ಶ್ರೀರಾಮನು ಭಗ್ನವಾದ ಶಿವಧನಸ್ಸನ್ನು ಭೂಮಿಯ ಮೇಲಿಟ್ಟನು. ಆಗ ಆ ಧನಸ್ಸಿನೊಂದಿಗೆ ಮುಂದಿನಂತೆ ಸಂಭಾಷಣೆಯಾಯಿತು. ಶ್ರೀರಾಮ : ಏನು ಅನಿಸುತ್ತಿದೆ ? ಧನಸ್ಸು : ಅಪಾರ ಆನಂದ ! ನನ್ನನ್ನು ಯಾವುದೇ ರಾಕ್ಷಸನು ಎತ್ತಿದ್ದರೆ ಜನ್ಮಪೂರ್ತಿ ಧನಸ್ಸು-ಬಾಣದ ಬಂಧನದಲ್ಲಿ ಸಿಲುಕಿರುತ್ತಿದ್ದೆ. ಶ್ರೀರಾಮನು ನನ್ನನ್ನು ಮುಕ್ತಗೊಳಿಸಿದನು. ಶ್ರೀರಾಮ :ಆದರೆ ರಾಮನು ನಿನ್ನನ್ನು ಭೂಮಿಯ ಮೇಲಿಟ್ಟನು, ಅದಕ್ಕೆ ಏನು ಹೇಳುವೆ ? ಧನಸ್ಸು :ರಾಮನ ಕಾಲುಗಳ ಬಳಿಯೇ ಹಾಕಿದನು ಹಾಗೂ ನನಗೆ ರಾಮನ ಪಾದಸೇವೆ ಮಾಡುವ ಅವಕಾಶ ಲಭಿಸಿತು. ಶ್ರೀರಾಮ :ಆದರೆ ನೀನು ೨ ತುಂಡಾದೆಯಲ್ಲವೇ ? ಧನಸ್ಸು …
ಪೂರ್ತಿ ಓದಿ...ನೀವು ಕೊಟ್ಟದ್ದು ನಿಮಗೇ
ಬಹಳ ಹಿಂದೆ ಶಿವಪುರವೆಂಬ ಊರಿತ್ತು. ಆ ಊರಿನಲ್ಲಿ ರಾಮಪ್ಪನೆಂಬ ಶ್ರೀಮಂತನಿದ್ದ. ಅವನು ಬಡವರಿಗೆ ಸಹಾಯ ಮಾಡದೆ ಬರೀ ತನ್ನ ದೊಡ್ಡಸ್ತಿಕೆಯನ್ನು ಎಲ್ಲರಿಗೆ ಹೇಳಿಕೊಳ್ಳುತ್ತಿದ್ದ. ಇತರರು ಮಾಡಿದ ಸಹಾಯವನ್ನು ತನ್ನದೆಂದೇ ಹೇಳುತ್ತಿದ್ದ. ಅವನ ಮನೆಯ ಸಮೀಪದಲ್ಲಿ ಧರ್ಮಯ್ಯನೆಂಬ ಬಡವನಿದ್ದ. ಅವನು ಇತರರಿಗೆ ತನ್ನ ಕೈಲಾದ ನೆರವು ನೀಡುತ್ತಿದ್ದ. ಆಗ ಶ್ರೀಮಂತ ರಾಮಪ್ಪ ಆ ಕೆಲಸದ ಸಹಾಯವನ್ನು ಧರ್ಮಯ್ಯನ ಮೂಲಕ ತಾನೇ ಮಾಡಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಧರ್ಮಯ್ಯ ನಕ್ಕು ಸುಮ್ಮನಾಗುತ್ತಿದ್ದ. ಶಿವಪುರ ಊರಿನ ಹತ್ತಿರ ಒಂದು ಗುಡ್ಡವಿತ್ತು. ಆ ಗುಡ್ಡದಲ್ಲಿ ಒಬ್ಬ ಸಾಧು ವಾಸವಾಗಿದ್ದ. ಅವನು ಜನರ …
