ಕವಿಗಳು | ಸಾಹಿತಿಗಳು | ಕಲಾವಿದರು

ಇಂದಿರಾ ಹಾಲಂಬಿ (ಗಿರಿವಾಸಿನಿ)

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಇಂದಿರಾ ಹಾಲಂಬಿಯವರು ಹುಟ್ಟಿದ್ದು ಉಡುಪಿಯಲ್ಲಿ ೧೯೩೪ರ ಅಕ್ಟೋಬರ್ ೧೫ ರಂದು. ತಂದೆ ಶ್ರೀನಿವಾಸ ಕಂಗಿನ್ನಾಯ, ತಾಯಿ ರಾಜಮ್ಮ. ಓದಿದ್ದು ಎಸ್‌.ಎಸ್‌.ಎಲ್‌.ಸಿ. ಹಿಂದಿವಿಶಾರದ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲದೆ ಖಾಸಗಿಯಾಗಿ ತರಬೇತು ಪಡೆದು ಉಡುಪಿ, ಗುಂಡಿಬೈಲು, ಹೈಕಾಡಿ, ಹಿರಿಯಡ್ಕ ಮುಂತಾದ ಊರುಗಳ ಸರಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ನಲವತ್ತು ವರ್ಷಗಳ ದೀರ್ಘ ಕಾರ್ಯನಿರ್ವಹಣೆಯ ನಂತರ ನಿವೃತ್ತರು. ಬಾಲ್ಯದಿಂದಲೇ ರೂಢಿಸಿಕೊಂಡ ಹವ್ಯಾಸದಿಂದ ಓದಿದ್ದು …

ಪೂರ್ತಿ ಓದಿ...

ಕೆರೂರು ವಾಸುದೇವಾಚಾರ‍್ಯ

Keruru Vasudevacharya

ಕೆರೂರು ವಾಸುದೇವಾಚಾರ‍್ಯ (೧೫-೧೦-೧೮೬೬ – ೧೧-೧-೧೯೨೧): ಹೊಸಗನ್ನಡ ಪ್ರಾರಂಭದ ಗಮನಾರ್ಹ ಕಾದಂಬರಿಗಳಲ್ಲೊಂದಾದ ‘ಇಂದಿರೆ’ಯ (೧೯೦೮) ಕರ್ತೃಕೆರೂರು ವಾಸುದೇವಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ. ತಂದೆ ಶ್ರೀನಿವಾಸಾಚಾರ್ಯರು, ತಾಯಿ ಪದ್ಮಾವತೀಬಾಯಿ. ಪ್ರಾರಂಭಿಕ ಶಿಕ್ಷಣ-ಸಂಸ್ಕೃತಾಭ್ಯಾಸ ಮನೆಯಲ್ಲಿಯೇ. ಮಾಧ್ಯಮಿಕ ವಿದ್ಯಾಭ್ಯಾಸ ಧಾರವಾಡದಲ್ಲಿ. ೧೮೮೪ರಲ್ಲಿ ಮೆಟ್ರಿಕ್ಯುಲೇಷನ್ ಪಾಸು. ಪ್ರೌಢವ್ಯಾಸಂಗಕ್ಕಾಗಿ ಸೇರಿದ್ದು ಪುಣೆಯ ಫರ್ಗುಸನ್ ಕಾಲೇಜು. ಅನನುಕೂಲತೆಯಿಂದ ವಿದ್ಯಾಭ್ಯಾಸಕ್ಕೆ ಅಡಚಣೆ. ಖಾಸಗಿಯಾಗಿ ವ್ಯಾಸಂಗ ಮಾಡಿ ಎಚ್.ಪಿ. ಪರೀಕ್ಷೆಯಲ್ಲಿ ತೇರ್ಗಡೆ. ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡಿ ವಕೀಲಿ ವೃತ್ತಿ ಪ್ರಾರಂಭ. ನಳದಮಯಂತಿ ನಾಟಕವನ್ನು ರಚಿಸಿ ರಂಗದ ಮೇಲೂ ಪ್ರಯೋಗ. ಅದೇ ಕಾಲದಲ್ಲಿ ರಚಿಸಿದ …

ಪೂರ್ತಿ ಓದಿ...

