‘ಕೆ.ಮಂಜುನಾಥಯ್ಯನವರು’, ಈಗ ತಮ್ಮ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಪ್ರವೃತ್ತಿಯಿಂದಲ್ಲ. ಅವರದೇ ಸ್ವಂತ ಉದ್ಯೋಗವನ್ನು ಸ್ಥಾಪಿಸಿಕೊಂಡು ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದಾರೆ. ಸ್ವತಃ ಇಂಜಿನಿಯರ್ ಆಗಿರುವ ಮಂಜುನಾಥಯ್ಯನವರು, ಮುಂಬೈನ, ‘ಬಿ.ಎ.ಆರ್.ಸಿ'(BARC) ಯಲ್ಲಿ ವಿಜ್ಞಾನಿಯಾಗಿ, ಹಲವು ವರ್ಷ ದುಡಿದು ಸ್ವಇಚ್ಛೆಯಿಂದ ನಿವೃತ್ತರಾದರು. ಮಂಜುನಾಥರಿಗೆ, ಭಾರತೀಯ ಸಾಹಿತ್ಯ,ಕಲೆ, ಸಂಸ್ಕೃತಿ, ನೃತ್ಯ ಮುಂತಾದವುಗಳಲ್ಲಿ ಅತೀವ ಆಸಕ್ತಿ. ಅದರಲ್ಲೂ ತಮ್ಮ ಮಾತೃಭಾಷೆ ಕನ್ನಡವನ್ನು ಪ್ರಾಣದಂತೆ ಪ್ರೀತಿಸುವವರು ಅವರು. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅತ್ಯುತ್ತಮ ಹಾಗೂ ಅತಿ ಮಹತ್ವದ ಯೋಗದಾನಮಾಡಿದ್ದಾರೆ. (ಅವರೊಬ್ಬ ಸಮರ್ಥ ನಟರು ಸಹಿತ). ‘ಮುಂಬೈ ನಾಟಕಗಳು, ಬೆಂಗಳೂರಿನಲ್ಲಿ ಪ್ರದರ್ಶನ ಕಂಡವು’“: ‘ಮೈಸೂರ್ ಅಸೋಸಿಯೇಷನ್, …
ಪೂರ್ತಿ ಓದಿ...ಏಣಗಿ ನಟರಾಜ
ಏಣಗಿ ನಟರಾಜ ಅವರು ನಾಡೋಜ ಡಾ. ಏಣಗಿ ಬಾಳಪ್ಪನವರ ಪುತ್ರರಾಗಿ ೧೮-೯-೧೯೫೮ರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯಲ್ಲಿ ಜನಿಸಿದರು.ತಂದೆ ಏಣಗಿ ಬಾಳಪ್ಪನವರಂತೆಯೇ ರಕ್ತಗತ ನಟನಾ ಕೌಶಲ್ಯ ಹೊಂದಿದ್ದ ನಟರಾಜ್ ಚಿಕ್ಕಂದಿನಲ್ಲಿಯೇ ಅಪ್ಪನ ಗರಡಿಯಲ್ಲಿ ಹತ್ತು ಹಲವು ನಾಟಕಗಳ ಪಾತ್ರ ಮಾಡಿ ಸೈ ಎನಸಿಕೊಂಡಿದ್ದರು. ಮುಂದೆ ನೀನಾಸಂನಲ್ಲಿ ತರಬೇತಿ ಪಡೆದು ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟರಾಜ, ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಅವರ ವಿಶಿಷ್ಟ ನಟನೆ ಮತ್ತು ಕಂಠಕ್ಕೆ ಮಾರು ಹೋಗದವರೇ ಇರಲಿಲ್ಲ. ನೀನಾಸಂ ತಿರುಗಾಟದಲ್ಲಿ ನಾಡಿನಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಏಣಗಿ ನಟರಾಜನವರದ್ದು. …
ಪೂರ್ತಿ ಓದಿ...ಎಚ್. ಎಲ್. ಎನ್. ಸಿಂಹ