ಪೂರ್ತಿ ಓದಿ...ಜೇನು ತಂದ ಸೌಭಾಗ್ಯ
ಬೀಳಿಗಿಯ ಯಂಕಪ್ಪ, ದಿನಾಲೂ ಊರಿನ ದನಗಾಹಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ತುಂಬಾ ಬಡತನ. ಹೆಂಡತಿ ಹಾಗೂ ಬೆಳೆದು ನಿಂತ ಮಗಳೊಂದಿಗೆ ಜೀವನ ನಡೆಸುತ್ತಿದ್ದ. ಊರಿನ ಜನ ವರ್ಷಕ್ಕೊಮ್ಮೆ ನೀಡುತ್ತಿದ್ದ ಜೋಳ, ಕಾಳುಕಡಿ, ಅಲ್ಪ ಮೊತ್ತದ ಹಣ, ಜೀವನಕ್ಕೆ ಸಾಲುತ್ತಿರಲಿಲ್ಲ. ದನಗಳು ಹಾಕಿದ ಸೆಗಣಿಯ ಸಂಗ್ರಹದ ಮಾರಾಟದಿಂದ ಬಂದ ಅಲ್ಪಸ್ವಲ್ಪ ಹಣದಿಂದ ಹೊಟ್ಟೆ ಹೊರೆಯಲು ಅನುಕೂಲವಾಗುತ್ತಿತ್ತು. ಬೆಳಗಿನ ಜಾವ ಊರ ಹೊರ ಬಯಲಿನಲ್ಲಿ ಎಲ್ಲಾ ದನಗಳನ್ನು ನಿಲ್ಲಿಸಿ ನಂತರ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಕಾಡಿಗೆ ಮೇಯಿಸಲು ತೆರಳುತ್ತಿದ್ದ. ಮಧ್ಯಾಹ್ನ ಸಮಯದಲ್ಲಿ, ಹಸಿರು ಮೇಯಿಸಿದ ದನಗಳು ಗಿಡಗಳ …
ಪೂರ್ತಿ ಓದಿ...ನಾಯಿಯ ಬುದ್ಧಿ
ಒಂದು ಊರಿನಲ್ಲಿ ಎರಡು ನಾಯಿಗಳು ಇದ್ದವು. ಅವು ತಾವು ಒಳ್ಳೆಯ ಗೆಳೆಯರೆಂದು ಅಂದುಕೊಂಡಿದ್ದವು. ಒಂದು ಬಿಳಿ ಬಣ್ಣದ್ದು ಬಿಳಿಯ, ಇನ್ನೊಂದು ಕಪ್ಪು ಬಣ್ಣದ ಕರಿಯ. ಒಂದು ದಿನ ಕರಿಯ ಮತ್ತು ಬಿಳಿಯ ಎರಡೂ ಸೇರಿ ಊರ ಹೊರತನಕ ಬಂದು ಬಿಟ್ಟವು. ಚೆಂದವಾಗಿ ಆಟವಾಡುತ್ತಾ ಮೈಮರೆತಿದ್ದವು. ಆಗ ಹತ್ತಿರದ ಪೊದೆಯಲ್ಲಿ ಸದ್ದಾಗಿ ಅವುಗಳಲ್ಲಿನ ಬೇಟೆಗಾರ ಜಾಗ್ರತನಾದ. ಒಮ್ಮೆಲೇ ಪೊದೆಯತ್ತ ದಾಳಿ ಮಾಡಿದರೆ ಸಿಕ್ಕಿತೊಂದು ಕಾಡುಕೋಳಿ. ಒಂದೇ ಹಕ್ಕಿ ಎರಡೂ ನಾಯಿಗಳ ಬಾಯಿಯಲ್ಲಿ. ಅದು ತನ್ನ ಬೇಟೆ ಎಂದು ಎರಡೂ ಕಿತ್ತಾಡುತ್ತಿದ್ದಾಗ ನಡುವೆ ಬಂತೊಂದು ಚಿರತೆ! ಇವುಗಳು …
