ಕರ್ನಾಟಕವನ್ನು ಬಹುಕಾಲದವರೆವಿಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡನಾಡಿನಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಕನ್ನಡನಾಡಿನಲ್ಲಿ ಸುಮಾರು ೯೨ ದೇವಾಲಯಗಳನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಇದರಲ್ಲಿ ಸುಮಾರು ೪೦ ದೇವಾಲಯಗಳು ಹೊಯ್ಸಳರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಹಾಸನ ಜಿಲ್ಲೆಯೇ ಇವೆ. ಅವುಗಳಲ್ಲಿ ಮುಖ್ಯವಾದುದು ಬೇಲೂರು ಮತ್ತು ಹಳೆಬೀಡುದೇವಾಲಯಗಳು. ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣವನ್ನು ಹೊಯ್ಸಳ ವಾಸ್ತುಶೈಲಿಯಲ್ಲಿ ನಾವು ಕಾಣಬಹುದು. ಕೆಲವು ಪಾಶ್ಚಾತ್ಯ ಪಂಡಿತರು, ವಿದ್ವಾಂಸರು ಚಾಲುಕ್ಯರ ವಾಸ್ತುಶೈಲಿಗೆ ಕೊಟ್ಟ ಮಹತ್ವವನ್ನು ಹೊಯ್ಸಳ ಶೈಲಿಗೆ ಕೊಡದೆ ಚಾಲುಕ್ಯ ಸಂಸ್ಕೃತಿಯೊಳಗೆ ಇದನ್ನೂ ಸೇರಿಸಿ ಬದಿಗಿರಿಸಿದ್ದಾರೆ. …
ಪೂರ್ತಿ ಓದಿ...ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!
ನಾವು, ನೀವೆಲ್ಲ ಪಿರಮಿಡ್ ಅನ್ನು ಸಾಮಾನ್ಯವಾಗಿ ನೋಡಿಯೆ ನೋಡಿರುತ್ತೇವೆ. ಇದರ ಆಕಾರವೆ ಒಂದು ಆಕರ್ಷಕ ರೀತಿಯಲ್ಲಿರುವುದರಿಂದ ಜನರನ್ನು ಸ್ವಾಭಾವಿಕವಾಗಿ ಸೆಳೆಯುತ್ತದೆ. ಆದರೆ ಪಿರಮಿಡ್ ರೀತಿಯಲ್ಲೆ ಇತ್ತ ಪಿರಮಿಡ್ಡೂ ಅಲ್ಲದೆ ಅತ್ತ ನಿಖರವಾದ ದೇವಾಲಯ ಗೋಪುರದಂತೆಯೂ ಇರದೆ ಆದರೂ ವಿಶೇಷ ರಚನೆಗಳಿಂದ ಜನರನ್ನು ಆಕರ್ಷಿಸುವ ದೇವಾಲಯವೊಂದಿದೆ. ಹೌದು, ಆ ದೇವಾಲಯವೆ ಗಳಗನಾಥೇಶ್ವರ ದೇವಾಲಯ. ಗಳಗನಾಥ ಎಂಬ ಗ್ರಾಮದಲ್ಲಿ ಈ ಅದ್ಭುತ ಆಕೃತಿಯ ದೇವಾಲಯವಿದ್ದು ಇಂದು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಡುತ್ತಿದೆ. ಐತಿಹಾಸಿಕವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದಿರುವ ಈ ದೇವಾಲಯವನ್ನು ಚಾಲುಕ್ಯ ದೊರೆ ವಿಕ್ರಮಾದಿತ್ಯನು ಹನ್ನೊಂದನೆಯ ಶತಮಾನದಲ್ಲಿ …
ಪೂರ್ತಿ ಓದಿ...ಶಿವಲಿಂಗಗಳ ಸಹಸ್ರಲಿಂಗ ದರ್ಶನ