ಎ.ವಿ. ಪ್ರಕಾಶ್‌

A V Prakasha

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, ತಾಯಿ ಶಂಕರಮ್ಮ. ತಂದೆಯಿಂದಲೇ ಸಂಗೀತದ ಮೊದಲ ಪಾಠ. ಟಿ.ಆರ್‌. ಕೃಷ್ಣಮೂರ್ತಿ, ಸಿ.ಎಂ. ಮಧುರಾನಾಥ್‌, ಎಂ.ಆರ್‌.ಕೃಷ್ಣ, ಪ್ರೊ.ರಾ. ವಿಶ್ವೇಶ್ವರನ್‌, ಡಾ. ಎನ್‌. ರಮಣಿ ಮುಂತಾದವರ ಬಳಿ ಕೊಳಲಿನ ಶಿಕ್ಷಣ. ಐದು ದಶಕಗಳಿಂದಲೂ ನಾಡಿನಾದ್ಯಂತ ನಡೆಸಿಕೊಡುತ್ತಿರುವ ಕೊಳಲುವಾದನ ಕಚೇರಿಗಳು. ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರ. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್‌, ಶ್ರೀಕೃಷ್ಣ ಗಾನಸಭಾ ಅಲ್ಲದೇ ಮೈಲಾಪುರ್‌, ಪೂನಾ, ಹೈದರಾಬಾದ್‌, ಶೃಂಗೇರಿ ಸಂಗೀತೋತ್ಸವ, ಸಾರ್ಕ್‌ಸಮ್ಮೇಳನ, ಮೈಸೂರು …

ಪೂರ್ತಿ ಓದಿ...

ವೀರೇಂದ್ರ ಸಿಂಪಿ

Veerendra Simpi

ವೀರೇಂದ್ರ ಸಿಂಪಿ (೧೪-೧೦-೧೯೩೮) ಪ್ರಸಿದ್ಧ ಪ್ರಬಂಧಕಾರರಾದ ವೀರೇಂದ್ರ ಸಿಂಪಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ. ತಂದೆ ಪ್ರಸಿದ್ಧ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣ. ಕಾಲೇಜು ಶಿಕ್ಷಣ ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ೧೯೬೨ರಲ್ಲಿ. ಉದ್ಯೋಗ ಪ್ರಾರಂಭಿಸಿದ್ದು ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೯ರಲ್ಲಿ ನಿವೃತ್ತಿ. ನಿವೃತ್ತಿಯ ನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ‍್ಯರಾಗಿ ನಾಲ್ಕು ವರ್ಷ ಸೇವೆ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಹುಚ್ಚು. …

ಪೂರ್ತಿ ಓದಿ...