ಪೂರ್ತಿ ಓದಿ...ಸಂಚಿನ ಬೇಟೆ
ಒಂದು ಊರಿನಲ್ಲಿ ಒಂದು ಸುಂದರವಾದ ಹೂತೋಟವಿತ್ತು. ಆ ಹೂತೋಟದಲ್ಲಿ ಒಂದು ಗಂಡು ಮತ್ತು ಹೆಣ್ಣು ಕಪ್ಪೆಗಳು ವಾಸವಾಗಿದ್ದವು. ಒಂದು ದಿನ ಆಸರೆಗೆ ಬಂದ ಚೇಳು ಇವರನ್ನು ಕಂಡು ಮಾತಾಡಿಸಿ ಸ್ನೇಹ ಸಂಪಾದಿಸಿಕೊಂಡಿತು. ಹೀಗೆ ದಿನಗಳು ಕಳೆದವು. ಚೇಳು ಅವರ ಸ್ವಭಾವ ಗಮನಿಸಿ, “ಯಾವಾಗಲೂ” ನಿಮ್ಮದೇ ಲೋಕದಲ್ಲಿರುತ್ತೀರಲ್ಲಾ, ಹೊರ ಜಗತ್ತಿನ ಪರಿಚಯ ಬೇಡ್ವಾ ನಿಮಗೆ?” ಎಂದು ದೊಡ್ಡಸ್ತಿಕೆ ತೋರ್ಪಡಿಸಿತು. “ಹೊರ ಜಗತ್ತಿನಲ್ಲಿ ಅಪಾಯ ಜಾಸ್ತಿ ಅಲ್ವಾ? ಅದಕ್ಕೆ ಯಾರನ್ನೂ ಪರಿಚಯ ಮಾಡಿಕೊಳ್ಳಲು ಹೋಗಿಲ್ಲ” ಎಂದು ಗಂಡು ಕಪ್ಪೆ ಹೇಳಿತು. “ಲೋಕಜ್ಞಾನವೇ ಬೇಡ ಅಂದರೆ ಹೇಗೆ? ನಮ್ಮ …
ಪೂರ್ತಿ ಓದಿ...ಕುರುಬನ ಜಾಣ್ಮೆ
ಚಂದ್ರನಗರದ ಅರಸ ಚಂದ್ರಸೇನನ ಏಕೈಕ ಪುತ್ರಿ ಸುಮತಿ ಎಂಬ ಹುಡುಗಿ ಇದ್ದಳು. ಇವಳು ತುಂಬ ಸುಂದರಳು, ಬುದ್ಧಿವಂತಳು ಆಗಿದ್ದಳು. ತನ್ನ ರೂಪ ಹಾಗೂ ಬುದ್ಧಿವಂತಿಕೆಯ ಬಗ್ಗೆ ಅವಳಿಗೆ ತುಂಬ ಹೆಮ್ಮೆಯಿತ್ತು. ಪ್ರೌಢಾವಸ್ಥೆಗೆ ಬಂದ ಮೇಲೆ ಅರಸ ಅವಳ ವಿವಾಹ ಮಾಡಲು ಬಯಸಿದ. ಆದರೆ ರಾಜಕುಮಾರಿ, ‘ಅಪ್ಪಾ ನನಗಿಂತ ಬುದ್ಧಿವಂತನಾಗಿರುವ ಯುವಕನ ಜೊತೆ ಮಾತ್ರ ನಾನು ಮದುವೆಯಾಗುವೆ’ ಎಂದು ಹೇಳಿದಳು. ಆದರೆ, ಅಂತಹ ಯುವಕನನ್ನು ಹುಡುಕುವುದು ಹೇಗೆ ಎಂದು ಅರಸನಿಗೆ ಚಿಂತೆಯಾಯಿತು. ‘ಅದನ್ನು ನನಗೆ ಬಿಡಿ’ ಎಂದು ಹೇಳಿದ ಸುಮತಿ ಆಳುಗಳ ಅವರ ಸಹಾಯದಿಂದ ಅರಮನೆಯ …
ಪೂರ್ತಿ ಓದಿ...ಮೂರು ಗೆಳೆಯರು