ಶಿವಲಿಂಗ: ಕರ್ನಾಟಕದ ಪಶ್ಚಿಮ ಘಟ್ಟಗಳು ತನ್ನ ನಯನ ಮನೋಹರ ಪ್ರಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಂಡುಬರುವ ದಟ್ಟ ಹಸಿರಿನಿಂದ ಕೂಡಿದ ಕಾಡು-ಮೇಡುಗಳು, ಜುಳು ಜುಳು ನಾದ ಮಾಡುತ್ತ ಹರಿಯುವ ಕೆರೆ-ತೊರೆಗಳು, ಗಾಳಿಯೊಂದಿಗೆ ಸರಸವಾಡುತ್ತಿರುವ ಬೆಟ್ಟ-ಗುಡ್ಡಗಳು ಒಂದು ರೀತಿಯ ಉತ್ಸಾಹವನ್ನು ಮೂಡಿಸುತ್ತದೆ. ಮನಸೂರೆಗೊಳ್ಳುವ ಕೋಟಿಲಿಂಗೇಶ್ವರನ ದರ್ಶನ ಮಾಡಿ ಆದರೆ ಪಶ್ಚಿಮ ಘಟ್ಟಗಳು ಕೇವಲ ತನ್ನ ಶ್ರೀಮಂತ ವನ್ಯಸಿರಿಯಿಂದ ಮಾತ್ರವಲ್ಲದೆ ಅದ್ಭುತ ಕಥೆ ಸಾರುವ, ಕುತೂಹಲ ಕೆರಳಿಸುವ ಧಾರ್ಮಿಕ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ಕರ್ನಾಟಕ ದಲ್ಲಿರುವ ಸಹಸ್ರಲಿಂಗ ತಾಣ. ಉತ್ತರ ಕನ್ನಡ ಜಿಲ್ಲೆಯ ಶಿರಸಿ …
ಪೂರ್ತಿ ಓದಿ...ಅರಕಲಗೂಡು ತಾಲ್ಲೂಕಿನ ರಾಮನಾಥಪುರ
ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿದೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ. ಇದು ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ನೂರಾರು ದೇವರುಗಳ ಸಂಗಮ, ನಿತ್ಯ ನೂರಾರು ಭಕ್ತರು ಬಂದು ಕಾವೇರಿ ನದಿಯಲ್ಲಿ ಮಿಂದು ಪುನೀತರಾಗುವ ಪವಿತ್ರ ಸ್ಥಳ. ತ್ರೇತಾಯಗದಲ್ಲಿ ವಾಸವಪುರಿ ಎಂಬ ಹೆಸರಿದ್ದ ಈ ಕ್ಷೇತ್ರದಲ್ಲಿ ಶ್ರಿ ರಾಮೇಶ್ವರ, ಶ್ರೀ ಅಗಸ್ತ್ಯೇಶ್ವರ, ಶ್ರೀ ಪ್ರಸನ್ನ ಸುಬ್ರಹ್ಮಣ್ಯ, ಶ್ರಿ ಪಟ್ಟಾಭಿರಾಮ, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸೇರಿದಂತೆ ನೂರಾರು ದೇವರ ಸನ್ನಿಧಿಯನ್ನು ಕಾಣಬಹುದು. 17ನೇ ಶತಮಾನದ ಉತ್ತರಾರ್ಧದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರಿ …
ಪೂರ್ತಿ ಓದಿ...ಜೀವನಾಡಿ ಕೆ ಆರ್ ಎಸ್ ಹುಟ್ಟಿನ ಕಥನ
ಮೈಸೂರಿನಿಂದ ಬೇರ್ಪಟ್ಟು ಮಂಡ್ಯ ಜಿಲ್ಲೆ ರಚನೆಯಾಗಿ 75 ವರ್ಷಗಳು ತುಂಬಿರುವ ಕಾರಣ ಇದೇ 20 ರಿಂದ ಮೂರು ದಿನಗಳ ಕಾಲ ‘ಮಂಡ್ಯ ಜಿಲ್ಲಾ ಅಮೃತ ಮಹೋತ್ಸವ’ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಜೀವನಾಡಿ ಕೆ ಆರ್ ಎಸ್ ಹುಟ್ಟಿನ ಕಥನ ಇಲ್ಲಿದೆ. ‘ಒಂದಾನೊಂದು ಕಾಲದಲ್ಲಿ, ದೆಡೆಗೆ, ಮೈಸೂರು ದೊರೆ ಕೃಷ್ಣರಾಜ ಕುದುರೆ ಏರಿ ಬಂದ. ನದಿಯ ನೀರು ವ್ಯರ್ಥ್ಯವಾಗಿ ಹರಿಯುವುದನ್ನು ಆತ ಕಂಡ. ಆ ಕಡೆ ಬೆಟ್ಟ, ಈ ಕಡೆ ಬೆಟ್ಟಕ್ಕೆ ಅಡ್ಡಲಾಗಿ ಕಾವೇರಿ ನದಿಗೆ ಕಟ್ಟೆಯೊಂದ ಕಟ್ಟಿಸಿದ. ನಾಲೆ ತೆಗೆಸಿ, ನೀರು …
