ಇತಿಹಾಸ

ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ಕೋಟೆಗಳು ವಿನ್ಯಾಸ ಹಾಗೂ ವಾಸ್ತು ವಿಶೇಷ

Baadami Kotegalu

ವಾನವನಂತೂ ಶಿಲಾಯುಗದಿಂದ ನಮ್ಮ ಈ ಆಧುನಿಕ ೨೧ನೆಯ ಶತಮಾನದ ವರೆಗೂ ತನ್ನ ಸ್ವರಕ್ಷಣೆಗಾಗಿ ಮನೆಗಳನ್ನೂ ಗ್ರಾಮ ಗೋಡೆಗಳನ್ನೂ ನಗರ-ರಾಜಧಾನಿಗಳ ಕೋಟೆಗಳನ್ನೂ ವಿವಿಧ ಶೈಲಿಗಳಲ್ಲಿ ಸಾಮಗ್ರಿಗಳಲ್ಲಿ ವಿನ್ಯಾಸವಾಸ್ತುಗಳಲ್ಲಿ ಕಟ್ಟುತ್ತಲೇ ಬಂದಿದ್ದಾನೆ. ಇದು ಸಂಕ್ಷಿಪ್ತತೆಯಲ್ಲಿ ಬದುಕಿಗಾಗಿ, ಜೀವಿಸುವುದಕ್ಕಾಗಿ, ರಕ್ಷಣೆಗಾಗಿ ಗವಿ ಯಿಂದ ಕೋಟೆಯವರೆಗೂ ರಕ್ಷಣಾ ವ್ಯವಸ್ಥೆಯು ನಡೆದು ಬಂದ ದಾರಿ. ಇನ್ನು ರಾಜಸ್ವ, ರಾಜ್ಯ, ಆಡಳಿತ ಮೇರೆಗಳು, ನಾಡು, ದೇಶಗಳ ಪರಿಕಲ್ಪನೆಯು ವಾಸ್ತವದಲ್ಲಿ ನೆಲೆಯೂರಲು ಸಾಗಿದಾಗ ಆಯಾ ರಾಜರುಗಳು, ತಮ್ಮ ತಮ್ಮ ನೆಲವನ್ನು ಹಾಗೂ ತಮ್ಮ ತಮ್ಮ ಜನವನ್ನು ರಕ್ಷಿಸುವ ವ್ಯವಧಾನದಲ್ಲಿ ಕೋಟೆ ಕೊತ್ತಲಗಳನ್ನು ನಿರ್ಮಿಸುವುದು ಅವಶ್ಯವಾಯಿತು. …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಆಲಂಪುರದ ದೇವಾಲಯಗಳು

Alampur Temples

ಈಗ ಕರ್ನಾಟಕದ ಹೊರಗೆ ಇರುವ, ಹಿಂದೆ ಚಾಲುಕ್ಯರ ರಾಜ್ಯದ ಭಾಗವಾಗಿದ್ದ ಈಗಿನ ಆಂಧ್ರಪ್ರದೇಶದ ಮಹಬೂಬ್‌ನಗರ ಮತ್ತು ಕರ್ನೂಲುಗಳಲ್ಲಿ ಚಾಲುಕ್ಯರು ಕಟ್ಟಿಸಿದ ಆಲಯಗಳಿವೆ. ಇವುಗಳಲ್ಲಿ ಪ್ರಮುಖವಾದವು ತುಂಗಭದ್ರೆಯ ದಕ್ಷಿಣ ತೀರದಲ್ಲಿ ಮಹಬೂಬ್ ನಗರ ಜಿಲ್ಲೆಗೆ ಸೇರಿದ ಆಲಂಪುರದ ದೇವಾಲಯ ಸಂಕೀರ್ಣ. ಇದು ಶ್ರೀಶೈಲಕ್ಕೆ ಹೋಗಲು ಪಶ್ಚಿಮದ್ವಾರದಂತಿದೆ. ಇಲ್ಲಿಯ ಮುಖ್ಯ ದೇವತೆ ಜೋಗುಳಾಂಬಾ. ಪರಶುರಾಮನು ತನ್ನ ತಾಯಿ ರೇಣುಕೆಯ ಶಿರಚ್ಛೇದನ ಇಲ್ಲಿ ಮಾಡಿದ ಎಂಬುದು ಇನ್ನೊಂದು ದಂತಕಥೆ. ಬೃಹಸ್ಪತಿ ಎಂಬ ಸ್ಥಪತಿಯ ಪತ್ನಿ ಪುಣ್ಯವತಿ. ಇಬ್ಬರೂ ಕಾಶಿವಿಶ್ವೇಶ್ವರ ಭಕ್ತರು. ದೇವನ ಕೃಪೆಯಿಂದ ಪುಣ್ಯವತಿ ಗರ್ಭ ಧರಿಸಿದಳು. ಮಗನನ್ನು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಹುನಗುಂದದ ಬಾದಾಮಿ ಚಾಲುಕ್ಯರ ಅವಶೇಷಗಳು

