಾರು ೯೩೫ ರಿಂದ ೯೫೫ರ ವರೆಗೆ ಆಳಿದ …
ಪೂರ್ತಿ ಓದಿ...ದುರ್ಗಸಿಂಹ
ದುರ್ಗಸಿಂಹನು ತನ್ನವಿಚಾರವನ್ನು ತನ್ನಕೃತಿಯಲ್ಲಿ ಕನ್ನಡದ ಆದಿ ಕವಿ ಪಂಪನ ಹಾಗೆ ವಿವರವಾಗಿ ನಿವೇದಿಸಿಕೊಂಡಿರುವುದರಿಂದ ಕವಿಚರಿತೆಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಅವನು ತನ್ನ ಊರು ಕರ್ನಾಟಕದ ಸಯ್ಯಡಿಯ ಅಗ್ರಹಾರವೆಂದು ಹೇಳಿದ್ದಾನೆ. ‘ಛಂದೋಂಬು ಯನ್ನು ಬರೆದ ನಾಗವರ್ಮನ ಊರು ಅದೇ ಆಗಿದೆ. ಅದು ಕಿಸುಕಾಡುನಾಡಿನಲ್ಲಿದೆ ಎಂದು ಅವನು ಹೇಳಿದ್ದಾನೆ. ಆ ಸಯ್ಯಡಿಯಲ್ಲಿ ತನ್ನ ಚಕ್ರವರ್ತಿಯ ಆಜ್ಞೆಯಂತೆ ಹರಿಹರಭವನಗಳನ್ನು ದುರ್ಗಸಿಂಹನು ಕಟ್ಟಿಸಿದನಂತೆ, ಸಯ್ಯಡಿ ಇಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿದೆ. ದುರ್ಗಸಿಂಹನು ಪದ್ಯಗಳು ಸೂಕ್ತಿ ಸುಧಾರ್ಣವದಲ್ಲಿ ದೊರಕುವುದರಿಂದ ದುರ್ಗಸಿಂಹನು ಕ್ರಿ.ಶ. ೧೧೩೯ ರಿಂದ ಕ್ರಿ.ಶ. ೧೧೪೯ರ ವರೆಗೆ ಆಳಿದ ಚಾಲುಕ್ಯ …
ಪೂರ್ತಿ ಓದಿ...ಜನ್ನ
ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ.(ಕಾಲ :ಕ್ರಿ.ಶ.೧೧೮೦-೧೨೬೦) ತಂದೆ ತಾಯಿಗಳು ,ಮತ್ತು ಪರಿವಾರ : ಈತನ ತಂದೆ ಶಂಕರ(ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು ; ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು. ಜೈನಮತೀಯನಾದರೂ, ಅವನ ಸಾಹಿತ್ಯ ಕೃಷಿ, ಸರ್ವಪ್ರಾಕಾರಗಳನ್ನು ವ್ಯಾಪಿಸಿತ್ತು : ಜನ್ನನು, …
ಪೂರ್ತಿ ಓದಿ...