ಚಂದ್ರಗುಪ್ತ ಮೌರ್ಯ (ಈತನನ್ನು ಚಂದ್ರಗುಪ್ತ ಎಂದಷ್ಟೇ ಕರೆಯುವದೂ ಉಂಟು) ಹುಟ್ಟಿದ್ದು ಕ್ರಿಸ್ತಪೂರ್ವ ೩೪೦ ರಲ್ಲಿ . ಆಳಿದ್ದು ಕ್ರಿಸ್ತಪೂರ್ವ ೩೨೦ -೨೯೮ ರ ಅವಧಿಯಲ್ಲಿ. ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. ಇವನು ಭಾರತ ಉಪಖಂಡದ ಬಹುಭಾಗವನ್ನು ಒಗ್ಗೂಡಿಸುವದರಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಇವನನ್ನು ಭಾರತವನ್ನು ಒಗ್ಗೂಡಿಸಿದ ಮೊದಲ ವ್ಯಕ್ತಿ ಮತ್ತು ಭಾರತದ ಮೊದಲ ನಿಜವಾದ ಸಾಮ್ರಾಟ್ ಎಂದು ಪರಿಗಣಿಸುತ್ತಾರೆ . ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು …
ಪೂರ್ತಿ ಓದಿ...ಸಾಮ್ರಾಟ್ ಅಶೋಕ | Ashoka the Great | Samraat Chakravartin Ashoka
ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ(ಕ್ರಿ.ಪೂ ೩೦೪ – ಕ್ರಿ.ಪೂ ೨೩೨) . ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು. ‘ಅಶೋಕ’ ಶಬ್ಧಕ್ಕೆ – ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥ ಮೂಡಿಬರುತ್ತದೆ. ಅನೇಕ ದಂಡಯಾತ್ರೆಗಳ ನಂತರ, ಅಶೋಕನು ದಕ್ಷಿಣ ಏಶಿಯಾದ ಬಹುಭಾಗವಷ್ಟೇ ಅಲ್ಲ ಅದರಾಚೆಗೂ ಪಶ್ಚಿಮದಲ್ಲಿ ಇವತ್ತಿನ ಅಫ್ಘಾನಿಸ್ಥಾನ ಮತ್ತು ಪರ್ಶಿಯಾದಿಂದ ಪೂರ್ವದಲ್ಲಿ ಬಂಗಾಲ …
ಪೂರ್ತಿ ಓದಿ...ಮೌರ್ಯ ಸಾಮ್ರಾಜ್ಯ
ಮೌರ್ಯ ಸಾಮ್ರಾಜ್ಯ ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. ೩೨೧ ರಿ೦ದ ಕ್ರಿ.ಪೂ. ೧೮೫ ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುಟ್ಟತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊಂಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು. ಉಗಮ: ಕ್ರಿ.ಪೂ. ೩೨೬ ರಲ್ಲಿ ಗ್ರೀಸ್ ನ ಅಲೆಕ್ಸಾಂಡರ್ ಭಾರತದ ಉತ್ತರಪಶ್ಚಿಮ ಭಾಗದ ಕೆಲ ರಾಜ್ಯಗಳನ್ನು ಗೆದ್ದ ನಂತರ ಸಾಮಂತ ರಾಜ್ಯಗಳನ್ನು ಸ್ಥಾಪಿಸಿದ (ಸತ್ರಪಗಳು). ಬೇಗನೆಯೇ ಅಲೆಕ್ಸಾಂಡರ್ ಭಾರತದಿ೦ದ ಹಿ೦ದಿರುಗಿ ಕ್ರಿ.ಪೂ. ೩೨4ರಲ್ಲಿ ನಿಧನನಾದ ನಂತರ ಆತನ …
