ಕನ್ನಡ ಸಾಹಿತ್ಯ/ವ್ಯಾಕರಣ

ಕವಿರಾಜ ಮಾರ್ಗದ ಪೀಠಿಕೆ

ಕವಿರಾಜಮಾರ್ಗ ೧. ಪೀಠಿಕೆ ೨. ಪ್ರಥಮ-ಪರಿಚ್ಛೇದಂ – ದೋಷ್ಯಾ – ದೋಷಾನುವರ್ಣನ – ನಿರ್ಣಯಂ ೩. ದ್ವಿತೀಯ ಪರಿಚ್ಛೇದಂ – ಶಬ್ದಾಲಂಕಾರ – ವರ್ಣನ – ನಿರ್ಣಯಂ ೪. ತೃತೀಯ ಪರಿಚ್ಛೇದಂ – ಅರ್ಥಾಲಂಕಾರ ಪ್ರಕರಣಂ ೫. ಪದ್ಯಗಳ ಸೂಚಿ ೧. ಕವಿರಾಜಮಾರ್ಗದ ಹಸ್ತಪ್ರತಿಗಳು, ಮುದ್ರಿತ ಆವೃತ್ತಿಗಳು ಮತ್ತು ಅಧ್ಯಯನ ಗ್ರಂಥಗಳು : ಆಗಸ್ಟ್ ೧೮೯೭ ರಲ್ಲಿ ಕೆ. ಬಿ. ಪಾಠಕರು ಮೂರು ಹಸ್ತಪ್ರತಿಗಳ ಆಧಾರದಿಂದ ಕವಿರಾಜಮಾರ್ಗವನ್ನು ಮೊತ್ತಮೊದಲಿಗೆ ಸಂಪಾದಿಸಿ ಮುದ್ರಣಕ್ಕೆ ಕೊಟ್ಟರು. ಗ್ರಂಥವು ೧೮೯೮ ರಲ್ಲಿ ಬೆಂಗಳೂರು ಗೌರ‍್ನಮೆಂಟ್ ಸೆಂಟ್ರಲ್ ಪ್ರೆಸ್‌ನಲ್ಲಿ ಮುದ್ರಿತವಾಗಿ …

ಪೂರ್ತಿ ಓದಿ...

ಕನ್ನಡ ಭಾಷೆ – ಅರ್ಥಗಾರಿಕೆ ವಿಚಾರಸಂಕಿರಣ

ಕನ್ನಡ ಭಾಷೆಗೆ ಸುಮಾರು ಒಂದು ಸಾವಿರ ವರ್ಷವನ್ನು ಮೀರಿದ ಇತಿಹಾಸವಿದೆ. ಪ್ರಾಚೀನ ಹಳಗನ್ನಡದಿಂದ ಹಿಡಿದು ಇಂದಿನ ಆಧುನಿಕ ಹೊಸಗನ್ನಡದವರೆಗೆ ಅದರ ವ್ಯಾಪ್ತಿ ಹರಡಿಕೊಂಡಿದೆ. ಇಷ್ಟಿದ್ದರೂ ಈ ಕನ್ನಡ ಏಕರೂಪಿಯಾಗಿಲ್ಲ. ಬಹುಮುಖೀಯಾದ ವೈವಿಧ್ಯಮಯ ಕನ್ನಡಗಳು ಹಿಂದೆ ಇದ್ದವು ಎನ್ನುವುದು ಕವಿರಾಜಮಾರ್ಗಕಾರನ “ಸಾವಿರದ ದೇಸಿಯಿಂದ ವಾಸುಕಿಗೆ ಬೇಸರ’ ಎಂಬ ಮಾತಿನಿಂದ ತಿಳಿಯುತ್ತದೆ. ಹೊಸಗನ್ನಡವು ದೇಸಿಕನ್ನಡ, ಪ್ರಾದೇಶಿಕ ಕನ್ನಡ, ಶಾಸ್ತ್ರೀಯ ಕನ್ನಡ, ಸಂಸ್ಕೃತ ಭೂಯಿಷ್ಠ ಕನ್ನಡ, ಗ್ರಾಂಥಿಕ ಕನ್ನಡ, ಆಡುನುಡಿಯ ಕನ್ನಡ, ಶಾಸನಭಾಷೆಯ ಕನ್ನಡ, ದಸ್ತಾವೇಜು, ಕಂದಾಯ ಇಲಾಖೆ ಕನ್ನಡ… ಹೀಗೆ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. ಜಾತಿ, ಬುಡಕಟ್ಟು, …

ಪೂರ್ತಿ ಓದಿ...