Hungunda

ವಿಜಾಪುರ ಜಿಲ್ಲೆಯ ಹುನಗುಂದ ನಗರದಲ್ಲಿ ರಾಮಲಿಂಗೇಶ್ವರ ದೇವಾಲಯದತ್ತ ಇತಿಹಾಸಕಾರರ ಗಮನವಿನ್ನೂ ಸೆಳೆದಿಲ್ಲ.[1] ಬಹುಪುರಾತನವಾದ ಈ ದೇವಾಲಯವನ್ನು ಇತ್ತೀಚೆ ಜೀರ್ಣೋದ್ಧಾರ ಮಾಡಿದ್ದರೂ ಅದಿನ್ನೂ ಹಾಳು ಸ್ಥಿತಿಯಲ್ಲಿ ಇದ್ದಂತೆ ಕಾಣುವುದು. ಒಳಹೊರ ಭಾಗಕ್ಕೆಲ್ಲ ಸುಣ್ಣ ಬಳಿಯಲಾಗಿರುವುದರಿಂದ ಅದರ ಕಲಾಸಂಪತ್ತೂ ಅಡಗಿಕೊಂಡುಬಿಟ್ಟಿದೆ. ಈ ದೇವಾಲಯದ ಸಭಾಮಂಟಪದ ಭುವನೇಶ್ವರಿಯಲ್ಲಿಯ ಶಾಸನವನ್ನು ಈ ಮೊದಲು ಗುರುತಿಸಿ, ಪ್ರಕಟಿಸಲಾಗಿದೆ(SII XI, Pt, I.,No.೧೧೩ of ೧೦೭೪). ಅರಸರ ಬಸದಿಗೆ ದತ್ತಿ ಕೊಟ್ಟ ಬಗ್ಗೆ ಇಲ್ಲಿ ಉಲ್ಲೇಖ ಬರುವುದರಿಂದ, ಈ ಶಾಸನಕ್ಕೂ ಮತ್ತು ರಾಮಲಿಂಗೇಶ್ವರ ದೇವಾಲಯಕ್ಕೂ ಸಂಬಂಧವಿಲ್ಲ ಎನ್ನುವ ಮಾತು ಸ್ಪಷ್ಟ. ದಿನಾಂಕ ೧೨-೨-೭೪ರಂದು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಸಿದ್ಧನಕೊಳ್ಳದ ಚಾಲುಕ್ಯ ಕಾಲದ ಸಂಗಮೇಶ್ವರ ಮಂದಿರ

Siddayyana Kola Sangamesha Tempal

ವಾತಾಪಿಯ ಚಾಲುಕ್ಯರು ದೇವಾಲಯ ನಿರ್ಮಿತಿಯಲ್ಲಿ ವಿಶೇಷ ಆಸಕ್ತಿಯುಳ್ಳ ವರಾಗಿದ್ದರು. ಇದಕ್ಕೆ ನಿದರ್ಶನವಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ ಮತ್ತು ಮಹಾಕೂಟಗಳಲ್ಲಿ ನೂರಾರು ಸಂಖ್ಯೆಯ ದೇವಾಲಯಗಳು ನಿರ್ಮಿತವಾದುದನ್ನು ಇಂದಿಗೂ ಕಾಣುತ್ತೇವೆ. ಶಿಲ್ಪಶಾಸ್ತ್ರದ ಬೆಳವಣಿಗೆಯ ಅಭ್ಯಾಸಕ್ಕೆ ಐಹೊಳೆಯ ಮಂದಿರಗಳು ಹೆಚ್ಚು ಸಹಾಯಕಾರಿಯಾಗಿವೆ. ರಮಣೀಯ ನಿಸರ್ಗದ ಮಡಿಲಲ್ಲಿರುವ ಸಿದ್ಧನಕೊಳ್ಳ ಐಹೊಳೆಯಿಂದ ದಕ್ಷಿಣಕ್ಕೆ ಸುಮಾರು ಮೂರು ಮೈಲು ಅಂತರದಲ್ಲಿದೆ. ಈ ಕೊಳ್ಳದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯ ಒಂದು ವಿರಾಜಮಾನವಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವನ್ನು ಸ್ಥಳೀಕರು ಸಂಗಮೇಶ್ವರ ದೇವಾಲಯವೆಂದು ಕರೆಯುವ ವಾಡಿಕೆ ಇದೆ. ಈ ಮಂದಿರದ ತಳವಿನ್ಯಾಸ, ಗರ್ಭಗೃಹ, ಸಭಾಮಂಟಪ ಮತ್ತು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ಕಾಲದ ಪ್ರಾಂತ್ಯಾಡಳಿತ