ಒಂದು ಊರಿನಲ್ಲಿ ಕಿಶೋರ, ಕಿರಣ ಮತ್ತು ಕೀರ್ತಿ ಎಂಬ ಮೂರು ಜನ ಆತ್ಮೀಯ ಸ್ನೇಹಿತರಿದ್ದರು. ಆ ಮೂರು ಜನ ಸಹ ಸದಾ ಜೊತೆಯಲ್ಲೇ ಇರುತ್ತಿದ್ದರು. ಆಟ, ಪಾಠ, ಶಾಲೆ, ಓದುವುದರಲ್ಲೂ ಸಹ ಒಟ್ಟಿಗೆ ಇರುತ್ತಿದ್ದರು. ಒಬ್ಬರನೊಬ್ಬರು ಬಿಟ್ಟು ಯಾರು ಇರುತ್ತಿರಲಿಲ್ಲ ಈಥರ ಇರಬೇಕಾದರೆ ಒಮ್ಮೆ ಶಾಲೆಯಲ್ಲಿ ಕಿಶೋರನ ಪೆನ್ನು ಕಳುವಾಯಿತು. ಅದು ಕಿಶೋರಗೆ ಬಹಳ ಅಚ್ಚುಮೆಚ್ಚಿನದಾಗಿತ್ತು. ಯಾಕೆಂದರೆ ಅದನ್ನು ಕಿಶೋರನ ಅಮ್ಮ ಅವನ ಹುಟ್ಟುಹಬ್ಬದಂದು ಅವನಿಗೆ ಉಡುಗರೆಯಾಗಿ ನೀಡಿದ್ದಳು. ಆ ಪೆನ್ನು ನೋಡುವುದಕ್ಕೆ ತುಂಬಾ ಸುಂದರವಾಗಿರುವುದರಿಂದ ಕಿರಣಗೂ ಆಸೆಯಾಗಿತ್ತು. ಅವನು ಹಿಂದೆ ಒಂದು ದಿನ …
ಪೂರ್ತಿ ಓದಿ...ಕತ್ತೆಯ ಒದೆತ
ಒಂದು ಊರಿನಲ್ಲಿ ಒಂದು ಕತ್ತೆ ವಾಸವಾಗಿತ್ತು. ಅದರ ಹೆಸರು “ಕೆಂಪಿ” ಅದು ತನ್ನ ಮರಿಗಳೊಂದಿಗೆ ಪಾಳು ಬಿದ್ದ ಹೊಲದ ಬಯಲಿನಲ್ಲಿ ಮೊಳೆತಿದ್ದ ಹುಲ್ಲನ್ನು ಮೇಯುತ್ತಿತ್ತು. ಇದನ್ನು ದೂರದಿಂದ ನೋಡಿದ ನರಿಯೊಂದು ದೂರಾಲೋಚನೆಗೈದಿತ್ತು. ಹೇಗಾದರೂ ಮಾಡಿ ಕತ್ತೆಯ ಮರಿಗಳನ್ನು ತಿನ್ನಬೇಕೆಂಬುದೇ ಅದರ ಉಪಾಯವಾಗಿತ್ತು. ಸಮಯ ಸಂದರ್ಭ ನೋಡಿಕೊಂಡು ಕತೆಯ ಸ್ನೇಹ ಗಳಿಸಿಕೊಳ್ಳಬೇಕು. ಅಂದಾಗ ಮಾತ್ರ ತನ್ನ ಕೆಲಸ ಸುಲಭ ಎಂಬುದಾಗಿ ಯೋಚಿಸಿತು. ಕೆಂಪಿಯ ಬಳಿ ಬಂದ ನರಿಯು “ಕೆಂಪಕ್ಕಾ… ಕೆಂಪಕ್ಕಾ… ಚೆನ್ನಾಗಿರುವೆಯಾ? ನಿನ್ನ ಮಕ್ಕಳೆಲ್ಲಾ ಆರೋಗ್ಯದಿಂದಿವೆಯಾ? ನಿನ್ನ ಒಳ್ಳೆಯ ಸ್ವಭಾವವನ್ನು ಮನಗಂಡಿರುವೆ. ಹಾಗಾಗಿಯೇ ನಿನ್ನ ಸ್ನೇಹ …
ಪೂರ್ತಿ ಓದಿ...ಬಚ್ಚಿಟ್ಟಿದ್ದು ಎಂದಾದರೂ ಪರರಿಗೆ