ಕವಿರಾಜ ಮಾರ್ಗದ ಕರ್ತೃತ್ವವಿಚಾರ

ಪೂರ್ವೋಕ್ತ ಆವೃತ್ತಿಗಳ ಪೀಠಿಕೆಗಳು ಮತ್ತು ಪ್ರಕಟವಾಗಿರುವ ಸಾಹಿತ್ಯಚರಿತ್ರೆಗಳು ಹಾಗು ಸ್ವತಂತ್ರ ಗ್ರಂಥಗಳು ಮತ್ತೊಮ್ಮೆ ನೃಪತುಂಗಪಕ್ಷದವರ ವಾದಗಳನ್ನೂ ಶ್ರೀ ವಿಜಯಪಕ್ಷದವರ ವಾದಗಳನ್ನೂ ಮಥನಮಾಡಿ, ತೂಗಿನೋಡಿ, ಕವೀಶ್ವರ ವಾದಕ್ಕೆ ಆಧಾರ ಸಾಲದೆಂದೂ, ನೃಪತುಂಗಪಕ್ಷವೂ ಶ್ರೀ ವಿಜಯಪಕ್ಷದ ಮುಂದೆ ದುರ್ಬಲವೆನಿಸುವುದೆಂದೂ ಒಂದು ರೀತಿಯ ನಿರ್ಣಯಕ್ಕೆ ಬಂದಿರುವುದನ್ನು ಕಾಣಬಹುದು. ಈ ಚರ್ಚೆಗಳಲ್ಲಿ ಪ್ರಕೃತ ಸಂಪಾದಕನ ಹೆಸರು ನೃಪತುಂಗಪಕ್ಷದಲ್ಲಿ ಒಮ್ಮೊಮ್ಮೆ ನಿರಾಕರಣೆಗಾಗಿ ಬಂದಿರುವುದನ್ನು ಇಲ್ಲಿ ಗಮನಿಸದೆ ಇರುವಂತಿಲ್ಲ. ಇಷ್ಟೊಂದು ಕೂಲಂಕಷವಾಗಿ ಉದ್ದಾಮ ಸಂಶೋಧಕರು ಪಕ್ಷ-ಪ್ರತಿಪಕ್ಷಗಳನ್ನು ಮಂಡಿಸಿರುವಾಗ, ಅದರ ಪುನರುಕ್ತಿ ಚರ್ವಿತಚರ್ವಣವೆನಿಸುವುದೆಂಬ ಕಾರಣದಿಂದ ಸಮುಸ್ಯೆಯ ಉದ್ಗಮ, ವಿಕಾಸ, ವೈವಿಧ್ಯಗಳ ಪ್ರತಿಪಾದನೆಗೆ ಇಲ್ಲಿ ಕೈಹಾಕಿಲ್ಲ. …

ಪೂರ್ತಿ ಓದಿ...