ಪೂರ್ತಿ ಓದಿ...ತುಮಕೂರು ಜಿಲ್ಲೆಯ ಸ್ವಾತಂತ್ರ್ಯ ವೀರರು – ಒಂದು ಕಿರು ಪರಿಚಯ
೯೩೪ ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ಸ್ವರ್ಣಪುಟವನ್ನು ಜೋಡಿಸಿದ ವರ್ಷ. ಮಹಾತ್ಮಗಾಂಧೀಜಿಯವರು ಹರಿಜನೋದ್ದಾರ ನಿಧಿಸಂಗ್ರಹಕ್ಕಾಗಿ ತುಮಕೂರಿಗೆ ಬಂದರು. ಆ ಮಹಾತ್ಮರಿತ್ತ ದಿವ್ಯ ಸ್ಪೂರ್ತಿ ಅನೇಕ ತ್ಯಾಗ ವೀರರ ಸೃಷ್ಟಿಗೆ ಕಾರಣವಾಯಿತು. ಖಾದಿ ಪ್ರಚಾರ, ಹರಿಜನೋದ್ದಾರ, ಪಾನನಿರೋಧಗಳಿಗಾಗಿ ಜಿಲ್ಲೆಯ ಜನತೆ ಕಂಕಣ ತೊಟ್ಟರು. ೧೯೩೮ರಲ್ಲಿ ಮತ್ತೊಂದು ಮೈಲಿಗಲ್ಲಾಗಿ ಧ್ವಜಸತ್ಯಾಗ್ರಹ ನಡೆಯಿತು. ಕುಣಿಗಲ್, ಮಧುಗಿರಿ, ತುಮಕೂರು ಮುಂತಾದೆಡೆ ಮುಖಂಡರುಗಳ ನಾಯಕತ್ವದಲ್ಲಿ ಸತ್ಯಾಗ್ರಹ ನಡೆದು, ಅನೇಕರ ದಸ್ತಗಿರಿಗಳಾದವರು. ೧೯೩೯ರಲ್ಲಿ ಶಿರಾವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅರಣ್ಯ ಸತ್ಯಾಗ್ರಹವೂ ನಡೆಯಿತು. ಈ ಪ್ರಬಲ ಸತ್ಯಾಗ್ರಹದಲ್ಲಿ ಜಿಲ್ಲೆಯ ಸಮಸ್ತ ನಾಯಕರುಗಳಲ್ಲದೆ ಸುಮಾರು ೪೫೦ಮಂದಿ ದಸ್ತಗಿರಿಯಾಯಿತು. …
ಪೂರ್ತಿ ಓದಿ...ಬಾದಾಮಿ ಚಾಲುಕ್ಯರು : ಪಟ್ಟದಕಲ್ಲಿನ ಚಾಲುಕ್ಯ ಪೂರ್ವಕಾಲದ ಒಂದು ಇಟ್ಟಿಗೆ ಕಟ್ಟಡ
ಪಟ್ಟದಕಲ್ಲು, ಬಾದಾಮಿ ಚಾಲುಕ್ಯರ ಕಾಲದ ಶ್ರೇಷ್ಠ ಕಲೆಯ ಭವ್ಯ ದೇವಾಲಯಗಳಿಗೆ (ಕ್ರಿ.ಶ.೭-೯ನೇ ಶತಮಾನ) ಈಗಾಗಲೇ ಜಗತ್ಪ್ರಸಿದ್ದವಾಗಿದೆ. ಟಾಲೆಮಿಯ ಗ್ರಂಥದಲ್ಲಿ (ಕ್ರಿ.ಶ.೨ನೇಯ ಶತಮಾನ) ಪಟ್ಟದಕಲ್ಲು ಉಲ್ಲೇಖಿತವಾಗಿದೆ. ಆಗ ವಾಣಿಜ್ಯ ವ್ಯವಹಾರಗಳಿಗೆ ಮುಖ್ಯವಾಗಿದ್ದ ನಗರಗಳಲ್ಲಿ ಪಟ್ಟದಕಲ್ಲು ಒಂದು. ಈ ಕಾಲದ ಜನವಸತಿಯಿದ್ದ ಒಂದು ನೆಲೆಯು[1] (ಕ್ರಿ.ಪೂ.೩-ಕ್ರಿ.ಶ.೩ನೆಯ ಶತಮಾನ) ಈ ಊರಿಗೆ ಸುಮಾರು ೧ ಕಿ.ಮೀ. ದೂರದಲ್ಲಿದ್ದ ಬಾಚನಗುಡ್ಡದ ಬದಿಯಲ್ಲಿ ಹಿಂದೆ ಶೋಧವಾಗಿದೆ. ಇತ್ತೀಚೆಗೆ ಈ ಊರಿಗೆ ಹೊಸ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾಗ ಊರಿನ ಅತಿ ಸಮೀಪದಲ್ಲಿನ ರಸ್ತೆಯ ಬದಿಯಲ್ಲಿ ಅಗೆದ ಗುಂಡಿಗಳಲ್ಲಿ ಇದೇ ಕಾಲದ ಜನವಸತಿಯಿದ್ದ ಕುರುಹುಗಳಾದ …
ಪೂರ್ತಿ ಓದಿ...ಕರ್ನಾಟಕ ಏಕೀಕರಣ – ಚಾಮರಾಜ ಸವಡಿ