ಮುತ್ತುಕದಹಳ್ಳಿ ಎಂಬ ಊರಿನಲ್ಲಿ ಮುನಿಶಮಪ್ಪ ಮತ್ತು ಗಂಗಮ್ಮ ಎಂಬ ದಂಪತಿ ಇದ್ದರು. ಅವರಿಗೆ ಹಿರಿಯರಿಂದ ಬಂದಂತಹ ಸ್ವಲ್ಪ ಜಮೀನು ಇತ್ತು. ಆ ದಂಪತಿ ಆ ಸ್ವಲ್ಪ ಜಮೀನಿನಲ್ಲಿ ದುಡಿದು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಅವರಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಒಂದು ದಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮುನಿಶಮಪ್ಪ ಬಾಳೆಯ ಸಸಿ ನೆಡಬೇಕೆಂದು ನೆಲವನ್ನು ಅಗೆಯುತ್ತಿದ್ದ. ‘ಥನ್’ ಎಂದು ಏನೋ ಶಬ್ದ ಬಂತು. ಆಗ ಮುನಿಶಮಪ್ಪನಿಗೆ ಅನುಮಾನ ಬಂತು ಏನೋ ಇರಬಹುದು ಎಂದು ಮತ್ತೆ ಅಗೆದನು. ಮತ್ತೆ ‘ಥನ್’ …
ಪೂರ್ತಿ ಓದಿ...ಕೃತಜ್ಞ ನವಿಲು
ಒಂದು ಊರಿನಲ್ಲಿ ಸುರೇಶ – ಸುಧಾ ಎಂಬ ದಂಪತಿ ಇದ್ದರು. ಅವರಿಗೆ ಒಂದು ಸುಂದರವಾದ ತೋಟವಿತ್ತು ಆ ತೋಟದಲ್ಲಿ ಅವರು ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು. ಅವರಿಗೆ ಒಂದು ಮುದ್ದಾದ ಮಗು ಇದ್ದಳು ಅವಳ ಹೆಸರು ಸವಿತಾ . ಸುರೇಶ – ಸುಧಾ ಅವರದ್ದು ಚಿಕ್ಕ ಕುಟುಂಬವಾಗಿತ್ತು. ಅವರು ತಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಕುರಿ, ಕೋಳಿ, ಆಕಳು, ಎಮ್ಮೆ ಇನ್ನಿತರೆ ಸಾಕು ಪ್ರಾಣಿಗಳನ್ನು ಸಾಕಿದ್ದರು. ಇದರಿಂದಾಗಿ ಸವಿತಾಗೆ ಪ್ರಾಣಿ – ಪಕ್ಷಿಗಳನ್ನು ಕಂಡರೆ ತುಂಬಾ ಪ್ರೀತಿ. ಅವಳು ಆ ಪ್ರಾಣಿ – ಪಕ್ಷಿಗಳೊಂದಿಗೆ ಪ್ರೀತಿಯಿಂದ …
ಪೂರ್ತಿ ಓದಿ...