ಹಳೆಗನ್ನಡ

ಹಳೆಗನ್ನಡವನ್ನು ರಾಷ್ಟ್ರಕೂಟ ಸಾಹಿತ್ಯವೆಂದೂ .(Sanskrit:राष्ट्रकूट) ಕರೆಯುವ ಭಾಷೆಯು ೮ ರಿಂದ ೧೧ನೇ ಶತಮಾನಗಳಲ್ಲಿ ದಕ್ಷಿಣ ಭಾರತ ಮತ್ತು ಮಧ್ಯ ಭಾರತವನ್ನು ಆಳಿದ ರಾಷ್ಟ್ರಕೂಟರ ಕಾಲದಲ್ಲಿ ಪ್ರಚಲಿತವಿದ್ದ ದ್ರಾವಿಡ ಭಾಷೆಗಳಲ್ಲೊಂದು. ಆ ಕಾಲದ ಆಳ್ವಿಕೆಯು ದಕ್ಷಿ‌ಣ ಭಾರತದ ಇತಿಹಾಸದಲ್ಲಿ ಸಾಹಿತ್ಯದ, ಅದರಲ್ಲೂ ಕನ್ನಡ ಸಾಹಿತ್ಯದ ಮಹತ್ವದ ಘಟ್ಟವಾಗಿತ್ತು. ಆ ಕಾಲವು ಪ್ರಾಕ್ರಿತ ಹಾಗೂ ಸಂಸ್ಕೃತ ಭಾಷೆಯ ಅಂತ್ಯವೆಂದು, ಕನ್ನಡ ಭಾಷೆಯಲ್ಲಿ ರಚಿತವಾದ ಮಹತ್ವದ ಗ್ರಂಥಗಳೇ ಸಾಕ್ಷಿಯಾಗಿವೆ. ಕನ್ನಡದ ಶ್ರೇಷ್ಠ ಕವಿಗಳಿಗೆ ರಾಷ್ಟ್ರಕೂಟರ ದರ್ಬಾರಿನಲ್ಲಿ ಮಹತ್ವದ ಸ್ಥಾನ ದೊರಕಿ, ಕವಿಗಳು ಹಾಗೂ ರಾಜರು ಪದ್ಯ, ಹಿಂದು ಗ್ರಂಥ, …

ಪೂರ್ತಿ ಓದಿ...

ಕನ್ನಡದ ಮಹಾಕಾವ್ಯಗಳು

kannadada mahakaavyagalu

ಆದಿಪುರಾಣ- ಪಂಪ ಪಂಪಭಾರತ – ಪಂಪ ಗದಾಯುದ್ಧ – ರನ್ನ ಶಾಂತಿ ಪುರಾಣ – ಪೊನ್ನ ಶ್ರೀ ವಿವೇಕಾನಂದ- ಕಡಿದಾಳು ವಿಜಯ – ಮಲ್ಲಿಕಾ ಶ್ರೀಹರಿ ಚರಿತ – ಪು . ತಿ. ನ. ಅಜಿತ ಪುರಾಣ – ರನ್ನ ಭಾರತ ಸಿಂಧುರಶ್ಮಿ – ಗೋಕಾಕ್ ಶ್ರೀ ರಾಮಾಯಣ ದರ್ಶನಂ – ಕುವೆಂಪು

ಪೂರ್ತಿ ಓದಿ...

ಅಲಂಕಾರ

ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಒಡವೆ, ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾರೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು. ಉದಾ : ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು ಎಂದು ಹೇಳುವ ಬದಲಿಗೆ, ಪೂರ್ವ ದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತೈದೆಯ ಹಣೆಯ ಕುಂಕುಮದಂತೆ ಶೋಭಿಸುತ್ತಿದ್ದನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುವುದು. ಅಲಂಕಾರಗಳು …

ಪೂರ್ತಿ ಓದಿ...

ಸಮಾಸ

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು ‘ಸಮಾಸ’ ವೆನ್ನಲಾಗುತ್ತದೆ. ಉದಾ: ‘ಕೆಂಪಾದ ತಾವರೆ’ ಎಂಬಲ್ಲಿ, ಕೆಂಪು – ತಾವರೆ ಪದಗಳು ಕೂಡಿ, ‘ಕೆಂದಾವರೆ’ ಎಂಬ ಸಮಸ್ತ ಪದವಾಗುತ್ತದೆ. ವಿಗ್ರಹವಾಕ್ಯ ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ …

ಪೂರ್ತಿ ಓದಿ...

