ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು ಮಾರ್ಚ್ 8, 1933ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್ ಮತ್ತು ತಾಯಿ ವೆಂಕಮ್ಮನವರು. ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ …
ಪೂರ್ತಿ ಓದಿ...ಪ್ರತಿಭಾ ಪ್ರಹ್ಲಾದ್
ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಜನವರಿ 29, 1955ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪ್ರಹ್ಲಾದ್, ತಾಯಿ ಪ್ರೇಮಾ. ತಂದೆ ತಾಯಿ ಇಬ್ಬರೂ ಬೋಧಕ ವೃತ್ತಿಯಲ್ಲಿದ್ದವರು. ಓದಿನಲ್ಲಿ ಸದಾ ಮುಂದಿದ್ದ ಪ್ರತಿಭಾರವರು ಪಡೆದದ್ದು ಬಿ.ಎಡ್ ಮತ್ತು ಕಮ್ಯೂನಿಕೇಷನ್‌ನಲ್ಲಿ ಎಂ.ಎಸ್. ಪದವಿ. ಆದರೆ ಒಲಿದದ್ದು ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗಳತ್ತ. ಪ್ರೊ. ಯು.ಎಸ್. ಕೃಷ್ಣರಾವ್ ಮತ್ತವರ ಪತ್ನಿ ಚಂದ್ರಭಾಗ ದೇವಿಯವರಲ್ಲಿ ಭರತನಾಟ್ಯ ಶಿಕ್ಷಣ ಪಡೆದ ಪ್ರತಿಭಾ, ಶ್ರೀಮತಿ ಸುನಂದಾ ದೇವಿಯವರಲ್ಲಿ ಕೂಚಿಪುಡಿ ನೃತ್ಯ ಕಲಿತರು. ಅವರು ರಂಗಪ್ರವೇಶ ಮಾಡಿದ್ದು 1971ರಲ್ಲಿ. ಮುಂದೆ ಹಲವಾರು …
ಪೂರ್ತಿ ಓದಿ...ಮಹಾನ್ ನೃತ್ಯ ಕಲಾವಿದ ಉದಯಶಂಕರ್
ಸಾಮಾನ್ಯವಾಗಿ ಪ್ರದರ್ಶನ ನೃತ್ಯ ಕಲೆಯಲ್ಲಿ ಹಿಂದಿನ ದಿನಗಳಲ್ಲಿ ಸ್ತ್ರೀಯರೇ ಹೆಚ್ಚು ಪ್ರಾಧಾನ್ಯತೆ ಪಡೆದಿದ್ದರು. ಪುರುಷರೂ ನೃತ್ಯ ಕಲೆಯಲ್ಲಿ ನುರಿತವರೆಂಬ ಸಂಗತಿ ಸಾಮಾನ್ಯಜನರ ಅನುಭವಕ್ಕೆ ಬಂದದ್ದೇ ಉದಯಶಂಕರನನ್ನು ನೋಡಿದ ಮೇಲೆ ಎಂಬ ಪ್ರತೀತಿ ಇದೆ. ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಭಾರತೀಯನೃತ್ಯ ಕಲಾವಿದರಲ್ಲಿ ಬಹುಷಃ ಮೊಟ್ಟಮೊದಲನೆಯವರು ಉದಯಶಂಕರ್. ಉದಯಶಂಕರ್ 1900ರ ವರ್ಷದ ಡಿಸೆಂಬರ್ 8ರ ದಿನದಂದು ಉದಯಪುರದಲ್ಲಿ ಹುಟ್ಟಿದರು. ಅವರ ತಂದೆ ರಾಜಸ್ಥಾನದ ಝಲವಾರಾ ಪ್ರಾಂತ್ಯದ ದಿವಾನರಾಗಿದ್ದರು. ಬಾಲ್ಯದಲ್ಲಿಯೇ ಕಲೆಯತ್ತ ಮನಸ್ಸಿನ ಒಲವನ್ನು ಪ್ರಕಟಿಸಿದ್ದ ಉದಯಶಂಕರರ ಶಿಕ್ಷಣಕ್ಕೆ ತಂದೆ ವಿಶೇಷ ಗಮನ ನೀಡಿದರು. ಉದಯ ಶಂಕರರಿಗೆ ಬಾಲ್ಯದಿಂದಲೇ …