ಮೂವತ್ತು ಜಿಲ್ಲೆಗಳು, ೧೭೫ ತಾಲ್ಲೂಕುಗಳು, ೨೭,೦೨೮ ಕಂದಾಯ ಗ್ರಾಮಗಳು, ಆರು ಕೋಟಿ ಜನ, ೧,೯೧,೧೯೧ ಚದರ ಕಿಮೀ ವಿಸ್ತೀರ್ಣ, ಒಂದು ರಾಜ್ಯ- ಅದು ಕರ್ನಾಟಕ. ಇವತ್ತು ಯಾವುದನ್ನು ನಾವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ತೇವೆಯೋ ಅದು ಐದೂವರೆ ದಶಕಗಳ ಹಿಂದೆ ಸುಮಾರು ೨೦ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಕರ್ನಾಟಕ ಎಂಬುದು ಅಸ್ತಿತ್ವದಲ್ಲೇ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತಿದೆಯೆ? ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರದೇಶಕ್ಕೆ ಸೇರಬೇಕೆಂಬ ಕನಸು ಮೊಳೆತಾಗ ಪರಿಸ್ಥಿತಿ ಹೇಗಿತ್ತೆಂದರೆ, ನಮ್ಮಲ್ಲಿ ಸ್ವಂತಿಕೆ ಎಂಬುದೇ ಇರಲಿಲ್ಲ. ಇದು ನಮ್ಮ ನೆಲ …
ಪೂರ್ತಿ ಓದಿ...ಬಾದಾಮಿ ಚಾಲುಕ್ಯರು : ಬಾದಾಮಿ ಪ್ರದೇಶದ ಐತಿಹಾಸಿಕ ಭಿತ್ತಿಚಿತ್ರಗಳು
ಕರ್ನಾಟಕದ ಕಲಾ ಪರಂಪರೆಯಲ್ಲಿ ಬಾದಾಮಿಯ ಐತಿಹಾಸಿಕ ಭಿತ್ತಿಚಿತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ಕರ್ನಾಟಕದ ಶಿಷ್ಟ ಪರಂಪರೆಯ ಚಿತ್ರಕಲಾ ಇತಿಹಾಸವನ್ನು ಇಲ್ಲಿಂದಲೇ ಆರಂಭಿಸುವ ವಿದ್ವಾಂಸರು ಇವುಗಳನ್ನು ಕುರಿತಾಗಿ ಹಲವು ನಿಟ್ಟಿನಲ್ಲಿ ಅಧ್ಯಯನ ಮಾಡಿದ್ದಾರೆ. ಬಾದಾಮಿ ಪ್ರದೇಶದ ಆಳರಸರು ಅಂದಿನ ಕಲಾವಿದರಿಗೆ ರಾಜಾಶ್ರಯ ನೀಡಿ ಅವರಿಂದ ಚಿತ್ರಗಳನ್ನು ಬರೆಯಿಸುವುದರ ಮೂಲಕ ಕಲಾ ಪೋಷಕರಾಗಿ ಮುಂದಿನ ದಿನಗಳಲ್ಲಿ ಚಿತ್ರರಚನಾ ಪರಂಪರೆಯನ್ನು ಜೀವಂತವಾಗಿಡುವುದರ ಸಲುವಾಗಿ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ಬಾದಾಮಿಯ ಐತಿಹಾಸಿಕ ಚಿತ್ರಗಳಿಂದ ಕನ್ನಡಿಗರ ಕಲಾಮಾನ, ಧರ್ಮಾಭಿಮಾನ, ಸಾಂಸ್ಕೃತಿಕ ಜೀವನದ ಶ್ರೀಮಂತಿಕೆ, ನಂಬಿಕೆ, ಆಚರಣೆ, ಸಾಮಾಜಿಕ ಜೀವನಗಳಂತಹ ಸಂಗತಿಗಳನ್ನು ಅರಿತುಕೊಳ್ಳಬಹುದು. ಅಂದಿನ …
ಪೂರ್ತಿ ಓದಿ...ಚಾಲುಕ್ಯ