ಎಚ್ ಎಲ್ ಎನ್ ಸಿಂಹ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು. ಕನ್ನಡದ ವರನಟ ರಾಜ್ ಕುಮಾರ್ ಅವರನ್ನೊಳಗೊಂಡಂತೆ ಕನ್ನಡಕ್ಕೆ ಅವರು ನೀಡಿದ ಅಸಾಮಾನ್ಯ ಕೊಡುಗೆಗಳು ಅವಿಸ್ಮರಣೀಯ. ಐದು ದಶಕಗಳಿಗೂ ಹೆಚ್ಚು ಕಾಲ ಅವರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಜೀವನ: ಎಚ್ ಎಲ್ ಎನ್ ಸಿಂಹ ಅವರು ಜನಿಸಿದ್ದು ಜುಲೈ ೨೫, ೧೯೦೬ರ ವರ್ಷದಲ್ಲಿ. ಊರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮ. ತಂದೆ ನರಸಿಂಹಯ್ಯನವರು ಮತ್ತು ತಾಯಿ ಲಕ್ಷ್ಮಮ್ಮನವರು. ರಂಗಭೂಮಿಯಲ್ಲಿ: ಸಿಂಹರು ಶಾಲೆಯಲ್ಲಿ ಓದಿದ್ದಕ್ಕಿಂತ …
ಪೂರ್ತಿ ಓದಿ...ಎಂ.ವಿ. ಸುಬ್ಬಯ್ಯ ನಾಯ್ಡು
ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ಜನಿಸಿದ (೧೮೯೬) ಸುಬ್ಬಯ್ಯ ನಾಯ್ಡು ಕನ್ನಡದ ಮೊದಲ ನಾಯಕ ನಟ.‘ಸತಿ ಸುಲೋಚನಾ’ ಚಿತ್ರದಲ್ಲಿ (ಪ್ರತಿ)ನಾಯಕ ಇಂದ್ರಜಿತುವಿನ ಪಾತ್ರ ವಹಿಸಿದ ದಿವಂಗತ ಎಂ.ವಿ. ಸುಬ್ಬಯ್ಯನಾಯ್ಡುರವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಅಭಿಜಾತ ಕಲಾವಿದರಲ್ಲೊಬ್ಬರು. ರಂಗಭೂಮಿಯಲ್ಲಿ ಅನೇಕ ಪ್ರಯೋಗ ನಡೆಸಿದವರು. ರಂಗಭೂಮಿಗೆ ಶಿಸ್ತು ಮತ್ತು ಗ್ಲಾಮರ್ ತಂದವರು. ರಂಗಭೂಮಿಯ ಸೆಳೆತದಿಂದಾಗಿ ಅವರಿಗೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಚಲನಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಆಗಲಿಲ್ಲ. ಆದರೆ ಇರುವ ದಿನವೂ ಚಿತ್ರರಂಗದಲ್ಲಿ ಅಭಿನಯದ ಶೈಲಿಯೊಂದನ್ನು ರೂಪಿಸಿದರು. ಅವರು ಪುರಾಣ ಪಾತ್ರಗಳ ಅಭಿನಯಕ್ಕೆ ನೀಡಿದ ಹೊಸ ಬಗೆಯ ಶೈಲಿಯು …
ಪೂರ್ತಿ ಓದಿ...ಉಮಾಶ್ರೀ
ಉಮಾಶ್ರೀ (ಮೇ ೧೦, ೧೯೫೭) ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು. ಜೀವನ: ಉಮಾಶ್ರೀ ಅವರು ಮೇ ೧೦, ೧೯೫೭ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಅವರ ಜೀವನ ಬಡತನದ ಬವಣೆಯಲ್ಲಿ ಮೂಡಿ ಬಂದದ್ದು. “ನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ” …
ಪೂರ್ತಿ ಓದಿ...ಆಶಾಲತ