ಪೂರ್ತಿ ಓದಿ...ಸಹನಾ ಚೇತನ್
ನಾಟ್ಯ ಕಲೆಯನ್ನು ಕಲಾವಿದೆಯಾಗಿ, ಕಲಾ ಶಿಕ್ಷಕಿಯಾಗಿ, ಸಾಂಸ್ಕೃತಿಕ ಉತ್ಸವಗಳ ರೂವಾರಿಯಾಗಿ ಹಾಗೂ ಸಾಮಾಜಿಕ ಕಾಳಜಿಯಾಗಿ ರೂಪಿಸಿಕೊಂಡಿರುವವರು ಯುವಪ್ರತಿಭೆ ಶಿವಮೊಗ್ಗದ ಸಹನಾ ಚೇತನ್. ಸಹನಾ ಚೇತನ್ ಅವರು ತಮ್ಮ ಎಳೆಯ ಹತ್ತನೇ ವಯಸ್ಸಿನಿಂದಲೇ ನೃತ್ಯದ ವ್ಯಾಮೋಹವನ್ನು ಬೆಳೆಸಿಕೊಂಡವರು. ನೃತ್ಯ, ನಾಟಕ ಮತ್ತು ಚಿತ್ರಕಲೆಗಳಲ್ಲಿ ಆಸಕ್ತರಾದ ಸಹನಾ ತಮ್ಮ ಕಾಲೇಜು ವ್ಯಾಸಂಗದ ದಿನಗಳಲ್ಲಿ ಎನ್ ಎಸ್ ಎಸ್ ಅಭ್ಯರ್ಥಿಯಾಗಿ ನವದೆಹಲಿಯ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡ ಕೀರ್ತಿವಂತರು. ನಾಟ್ಯ ಕಲೆಯಲ್ಲಿ ಶಿಸ್ತುಬದ್ಧ ಸಾಧನೆಯನ್ನು ಮಾಡಿರುವ ಸಹನಾ ಚೇತನ್, ದೇಶದಾದ್ಯಂತ ಪ್ರತಿಷ್ಟಿತ ವೇದಿಕೆಗಳಲ್ಲಿ ನೃತ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಕಲಾರಸಿಕರ …
ಪೂರ್ತಿ ಓದಿ...ಯಾಮಿನಿ ಕೃಷ್ಣಮೂರ್ತಿ
ಯಾಮಿನಿ ಕೃಷ್ಣಮೂರ್ತಿ (ಜನನ: ೧೯೪೦, ಚಿದಂಬರಂ, ತಮಿಳುನಾಡು, ಒಂದು ತೆಲುಗು ಕುಟುಂಬದಲ್ಲಿ) ಭಾರತದ ಒಬ್ಬ ಪ್ರಸಿದ್ಧ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯ ಕಲಾವಿದೆ. ಹುಣ್ಣಿಮೆಯ ದಿನ ಜನಿಸಿದ್ದ ಅವರಿಗೆ ಅವರ ಅಜ್ಜ ಪ್ರೀತಿಯಿಂದ, ‘ಪೂರ್ಣತಿಲಕ’, ಎಂದು ನಾಮಕರಣಮಾಡಲು ಸೂಚಿಸಿದ್ದರು. ೧೯೫೭ ರಲ್ಲಿ ಚೆನ್ನೈನಲ್ಲಿ (ಹಿಂದಿನ ಹೆಸರು ಮದ್ರಾಸು) ಆರಂಭವಾದ ಯಾಮಿನಿಯವರ ನೃತ್ಯ ವೃತ್ತಿ ಹಲವು ಪ್ರಮುಖ ಘಟನೆಗಳನ್ನು ಒಳಗೊಂಡಿದೆ. ಅವರಿಗೆ ತಿರುಪತಿ ತಿರುಮಲ ದೇವಸ್ಥಾನದ ಆಸ್ಥಾನ ನರ್ತಕಿಯಾಗುವ ಗೌರವ ಪ್ರಾಪ್ತವಾಗಿದೆ. ಅವರ ನೃತ್ಯ ವೃತ್ತಿಯಲ್ಲಿ ಅವರಿಗೆ ಪದ್ಮಶ್ರೀ (೧೯೬೮), ಪದ್ಮಭೂಷಣ (೨೦೦೧), ಸಂಗೀತ ನಾಟ್ಯ …