ಚಾಲುಕ್ಯ ವಂಶ ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ಬೆಳವಣಿಗೆ ಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು. ಕೆಲವು ಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ (ಈಗ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿದೆ) ನಗರವನ್ನು ರಾಜಧಾನಿಯಾಗಿ ಮಾಡಿದ. ಆತನ ಮಕ್ಕಳು ಚಾಲುಕ್ಯ ಸಾಮ್ರಾಜ್ಯವನ್ನು ಈಗಿನ ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸಿದರು. ಪುನರುತ್ಥಾನ ಮತ್ತು …
ಪೂರ್ತಿ ಓದಿ...ಬಾದಾಮಿ ಚಾಲುಕ್ಯರು : ಬಾದಾಮಿ ಚಾಲುಕ್ಯರ ವಿಜಯಸ್ತಂಭಗಳು
ಪುರಾತನದಿಂದಲೂ ನಮ್ಮ ಶಿಲ್ಪಶಾಸ್ತ್ರದಲ್ಲಿ ಕಂಬಗಳ ಪ್ರಸ್ತಾವನೆ ಬಂದಿದೆ. ಋಗ್ವೇದದಲ್ಲಿ ‘ಸ್ಥೂನ’ ಎಂಬ ಪದವನ್ನೂ, ‘ಉಪ ಮಿತ್’ ಎಂಬ ಪದವನ್ನು ಋಗ್ವೇದ ಹಾಗೂ ಅಥರ್ವಣ ವೇದಗಳಲ್ಲೂ, ಶಿವನನ್ನು ಚರಾಚರವಸ್ತುಗಳನ್ನು ಹಿಡಿದು ನಿಲ್ಲಿಸಿರುವ ಸ್ತಂಭವೆಂದೂ, ಕಟಕ ಸಂಹಿತದಲ್ಲಿ ‘ಸ್ತಂಭ’ವೆಂಬ ಪದವನ್ನೂ ಉಪಯೋಗಿಸಲಾಗಿದೆ. ‘ಸ್ತಭ್’ ಧಾತುವಿನಿಂದ ಉತ್ಪತ್ತಿಯಾಗಿರುವ ‘ಸ್ತಂಭ’ವು ಹಿಡಿ, ನಿಲ್ಲಿಸು, ಆಧರಿಸು ಎಂಬ ಅರ್ಥವನ್ನು ಕೊಡುತ್ತದೆ. ‘ವಿಜಯಸ್ಥಂಭ’ ‘ವಿಜಯದ ಕೀರ್ತಿಯನ್ನು ನಿಲ್ಲಿಸು ವಂತಹದು. ಕಂಬಕ್ಕೆ ಸ್ತಂಭ, ಸ್ಕಂಭ, ಸ್ಥಾನು, ಜಂಘಾ, ಅಂಗ್ರಿಕಾ, ಚರಣ, ಪಾದ, ಧನಾ, ಸ್ಥೂಲಿ, ಭಾರಕ, ಅರಣಿ, ಧಾರ ಎಂದು ಅನೇಕ ಹೆಸರುಗಳಿವೆ. ಕಂಬವನ್ನು …
ಪೂರ್ತಿ ಓದಿ...ಬಾದಾಮಿ ಚಾಲುಕ್ಯರು : ಚಾಲುಕ್ಯರ ಗಜಲಕ್ಷ್ಮಿ ಶಿಲ್ಪಗಳು
ಭಾರತೀಯ ಶಿಲ್ಪಕಲೆಯು ಸಾಂಕೇತಿಕವೂ ಹೌದು, ಆಧ್ಯಾತ್ಮಿಕವೂ ಹೌದು. ಲಕ್ಷ್ಮಿ ದೇವತೆಯ ಶಿಲ್ಪ ರಚನೆಯಲ್ಲೂ ಇದು ಸತ್ಯವಾದುದು. ಲಕ್ಷ್ಮಿ ಎಂಬ ಪದವು ‘ಲಕ್ಷ್ಮ’ ದಿಂದ ವ್ಯತ್ಪತ್ತಿ ಹೊಂದಿದ್ದು ಅದಕ್ಕೆ ‘ಸಂಕೇತ’ ಎಂಬ ಅರ್ಥವಿದೆ. ಲಕ್ಷ್ಮಿಪೂಜೆಯು ವೇದಕಾಲದಷ್ಟು ಪ್ರಾಚೀನವಾದುದು. ಋಗ್ವೇದದ ಶ್ರೀಸೂಕ್ತದಲ್ಲಿ ಲಕ್ಷ್ಮಿಯ ವರ್ಣನೆ ಸುದೀರ್ಘವಾಗಿದೆ. ಅತಿ ಪ್ರಾಚೀನ ಗಜಲಕ್ಷಿ ಶಿಲ್ಪಗಳನ್ನು ಭಾರಹುತ ಮತ್ತು ಸಾಂಚಿಯ ಸ್ತೂಪಗಳ ತೋರಣಗಳಲ್ಲಿ ಕಾಣುತ್ತೇವೆ. ಕ್ರಿ.ಪೂ. ಎರಡನೆಯ ಶತಮಾನದಷ್ಟು ಪ್ರಾಚೀನವಾದ ಈ ಶಿಲ್ಪಗಳಲ್ಲಿ ಲಕ್ಷ್ಮಿಯು ಕಮಲದ ಮೇಲೆ ಕುಳಿತಿರುವಂತೆ ಇಲ್ಲವೆ ನಿಂತಂತೆ ಮತ್ತು ಆನೆಗಳಿಂದ ಸೇವೆ ಸ್ವೀಕರಿಸುವಂತೆ ಶಿಲ್ಪಿತಳಾಗಿದ್ದಾಳೆ. ಈ ಶಿಲ್ಪ …
ಪೂರ್ತಿ ಓದಿ...