ಬಿ.ವಿ. ರಾಮಮೂರ್ತಿ

B V Ramamurthy

ಬಿ.ವಿ. ರಾಮಮೂರ್ತಿ (೧೪-೧೦-೧೯೩೩ – ೨೪-೩-೨೦೦೪) ಪ್ರಖ್ಯಾತ ವ್ಯಂಗ್ಯ ಚಿತ್ರಕಾರರಾದ ರಾಮಮೂರ್ತಿಯವರು ಹುಟ್ಟಿದ್ದು ಬೆಂಗಳೂರಿನ ರಾಣಾಸಿಂಗ್‌ ಪೇಟೆಯಲ್ಲಿ. ತಂದೆ ಗಿರಿಯಪ್ಪ, ತಾಯಿ ಹುಚ್ಚಮ್ಮ. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಬೆಳೆದ ಆಸಕ್ತಿ. ಮನೆಯ ಗೋಡೆಗಳೇ ಚಿತ್ರ ರಚನೆಯ ಕ್ಯಾನ್ವಾಸ್‌. ಓದಿದ್ದು ಬಿ.ಎಸ್ಸಿ. ವೃತ್ತಿಗಾಗಿ ಆಯ್ದುಕೊಂಡಿದ್ದು ವ್ಯಂಗ್ಯ ಚಿತ್ರರಚನೆಯ ಬದುಕು. ಆಂಗ್ಲ ವ್ಯಂಗ್ಯಚಿತ್ರಕಾರ ಡೇವಿಡ್‌ಲೋ ರವರಿಂದ ಪಡೆದ ಸ್ಫೂರ್ತಿ. ೧೯೫೦ ರಲ್ಲಿ ಶೇಷಪ್ಪನವರ ಕಿಡಿ ಪತ್ರಿಕೆಗಾಗಿ ಬಿಡಿಸಿದ ರಾಜಕೀಯ ವ್ಯಂಗ್ಯ ಚಿತ್ರಗಳು. ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಸಂಪದಕರಾಗಿದ್ದ ಪೋತನ್‌ ಜೋಸಫ್‌ವರರಿಂದ ನೇಮಕಗೊಂಡು ಉದ್ಯೋಗಿಯಾಗಿ ಸೇರಿದ್ದು ಡೆಕ್ಕನ್‌ ಹೆರಾಲ್ಡ್‌ ಬಳಗ. ಪ್ರಜಾವಾಣಿ, …

ಪೂರ್ತಿ ಓದಿ...

ಎ.ಪಿ. ಮಾಲತಿ

AP Malathi

ಎ.ಪಿ. ಮಾಲತಿ (೬.೫.೧೯೪೪): ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ.ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ ೧೯೪೪ ರ ಮೇ ೬ ರಂದು. ತಂದೆ ಗಣೇಶಭಟ್ಟರು, ತಾಯಿ ಕಾವೇರಿ. ಪ್ರಾರಂಭಿಕ ಶಿಕ್ಷಣ ಕರ್ಕಿ ಹಾಗೂ ಹೊನ್ನಾವರದಲ್ಲಿ. ಧಾರವಾಡದ ಎ.ಕೆ. ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ. ಪಿ.ಯು.ಗೆ ಸೇರಿದ್ದು ಕರ್ನಾಟಕ ಕಾಲೇಜು. ಪ್ರತಿದಿನ ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದ ಬೇಂದ್ರೆಯವರನ್ನು ಕಂಡಾಗ ಕುತೂಹಲ, ಬೆರಗು. ಆಕಾಶವಾಣಿ ‘ಗಿಳಿವಿಂಡು’ ಮಕ್ಕಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೇಂದ್ರೆಯವರ ಕವನ ಹಾಡಿ, ನೃತ್ಯದಲ್ಲಿ ಭಾಗವಹಿಸಿದಾಗ ಮನಸ್ಸಿಗಾಗುತ್ತಿದ್ದ ಅದೆಂತಾದ್ದೋ ಆನಂದ. ಮನೆಯಲ್ಲಿದ್ದ ತಾಯಿ ನಾಲ್ಕನೆಯ ತರಗತಿಯವರೆಗೆ ಓದಿದ್ದರೂ …

ಪೂರ್ತಿ ಓದಿ...