ಸಾವಿರಕ್ಕೂ ಮಿಕ್ಕಿದ ಪ್ರದರ್ಶನ ಕಂಡ ‘ಸಂಸಾರದಲ್ಲಿ ಸರಿಗಮ, ಎನ್ನುವ ನಾಟಕವೂ ಸೇರಿದಂತೆ , ೨೫೦ ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ‘ಆಶಾಲತ’ರವರದು. ಅವರು, ಶಾಸ್ತ್ರೀಯವಾಗಿ ಸಂಗೀತ, ನೃತ್ಯ,, ಯಾವುದನ್ನೂ ಕಲಿಯದಿದ್ದರೂ ಅಭಿನಯ ರಕ್ತಗತವಾಗಿ ಬಂದಿತ್ತು. ‘ಸಂಸಾರದಲ್ಲಿ ಸರಿಗಮ’ ನಾಟಕದ ಮೊದಲ ೫೦೦ ಪ್ರದರ್ಶನದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಮುಂದೆ ಅದನ್ನು ಅಭಿನೇತ್ರಿ ಉಮಾಶ್ರೀ, ಮತ್ತಿತರರು ಅದನ್ನು ಮುಂದುವರೆಸಿದರು. ಸಿನಿಮಾನಟಿಯಾದ ಬಳಿಕ ನಾಟಕದಲ್ಲಿ ಅಭಿನಯಿಸಲು ಸಂಕೋಚಪಡುತ್ತಿದ್ದರು. ಆಶಾಲತರ ಪರಿವಾರ: ‘ಆಶಾಲತರ ತಾಯಿ, ಬಿ. ರಾಜಮ್ಮ . ಬಿ.ಜಯಮ್ಮಮತ್ತು ಬಿ.ರಾಜಮ್ಮ ಸೋದರಿಯರು. ಇವರಿಬ್ಬರೂ ಕೆಲಕಾಲ ಗುಬ್ಬಿ …
ಪೂರ್ತಿ ಓದಿ...ಆರ್ ಎಸ್ ರಾಜಾರಾಂ
ರಂಗಭೂಮಿಯ ಪ್ರಖ್ಯಾತ ಕಲಾವಿದರಾದ ರಾಜಾರಾಂ ರವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ. ತಂದೆ ಜಿ.ಎಸ್. ರಘುನಾಥರಾವ್, ತಾಯಿ ಶಾರದಾಬಾಯಿ. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ. ಮಲ್ಲೇಶ್ವರದ ಸ್ನೇಹಿತರೊಡನೆ ಸೇರಿ ಕಟ್ಟಿದ ‘ರಸಿಕ ರಂಜನಿ ಕಲಾವಿದರು’ ಸಂಸ್ಥಾಪಕರಲ್ಲೊಬ್ಬರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದ, ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್, ಕೆ. ಗುಂಡಣ್ಣನವರ ನಾಟಕಗಳಲ್ಲಿ ಅಭಿನಯ. ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ …
ಪೂರ್ತಿ ಓದಿ...ಅಹಲ್ಯ ಬಲ್ಲಾಳ್
ಈ ಹೆಸರು ಮುಂಬೈ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಮುಂಬೈ ಕನ್ನಡ ರಂಗಭೂಮಿಯ ಕೆಲವೇ ಜನ ಅಪ್ರತಿಮ ಕಲಾವಿದರಲ್ಲಿ ಅಹಲ್ಯ ಬಲ್ಲಾಳ ಸಹ ಒಬ್ಬರು. ಅಹಲ್ಯ ಅವರು ಅಭಿನೇತ್ರಿ ಮಾತ್ರವಲ್ಲದೆ ಭರತನಾಟ್ಯ ಪ್ರವೀಣೆ ಮತ್ತು ಬರಹಗಾರ್ತಿಯೂ ಆಗಿದ್ದಾರೆ. ಬಹುಮುಖಪ್ರತಿಭೆಯ ವ್ಯಕ್ತಿತ್ವ. ಅಹಲ್ಯ ಅವರು ಪಿ.ಎನ್.ವೆಂಕಟ್‍ರಾವ್ ಮತ್ತು ಶ್ರೀಮತಿ.ಜಾನಕಿ ದಂಪತಿಗಳ ಮಗಳಾಗಿ ದಿನಾಂಕ. ಡಿಸೆಂಬರ್ ೦೧, ೧೯೬೩ರಲ್ಲಿ ಜನಿಸಿದರು. ಅವರ ತಂದೆ ಭಾರತೀಯ ಜೀವ ವಿಮಾ ನಿಗಮದ ಹಿರಿಯ ಅಧಿಕಾರಿಯಾಗಿ ವಿಶ್ರಾಂತರಾಗಿದ್ದರು. ತಾಯಿ ಜಾನಕಿ ಗೃಹಿಣಿ. ಖ್ಯಾತ ಚಲನಚಿತ್ರ ನಿರ್ದೇಶಕರಾದ ರಾಮಚಂದ್ರ.ಪಿ.ಎನ್. ಅವರು ಅಹಲ್ಯ …