Chaluky States

ಬಾದಾವಿು ಚಾಲುಕ್ಯರ ಪ್ರಾಂತ್ಯಾಡಳಿತವನ್ನು ಕುರಿತು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಈ ರಾಜವಂಶವು ಕುಂತಳನಾಡು ಹಾಗೂ ಸುತ್ತಮುತ್ತಲಲ್ಲಿ ಕ್ರಿ.ಶ. ಆರನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ವಂಶದ ರಾಜ ಮಹಾರಾಜರುಗಳು, ರಾಜಮನೆತನದವರು, ಸಾಮಂತರುಗಳು ಮತ್ತು ಶ್ರೀ ಸಾಮಾನ್ಯರು ನೀಡಿದ ದಾನದತ್ತಿಗಳನ್ನು ಉಲ್ಲೇಖಿಸುವ ಶಾಸನಗಳು ವಿಪುಲ ಸಂಖ್ಯೆಯಲ್ಲಿವೆ. ಪ್ರಸ್ತುತ ಅಧ್ಯಯನಕ್ಕಾಗಿ, ರಾಜ್ಯಾಡಳಿತ ವಿಭಾಗಗಳನ್ನು ಗುರುತಿಸುವ ಪದಗಳನ್ನು ಶಾಸನಾದಿ ದಾಖಲೆಗಳಿಂದ ಆಯ್ದುಕೊಳ್ಳಲಾಗಿದೆ. ಶಾಸನಗಳು ದೇಶ, ವಿಷಯ, ಆಹಾರ, ಭೋಗ, ರಾಷ್ಟ್ರ, ಮಂಡಲ, ನಾಡು ಮುಂತಾದ ಪದಗಳನ್ನು ಬಳಸಿದ್ದು, ‘ವಿಷಯ’ವೆಂಬ ಪದವನ್ನುಳಿದು ಇನ್ನಿತರ ರಾಜ್ಯಾಡಳಿತ ವಿಭಾಗಗಳ ಪದಗಳು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಕಪ್ಪೆ ಅರಭಟ್ಟ ಮತ್ತು ಪೊಲೆಕೇಶಿ

Kappe Pulakeshi

ಕರ್ನಾಟಕವನ್ನು ಆಳಿದ ರಾಜವಂಶಗಳ ಪೈಕಿ, ಬಾದಾಮಿ ಚಲುಕ್ಯರಿಗೆ ವಿಶೇಷವಾದ ಮತ್ತು ವಿಶಿಷ್ಟವಾದ ಸ್ಥಾನವಿದೆ. ಇಂದಿಗೂ ಅವರನ್ನು ಸಮರ್ಥವಾಗಿಯೇ ನೆನಪು ಮಾಡುವ ಮತ್ತು ಹೊಸ ಹೊಸ ವಿಚಾರಗಳನ್ನು ಅನಾವರಣ ಮಾಡುವ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳು ಇರುವವರೆಗೆ ಬಾದಾಮಿಯ ಚಾಲುಕ್ಯರು ಉಳಿಯುತ್ತಾರೆ. ಅವರ ನೆನಪನ್ನು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ. ಬಾದಾಮಿಯಲ್ಲಿ ಕೊರೆದು ನಿರ್ಮಿಸಿದ ಗುಹಾ ದೇವಾಲಯಗಳಾಗಲೀ, ಕಟ್ಟಿ ನಿರ್ಮಿಸಿದ ದೇವಾಲಯಗಳಾಗಲೀ, ಇನ್ನೂ ಉಳಿದಿರುವ ಕೋಟೆಯ ಭಾಗಗಳಾಗಲೀ, ಒಂದನೆಯ ಪೊಲೆಕೇಶಿಯ ಬಂಡೆಗಲ್ಲು ಶಾಸನವಾಗಲೀ, ಕಪ್ಪೆ ಅರಭಟ್ಟನ ಶಾಸನವಾಗಲೀ, ನರಸಿಂಹವರ್ಮನ ಬಂಡೆ ಶಾಸನವಾಗಲೀ, ಅಗಸ್ತ್ಯ ತೀರ್ಥವಾಗಲೀ, ಐಹೊಳೆಯ ಗುಹಾದೇವಾಲಯಗಳು …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಮಲಪ್ರಭೆಯ ಮಡಿಲು – ದುರ್ಗಗುಡಿ, ಐಹೊಳೆ