ಭುವನೇಶ್ವರಿ ಹೆಗಡೆ

Bhuvaneshwari Hegde

ಭುವನೇಶ್ವರಿ ಹೆಗಡೆ (೦೬.೦೫.೧೯೫೬): ಹಾಸ್ಯಬರಹಗಾರ್ತಿ, ಭಾಷಣಕಾರ್ತಿ, ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕತ್ರಗಾಲದಲ್ಲಿ. ತಂದೆ ಗಣಪತಿ ಹೆಗಡೆ, ತಾಯಿ ಗೌರಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಅರ್ಥಶಾಸ್ತ್ರ) ಪದವಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ವೃತ್ತಿ ಪ್ರಾರಂಭ. ಅರ್ಥಶಾಸ್ತ್ರದ ಉಪನ್ಯಾಸಕಿಯಾದರೂ ತಮ್ಮ ಹುಟ್ಟಿನ – ಪ್ರಕೃತಿಯ ಪರಿಸರದಿಂದ ನಗೆಯನ್ನು ಹಂಚಿಕೊಳ್ಳುವ ಮನೋಧರ್ಮವನ್ನು ರೂಢಿಸಿಕೊಂಡಿದ್ದು, ಇದಕ್ಕಾಗಿ ಕಂಡುಕೊಂಡ ಅಭಿವ್ಯಕ್ತಿ ಮಾರ್ಗವೆಂದರೆ ಹಾಸ್ಯ ಬರಹಗಳು. ಯಾವುದೇ ಸಂದರ್ಭಕ್ಕೆ ತಕ್ಕ ಹಾಗೆ ಭಾಷೆಯನ್ನೂ ಹೊಂದಿಸಿಕೊಳ್ಳುವಲ್ಲಿ ಪದಗಳನ್ನು ತಿರುಚಿಯೋ, ಹೊಸಪದಗಳನ್ನು ಸೃಷ್ಟಿಸಿಯೋ ನಗೆ ಉಕ್ಕಿಸುವುದರಲ್ಲಿ …

ಪೂರ್ತಿ ಓದಿ...

ಎಸ್.ಕೆ.ನಾಡಿಗ್‌

Sk Nadig

ಎಸ್.ಕೆ. ನಾಡಿಗ್‌ (೦೬.೦೫.೧೯೨೮): ವ್ಯಂಗ್ಯಚಿತ್ರದ ಮೂಲಕ ಹಾಸ್ಯದ ಹೊನಲನ್ನು ಹರಿಸುತ್ತಿರುವ ನಾಡಿಗ್‌ರವರು ಹುಟ್ಟಿದ್ದು ಶಿವಮೊಗ್ಗದಲ್ಲಿ. ತಂದೆ ಕೃಷ್ಣ ಸ್ವಾಮಿರಾವ್ ನಾಡಿಗ್, ತಾಯಿ ರಾಧಮ್ಮ, ಓದಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಮರ್ಸ್‌ ಪದವಿಗಾಗಿ. ಚಿಕ್ಕಂದಿನಿಂದಲೂ ಗೆರೆಗಳೊಡನೆ ಚೆಲ್ಲಾಟ, ತೋಚಿದ್ದು-ಗೀಚಿದ್ದು. ಕೊರವಂಜಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಆರ್‌.ಕೆ. ಲಕ್ಷ್ಮಣ್‌ರವರ ವ್ಯಂಗ್ಯ ಚಿತ್ರಗಳನ್ನ ನೋಡಿ ತಾನೂ ಏಕೆ ಬರೆಯಬಾರದೆಂಬ ಆಲೋಚನೆ. ೧೯೪೭ರಲ್ಲಿ ಮೊದಲ ವ್ಯಂಗ್ಯಚಿತ್ರ ಆಂಗ್ಲ ಪತ್ರಿಕೆ ಮಿನಿ ಮ್ಯಾಗ್‌ ನಲ್ಲಿ ಪ್ರಕಟಿತ. ಇದುವರೆವಿಗೂ ಬರೆದ ವ್ಯಂಗ್ಯ ಚಿತ್ರಗಳ ಸಂಖ್ಯೆ ಸುಮಾರು ೨೦ ಸಾವಿರಕ್ಕೂ ಹೆಚ್ಚು. [sociallocker]ಕೊರವಂಜಿ, ಪ್ರಜಾವಾಣಿ, ಜನಪ್ರಗತಿ, ಶಂಕರ್ಸ್‌ …

ಪೂರ್ತಿ ಓದಿ...