ಅಂಶಿ ಸಮಾಸ

ಇಲ್ಲಿ ಸಮಾಸವು ಪೂರ್ವೋತ್ತರ ಪದಗಳ ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವುದು. ಪೂರ್ವಪದದ ಅರ್ಥವು ಇಲ್ಲಿ ಪ್ರಧಾನವಾಗಿರುತ್ತದೆ. ಕೆಲವರು ಇದನ್ನು ಅವ್ಯಯೀ ಭಾವವೆಂದೂ ಕರೆಯುತ್ತಾರೆ. ಇಲ್ಲಿ ಅಂಶ ಮುಖ್ಯವೇ ಹೊರೆತು ಅಂಶಿಯಲ್ಲ.

ಪೂರ್ತಿ ಓದಿ...

ಮಹಾಸ್ರಗ್ಧರಾ ವೃತ್ತ

ಮಹಾಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ ೨೨ ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು “ಸತತನಸರರಗು” (ಗು-ಗುರು) ಇದರ ಸೂತ್ರಪದ್ಯ ಹೀಗಿದೆ “ಸತತಂನಂಸಂರರಂಗಂ ನೆರೆದೆಸೆಯೆ ಮಹಾ ಸ್ರಗ್ಧರಾ ವೃತ್ತಮಕ್ಕುಂ” ಇದರ ಪ್ರಸ್ತಾರ ವಿನ್ಯಾಸ ಹೀಗಿದೆ UU_| __U| _ _ U|U UU| U U _| _U_| _U_| _ ಸತತಂ|ನಂಸಂರ|ರಂಗಂ ನೆ|ರೆದೆಸೆ|ಯೆ ಮಹಾ| ಸ್ರಗ್ಧರಾ |ವೃತ್ತಮ|ಕ್ಕುಂ ಸಂಸ್ಕೃತಕನ್ನಡಗಳೆರಡರಲ್ಲಿಯೂ ಈ ಛಂದಸ್ಸಿನ ಪದ್ಯಗಳು ವಿಫುಲವಾಗಿ ಸಿಗುತ್ತವೆ. ಇದು ಸ್ರಗ್ಧರೆಯ ಮೊದಲ ಗುರುವನ್ನು ಲಘುಗಳೆರಡರಿಂದ ಬದಲಾಯಿಸಿದಾಗ ಸಿಗುತ್ತದೆ ಉದಾಹರಣೆ:- ಇದು ಲಾಕ್ಷಾಗೇಹದಾಹಕ್ಕಿದುವಿಷಮವಿಷಾನ್ನಕ್ಕಿದಾನಾಡಜೂದಿಂ- ಗಿದು ಪಾಂಚಾಲೀ ಪ್ರಪಂಚಕ್ಕಿದು ಕೃತಕ …

ಪೂರ್ತಿ ಓದಿ...

ಶಬ್ದಮಣಿದರ್ಪಣ

ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ “ಶಬ್ದಸ್ಮೃತಿ” ಮತ್ತು “ಕಾವ್ಯಾವಲೋಕನ” ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವೈಯಾಕರಣರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನವಾಗಿ ಇದು ವಿಧಾತ್ಮಕ ಅಥವಾ ಆದರ್ಶ ರೀತಿಯ ವ್ಯಾಕರಣ. ಆದರೆ ವಿವರಣಾತ್ಮಕ ಮತ್ತು ವರ್ಣನಾತ್ಮಕ ರೀತಿಯ ನಿರೂಪಣಾ ದೃಷ್ಟಿಯನ್ನೂ ಒಳಗೊಂಡಿದೆ. ಡಾ.ಡಿ.ಎಲ್.ನರಸಿಂಹಾಚಾರ್ ಅವರು ಸಂಪಾದಿಸಿರುವ ಶಬ್ದಮಣಿದರ್ಪಣವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಮೈಸೂರು ವಿಶ್ವವಿದ್ಯಾನಿಲಯದ ಪದವಿಗೆ ಬೋಧಿಸಲ್ಪಡುತ್ತಿದೆ. ಇದರಲ್ಲಿ ೩೪೩ ಕಂದಪದ್ಯಗಳಿವೆ. ಕೇಶಿರಾಜನ ಶಬ್ದಮಣಿದರ್ಪಣ ದ ಇತಿವೃತ್ತ ಕೇಶಿರಾಜನು …

ಪೂರ್ತಿ ಓದಿ...