Durga temple, Aihole

ದುರ್ಗಗುಡಿ, ಐಹೊಳೆ ಬಾದಾಮಿಯ ಜಂಬುಲಿಂಗ ದೇವಾಲಯವು ಮತ್ತೊಂದು ತೆರನಾದ ತಲವಿನ್ಯಾಸದಲ್ಲಿ ರಚಿತವಾಗಿದೆ. ಕ್ರಿ.ಶ. ೬೯೯ರಲ್ಲಿ ವಿನಯವತಿ ರಾಜಮಾತೆಯು ಇದನ್ನು ಕಟ್ಟಿಸಿದಳು. ಇಲ್ಲಿ ಬ್ರಹ್ಮ, ಈಶ್ವರ ಮತ್ತು ವಿಷ್ಣುದೇವರಿಗಾಗಿ ಮೂರು ಪ್ರತ್ಯೇಕ ಗರ್ಭಗುಡಿಗಳಿದ್ದು ದಕ್ಷಿಣ ಭಾರತದ ಪ್ರಥಮ ತ್ರಿಕೂಟಾಲಯವೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಮೂರು ಗರ್ಭಗುಡಿಗಳಿಗೆ ಹೊಂದಿಕೊಂಡ ಸಭಾಮಂಟಪ ಮತ್ತು ಮುಖಮಂಟಪ ಇದರ ಉಳಿದ ಭಾಗಗಳು. ಹೆಚ್ಚು ವಿಕಾಸಗೊಡಿರುವ ಶೈವ ರಾಚನಿಕ ದೇವಾಲಯಗಳಲ್ಲಿ ಪ್ರತ್ಯೇಕ ನಂದಿ ಮಂಟಪಗಳಿವೆ. ಮಹಾಕೂಟ, ಪಟ್ಟದಕಲ್ಲಿನ ಪ್ರಧಾನ ದೇವಾಲಯಗಳಲ್ಲಿ ಇಂತಹ ನಂದಿ ಮಂಟಪಗಳನ್ನು ಕಾಣುತ್ತೇವೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯವು ಭಾರತದ ಶ್ರೇಷ್ಠ ದೇವಾಲಯಗಳಲ್ಲಿ …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಮಲಪ್ರಭೆಯ ಮಡಿಲು

Malaprabhe

ಬಾದಾಮಿ ಪರಿಸರವು ದೇವ ನಿರ್ಮಿತ ನೈಸರ್ಗಿಕ ಚೆಲವು, ಮಾನವ ನಿರ್ಮಿತ ವಾಸ್ತುಶಿಲ್ಪಗಳ ಬೆಡಗು ಬೆಸಗೊಂಡು ಭವ್ಯವಾದ ಕಲಾಕ್ಷೇತ್ರವೆನಿಸಿದೆ. ಹಲವು ಧರ್ಮ, ಮತ, ಪಂಥಗಳಿಗೆ ಆಸರೆ ನೀಡಿದ ಧರ್ಮಕ್ಷೇತ್ರವೂ ಹೌದು. ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲುಗಳು ಬಾಗಲಕೋಟೆ ಜಿಲ್ಲೆಯ ಸಾಂಸ್ಕೃತಿಕ ಜೀವನಾಡಿಯಾಗಿವೆ. ಮಲಪ್ರಭೆ ಇವಕ್ಕೆ ಜೀವ ನೀಡಿದ ಜಲಧಾರೆ. ಈ ನದಿಯು ನಿರ್ಮಿಸಿದ ಸುಮಾರು ೨೫ ಕಿ.ಮೀ. ಉದ್ದದ ಮತ್ತು ಐದಾರು ಕಿಲೋಮೀಟರ್ ಅಗಲದ ಭೂಪ್ರದೇಶವು ಸಮೃದ್ಧವಾದ ಕಲಾ ಪೈರನ್ನು ಬೆಳೆಯಿತು. ಈ ಪ್ರದೇಶವು ಮರಳುಗಲ್ಲಿನ ಭವ್ಯ ಬಂಡೆಗಳ …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ಬಾದಾಮಿ ಶಾಸನದ ಅರ್ಥ