ಪೂರ್ತಿ ಓದಿ...ಅರ್ಕಾವತಿ ನದಿ
ಅರ್ಕಾವತಿ ನದಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ. [SBMAP ID=”4″]
ಪೂರ್ತಿ ಓದಿ...ಕರ್ನಾಟಕದ ನದಿಗಳು
ಚಿತ್ರದುರ್ಗ
[SBMAP ID=”2″] “ಚಿತ್ರದುರ್ಗ” ಕರ್ನಾಟಕದ ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ ದಾವಣಗೆರೆ ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗದ ವೈವಿಧ್ಯಕ್ಕೆ ಮನಸೋತ ಜನರು ಇದನ್ನು ‘ಚಿತ್ರ-ವಿಚಿತ್ರ ಚಿತ್ರದುರ್ಗ’ ಎಂದು ಕರೆದದ್ದುಂಟು. ಇತಿಹಾಸ ಇತಿಹಾಸದಲ್ಲಿ ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ. ವಿಜಯನಗರದ ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ …
ಪೂರ್ತಿ ಓದಿ...ಅಂಬಲಪಾಡಿ ಮಹಾಕಾಳಿ ಜನಾರ್ದನ ದೇಗುಲ, ಉಡುಪಿ
ಅಂಬಲಪಾಡಿ ಮಹಾಕಾಳಿ ಜನಾರ್ದನ ದೇಗುಲ, ಉಡುಪಿ ಕರ್ನಾಟಕದ ಉಡುಪಿಯಿಂದ ಸುಮಾರು ೨ರಿಂದ ೩ ಕಿ.ಮೀ ದೂರದಲ್ಲಿ ಅಂಬಲಪಾಡಿ ಮಹಾಕಾಳಿ ದೇಗುಲ ಇದೆ. ಸುಮಾರು ೬ ಅಡಿ ಎತ್ತರದ ಮಹಾಕಾಳಿಯ ವಿಗ್ರಹವು ಇಲ್ಲಿದೆ. ಅಂಬಲಪಾಡಿ ಎಂಬ ಹೆಸರು, ಅಂಬಾ ಎಂದರೆ ತಾಯಿ ಹಾಗೂ ಪಾಡಿ ಎಂದರೆ ಗುಡ್ಡ ಎಂಬ ಮೂಲದಿಂದ ಬಂದಿದೆ.ದೇಗುಲದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಪಾತ್ರಿ ಎಂಬ ವ್ಯಕ್ತಿಯ ಮೂಲಕ ದೇವರು ಮಾತನಾಡುವುದು. ಈ ವಿಶೇಷ ಘಟನೆಯು ಪ್ರತಿ ಶುಕ್ರವಾರ ನಡೆಯುತ್ತದೆ. ಜನರ ವೈಯಕ್ತಿಕ ಸಮಸ್ಯೆಗಳನ್ನು ಕೇಳಿಕೊಂಡು ಅದಕ್ಕೆ ಸೂಕ್ತವಾದ ಪರಿಹಾರವನ್ನು ದೇವರು ಇಲ್ಲಿ …
ಪೂರ್ತಿ ಓದಿ...ಯಳಂದೂರು ತಾಲ್ಲೂಕು
ಯಳಂದೂರು ತಾಲ್ಲೂಕು: ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. ೧೦೧೮ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು. ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ …
ಪೂರ್ತಿ ಓದಿ...