ಪೂರ್ತಿ ಓದಿ...ಅವಿನಾಶ್ ಕಾಮತ್
ಅವಿನಾಶ್ ಕಾಮತ್ ಮುಂಬೈಯ ಕನ್ನಡ ರಂಗಭೂಮಿಯ ಪ್ರತಿಭಾನ್ವಿತ ನಟರು. ಅವಿನಾಶ್ ಕಾಮತ್ ಅವರು ದಿನಾಂಕ: ಏಪ್ರಿಲ್ ೨೬, ೧೯೭೭ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಂದೆ ಖ್ಯಾತ ಹಿಂದುಸ್ಥಾನಿ ಗಾಯಕ ಶ್ರೀ. ಮ್.ಎಸ್.ಕಾಮತ್ ಅವರು. ತಾಯಿ ಶ್ರೀಮತಿ.ಪದ್ಮಾ ಕಾಮತ್. ಅವಿನಾಶ್ ಕಾಮತ್ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ಧಾರವಾಡದ ಕೆ. ಇ. ಬೋರ್ಡ್ಸ್ ಶಾಲೆಯಲ್ಲಾಯಿತು. ನಂತರ ಇವರ ತಂದೆ-ತಾಯಿ ಮುಂಬೈಗೆ ವಲಸೆ ಬಂದ ಕಾರಣ ಹೈಸ್ಕೂಲು ಮತ್ತು ಕಾಲೇಜಿನ ವಿದ್ಯಾಭ್ಯಾಸ ಮುಂಬೈನಲ್ಲಾಯಿತು. ‘ಬೆಳೆವ ಪೈರು ಮೊಳಕೆಯಲ್ಲೇ ನೋಡು’ ಎನ್ನುವ ಮಾತನ್ನು ಸಾರ್ಥಕಗೊಳಿಸುವಂತೆ ಅವಿನಾಶ್ ಕಾಮತ್ …
ಪೂರ್ತಿ ಓದಿ...ಸಿ ಕೆ ನಾಗರಾಜರಾವ್
ಸಾಹಿತಿ, ರಂಗಭೂಮಿ ಕಲಾವಿದ, ಪತ್ರಕರ್ತ, ಕನ್ನಡದ ಮಹಾನ್ ಕಾರ್ಯಕರ್ತರಾದ ಸಿ. ಕೆ ನಾಗರಾಜರಾವ್ ಅವರು ‘ಪಟ್ಟಮಹಾದೇವಿ ಶಾಂತಲಾದೇವಿ’ ಎಂಬ ಐತಿಹಾಸಿಕ ಕಾದಂಬರಿಗಾಗಿ ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯಕ್ಕೆ ‘ಮೂರ್ತಿದೇವಿ ಪ್ರಶಸ್ತಿ’ ಪಡೆದವರು. ಭಾರತೀಯ ಜನಜೀವನದ ಶಾಶ್ವತ ಮೌಲ್ಯಗಳ ಮಹತ್ವವನ್ನು ಎತ್ತಿಹಿಡಿಯುವ, ಭಾರತೀಯ ಭಾಷೆಗಳಲ್ಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಅತ್ಯುತ್ತಮ ಗ್ರಂಥಕ್ಕೆ ಪ್ರಶಸ್ತಿ ಕೊಡುವ ಉದ್ದೇಶದಿಂದ ಭಾರತೀಯ ಜ್ಞಾನಪೀಠವು 1983ರಿಂದ ಪ್ರಾರಂಭಿಸಿರುವ ಈ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ನಾಗರಾಜರಾಯರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1915ರ ಜೂನ್ 12ರಂದು. ತಂದೆ ಕೃಷ್ಣಮೂರ್ತಿ ರಾವ್, ತಾಯಿ …
ಪೂರ್ತಿ ಓದಿ...