ರಂಗಭೂಮಿ

ಬಿ. ವಿ. ಕಾರಂತ

B V Karanth

ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು.   ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕಾರಂತರು ಹೊಸ ಭಾಷ್ಯ ಬರೆದಂತಹವರು. ಬಾಬುಕೋಡಿ ವೆಂಕಟರಮಣ ಕಾರಂತರು ಜನಿಸಿದ್ದು ಸೆಪ್ಟೆಂಬರ್ 19, 1929ರಂದು ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ.   ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗನಾದ ವೆಂಕಟರಮಣನನ್ನು (ಬಿ.ವಿ.ಕಾರಂತ) ತಾಯಿ ಲಕ್ಷ್ಮಮ್ಮ ಕೊಂಡಾಟದಿಂದ’ ‘ಬೋಯಣ್ಣ’ಎಂದು ಕರೆಯುತ್ತಿದ್ದರು. ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು,  ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು,  ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, …

ಪೂರ್ತಿ ಓದಿ...

ಶ್ರೀರಂಗ

sriranga

ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ನಾಟಕಕಾರ, ಸಾಹಿತಿ ಮತ್ತು ಶ್ರೇಷ್ಠ ವಿದ್ವಾಂಸ ‘ಶ್ರೀರಂಗ’ ಎಂಬ ಕಾವ್ಯನಾಮಾಂಕಿತ ಮಹಾನ್ ಪ್ರತಿಭಾನ್ವಿತ ಆದ್ಯ ರಂಗಾಚಾರ್ಯರ ಜನ್ಮ ದಿನ ಸೆಪ್ಟಂಬರ್ 26. ಅವರು 1904ರಲ್ಲಿ ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು. ಪುಣೆಯಲ್ಲಿ ಬಿ.ಎ ವಿಧ್ಯಾಭ್ಯಾಸದ ನಂತರ, ಲಿಂಕನ್ ವಿಶ್ವವಿಧ್ಯಾಲಯದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕರ್ನಾಟಕ ಏಕೀಕರಣದಲ್ಲಿ ಶ್ರೀರಂಗರು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದರು. 1944ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ …

ಪೂರ್ತಿ ಓದಿ...

ಗುಬ್ಬಿ ವೀರಣ್ಣ

ಅಕ್ಟೋಬರ್ 18 ಕನ್ನಡ ರಂಗಭೂಮಿಯ ಮೇರುಸದೃಶರಾದ ಗುಬ್ಬಿ ವೀರಣ್ಣನವರ ಸಂಸ್ಮರಣಾ ದಿನವಾಗಿದೆ.  ಕನ್ನಡ ರಂಗಭೂಮಿಗೆ ಕಾಯಕಲ್ಪ ನೀಡಿ ಅದಕ್ಕೆ ಶ್ರೇಷ್ಠತೆಯನ್ನು ದೊರಕಿಸಿಕೊಟ್ಟದ್ದೇ ಅಲ್ಲದೆ, ಕನ್ನಡ ಚಲನಚಿತ್ರರಂಗಕ್ಕೂ ಮಹತ್ತರ ರೀತಿಯಲ್ಲಿ ಅಡಿಪಾಯ ಹಾಕಿದವರು ಗುಬ್ಬೀ ವೀರಣ್ಣನವರು.  ಕನ್ನಡ ರಂಗಭೂಮಿಯ ಸಿದ್ಧಿಪುರುಷರಿವರು. ವೀರಣ್ಣನವರು ಈಗ ತಾಲ್ಲೂಕು ಕೇಂದ್ರವೆನಿಸಿರುವ, ಅಂದು ಗ್ರಾಮವಾಗಿದ್ದ ಗುಬ್ಬಿಯಲ್ಲಿ 1890ರ ವರ್ಷದಲ್ಲಿ ಜನಿಸಿದರು.  ತಂದೆ ಹಂಪಣ್ಣನವರು ಮತ್ತು ತಾಯಿ ರುದ್ರಾಂಬೆಯವರು. ಕನ್ನಡ ರಂಗಭೂಮಿಯಲ್ಲಂತೂ ‘ಗುಬ್ಬಿ ಕಂಪೆನಿ’ಯದ್ದು ಆಚಂದ್ರಾರ್ಕ ಹೆಸರು.  ಈ  ‘ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ’ ಪ್ರಾರಂಭವಾದದ್ದು ಗುಬ್ಬಿ ವೀರಣ್ಣನವರು ಹುಟ್ಟಿದ್ದಕ್ಕೆ 6 …

ಪೂರ್ತಿ ಓದಿ...