Baadami Chalukyaru Shasan

೧ ಇಂಡಿಯನ್ ಆಂಟಿಕ್ವೆರಿಯಲ್ಲಿ (ಸಂ.೧೧, ಮಾರ್ಚ್ ೧೮೮೧, ಪು. ೧೬) ಫ್ಲೀಟ್ ಸಂಪಾದಿಸಿ ಪ್ರಕಟಿಸಿರುವ ತಟ್ಟುಕೋಟಿಗ್ರಾಮದ, ಕಪ್ಪೆ ಅರಭಟ್ಟನೆಂಬ ವೀರನೊಬ್ಬನ ಶೌರ್ಯದ ಹಿರಿಮೆಯನ್ನು ಕೀರ್ತಿಸುವ, ಒಂದು ಶಾಸನ ಕನ್ನಡ ನಾಡಿನಲ್ಲಿ ಬಾದಾಮಿ ಶಾಸನವೆಂಬುದಾಗಿ ಕರೆಯಲ್ಪಡುತ್ತ ಕೆಲವು ವಿಶಿಷ್ಟ ಕಾರಣಗಳಿಗಾಗಿ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿದೆ. ಆ ಕಾರಣಗಳಲ್ಲಿ ಮುಖ್ಯವಾದವು ಇವು: ೧. ದೊರೆತ ಕನ್ನಡ ಶಾಸನಗಳಲ್ಲಿ ಆ ಭಾಷೆಯ ತ್ರಿಪದಿಯೆಂಬ ಗಣ್ಯವಾದ ದೇಶ್ಯಛಂದಸ್ಸು ಬಳಕೆಯಾಗಿರುವುದು ಮೊತ್ತ ಮೊದಲು ಇಲ್ಲಿಯೇ. ೨. ಪ್ರಾಚೀನ ಕನ್ನಡ ಸಂಸ್ಕೃತಿಯ ಒಂದಂಶವನ್ನು ಕಾವ್ಯರೂಪದಲ್ಲಿ ಸಾಮಾನ್ಯ ಜನತೆಗೆ ಮನವರಿಕೆ ಮಾಡಿಕೊಡುವ ಸಾಹಿತ್ಯಾರಂಭಕಾಲದ ಆಕರ್ಷಕ ಪ್ರಯತ್ನಗಳಲ್ಲಿ …

ಪೂರ್ತಿ ಓದಿ...

ಬಾದಾಮಿ ಚಾಲುಕ್ಯರು : ನೆಲೆ, ಹಿನ್ನೆಲೆ

Baadami Chalukyaru

ಬಾದಾಮಿ : ನಾಮ ವಿವೇಚನೆ ಶಾಸನಗಳಲ್ಲಿ ಈ ಊರ ಹೆಸರು ವಾತಾಪಿ, ಬಾದಾಮಿ ಎಂಬ ರೂಪಗಳಲ್ಲಿವೆ. ಬಾದಾಮಿಯ ಉಲ್ಲೇಖವು ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಟೊಲೆಮಿ (ಸುಮಾರು ಕ್ರಿ.ಶ. ೧೫೦) ಬರೆದ A guide to geography ಎಂಬ ಪುಸ್ತಕದಲ್ಲಿ. ಆತ ಹೆಸರಿಸಿದ ದಕ್ಷಿಣ ಭಾರತದ ನಗರಗಳಲ್ಲಿ ಬದಿಯಮಯೋಯ್ (Badiamaioi) ಒಂದಾಗಿದೆ. ಇಂದಿನ ಬಾದಾಮಿಯೇ ಟೊಲೆಮಿ ಪ್ರಸ್ತಾಪಿಸಿದ ಬದಿಯಮಯೋಯ್ ಎಂದು ಮಕ್ರಿಂಡಲ್ ಅವರು ಗುರುತಿಸಿದ್ದಾರೆ.[1] ಇದರಿಂದ ಕ್ರಿ.ಶ. ೨ನೆಯ ಶತಮಾನದ ಮಧ್ಯದಲ್ಲಿ ಈ ಊರಿನ ಹೆಸರು ಬಾದಾಮಿ ಎಂದಿತ್ತೆಂದು ತಿಳಿಯುತ್ತದೆ ಮತ್ತು ಪುರಾಣ ಹಿನ್ನೆಲೆಯುಳ್ಳ ಈ …

ಪೂರ್ತಿ ಓದಿ...