ಪ್ರೊ. ಜಿ. ಅಬ್ದುಲ್ ಬಷೀರ್

G Abdul Basheer

ಪ್ರೊ. ಜಿ. ಅಬ್ದುಲ್ ಬಷೀರ್ (೬-೫-೧೯೪೭): ವ್ಯಾಕರಣ, ಭಾಷೆ, ಕಾವ್ಯಮೀಮಾಂಸೆ, ವಿಮರ್ಶಾಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಬ್ದುಲ್ ಬಷೀರ್‌ರವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ. ತಂದೆ ಅಬ್ದುಲ್ ಗಫೂರ್‌ಸಾಬ್, ತಾಯಿ ಬಿಯಾಂಬಿ. ಪ್ರಾಥಮಿಕ ವಿದ್ಯಾಭ್ಯಾಸ ಗಬ್ಬಾಡಿ ಶಾಲೆಯಲ್ಲಿ. ಹೈಸ್ಕೂಲಿಗೆ ಸೇರಿದ್ದು ಹಾರೋಹಳ್ಳಿ ರೂರಲ್ ಹೈಸ್ಕೂಲು. ಕಾಲೇಜು ವಿದ್ಯಾಭ್ಯಾಸ ಆಚಾರ‍್ಯ ಪಾಠಶಾಲೆಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. (ಕನ್ನಡ) ಪದವಿ ಬೆಂಗಳೂರು ವಿಶ್ವವಿದ್ಯಾಲಯದಿಂದ. [sociallocker]೧೯೭೨ರಲ್ಲಿ ಉದ್ಯೋಗಕ್ಕೆ ಸೇರಿದ್ದು ಕಲಿತ ಕಾಲೇಜಿನಲ್ಲೇ ಅಧ್ಯಾಪಕರ ವೃತ್ತಿ ಆರಂಭ. ಕನ್ನಡ …

ಪೂರ್ತಿ ಓದಿ...

ಬಿ.ಎಲ್‌. ವೇಣು

BL Veenu

ಬಿ.ಎಲ್‌. ವೇಣು (೦೫.೦೫.೧೯೪೫): ಕಥೆ, ಕಾದಂಬರಿ, ನಾಟಕ, ಚಿತ್ರಕಥೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ವೈಚಾರಿಕತೆ, ಪ್ರಯೋಗಶೀಲತೆಗಳಿಂದ, ಪ್ರಗತಿಪರ ವಿಚಾರಗಳಿಂದ ಯಾವ ಗುಂಪಿಗೂ ಸೀಮಿತವಾಗದೆ ಸಾಹಿತ್ಯರಚನೆಯಲ್ಲಿ ನಿರತರಾಗಿರುವ ವೇಣುರವರು ಹುಟ್ಟಿದ್ದು ಕೋಟಿಕೊತ್ತಲಗಳ ಊರಾದ ಚಿತ್ರದುರ್ಗದಲ್ಲಿ. ೧೯೪೫ರ ಮೇ ೫ ರಂದು. ತಂದೆ ವೃತ್ತಿರಂಗಭೂಮಿಯ ನಟರಾದ ಲಕ್ಷ್ಮಯ್ಯ, ತಾಯಿ ಸುಶೀಲಮ್ಮ ಹಾರ್ಮೋನಿಯಂ ವಾದಕಿ. ರಂಗಭೂಮಿನಟರೆಂದ ಮೇಲೆ ಅನಿಯತ ವರಮಾನದಿಂದ ಬೆನ್ನಿಗೆ ಕಟ್ಟಿಕೊಂಡೇ ಬಂದ ಬಡತನದ ಬದುಕು. ಆದರೂ ವೇಣುವಿಗೆ ಪ್ರೈಮರಿ ಶಾಲೆಯಲ್ಲಿದ್ದಾಗಲೇ ನಾಟಕದ ಬಗ್ಗೆ ಎಲ್ಲಿಲ್ಲದ ಆಸ್ಥೆ ಬೆಳೆಯತೊಡಗಿತು. ದುರ್ಗಕ್ಕೆ ಬಂದು ಮೊಕ್ಕಾಂ ಮಾಡುತ್ತಿದ್ದ ಕಂಪನಿ …

ಪೂರ್ತಿ ಓದಿ...