ವೇಣುಗೋಪಾಲ ಕಾಸರಗೋಡು

Venugopala kasargod

ನೆರೆರಾಜ್ಯಕ್ಕೆ ಸೇರಿಹೋದ ಕನ್ನಡದ ಹೃದಯವುಳ್ಳ ಕಾಸರಗೋಡಿನಲ್ಲಿ ಕನ್ನಡದ ಉಸಿರನ್ನು ಜೀವಂತವಾಗಿಡಲು ನಿರಂತರ ಶ್ರಮಿಸಿದವರಲ್ಲಿ ವೇಣುಗೋಪಾಲ ಕಾಸರಗೋಡು ಒಬ್ಬ ಪ್ರಮುಖರು.  ಸಾಹಿತ್ಯ ಮತ್ತು  ರಂಗಭೂಮಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಹುಮುಖ ಪ್ರತಿಭೆಯ ವೇಣುಗೋಪಾಲರು  ಕಾಸರಗೋಡಿನ ಕಾರಡ್ಕದಲ್ಲಿ ನವೆಂಬರ್ 10, 1948ರ ವರ್ಷದಲ್ಲಿ ಜನಿಸಿದರು.  ತಂದೆ ಪೊನ್ನೆಪ್ಪಲ ನಾರಾಯಣ ಭಟ್ಟರು ಮತ್ತು  ತಾಯಿ ಅದಿತಿ. ವೇಣುಗೋಪಾಲ ಕಾಸರಗೋಡು ಅವರು ಕನ್ನಡದಲ್ಲಿ ಎಂ.ಎ. ಮತ್ತು ಎಂ.ಫಿಲ್. ಪದವಿಗಳನ್ನು ಗಳಿಸಿದ ನಂತರ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ 1972 ರಲ್ಲಿ ವೃತ್ತಿಯನ್ನಾರಂಭಿಸಿ 2004 ರಲ್ಲಿ ನಿವೃತ್ತರಾಗುವವರೆವಿಗೂ ಅದೇ ಕಾಲೇಜಿನಲ್ಲಿದ್ದರು. ಅವರು …

ಪೂರ್ತಿ ಓದಿ...

ಬಿ. ಜಯಮ್ಮ

Jayamma

ಬಿ. ಜಯಮ್ಮ ಕನ್ನಡ ರಂಗಭೂಮಿ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಾರಂಭಿಕ ದಶಕಗಳ ಬಹುದೊಡ್ಡ ಹೆಸರು.  ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದರಾದ ಬಿ. ಜಯಮ್ಮನವರು ನವೆಂಬರ್ 26, 1915ರ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ  ಜನಿಸಿದರು.  ತಂದೆ ಟಿ.ಎನ್. ಮಲ್ಲಪ್ಪನವರು. ತಾಯಿ ರಂಗ ಕಲಾವಿದೆ ಬಿ. ಕಮಲಮ್ಮನವರು. ತಂದೆ ಮಲ್ಲಪ್ಪನವರಿಗೆ ಮಗಳು ಎಂ.ಬಿ.ಬಿ.ಎಸ್ ಓದಿ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ಬಾಲಕಿ ಜಯಮ್ಮನಿಗದರೋ ಸಂಗೀತ, ನೃತ್ಯ, ನಾಟಕಗಳಲ್ಲಿ ಅಭಿರುಚಿ. ರಸಿಕ ಜನಾನಂದ ನಾಟಕ ಸಭಾ ಕಂಪನಿಯ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲಿ ನಟಿಸಿದ ಜಯಮ್ಮನವರು  ಸೀತಾಕಲ್ಯಾಣ ನಾಟಕದ …

ಪೂರ್ತಿ ಓದಿ...

ಆದ್ಯರಂಗಾಚಾರ್ಯ

ಆದ್ಯ ರಂಗಾಚಾರ್ಯ ( ಶ್ರೀರಂಗ ) – ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ “‘ಕಾಳಿದಾಸ”‘ ಎಂಬ ಕೃತಿಗೆ ೧೯೭೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರದಾರ.ಇವರು ೨೬ ಸಪ್ಟಂಬರ ೧೯೦೪ ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡದಲ್ಲಿ ಜನಿಸಿದರು. ಲಂಡನ್ನಿನಲ್ಲಿ oftudiesಎಮ್.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು ೨೦ ವರ್ಷಗಳ ಕಾಲ ದುಡಿದರು. ಸಾಹಿತ್ಯ ಶ್ರೀರಂಗರ ಸಾಹಿತ್ಯ ಅಪಾರ ಹಾಗು …

ಪೂರ್ತಿ ಓದಿ...