ಪೂರ್ತಿ ಓದಿ...ತುಳಸಿ ರಾಮಚಂದ್ರ
ಪ್ರಖ್ಯಾತ ನೃತ್ಯ ಕಲಾವಿದರಾದ ಡಾ. ತುಳಸಿ ರಾಮಚಂದ್ರ ಅವರು ಡಿಸೆಂಬರ್ 21, 1952ರ ವರ್ಷದಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಜನಿಸಿದರು. ತಂದೆ ಮಾಧವರಾಯರು ರಂಗಭೂಮಿಯ ಪ್ರಸಿದ್ಧ ಕಲಾವಿದರು. ಅವರು ತಮಾಷಾ ಮಾಧವರಾವ್ ಎಂದೇ ರಂಗಲೋಕದಲ್ಲಿ ಪ್ರಸಿದ್ಧರಾದವರು. ತಾಯಿ ರುಕ್ಮಿಣಿಯಮ್ಮನವರು ಸಂಗೀತ ವಿದುಷಿ. ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ನೃತ್ಯ ಕಲಾವಿದೆ ಮತ್ತು ಶಿಲ್ಪಶಾಸ್ತ್ರ ಪರಿಣಿತೆ. ಪತಿ ಕೃಷ್ಣಗಿರಿ ರಾಮಚಂದ್ರ ಗಮಕಿಗಳು. ಹೀಗಾಗಿ ಡಾ. ತುಳಸಿ ರಾಮಚಂದ್ರ ಅವರು ಬೆಳೆದದ್ದು ಮತ್ತು ಬದುಕು ಕಟ್ಟಿಕೊಂಡದ್ದು ಎರಡೂ ಕಲಾವಿದರ ಕುಟುಂಬದಲ್ಲೇ. ತುಳಸಿ ಅವರಿಗೆ ಪ್ರಾರಂಭಿಕ ನೃತ್ಯ ಶಿಕ್ಷಣ …
ಪೂರ್ತಿ ಓದಿ...ಡಾ. ಮಾಯಾರಾವ್
(೧೯೨೮ ಮೇ, ೨,- ಸೆಪ್ಟೆಂಬರ್, ೧,೨೦೧೪) ‘ಮಾಯಾರಾವ್’ ಒಬ್ಬ ಪ್ರಸಿದ್ಧ ಕಥಕ್ ನೃತ್ಯಾಂಗನೆ. ಒಡಿಷಾದ ಕಥಕ್ ನೃತ್ಯ ಪ್ರಕಾರವನ್ನು ಕರ್ನಾಟಕಕ್ಕೆ ಪರಿಚಯಿಸಿ ಅದನ್ನು ಜನಪ್ರಿಯತೆಯತ್ತ ಕೊಂಡೊಯ್ದ ಶ್ರೇಯಸ್ಸು ಗಳಿಸಿದರು. ಕಥಕ್ ನಲ್ಲಿ ಸಾಧನೆ ತಮ್ಮ ಇಳಿ ವಯಸ್ಸಿನಲ್ಲೂ ‘ಕಥಕ್ ತ್ರೂ ದ ಏಜಸ್’ (‘Kathak through the ages’) ಮೂಲಕ ಗೆಜ್ಜೆ ಕಟ್ಟಿ, ಅಚ್ಚರಿ ಮೂಡಿಸಿದ್ದರು. ಶತಮಾನಗಳ ಪರಂಪರೆಯ ಕಟ್ಟಿಕೊಡುವ ಕಥಕ್ ಗತವೈಭವವನ್ನು ಕಟ್ಟಿಕೊಡುವ ಇಂತಹ ಪ್ರಯತ್ನ, ಇದೇ ಮೊದಲೆಂಬ ಹೆಗ್ಗಳಿಕೆಗೆ ಪಾತ್ರರಾದರು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ‘ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿ,’ ಶನಿವಾರ, …
ಪೂರ್ತಿ ಓದಿ...